MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • Love prediction :ಅಕ್ಟೋಬರ್ ನಿಮಗೆ ಎಷ್ಟು ರೊಮ್ಯಾಂಟಿಕ್ ಆಗಿರುತ್ತೆ?

Love prediction :ಅಕ್ಟೋಬರ್ ನಿಮಗೆ ಎಷ್ಟು ರೊಮ್ಯಾಂಟಿಕ್ ಆಗಿರುತ್ತೆ?

ಅಕ್ಟೋಬರ್ ತಿಂಗಳಲ್ಲಿ, ಶುಕ್ರ, ಬುಧ ಸೇರಿದಂತೆ ಪ್ರೇಮ ಜೀವನದ ಮೇಲೆ ಪರಿಣಾಮ ಬೀರುವ ಅನೇಕ ನಕ್ಷತ್ರಗಳ ಸ್ಥಾನವು ಬದಲಾಗುತ್ತಿದೆ. ಹಾಗಾಗಿ, ನಿಮ್ಮ ಪ್ರೀತಿಯ ಜೀವನವು ಹೇಗಿರುತ್ತದೆ? ಸಂಬಂಧದ ಮೇಲೆ ಗ್ರಹಗಳ ಪರಿಣಾಮವೇನು? ಅಕ್ಟೋಬರ್ ನಲ್ಲಿ ಸಂಬಂಧಗಳನ್ನು ನಿಭಾಯಿಸಬೇಕಾದವರು ಯಾರು ಹೊಸ ಸಂಬಂಧಗಳನ್ನು ರೂಪಿಸಬಹುದು ಹೀಗೆ ಎಲ್ಲಾ ರೀತಿಯಲ್ಲೂ, ಅಕ್ಟೋಬರ್ ತಿಂಗಳ ಪ್ರೀತಿಯ ಜಾತಕವನ್ನು ನೋಡಿ. 

3 Min read
Suvarna News
Published : Sep 30 2022, 12:58 PM IST
Share this Photo Gallery
  • FB
  • TW
  • Linkdin
  • Whatsapp
113

ಪ್ರತಿಯೊಬ್ಬರೂ ಪ್ರೀತಿಯ ವಿಷಯದಲ್ಲಿ ಮುಂಬರುವ ತಿಂಗಳು ಹೇಗಿರುತ್ತದೆ ಎಂಬ ತಿಳಿಯಲು ಬಯಸುತ್ತಾರೆ. ನಿಜವಾದ ಪ್ರೀತಿಯ ಹುಡುಕಾಟವು ಈ ತಿಂಗಳು ಪೂರ್ಣಗೊಳ್ಳುತ್ತದೆಯೇ ಅಥವಾ ಈ ತಿಂಗಳು ಸಹ ನೀವು ತಾಳ್ಮೆಯಿಂದ ಕಾಯಬೇಕೇ? ಪ್ರೀತಿಯ ವಿಷಯದಲ್ಲಿ ಈ ತಿಂಗಳಲ್ಲಿ ಯಾವ ರಾಶಿಚಕ್ರ ಚಿಹ್ನೆಗಳು (zodiac sign) ಪ್ರಯೋಜನ ಪಡೆಯುತ್ತವೆ? ಅನ್ನೋದನ್ನು ನೋಡೋಣ.

213
ಮೇಷ ರಾಶಿ: ತುಂಬಾನೆ ಎಕ್ಸೈಟ್ ಆಗುತ್ತೀರಿ

ಮೇಷ ರಾಶಿ: ತುಂಬಾನೆ ಎಕ್ಸೈಟ್ ಆಗುತ್ತೀರಿ

ಈ ವರ್ಷ, ನವರಾತ್ರಿ ದುರ್ಗಾ ಪೂಜೆಯ ದಿನಗಳಲ್ಲಿ, ಪ್ರೀತಿ ಮತ್ತು ಪ್ರಣಯದ (Romance) ಕಾರಣ ಗ್ರಹವಾದ ಶುಕ್ರ (Venus), ನಿಮ್ಮ ರಾಶಿಚಕ್ರ ಚಿಹ್ನೆಯಿಂದ ಆರನೇ ಮನೆಯಲ್ಲಿ ಚಲಿಸುತ್ತಾನೆ, ಹಾಗಾಗಿ, ಪ್ರೀತಿಯನ್ನು ಹುಡುಕುತ್ತಿರುವವರಿಗೆ ಯಾರ ಮೇಲಾದರೂ ಪ್ರೀತಿ ಹುಟ್ಟಬಹುದು ಎಂದು ಗ್ರಹ ಯೋಗಗಳಿಂದ ತಿಳಿದಿದೆ. ಈಗಾಗಲೇ ಪ್ರೀತಿಯ ಸಂಬಂಧವನ್ನು ಹೊಂದಿರುವವರ ನಡುವೆ ಪ್ರೀತಿಯು ಹೆಚ್ಚಾಗುತ್ತದೆ ಮತ್ತು ಸಂಬಂಧದ ಗಂಭೀರತೆಯು (seriousness) ನಿಮ್ಮಲ್ಲಿ ಹೆಚ್ಚಾಗುತ್ತದೆ. ಆದರೆ ತುಂಬಾನೆ ಎಕ್ಸೈಟ್ ಆಗೋದು ಒಳ್ಳೆಯದಲ್ಲ.

313
ವೃಷಭ ರಾಶಿ: ಪ್ರಪೋಸ್ ಮಾಡುವ ಮೊದಲು ಯೋಚಿಸಿ

ವೃಷಭ ರಾಶಿ: ಪ್ರಪೋಸ್ ಮಾಡುವ ಮೊದಲು ಯೋಚಿಸಿ

ಸಂಬಂಧವನ್ನು ಪ್ರಾರಂಭಿಸಲು ನೋಡುತ್ತಿರುವವರಿಗೆ ಇದು ಉತ್ತಮ ಸಮಯ. ನೀವು ನಿಜವಾಗಿಯೂ ಪ್ರೀತಿಯಲ್ಲಿ ಇದ್ದೀರೋ ಅಥವಾ ಕೇವಲ ಆಕರ್ಷಣೆಯಲ್ಲೋ (attraction) ಎಂಬುದನ್ನು ನೀವು ನಿರ್ಧರಿಸಬೇಕು. ಯಾರಿಗಾದರೂ ಪ್ರಪೋಸ್ ಮಾಡುವ ಮೊದಲು ಸೀರಿಯಸ್ ಆಗಿ ಯೋಚಿಸಿ. ಮಕ್ಕಳನ್ನು ಬಯಸುವವರಿಗೆ ಇದು ಉತ್ತಮ ಸಮಯ, ಈ ನಿಟ್ಟಿನಲ್ಲಿ ಅವರು ಒಳ್ಳೆಯ ಸುದ್ದಿಯನ್ನು ಪಡೆಯಬಹುದು.  

413
ಮಿಥುನ: ತಕ್ಷಣವೇ ಯಾರಿಗೂ ಪ್ರಪೋಸ್ ಮಾಡಬೇಡಿ

ಮಿಥುನ: ತಕ್ಷಣವೇ ಯಾರಿಗೂ ಪ್ರಪೋಸ್ ಮಾಡಬೇಡಿ

ಈ ದಿನಗಳಲ್ಲಿ ನೀವು ಸ್ವಲ್ಪ ಹೆಚ್ಚು ರೊಮ್ಯಾಂಟಿಕ್ (romantic) ಆಗಿರುತ್ತೀರಿ ಎಂದು ನಿಮ್ಮ ನಕ್ಷತ್ರಗಳು ಹೇಳುತ್ತಿವೆ. ಪ್ರೇಮಿಯೊಂದಿಗಿನ ನಿಮ್ಮ ಸಂಬಂಧ ಗಾಢವಾಗಿರುತ್ತದೆ,  ಪ್ರೀತಿಯನ್ನು ಹುಡುಕುತ್ತಿರುವವರು ಪ್ರೀತಿಯನ್ನು ಪ್ರಕೃತಿಯ ಕೊಡುಗೆಯಾಗಿ ಕಂಡುಕೊಳ್ಳಬಹುದು. ಸಮಯವು ನಿಮಗೆ ದುಬಾರಿಯಾಗಿರುತ್ತದೆ. ಪ್ರೇಮಿಯನ್ನು ಸಂತೋಷಪಡಿಸಲು ನೀವು ನಿಮ್ಮ ಜೇಬುಗಳನ್ನು ಖಾಲಿ ಮಾಡಬೇಕಾಗಬಹುದು. ನೀವು ಮೊದಲ ನೋಟದಲ್ಲೇ ಯಾರನ್ನಾದರೂ ಪ್ರೀತಿಸುತ್ತಿದ್ದರೆ, ತಪ್ಪಾಗಿಯೂ ಪ್ರೊಪೋಸ್ (Propose) ಮಾಡುವ ತಪ್ಪನ್ನು ಮಾಡಬೇಡಿ, ಸ್ವಲ್ಪ ಸಮಯ ತೆಗೆದುಕೊಳ್ಳಿ.

513
ಕರ್ಕಾಟಕ: ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟಾಗಬಹುದು

ಕರ್ಕಾಟಕ: ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟಾಗಬಹುದು

ಈ ಸಮಯದಲ್ಲಿ ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕು. ಭಾವನಾತ್ಮಕತೆಯ ಕಾರಣದಿಂದಾಗಿ, ನೀವು ತಪ್ಪು ಮಾಡಬಹುದು, ಇದು ನಿಮ್ಮ ಸಂಬಂಧಗಳಲ್ಲಿ ಒತ್ತಡವನ್ನು ಉಂಟುಮಾಡಬಹುದು. ನಿಮ್ಮ ಸಂಬಂಧದಲ್ಲಿ ನೀವು ಪ್ರೇಮಿಯನ್ನು ಬಯಸುವುದು ಮತ್ತು ಅವರ ಮಾತುಗಳನ್ನು ಕೇಳುವುದು ಉತ್ತಮ. ಅಂದಹಾಗೆ, ಈ ಸಮಯದಲ್ಲಿ ನೀವು ಪ್ರೇಮಿಯಿಂದ ಉಡುಗೊರೆ (Gift) ಪಡೆಯಬಹುದು.

613
ಸಿಂಹ (Leo) : ಡ್ರೈವ್ ಅನ್ನು ಆನಂದಿಸಬಹುದು

ಸಿಂಹ (Leo) : ಡ್ರೈವ್ ಅನ್ನು ಆನಂದಿಸಬಹುದು

ಇದು ನಿಮಗೆ ಉತ್ತಮ ಸಮಯ, ನೀವು ಜನರ ಕಣ್ಣು ತಪ್ಪಿಸಿ, ನಿಮ್ಮ ಲವ್ ಲೈಫ್ (love life) ಎಂಜಾಯ್ ಮಾಡಬಹುದು. ನೀವು ನಿಮ್ಮ ಪ್ರೇಮಿಯೊಂದಿಗೆ ಡ್ರೈವ್ ಅನ್ನು ಆನಂದಿಸಬಹುದು. ತಮ್ಮ ಪ್ರೀತಿಯನ್ನು ಮುಂದುವರಿಸಲು ಬಯಸುವವರು ಪ್ರೇಮಿಯನ್ನು ತಮ್ಮ ಕುಟುಂಬಕ್ಕೆ ಪರಿಚಯಿಸಬಹುದು. ಕೆಲವು ಜನರು ಸಂಬಂಧಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ.

713
ಕನ್ಯಾ (Virgo) : ಹೃದಯವನ್ನು ನಿಯಂತ್ರಣದಲ್ಲಿಡಿ

ಕನ್ಯಾ (Virgo) : ಹೃದಯವನ್ನು ನಿಯಂತ್ರಣದಲ್ಲಿಡಿ

ನಿಮ್ಮ ಕಣ್ಣುಗಳು ಯಾರನ್ನಾದರೂ ಹುಡುಕುತ್ತಿರುತ್ತವೆ, ಆದರೆ ಹೃದಯವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ, ಬುಧ, ಶುಕ್ರನು ನಿಮ್ಮ ಮನೆಯಲ್ಲಿ ಕುಳಿತು ನಿಮ್ಮನ್ನು ಅತಿಯಾಗಿ ಉದ್ರೇಕಗೊಳಿಸುತ್ತಿದ್ದಾನೆ, ಅಂತಹ ಪರಿಸ್ಥಿತಿಯಲ್ಲಿ, ಜೋಶ್ ಕೂಡ ತಪ್ಪಾಗಬಹುದು. ವೈವಾಹಿಕ ಜೀವನದಲ್ಲಿ (Married Life) ಪ್ರೀತಿ ಮತ್ತು ಸಾಮರಸ್ಯ ಉಳಿಯುತ್ತದೆ. ಬಟ್ಟೆಗಳು ಮತ್ತು ಆಭರಣಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ನೀವು ನಿಮ್ಮ ಸಂಗಾತಿಯನ್ನು ಸಂತೋಷಪಡಿಸಬಹುದು.

813
ತುಲಾ ರಾಶಿ: ಪ್ರೀತಿಯಲ್ಲಿ ಜಾಗರೂಕರಾಗಿರಿ

ತುಲಾ ರಾಶಿ: ಪ್ರೀತಿಯಲ್ಲಿ ಜಾಗರೂಕರಾಗಿರಿ

ಈ ಸಮಯವು ನಿಮಗೆ ಸ್ವಲ್ಪ ಕಷ್ಟ. ನಿಮ್ಮ ಪ್ರೀತಿ ನಿಮ್ಮೊಂದಿಗೆ ಇದ್ದರೂ, ನಿಮ್ಮ ಜೊತೆ ಇಲ್ಲವೇನೋ ಎನ್ನುವ ಭಾವನೆ ಮೂಡುತ್ತದೆ. ಹೃದಯ ಮತ್ತು ಮನಸ್ಸಿನಲ್ಲಿ ಸಮನ್ವಯದ ಕೊರತೆ ಮೂಡುತ್ತೆ. ಪ್ರೀತಿಯನ್ನು ಹುಡುಕುತ್ತಿರುವವರಿಗೆ, ಕನ್ ಫ್ಯೂಸ್ ಪರಿಸ್ಥಿತಿ (Confused Situation)ಇರುತ್ತದೆ, ನೀವು ಯೆಸ್ ಅಥವಾ ನೋ ನಡುವೆ ಸಿಕ್ಕಿಹಾಕಿಕೊಳ್ಳಬಹುದು.  
 

913
ವೃಶ್ಚಿಕ: ನೀವು ಅದೃಷ್ಟವಂತರಾಗುವಿರಿ

ವೃಶ್ಚಿಕ: ನೀವು ಅದೃಷ್ಟವಂತರಾಗುವಿರಿ

ಪ್ರೀತಿ ಮತ್ತು ಸಂಬಂಧದ ವಿಷಯದಲ್ಲಿ ನೀವು ಅದೃಷ್ಟವಂತರಾಗುತ್ತೀರಿ. ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರ ಮೂಲಕ ನಿಮ್ಮ ಪ್ರೀತಿಯನ್ನು ಪಡೆಯುವ ಅವಕಾಶ ಸಿಗೋ ಸಾಧ್ಯತೆಯಿದೆ. ಈ ಸಮಯದಲ್ಲಿ ನಿಮ್ಮ ಯಾವುದೇ ಆಸೆಗಳನ್ನು ಸಹ ಪೂರೈಸಬಹುದು. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಹಿರಿಯ ಸಹೋದರ ಮತ್ತು ಚಿಕ್ಕಪ್ಪ ನಿಮ್ಮ ಸಂಬಂಧವನ್ನು ಮುಂದುವರಿಸಲು ಸಹಾಯ ಮಾಡಬಹುದು.

1013
ಧನು ರಾಶಿ: ಉಡುಗೊರೆಗಳನ್ನು ಪಡೆಯುವ ಸಾಧ್ಯತೆ

ಧನು ರಾಶಿ: ಉಡುಗೊರೆಗಳನ್ನು ಪಡೆಯುವ ಸಾಧ್ಯತೆ

ಪ್ರೀತಿ ಮತ್ತು ಹೃದಯದ ವಿಷಯದಲ್ಲಿ ನಿಮ್ಮ ಈಗೋವನ್ನು (Ego) ಕಂಟ್ರೋಲ್ ಮಾಡೋದು ಒಳ್ಳೆಯದು. ನಿಮ್ಮ ಸಂಗಾತಿ ಮತ್ತು ಪ್ರೇಮಿಯಿಂದ ಉಡುಗೊರೆ (gift from lover) ಪಡೆಯುವ ಸಾಧ್ಯತೆ ಇದೆ. ಅತ್ತೆ-ಮಾವನ ಕಡೆಯಿಂದ ನೀವು ಪ್ರಯೋಜನ ಪಡೆಯುತ್ತೀರಿ ಮತ್ತು ಅತ್ತೆ-ಮಾವನ ಕಡೆಯ ಜನರನ್ನು ಸಂಪರ್ಕಿಸಬಹುದು. ನಿಮ್ಮ ಹಳೆ ಪ್ರೀತಿ ಮತ್ತೆ ಜೀವನದಲ್ಲಿ ಬರಬಹುದು.

1113
ಮಕರ: ನೀವು ಗೊಂದಲಕ್ಕೆ ಒಳಗಾಗುವಿರಿ

ಮಕರ: ನೀವು ಗೊಂದಲಕ್ಕೆ ಒಳಗಾಗುವಿರಿ

ಈ ರಾಶಿಚಕ್ರದ ಜನರಿಗೆ ಈ ಬಾರಿ ಪ್ರೀತಿ ಸಿಗುವ ಸಾಧ್ಯತೆ ಇದೆ. ಆದರೆ ಸಮಸ್ಯೆಯೆಂದರೆ ಸಂಬಂಧದಲ್ಲಿ ಮುಂದುವರಿಯಬೇಕೆ ಅಥವಾ ಬೇಡವೇ ಎಂದು ನೀವು ಕನ್ ಫ್ಯೂಸ್ ಆಗುವಿರಿ. ಅಂದಹಾಗೆ, ಈ ಸಮಯವು ನಿಮಗೆ ಪ್ರಯೋಜನಕಾರಿಯೂ ಆಗಲಿದೆ. ಅಲ್ಲದೇ ನೀವು ನಿಮ್ಮ ತಂದೆಯಿಂದ ಬೆಂಬಲವನ್ನು ಪಡೆಯುತ್ತೀರಿ.

1213
ಕುಂಭ ರಾಶಿ: ಕೆಲವು ಏರಿಳಿತಗಳು ಉಂಟಾಗಬಹುದು

ಕುಂಭ ರಾಶಿ: ಕೆಲವು ಏರಿಳಿತಗಳು ಉಂಟಾಗಬಹುದು

ಪ್ರೀತಿಯ ಬಗ್ಗೆ ಗಂಭೀರವಾಗಿರಬೇಕಾದ ಸಮಯ ಇದು. ಪ್ರೇಮ ಜೀವನದಲ್ಲಿ ಹಠಾತ್ ಏರಿಳಿತಗಳು ಉಂಟಾಗಬಹುದು. ಪ್ರೇಮಿಯೊಂದಿಗೆ ವಾಗ್ವಾದ ನಡೆಯುವ ಸಾಧ್ಯತೆ ಇದೆ. ಪ್ರೀತಿಯನ್ನು ಹುಡುಕುತ್ತಿರುವವರು ನಿಮ್ಮ ಹೃದಯವನ್ನು ಗೆಲ್ಲುವವರು ಸಿಕ್ಕೇ ಸಿಗುತ್ತಾರೆ. ಅಂದಹಾಗೆ, ಈ ಸಮಯದಲ್ಲಿ ನೀವು ತೆಗೆದುಕೊಳ್ಳುವ ಯಾವುದೇ ನಿರ್ಧಾರದಲ್ಲಿ ಗಂಭೀರವಾಗಿರುವುದು ಒಳ್ಳೆಯದು.

1313
ಮೀನ: ಪ್ರೇಮಿಯೊಂದಿಗೆ ಸಮಯ ಕಳೆಯಬಹುದು

ಮೀನ: ಪ್ರೇಮಿಯೊಂದಿಗೆ ಸಮಯ ಕಳೆಯಬಹುದು

ನಿಮ್ಮ ಲವ್ ಲೈಫ್ ಅದ್ಭುತವಾಗಿರುತ್ತೆ. ಪ್ರೀತಿ ಮತ್ತು ಬೆಂಬಲವು ಸಂಬಂಧದಲ್ಲಿ ಹೆಚ್ಚಾಗುತ್ತದೆ. ನೀವು ಈಗಷ್ಟೇ ಲವ್ ಮಾಡಲು ಆರಂಭಿಸಿದ್ದರೆ, ಅಂತವರು ತಮ್ಮ ಪ್ರೇಮಿಯೊಂದಿಗೆ ಸಮಯವನ್ನು ಕಳೆಯಬಹುದು. ನಿಮ್ಮ ವ್ಯಕ್ತಿತ್ವ ಮತ್ತು ನಡವಳಿಕೆ ಯಾರನ್ನಾದರೂ ಆಕರ್ಷಿಸಬಹುದು.  ಪ್ರೀತಿ ಇಲ್ಲದಿದ್ದರೆ, ಒಳ್ಳೆಯ ಸ್ನೇಹಿತರು ನಿಮಗೆ ಸಿಗುತ್ತಾರೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved