ಕೋಟ್ಯಾಧಿಪತಿ ಕ್ರಿಸ್ಟಿಯಾನೊ ರೊನಾಲ್ಡೊ ಮಗನಿಗೆ ಫೋನ್ ಕೊಟ್ಟಿಲ್ವಂತೆ, ಇನ್‌ಸ್ಟಾ ಅಕೌಂಟ್ ಇರೋದು ಹೇಗೆ?
ಕ್ರಿಸ್ಟಿಯಾನೊ ರೊನಾಲ್ಡೊ ತುಂಬಾ ಶ್ರೀಮಂತರಾಗಿದ್ದರೂ ಮತ್ತು ಅವರ ಮಕ್ಕಳ ಪ್ರತಿಯೊಂದು ಆಸೆಯನ್ನು ಪೂರೈಸಬಹುದಾದರೂ, ಅವರು ತಮ್ಮ11ನೇ ವಯಸ್ಸಿನ ಮಗನಿಗೆ ಫೋನ್ ನೀಡಲು ನಿರಾಕರಿಸಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ತಮ್ಮ ಕ್ರೀಡಾ ಕ್ಷೇತ್ರದಲ್ಲಿ ಅತ್ಯದ್ಭುತ ಸಾಧನೆ ಮಾಡಿದ್ದಾರೆ, ಜೊತೆಗೆ ಇವರು ಒಬ್ಬ ಉತ್ತಮ ತಂದೆಯೂ ಹೌದು. ಅವರ ಪೇರೆಂಟಿಂಗ್ ಸ್ಕಿಲ್ (paranting skill) ನೋಡಿದ್ರೆ ನೀವು ಖಂಡಿತವಾಗಿಯೂ ಇಂಪ್ರೆಸ್ ಆಗೋದು ಖಂಡಿತ. ಕ್ರಿಸ್ಟಿಯಾನೊ ಅವರ ಮಗ ಫೋನ್ ಗಿಫ್ಟ್ ಆಗಿ ಕೇಳಿದ್ರೂ ರೊನಾಲ್ಡೊ ಮೊಬೈಲ್ ತೆಗೆದು ಕೊಡಿಸಿಲ್ವಂತೆ 11 ವರ್ಷದ ಮಗನಿಗೆ. ಯಾಕೆ ಅನ್ನೋದನ್ನು ಸಹ ರೊನಾಲ್ಡೊ ಹೇಳಿದ್ದಾರೆ.
ತನ್ನ ಮಗ ಟೆಕ್ನಾಲಜಿ ಬಗ್ಗೆ ತುಂಬಾ ಕ್ರೇಜ್ ಹೊಂದಿದ್ದಾನೆ. ಈ ಪೀಳಿಗೆಯ ಉಳಿದ ಮಕ್ಕಳಂತೆ, ಅವನು ಸಹ ತಂತ್ರಜ್ಞಾನದ ಹಿಂದೆ ಓಡುವ ಹುಡುಗ ಎಂದಿದ್ದಾರೆ ರೊನಾಲ್ಡೊ. ತನಗೆ ಫೋನ್ ಗಿಫ್ಟ್ ಆಗಿ ಬೇಕು ಎಂದು ಪುತ್ರ ಕೇಳುತ್ತಲೇ ಇರುತ್ತಾನಂತೆ, ಆದ್ರೆ ರೊನಾಲ್ಡೋ ಮಾತ್ರ ಅದ್ಕೆ ನೋ ಅಂದಿದ್ದಾರೆ.
ಕೋಟ್ಯಾಧಿಪತಿ ರೊನಾಲ್ಡೊ ಮಗನಿಗೆ ಫೋನ್ ಕೊಡೋದನ್ನ ನಿರಾಕರಿಸಿದ್ದು ಯಾಕೆ?
ಇಂದಿನ ಜನರೇಶನ್ ಮಕ್ಕಳು ತಮ್ಮ ವಯಸ್ಸಿಗಿಂತ ಒಂದು ಹೆಜ್ಜೆ ಮುಂದಿದೆ ಆದರೆ ಅವರು ತಂತ್ರಜ್ಞಾನಕ್ಕೆ ಅಡಿಕ್ಟ್ (technology addiction) ಆಗೋದು ತಪ್ಪು ಎಂದು ರೊನಾಲ್ಡೊ ಹೇಳುತ್ತಾರೆ. ಅವರಿಗೆ ಬೇಕಾದ ವಸ್ತುಗಳನ್ನು ನೀಡಿ. ಆದರೆ ಸ್ವಲ್ಪ ಸಮಯದವರೆಗೆ ಮಾತ್ರ. ಅವರು ಎಲ್ಲಾ ಸಮಯದಲ್ಲೂ ತಮ್ಮೊಂದಿಗೆ ಟೆಕ್ ಗ್ಯಾಜೆಟ್ ಹೊಂದೋದು ತಪ್ಪು ಎಂದಿದ್ದಾರೆ ರೊನಾಲ್ಡೊ. ಹಾಗಾಗಿ ಮಗನಿಗೆ ಮೊಬೈಲ್ ಫೋನ್ ತೆಗೆಸಿ ಕೊಟ್ಟಿಲ್ವಂತೆ.
ಯಾವುದೂ ಸುಲಭವಾಗಿ ಬರುವುದಿಲ್ಲ
ಅಷ್ಟೇ ಅಲ್ಲ, ರೊನಾಲ್ಡೊ ತನ್ನ ಮಗನಿಗೆ ಜೀವನದಲ್ಲಿ ಯಾವುದೂ ಸುಲಭವಾಗಿ ಬರುವುದಿಲ್ಲ ಅನ್ನೋದನ್ನ ತಿಳಿಸಿದ್ದಾರೆ. ಕಷ್ಟ ಪಟ್ಟರೆ ಮಾತ್ರ ಎಲ್ಲಾ ಸಿಗುತ್ತೆ ಅನ್ನೋದನ್ನ ತಿಳಿಸಿದ್ದಾರೆ. ನಾನು ಅವನಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆ ಅಂದ್ರೆ ಅದು ಶಿಕ್ಷಣ (Education). ಅದನ್ನ ಕೊಡ್ತೇನೆ, ಆದ್ರೆ ಈಗಲೇ ಫೋನ್ ಗಿಫ್ಟ್ ಆಗಿ ನೀಡೋ ಮೂಲಕ ಮಗ ಟೆಕ್ನಾಲಜಿಗೆ ಅಡಿಕ್ಟ್ ಆಗೋದು ಬೇಕಾಗಿಲ್ಲ ಎಂದಿದ್ದಾರೆ. ಆದರೆ ರೊನಾಲ್ಡೊ ಪುತ್ರ ಈಗಾಗಲೇ ಸೀಕ್ರೆಟ್ ಆಗಿ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದು, ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರಂತೆ.
ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಫೋನ್ ನೀಡಬೇಕು?
ಕಾಮನ್ ಸೆನ್ಸ್ ಮೀಡಿಯಾ ನಡೆಸಿದ ಅಧ್ಯಯನದ ಪ್ರಕಾರ, ಯುಎಸ್‌ಎನಲ್ಲಿ 53% ಮಕ್ಕಳು 11ನೇ ವಯಸ್ಸಿನಲ್ಲಿ ಮೊಬೈಲ್ ಪಡೆಯುತ್ತಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಸ್ಮಾರ್ಪ್ ಫೋನ್ ನೀಡುವುದು ಅಪಾಯಕಾರಿ. ಹಾಗಾಗಿ 14- 15 ವರ್ಷದ ನಂತ್ರ ಫೋನ್ ಕೊಡೋದು ಒಳ್ಳೆಯದು.
ಏನು ಮಾಡಬೇಕು?
ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಮೊಬೈಲ್ ನೀಡುವುದು ಸರಿಯಲ್ಲ, ಆದರೆ ನಿಮ್ಮ ಮಗುವಿನ ಬಳಿ ಮೊಬೈಲ್ ಇದ್ದರೆ, ಪೋಷಕರು ಅದರ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು. ಇದರೊಂದಿಗೆ, ಕೆಲವು ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಿಂದ ನಿಮ್ಮ ಮಗುವನ್ನು ಸುರಕ್ಷಿತವಾಗಿಡಬಹುದು. ಇದಲ್ಲದೆ, ಸ್ಮಾರ್ಟ್ ಫೋನ್ ಮಗುವಿನ ಶಿಕ್ಷಣದ ಮೇಲೂ ಪರಿಣಾಮ ಬೀರಬಹುದು.
ಮಕ್ಕಳಿಗೆ ಮೊಬೈಲ್ ಫೋನ್ ಪ್ರಯೋಜನಗಳಿವೆಯೇ?
ಪ್ರಯೋಜನ ಖಂಡಿತಾ ಇದೆ. ಆದ್ರೆ ನೀವು ಅದನ್ನು ತಪ್ಪು ರೀತಿಯಲ್ಲಿ ಬಳಸಿದಾಗ ನಿಮಗೆ ಹಾನಿಯಾಗುತ್ತದೆ. ಮೊಬೈಲ್ ಫೋನ್ (mobile phone) ಮಗುವಿಗೆ ಪ್ರಯೋಜನವನ್ನು ನೀಡಬಹುದು. ಏಕೆಂದರೆ ಅದು ಅಧ್ಯಯನಕ್ಕೆ ಸಹಾಯ ಮಾಡುತ್ತದೆ ಮತ್ತು ಜ್ಞಾನದ ವ್ಯಾಪ್ತಿಯನ್ನು ಹೆಚ್ಚಿಸಬಹುದು. ಮಕ್ಕಳ ಸಂವಹನ ಕೌಶಲ್ಯವೂ (Communication Skill) ಉತ್ತಮವಾಗಿರುತ್ತದೆ. ಆದರೆ ಮೊಬೈಲನ್ನು ಅತಿಯಾಗಿ ಬಳಕೆ ಮಾಡೋದನ್ನ ಮಾತ್ರ ತಪ್ಪಿಸಬೇಕು.