- Home
- Life
- Relationship
- Smriti Mandana, Samantha ಸಂಸಾರಕ್ಕೆ ಕಣ್ಣು ಬಿದ್ದು ಹಾಳಾಗಿದ್ದು ಹೇಗೆ? ದೃಷ್ಟಿ ಆಗುವ ಪ್ರಕ್ರಿಯೆ ಇದು!
Smriti Mandana, Samantha ಸಂಸಾರಕ್ಕೆ ಕಣ್ಣು ಬಿದ್ದು ಹಾಳಾಗಿದ್ದು ಹೇಗೆ? ದೃಷ್ಟಿ ಆಗುವ ಪ್ರಕ್ರಿಯೆ ಇದು!
Smriti Mandhana Palash Muchhal Wedding: ಭಾರತೀಯ ಮಹಿಳಾ ಕ್ರಿಕೆಟರ್ ಸ್ಮೃತಿ ಮಂದಾನ, ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೊತೆ ಮದುವೆ ಆಗಲು ರೆಡಿಯಾಗಿದ್ದರು. ಮೈದಾನದಲ್ಲಿ ಪ್ರೇಮ ನಿವೇದನೆ ಆಗಿತ್ತು, ಹಳದಿ, ಸಂಗೀತ, ಮೆಹೆಂದಿ ನಡೆದರೂ ಕೂಡ ಮದುವೆ ಮಾತ್ರ ಆಗಲಿಲ್ಲ. ಯಾರ ಕಣ್ಣು ಬಿತ್ತೋ ಏನೋ

ಮೋಸ ಮಾಡಿದರಾ?
ಸ್ಮೃತಿ ಮಂದಾನ ಮದುವೆ ನ್ಯೂಸ್ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಇವರಿಗೆ ಯಾವ ದೃಷ್ಟಿ ಬಿತ್ತೋ ಏನೋ, ಸ್ಮೃತಿ ತಂದೆಗೆ ಹೃದಯಾಘಾತ ಆಯ್ತು. ಮದುವೆ ಮನೆಯಿಂದ ಎಲ್ಲರೂ ಆಸ್ಪತ್ರೆಗೆ ಓಡಿದರು. ಇನ್ನು ಪಲಾಶ್ ಮೊದಲೇ ಒಂದು ರಿಲೇಶನ್‌ಶಿಪ್‌ನಲ್ಲಿ ಇದ್ದರು, ಅವರು ಬೇರೆ ಹೆಣ್ಣಿನ ಜೊತೆ ಇದ್ದು, ಸ್ಮೃತಿಗೆ ಮೋಸ ಮಾಡಿದರು ಎಂದು ಹೇಳುತ್ತಿರುವ ಚಾಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಜೋಡಿಗಳು ದೂರವಾದ್ರು
ನಾಗಚೈತನ್ಯ-ಸಮಂತಾ ಜೋಡಿ ನೋಡಿ ಎಷ್ಟೋ ಜನರು ಇದ್ದರೆ ಹೀಗಿರಬೇಕು ಎಂದುಕೊಂಡಿದ್ದಿದೆ. ಆದರೆ ಇವರು ದೂರ ದೂರ ಆದರು. ಹೀಗೆ ಎಷ್ಟೋ ಚೆಂದ ಕಾಣುವ ಜೋಡಿಗಳಲ್ಲಿ ಸಂಗಾತಿಗಳನ್ನು ಕಳೆದುಕೊಂಡಿದ್ದೂ ಇದೆ. ಕೆಲವರು ಇದನ್ನು ನಂಬಿದ್ರೆ, ಇನ್ನೂ ಕೆಲವರು ನಂಬೋದಿಲ್ಲ.
ದೃಷ್ಟಿ ಹೇಗೆ ಆಗುತ್ತದೆ?
ಯಾವ ವ್ಯಕ್ತಿಯು ನಿಮ್ಮ ಮೇಲೆ ಹೊಟ್ಟೆಕಿಚ್ಚು ಪಡೆದುಕೊಳ್ಳುತ್ತಾರೋ, ಅಲ್ಲಿ Distress Ring ಸೃಷ್ಟಿ ಆಗುತ್ತದೆ, ಅದು ನಿಮ್ಮ ಬಳಿ ಅಲೆಯ ಮೂಲಕ ಹೋಗುವುದು. ಅದು ನಿಮ್ಮ ಎನರ್ಮಿಯನ್ನು ಹಾಳು ಮಾಡುತ್ತದೆ. ಈ ರೀತಿ ಮಾಡುವವರು ನಿಮ್ಮವರೇ.
ದೃಷ್ಟಿ ತಾಗುವುದು ಯಾರಿಂದ?
ಹೊರಗಡೆ ಜನರಿಗೆ, ನಿಮ್ಮ ಪರಿಚಯ ಇಲ್ಲದವರಿಗೆ ನಿಮ್ಮ ಯಶಸ್ಸು, ಸೌಂದರ್ಯ ಅಥವಾ ಇನ್ಯಾವುದೇ ವಿಷಯದ ಬಗ್ಗೆ ಯೋಚನೆಯೇ ಬರೋದಿಲ್ಲ, ವ್ಯತ್ಯಾಸವೂ ಆಗೋದಿಲ್ಲ. ನಿಮ್ಮವರಿಗೆ ಮಾತ್ರ ನಿಮ್ಮ ವಿಷಯ ಮ್ಯಾಟರ್ ಆಗುತ್ತದೆ.
ನಮ್ಮವರೇ ನಮಗೆ ಹಾಳು ಎಂದು ಕೆಲವರು ಹೇಳುತ್ತಾರೆ. ಹಾಗೆ ನಮ್ಮವರಿಂದಲೇ ನಮಗೆ ದೃಷ್ಟಿ ಆಗುವುದು.
ದೃಷ್ಟಿ ಆದರೆ ಏನಾಗುವುದು?
ದೃಷ್ಟಿ ಅಥವಾ ನಜರ್ ಆದರೆ ಊಟ ಸೇರೋದಿಲ್ಲ, ಆರೋಗ್ಯ ಹಾಳಾಗುತ್ತದೆ, ಜಗಳ ಬರುವುದು, ಮನೆಯಲ್ಲಿ ಏನೋ ಒಂದು ಸಮಸ್ಯೆ ಬರುವುದು. ಅಷ್ಟೇ ಅಲ್ಲದೆ ಯಶಸ್ಸಿನ ಪತನ ಕೂಡ ಆಗುವುದು. ಕಪಲ್ ಫೋಟೋ ಹಾಕಿದ ದಿನ ಇಬ್ಬರಿಗೂ ಜಗಳ ಆಗುತ್ತದೆ ಎಂದು ಹೇಳುವುದನ್ನು ಕೇಳಬಹುದು.
ಏನು ಮಾಡಬೇಕು?
ಹಿರಿಯರಿಂದ ದೃಷ್ಟಿ ತೆಗೆಸಿಕೊಳ್ಳಬೇಕು
ಉಪ್ಪು ನೀರಿನ ಸ್ನಾನ ಮಾಡಬೇಕು
ಹನುಮಾನ್ ಚಾಲೀಸ ಪಠಣ ಮಾಡಬೇಕು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

