MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • New Year: ಸಂಗಾತಿಗೆ ಈ ಪ್ರಾಮಿಸ್ ಮಾಡಿದ್ರೆ ರೊಮ್ಯಾಂಟಿಕ್ ಲೈಫ್ ನಿಮ್ಮದಾಗುತ್ತೆ!

New Year: ಸಂಗಾತಿಗೆ ಈ ಪ್ರಾಮಿಸ್ ಮಾಡಿದ್ರೆ ರೊಮ್ಯಾಂಟಿಕ್ ಲೈಫ್ ನಿಮ್ಮದಾಗುತ್ತೆ!

ಹೊಸ ವರ್ಷದಲ್ಲಿ ನಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂಬ ಭರವಸೆಯೊಂದಿಗೆ, ನಾವೆಲ್ಲರೂ ಹಳೆಯ ವಿಷಯಗಳನ್ನು ಮರೆತು ಮುಂದೆ ಸಾಗಲು ಧೈರ್ಯ ತೆಗೆದುಕೊಳ್ಳುತ್ತೇವೆ. 2023 ರ ಹೊಸ ವರ್ಷಕ್ಕೆ ಕೆಲವೇ ದಿನಗಳು ಮಾತ್ರ ಉಳಿದಿವೆ. ಹಾಗಾಗಿ ಹೊಸ ವರ್ಷದಲ್ಲಿ ಸಂಗಾತಿಯೊಂದಿಗಿನ ಸಂಬಂಧವನ್ನು ಬಲಪಡಿಸಲು ನೀವು ಅವರಿಗೆ ಏನನ್ನಾದರೂ ಪ್ರಾಮಿಸ್ ಮಾಡಬಹುದು. 

2 Min read
Suvarna News
Published : Dec 28 2022, 05:44 PM IST
Share this Photo Gallery
  • FB
  • TW
  • Linkdin
  • Whatsapp
110

ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಉತ್ತಮ ಈ ಪ್ರಾಮಿಸ್ (new year promise) ಪರಿಣಾಮ ಇಡೀ ವರ್ಷವು ನಿಮಗೆ ವಿಶೇಷವಾಗಿರುತ್ತೆ. ಈ ಪ್ರಾಮಿಸ್ ನಿಮ್ಮ ಸಂಗಾತಿ ಜೊತೆ ಸಹ ಇರಬೇಕು. ಯಾಕೆಂದರೆ ನೀವು ಮಾಡುವ ಪ್ರಾಮಿಸ್‌ಗಳಿಂದ ಸಂಗಾತಿಯೊಂದಿಗಿನ ನಿಮ್ಮ ಪ್ರೀತಿ ಗಮನಾರ್ಹವಾಗಿ ಹೆಚ್ಚಾಗುತ್ತೆ. ಹೊಸ ವರ್ಷದ ಮೊದಲ ದಿನದಂದು ನಿಮ್ಮ ಸಂಗಾತಿಗೆ ಈ ಪ್ರಾಮಿಸ್ ಮಾಡುವ ಮೂಲಕ ಜೀವನವನ್ನು ಸಂತೋಷಕರಗೊಳಿಸಬಹುದು. ಅವುಗಳ ಬಗ್ಗೆ ಇಲ್ಲಿ ತಿಳಿಯಿರಿ. ಆದರೆ ಹೊಸ ವರ್ಷವು ಹೊಸ ಪ್ರಾರಂಭಗಳಿಗೆ ಹೆಸರುವಾಸಿ. ಆದ್ದರಿಂದ ನಿಮ್ಮ ಸಂಗಾತಿಗೆ ಈ ಪ್ರಾಮಿಸ್ ಮಾಡಬಹುದು ನೋಡಿ.
 

210
ಒಬ್ಬರಿಗೊಬ್ಬರು ಸುಳ್ಳು ಹೇಳೋದಿಲ್ಲ ಎಂದು

ಒಬ್ಬರಿಗೊಬ್ಬರು ಸುಳ್ಳು ಹೇಳೋದಿಲ್ಲ ಎಂದು

ಯಾವುದೇ ಸಂಬಂಧವು ಬಲವಾಗಿರಲು, ಸತ್ಯದ ಅಡಿಪಾಯ ಅತ್ಯಗತ್ಯ. ಪ್ರೇಮ ಸಂಬಂಧದಲ್ಲಿ ಸುಳ್ಳು ಹೇಳಿದರೆ, ಅದು ಮುರಿದು ಬೀಳುತ್ತೆ. ಆದ್ದರಿಂದ ಯಾವಾಗಲೂ ನಿಮ್ಮ ಸಂಗಾತಿಯೊಂದಿಗೆ ಸತ್ಯ ಮಾತನಾಡೋದಾಗಿ ಪ್ರಾಮಿಸ್ ಮಾಡಿ.

310

ಏನೇ ಆಗಲಿ, ಖಂಡಿತವಾಗಿಯೂ ಸತ್ಯವನ್ನು ನಿಮ್ಮ ಸಂಗಾತಿಗೆ ತಿಳಿಸಿ. ಈ ವಾಗ್ದಾನ ವರ್ಷವಿಡೀ ಪ್ರಾಮಾಣಿಕತೆಯಿಂದ ಉಳಿಸಿಕೊಳ್ಳಲು ಪ್ರಯತ್ನಿಸಿ. ಆಗ ನಿಮ್ಮ ಸಂಬಂಧದಲ್ಲಿ ಎಂದಿಗೂ ಜಗಳ ನಡೆಯೋದಿಲ್ಲ ಮತ್ತು ಪ್ರೀತಿ ಯಾವಾಗಲೂ ಹೆಚ್ಚಾಗುತ್ತೆ.

410
ಸ್ಪೆಷಲ್ ವೀಕೆಂಡ್ (special weekend)

ಸ್ಪೆಷಲ್ ವೀಕೆಂಡ್ (special weekend)

ಇಂದಿನ ಬಿಡುವಿಲ್ಲದ ಜೀವನದಲ್ಲಿ, ದಂಪತಿ ಪರಸ್ಪರರಿಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗೋದಿಲ್ಲ. ಕಚೇರಿಯಲ್ಲಿ ಹೆಚ್ಚಿನ ಸಮಯ ಕಳೆಯೋದರಿಂದ, ಸಂಬಂಧದಲ್ಲಿ ಅಂತರ ಹೆಚ್ಚುತ್ತದೆ. ಹಾಗಾಗಿ, ದಂಪತಿ ವಾರಕ್ಕೊಮ್ಮೆ ಸ್ವಲ್ಪ ಟೈಮ್ ತೆಗೆದುಕೊಂಡು, ಜೊತೆಯಾಗಿ ಟೈಮ್ ಸ್ಪೆಂಡ್ ಮಾಡಬೇಕು ಎಂದು ಪ್ರಾಮೀಸ್ ಮಾಡಿ.
 

510

ಬಿಡುವಿಲ್ಲದ ರೂಟಿನ್ ಹೊರತಾಗಿಯೂ, ವಾರಕ್ಕೊಮ್ಮೆ ಒಬ್ಬರಿಗೊಬ್ಬರು ಸಮಯ ಮೀಸಲಿಡಿ. ಇದು ಜೀವನದಲ್ಲಿ ರೊಮ್ಯಾನ್ಸ್ (Romance in life) ಉಳಿಸಿಕೊಳ್ಳೋದಲ್ಲದೆ, ಸಂಬಂಧವನ್ನು ಬಲಪಡಿಸುತ್ತೆ. ಇದರಿಂದ ನೀವು ಅನ್ಯೋನ್ಯತೆಯಿಂದ ಬಾಳಲು ಸಾಧ್ಯವಾಗುತ್ತೆ. ಅರ್ಥಮಾಡಿಕೊಳ್ಳಲು ಸಹ ಸಾಧ್ಯವಾಗುತ್ತೆ. 

610
ತಪ್ಪು ತಿಳುವಳಿಕೆ ಒಟ್ಟಿಗೆ ತೆಗೆದುಹಾಕುವ ಪ್ರಾಮೀಸ್

ತಪ್ಪು ತಿಳುವಳಿಕೆ ಒಟ್ಟಿಗೆ ತೆಗೆದುಹಾಕುವ ಪ್ರಾಮೀಸ್

ಜಗಳದ ನಂತರ, ಗೆಳೆಯ, ಗೆಳತಿ ಅಥವಾ ಗಂಡ ಮತ್ತು ಹೆಂಡತಿಯ ನಡುವಿನ ಮಾತುಕತೆ ನಿಲ್ಲುತ್ತೆ, ಇದು ಸಾಮಾನ್ಯವಾಗಿ ಎಲ್ಲಾ ಕಪಲ್ಸ್ ನಡುವೆ ಕೂಡ ನಡೆಯುತ್ತದೆ. ಇಬ್ಬರ ಮನಸ್ಸಿನಲ್ಲಿ ಪರಸ್ಪರರ ಬಗ್ಗೆ ತಪ್ಪು ತಿಳುವಳಿಕೆ ಉಂಟಾಗುತ್ತೆ. ಹೀಗೆ ಆಗೋದನ್ನು ತಪ್ಪಿಸಬೇಕು. 
 

710

ಏನೇ ಆಗಲಿ, ಅವರು ಪರಸ್ಪರ ಮಾತನಾಡೋದನ್ನು ನಿಲ್ಲಿಸೋದಿಲ್ಲ ಎಂದು ಹೊಸ ವರ್ಷದಂದು ಒಬ್ಬರಿಗೊಬ್ಬರು ಪ್ರಾಮಿಸ್ ಮಾಡಿ. ಮಾತುಕತೆ ಮೂಲಕ ತಪ್ಪು ತಿಳುವಳಿಕೆಗಳನ್ನು ತಕ್ಷಣವೇ ತೆಗೆದುಹಾಕಲು ಪ್ರಯತ್ನಿಸುತ್ತೇವೆ ಎಂದು ಪ್ರಾಮೀಸ್ ಮಾಡಿ.
 

810
ಪರಸ್ಪರ ಗೌರವಿಸಿ (respect each other)

ಪರಸ್ಪರ ಗೌರವಿಸಿ (respect each other)

ಪ್ರೀತಿಯ ಸಂಬಂಧ ಕಾಪಾಡಿಕೊಳ್ಳಲು ಸಂಗಾತಿಯನ್ನು ಗೌರವಿಸುವುದು ಬಹಳ ಮುಖ್ಯ. ನೀವು ಅವರಿಗಿಂತ ಬುದ್ಧಿವಂತರು, ಅವರಿಗೆ ಏನೂ ತಿಳಿದಿಲ್ಲ ಎಂಬಂತಹ ವಿಷಯಗಳನ್ನು ನಿಮ್ಮ ಮನಸ್ಸಿನಿಂದ ಹೊರತೆಗೆಯಿರಿ ಮತ್ತು ಈ ವರ್ಷವೇ ಅದನ್ನೆಲ್ಲಾ ಮರೆಯಿರಿ.

910

ಸಂಗಾತಿಯನ್ನು ನಿಮಗಿಂತ ಕಡಿಮೆ ಎಂದು ಅಂದಾಜು ಮಾಡೋದು ಸಂಬಂಧವನ್ನು ಟೊಳ್ಳಾಗಿಸಬಹುದು. ಆದ್ದರಿಂದ, ಬರೀ ಸಂಗಾತಿಯನ್ನು ಗೌರವಿಸೋದು (respect partner)  ಮಾತ್ರವಲ್ಲದೆ, ಅವರ ಕುಟುಂಬವನ್ನು ಗೌರವಿಸುವುದಾಗಿ ಸಂಗಾತಿಗೆ ಪ್ರಾಮಿಸ್ ಮಾಡಿ.

1010
ಸೆಕ್ಸ್ ಬಗ್ಗೆ ಮುಕ್ತವಾಗಿ ಮಾತನಾಡಿ

ಸೆಕ್ಸ್ ಬಗ್ಗೆ ಮುಕ್ತವಾಗಿ ಮಾತನಾಡಿ

ಸಂಗಾತಿಯೊಂದಿಗೆ ರೊಮ್ಯಾನ್ಸ್ ಮಾಡುವಾಗ, ಅವರ ಕಡೆಯಿಂದ ಕೆಲವು ಸಮಸ್ಯೆಗಳು ಇರೋದನ್ನು ಆಗಾಗ್ಗೆ ನೋಡಬಹುದು. ಆದರೆ ಅವರು ಪರಸ್ಪರ ಮುಕ್ತವಾಗಿ ಮಾತನಾಡಲು ಸಾಧ್ಯವಾಗೋದಿಲ್ಲ. ಇದರಿಂದಾಗಿ ದೂರವು ಹೆಚ್ಚಾಗುತ್ತೆ. ಆದ್ದರಿಂದ, ಸೆಕ್ಸ್ ಬಗ್ಗೆ ಸಂಕೋಚವಿಲ್ಲದೆ ಪರಸ್ಪರ ಮಾತನಾಡುವ ಪ್ರಾಮಿಸ್ ಮಾಡೋದು ಬಹಳ ಮುಖ್ಯ. 
 

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved