MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಹೆಣ್ಯಾಕೆ ಪತಿ ಶ್ರೀ ರಾಮನಂತಿರಬೇಕು ಅಂತ ಬಯಸೋದು? ರಾಮನ ವಿಶೇಷ ಗುಣಗಳಿವು!

ಹೆಣ್ಯಾಕೆ ಪತಿ ಶ್ರೀ ರಾಮನಂತಿರಬೇಕು ಅಂತ ಬಯಸೋದು? ರಾಮನ ವಿಶೇಷ ಗುಣಗಳಿವು!

ಇಂದು, ದೇಶವು ಅಯೋಧ್ಯೆಯ ಭವ್ಯವಾದ ಅರಮನೆಯಲ್ಲಿ ತನ್ನ ದೇವರಾದ ರಾಮನನ್ನು ಸ್ವಾಗತಿಸಲು ತಯಾರಿ ನಡೆಸುತ್ತಿರುವಾಗ, ಭಾರತದ ಪ್ರತಿಯೊಬ್ಬ ಮಹಿಳೆ ತನ್ನ ಜೀವನ ಸಂಗಾತಿಯಲ್ಲಿ  ಶ್ರೀ ರಾಮನಂತಹ 5 ಗುಣಗಳು ಇರಬೇಕು ಎಂದು ಬಯಸುತ್ತಾಳೆ. ಆ ಗುಣಗಳು ಯಾವುವು ನೋಡೋಣ.  

2 Min read
Suvarna News
Published : Jan 13 2024, 06:29 PM IST
Share this Photo Gallery
  • FB
  • TW
  • Linkdin
  • Whatsapp
17

ಜನವರಿ 22 ರಂದು ಭಗವಾನ್ ರಾಮನು ಅಯೋಧ್ಯೆಯ ತನ್ನ ಭವ್ಯ ಅರಮನೆಯಲ್ಲಿ ವಿರಾಜಮಾನನಾಗಲಿದ್ದಾನೆ. ಶ್ರೀ ರಾಮ ದೇಶದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತದ ಕೋಟ್ಯಂತರ ಜನರಿಗೆ ಆದರ್ಶಪ್ರಾಯರಾಗಿದ್ದಾರೆ. ಭಗವಾನ್ ರಾಮ (Lord Rama) ಮತ್ತು ತಾಯಿ ಸೀತಾ ಮಾತೆಯ ವೈವಾಹಿಕ ಜೀವನದಲ್ಲಿ ಅನೇಕ ಸಂಘರ್ಷಗಳು ಇದ್ದರೂ, ಇಂದಿಗೂ ಆದರ್ಶ ಜೀವನ ಸಂಗಾತಿಯ ವಿಚಾರಕ್ಕೆ ಬಂದಾಗ, ಅನೇಕ ಜನರು ಶ್ರೀ ರಾಮನ ಹೆಸರನ್ನೇ ಸೂಚಿಸುತ್ತಾರೆ.

27

ಇತ್ತೀಚಿನ ದಿನಗಳಲ್ಲಿ ಸಂಬಂಧಗಳಲ್ಲಿ ಅಂತರ ಮತ್ತು ಕಹಿ ಹೆಚ್ಚಾಗುತ್ತಿರೋದು ಸಾಮಾನ್ಯ. ಅಂತಹ ಪರಿಸ್ಥಿತಿಯಲ್ಲಿ, ಭಗವಾನ್ ರಾಮ ಮತ್ತು ತಾಯಿ ಸೀತಾ ಅವರ ಜೀವನವು ನಮಗೆ ಅಥವಾ ಪ್ರತಿಯೊಬ್ಬ ವಿವಾಹಿತ ಜೋಡಿಗಳಿಗೆ ಅನೇಕ ಪಾಠಗಳನ್ನು ಕಲಿಸುತ್ತದೆ. ಪ್ರತಿಯೊಬ್ಬ ಮಹಿಳೆಯೂ ತನ್ನ ಜೀವನ ಸಂಗಾತಿಯಲ್ಲಿ ಹುಡುಕುವ ಶ್ರೀ ರಾಮನಂತಹ 5 ಗುಣಗಳು ಯಾವುವು ಅನ್ನೋದನ್ನು ನೋಡೋಣ.

37

ಹೃದಯ ಮತ್ತು ನಂಬಿಕೆ ಗೆಲ್ಲುವ ವ್ಯಕ್ತಿ 
ಶ್ರೀ ರಾಮ ವಿಷ್ಣುವಿನ ಅವತಾರ. ಅದೇನೇ ಇದ್ದರೂ, ಕರ್ಮಕ್ಕೆ ಅನುಗುಣವಾಗಿ ಶಿವನ ಭಾರವಾದ ಬಿಲ್ಲುಗಳನ್ನು ಮುರಿಯುವ ಮೂಲಕ ಅವನು ಯೋಗ್ಯ ಗಂಡನಾಗುವ ಉದಾಹರಣೆಯನ್ನು ನೀಡಿದನು. ಪಾಠವೆಂದರೆ, ನೀವೆಷ್ಟೇ ಹೈ ಪ್ರೊಫೈಲ್ ವ್ಯಕ್ತಿಯಾಗಿದ್ದರೂ, ಪತ್ನಿಯಾದವಳಿಗೆ ಬೇಕಾಗಿರೋದು ಶಾಶ್ವತ ಬೆಂಬಲ (supportive), ಆ ಮೂಲಕ ಪತ್ನಿಯ ಹೃದಯ ಮತ್ತು ನಂಬಿಕೆ ಎರಡನ್ನೂ ಗೆಲ್ಲುವವನೇ ಯೋಗ್ಯ ಪತಿ

47

ಆರೈಕೆ ನಿಮ್ಮ ಕರ್ತವ್ಯ
ಶ್ರೀ ರಾಮ ವನವಾಸಕ್ಕೆ ಹೋದಾಗ, ಅವನು ಸೀತಾಮಾತೆಯನ್ನು ತನ್ನೊಂದಿಗೆ ಬಾರದಂತೆ ಮನವೊಲಿಸಿದನು, ಆದರೆ ಸೀತೆ ಅದನ್ನು ನಿರಾಕರಿಸಿದಾಗ, ಶ್ರೀರಾಮ ತನ್ನ ಪತ್ನಿಯ ಸಂತೋಷ ಮತ್ತು ಸೌಕರ್ಯವನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾನೆ. ಸೀತೆಯ ತ್ಯಾಗವನ್ನು ಸಂಪೂರ್ಣವಾಗಿ ಪ್ರಶಂಸಿಸಲು ಅವನು ಪ್ರಯತ್ನಿಸಿದನು. ಈ ಗುಣವನ್ನು ಪ್ರತಿಯೊಬ್ಬ ಪುರುಷನು ಅನುಸರಿಸಬೇಕು ಏಕೆಂದರೆ ಮಹಿಳೆ ತನ್ನ ಮನೆ, ಸಂತೋಷ (Happiness) ಮತ್ತು ಶಾಂತಿ ತೊರೆದು ನಿಮ್ಮ ಜೀವನವನ್ನು ಸೇರಲು ಬರುತ್ತಾಳೆ. ಹಾಗಾಗಿ ಅವಳ ಆರೈಕೆ ನಿಮ್ಮ ಕರ್ತವ್ಯ. 

57

ಸಂಗಾತಿಯನ್ನು ಅರ್ಥಮಾಡಿಕೊಳ್ಳಿ (understand your partner)
ಆದರ್ಶ ಪುರುಷ ತನ್ನ ಸಂಗಾತಿಯನ್ನು ಅರ್ಥಮಾಡಿಕೊಳ್ಳುವವನು, ಆಕೆಯ ಆಸೆಗಳು ಮತ್ತು ಕನಸುಗಳನ್ನು ಪೂರೈಸಲು ತನ್ನ ಅತ್ಯುತ್ತಮ ಪ್ರಯತ್ನ ಮಾಡುವವನು. ವನವಾಸದಲ್ಲಿ ರಾಮನೊಂದಿಗೆ ಬರುವ ಆಸೆಯನ್ನಾಗಿ ಅಥವಾ ಕಾಡಿನಲ್ಲಿ ಚಿನ್ನದ ಜಿಂಕೆಯನ್ನು ಪಡೆಯುವ ಬಯಕೆಯಾಗಲಿ, ಭಗವಾನ್ ರಾಮನು ಪ್ರತಿ ಕ್ಷಣವೂ ಸೀತೆಯನ್ನು ಬೆಂಬಲಿಸಿದನು.

67

ತಾಳ್ಮೆ ಕಾಪಾಡಿಕೊಳ್ಳಿ
ಇದು ಯಾವುದೇ ಸಂಬಂಧಕ್ಕೆ ಬಹಳ ಮುಖ್ಯವಾದ ಗುಣ. ಅವಸರವು ದೆವ್ವದ ಕೆಲಸ ಎಂದು ಹಿರಿಯರು ಹೇಳುವುದನ್ನು ನೀವು ಕೇಳಿರುವಿರಿ. ಅನೇಕ ಬಾರಿ ನಾವು ಅವಸರದಲ್ಲಿ ಯೋಚಿಸದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ, ಇದು ಇಡೀ ಸಂಬಂಧವನ್ನು ಹಾಳುಮಾಡುತ್ತದೆ. ಕೈಕೇಯಿಯ ಇಚ್ಛೆಯಂತೆ, ಭಗವಾನ್ ರಾಮನು 14 ವರ್ಷಗಳ ವನವಾಸವನ್ನು ಕಳೆದನು ಮತ್ತು ರಾಜನಾಗಿದ್ದರೂ ಸನ್ಯಾಸಿಯಂತೆ ಬದುಕಿದನು. ರಾಮನ ತಾಳ್ಮೆಯೆ (patince of Rama) ಆತನೊಂದಿಗೆ ಸೀತೆ ಜೊತೆಯಾಗಿರುವಂತೆ ಮಾಡಿತು. 

77

ತನ್ನವರ ರಕ್ಷಣೆಗೆ ಸದಾ ಸಿದ್ಧನಾಗಿರುವವ 
ನೀವು ಹೆಚ್ಚು ಉದಾರ ಮತ್ತು ದಯಾಪರ ಸ್ವಭಾವವನ್ನು ಹೊಂದಿದ್ದರೆ, ನೀವು ಉತ್ತಮ ಪತಿಯಾಗಲು ಸಾಧ್ಯವಾಗುತ್ತದೆ. ಅದು ಮನುಷ್ಯನಾಗಿರಲಿ ಅಥವಾ ಪ್ರಾಣಿಯಾಗಿರಲಿ, ನಿಮ್ಮ ಹೃದಯವು ಇಬ್ಬರಿಗೂ ಒಂದೇ ಆಗಿರಬೇಕು. ರಾಜನಾದ ನಂತರವೂ ರಾಮನೊಳಗೆ ಅಹಂಕಾರವಿರಲಿಲ್ಲ. ಸೀತೆಯನ್ನು ಕರೆತರಲು, ಅವನು ಇಡೀ ಕೋತಿ ಸೈನ್ಯದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆದನು. ಇಂತಹ ಸಂಗಾತಿ ತಮಗೂ ಸಿಗಲಿ ಎಂದು ಪ್ರತಿಯೊಬ್ಬ ಮಹಿಳೆಯೂ ಬಯಸುತ್ತಾಳೆ. 
 

About the Author

SN
Suvarna News
ಸಂಬಂಧಗಳು
ಗಂಡ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved