ಇಬ್ಬರ ನಡುವೆ ಹೀಗೆಲ್ಲಾ ಆಗ್ತಿದೆ ಅಂದ್ರೆ... ಸದ್ಯದಲ್ಲೇ Breakup ಆಗ್ತಿದೆ ಎಂದರ್ಥ
ಬ್ರೇಕ್ ಅಪ್ (breakup) ಜೀವನದ ಅತಿದೊಡ್ಡ ಬದಲಾವಣೆಯಾಗಿದೆ, ಅದರ ನಂತರ ಒಬ್ಬ ವ್ಯಕ್ತಿಯು ಸಂಪೂರ್ಣವಾಗಿ ಕುಗ್ಗಿ ಹೋಗುತ್ತಾನೆ. ಅವನು ತನ್ನ ಸಂಗಾತಿಯಿಂದ ಬೇರ್ಪಟ್ಟಾಗ ತಾನು ಏನು ಮಾಡಿದೆ ಎಂದು ಆ ವ್ಯಕ್ತಿ ಯೋಚನೆ ಮಾಡಲು ಆರಂಭಿಸುತ್ತಾರೆ, ಅವರಿಗೂ ಬ್ರೇಕ್ ಅಪ್ ನ ನಿಜವಾದ ಕಾರಣ ಏನೆಂದು ತಿಳಿದಿರೋದಿಲ್ಲ . ನಿಮ್ಮ ಮುರಿದ ಸಂಬಂಧಕ್ಕೆ ಕಾರಣವಾದ ಚಿಹ್ನೆಗಳ ಬಗ್ಗೆ ಇಲ್ಲಿ ಒಂದಷ್ಟು ಮಾಹಿತಿ ಇದೆ...
ಕೆಲವೊಮ್ಮೆ ನಾವು ಕಡೆಗಣಿಸುವ ಸಣ್ಣ ಪುಟ್ಟ ವಿಷಯಗಳು ಸಹ ಬ್ರೇಕ್ ಅಪ್ ಗೆ ಕಾರಣವಾಗುತ್ತವೆ. ಅಂತಹ ಸೂಕ್ಷ್ಮ ವಿಷಯಗಳನ್ನು ಗಮನಿಸಿದಾಗ ಸಂಬಂಧ ಮುರಿಯದೆ ಪರಸ್ಪರ ಅನ್ಯೋನ್ಯತೆಯಿಂದ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ನೀವು ಗಮನಿಸಲೇಬೇಕಾದ ಕೆಲವೊಂದು ಸೂಕ್ಷ್ಮ ಅಂಶಗಳು ಹೀಗಿವೆ.
ಸಂಗಾತಿಗಿಂತ ಬೇರೆ ವಿಷಯಕ್ಕೆ ಹೆಚ್ಚು ಆದ್ಯತೆ
ಸಂಗಾತಿ ನಿಮಗಿಂತ ಇನ್ನೊಬ್ಬರ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆಯೇ? ಉದಾಹರಣೆಗೆ ಸ್ನೇಹಿತ ಅಥವಾ ಇನ್ನೊಬ್ಬ ಹುಡುಗಿ ಅಥವಾ ಹುಡುಗ. ಹಾಗಿದ್ದರೆ, ನಿಮ್ಮ ಸಂಬಂಧದಲ್ಲಿ ವಿಷಯಗಳು ಬದಲಾಗುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಸ್ನೇಹ ಓಕೇ , ಆದರೆ ಇನ್ನೊಬ್ಬರಿಗೆ ಹೆಚ್ಚಿನ ಆದ್ಯತೆ (importance) ನೀಡಿದಾಗ ಸಂಬಂಧ ಮುರಿಯುತ್ತದೆ.
ರಿಲೇಷನ್ ಶಿಪ್ ನಲ್ಲಿ (relationship) ಇರುವಾಗ ಕುಟುಂಬದ ಜೊತೆಗೆ ಸಂಗಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದನ್ನು ರೂಢಿಸಿಕೊಳ್ಳಿ. ಬೇರೊಬ್ಬ ಗೆಳೆಯ, ಗೆಳತಿಗೆ ಆದ್ಯತೆ ನೀಡುತ್ತಿದ್ದಾರೆ ಅದನ್ನು ನೀವು ಸಮಯಕ್ಕೆ ಸರಿಯಾಗಿ ಸರಿಪಡಿಸಬೇಕು. ಇಲ್ಲದಿದ್ದರೆ ಸಂಗಾತಿ ನಿಮ್ಮನ್ನು ಯಾವಾಗ ಬಿಡುತ್ತಾರೆ ಎಂದು ಸಹ ನಿಮಗೆ ತಿಳಿದಿರುವುದಿಲ್ಲ. ಅವರು ಬ್ರೇಕ್ ಅಪ್ ಎಂದಾಗಲೇ ಏನಾಗುತ್ತಿದೆ ಎಂದು ನಿಮಗೆ ಶಾಕ್ ಆಗಬಹುದು.
ಭೇಟಿ ಮಾಡೋದಿಲ್ಲ
ಸಂಗಾತಿ ಯಾವಾಗಲೂ ಭೇಟಿಯಾಗಲು ಸಮಯವಿಲ್ಲ ಎಂದು ನಿಮಗೆ ಹೇಳುತ್ತಾನೆಯೇ? ಅಂತಹ ಸಂದರ್ಭದಲ್ಲಿ, ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಸಂತೋಷವಾಗಿಲ್ಲ (unhappy) ಮತ್ತು ನಿಮ್ಮನ್ನು ದೂರವಿಡಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಅದರ ನಂತರ ನೀವು ತುಂಬಾನೇ ಸ್ಟ್ರಾಂಗ್ ಆಗಬೇಕು ಮತ್ತು ಆ ಪರಿಸ್ಥಿತಿಯನ್ನು ಎದುರಿಸಬೇಕು.
ಒಂದು ವೇಳೆ ಸಣ್ಣ ಪುಟ್ಟ ಕಾರಣಗಳಿಂದ ಸಂಗಾತಿ ನಿಮ್ಮನ್ನು ಭೇಟಿ ಮಾಡಲು ಹಿಂದೇಟು ಹಾಕುತ್ತಿದ್ದರೆ , ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ , ಮತ್ತು ಅದನ್ನು ಆದಷ್ಟು ಬೇಗನೆ ಸರಿಪಡಿಸುವತ್ತ ಗಮನ ಹರಿಸಿ. ಇಲ್ಲವಾದರೆ ಸಂಬಂಧ ಮುರಿದು ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಎಚ್ಚರವಿರಲಿ.
ತಡವಾಗಿ ಉತ್ತರ
ನೀವು ಸಂದೇಶ (message) ಕಳುಹಿಸಿದಾಗ ಸಂಗಾತಿ ಗಂಟೆಗಳ ಕಾಲ ಉತ್ತರಿಸುವುದಿಲ್ಲವೇ? ನೀವು ಕರೆ ಮಾಡಿದಾಗ ಅವರು ಬಹಳ ಕಡಿಮೆ ಮಾತನಾಡುತ್ತಾರೆ ಮತ್ತು ಅವರು ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಫೋನ್ ಅನ್ನು ಕಟ್ ಮಾಡುತ್ತಿದ್ದಾರೆಯೇ?. ಹಾಗಿದ್ದಲ್ಲಿ, ನೀವು ಇನ್ನು ಮುಂದೆ ಅವರ ಮೊದಲ ಆಯ್ಕೆಗಳಲ್ಲ ಎಂದು ಅರ್ಥಮಾಡಿಕೊಳ್ಳಿ.
ಪ್ರೀತಿಯ ಆರಂಭದಲ್ಲಿ ಹೆಚ್ಚು ಸಮಯ ಮಾತನಾಡಲು ಇಷ್ಟಪಡುತ್ತಿದ್ದವರು , ದಿನ ಪೂರ್ತಿ ಮೆಸೇಜ್ , ಫೋನ್ ಮಾಡುತ್ತಿದ್ದವರು ಈಗ ನಿಮ್ಮೊಂದಿಗೆ ಎಷ್ಟು ಬಾರಿ ಮಾತನಾಡುತ್ತಾರೆ ಎಂಬುದರ ಬಗ್ಗೆ ಅವನು ಕಾಳಜಿ ವಹಿಸುವುದಿಲ್ಲ ಎಂದಾದರೆ , ಅವರಿಗೆ ಈ ಸಂಬಂಧ ಮುಂದುವರೆಸುವುದು ಬೇಕಾಗಿಲ್ಲ ಎಂದು ಅರ್ಥ. ಇದರಿಂದ ಬ್ರೇಕ್ ಅಪ್ (breakup)ಆಗೋದು ಗ್ಯಾರಂಟಿ
ನೀವು ಒಟ್ಟಿಗೆ ಇದ್ದಾಗಲೂ ಮಾತನಾಡುತ್ತಿಲ್ಲ (not talking)
ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಇದ್ದಾಗಲೂ ಅವರ ಫೋನ್ ಅಥವಾ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದರೆ, ಅವರು ಇನ್ನು ಮುಂದೆ ಈ ಸಂಬಂಧದಲ್ಲಿ ಸಂತೋಷವಾಗಿಲ್ಲ ಎಂದು ಅರ್ಥಮಾಡಿಕೊಳ್ಳಿ. ಅವನು ತನ್ನ ವೈಯಕ್ತಿಕ ಜೀವನವನ್ನು ನಡೆಸಲು ನಿಮ್ಮಿಂದ ದೂರವಿರಲು ಇಷ್ಟಪಡುತ್ತಾನೆ ಎಂದು ಇದು ಸೂಚಿಸುತ್ತದೆ. ಇಂತಹ ಸಂಬಂಧದಲ್ಲಿ ಉಳಿಯುವುದರಲ್ಲಿ ಅರ್ಥವಿಲ್ಲ.
ದೈಹಿಕ ಅನ್ಯೋನ್ಯತೆ ಇಲ್ಲದಿರುವುದು
ದೈಹಿಕ ಅನ್ಯೋನ್ಯತೆಯು ಲೈಂಗಿಕತೆ ಮಾತ್ರವಲ್ಲದೆ ಸರಳ ಅಪ್ಪುಗೆಗಳು (hug), ಕಡಲಿಂಗ್ (cuddling) , ಚುಂಬನವನ್ನು (kissing) ಒಳಗೊಂಡಿದೆ. ಸಂಗಾತಿಯು ಈ ವಿಷಯಗಳಿಂದ ದೂರವಿದ್ದರೆ, ಈ ಸಂಬಂಧದ ಬಗ್ಗೆ ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಅರ್ಥ. ಆದುದದರಿಂದ ಇಂತಹ ಸಂಬಂಧದಿಂದ ದೂರ ಉಳಿಯುವುದು ಉತ್ತಮ.