ಸಂಸದ ತೇಜಸ್ವಿ ಸೂರ್ಯ, ಸಿಂಗರ್ ಸಿವಶ್ರಿ ಭೇಟಿಯಾಗಿದ್ದೆಲ್ಲಿ? ಇನ್‌ಸ್ಟಾಗ್ರಾಂ ಹೇಳಿದ ಕತೆ!
ಸಂಸದ ತೇಜಸ್ವಿ ಸೂರ್ಯ ಹಾಗೂ ಚೆನ್ನೈ ಮೂಲದ ಗಾಯಕಿ ಸಿವಶ್ರಿ ಸ್ಕಂದಪ್ರಸಾದ್ ಮದುವೆ ಫಿಕ್ಸ್ ಆಗಿದೆ. ಆಧರೆ ಇವರಿಬ್ಬರು ಭೇಟಿಯಾಗಿದ್ದೆಲ್ಲಿ ಅನ್ನೋ ಕುತೂಹಲಕ್ಕೆ ಇನ್‌ಸ್ಟಾ ಉತ್ತರ ನೀಡುತ್ತಿದೆ.
ಸಂಸದ ತೇಜಸ್ವಿ ಸೂರ್ಯ ಬಿಜೆಪಿಯ ಯುವ ನಾಯಕನಾಗಿ ಅತ್ಯಂತ ಜನಪ್ರಿಯರಾಗಿದ್ದಾರೆ. ತಮಿಳುನಾಡು ಬಿಜೆಪಿಯಲ್ಲೂ ತೇಜಸ್ವಿ ಸೂರ್ಯ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇದೀಗ ತೇಜಸ್ವಿ ಸೂರ್ಯಗೆ ಕಂಕಣ ಭಾಗ್ಯ ಕೂಡಿ ಬಂದಿದೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಮಾರ್ಚ್ 4 ರಂದು ತೇಜಸ್ವಿ ಸೂರ್ಯ ಹಾಗೂ ಸಿವಶ್ರಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ವರದಿಯಾಗಿದೆ.
ರಾಜಕೀಯ ನಾಯಕನಾಗಿ ಗುರುತಿಸಿಕೊಂಡಿರುವ ತೇಜಸ್ವಿ ಸೂರ್ಯ, ಗಾಯಕಿ ಸಿವಶ್ರಿಯನ್ನು ಭೇಟಿಯಾಗಿದ್ದೆಲ್ಲಿ? ಇವರಿಬ್ಬರ ಇನ್‌ಸ್ಟಾ ಪೋಸ್ಟ್‌ಗಳು ಈ ಮಾಹಿತಿ ನೀಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿನ ಪೋಸ್ಟ್ ಪ್ರಕಾರ ಬಿಡುವಿಲ್ಲದ ನಡುವೆಯೂ ತೇತಸ್ವಿ ಸೂರ್ಯ 2021ರಲ್ಲಿ ಸಿವಶ್ರಿಯ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ಚೆನ್ನೈನಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ತೇಜಸ್ವಿ ಸೂರ್ಯ ದಿಢೀರ್ ಎಂಟ್ರಿಕೊಟ್ಟಿದ್ದರು. ಈ ವೇಳೆ ತಾನು ಸಿವಶ್ರಿ ಅತೀ ದೊಡ್ಡ ಅಭಿಮಾನಿ. ಇವರ ಕಾರ್ಯಕ್ರಮ ಇಲ್ಲಿ ನಡೆಯುತ್ತಿದೆ ಅನ್ನೋ ಮಾಹಿತಿ ತಿಳಿದು ಆಗಮಿಸಿರುವುದಾಗಿ ಹೇಳಿದ್ದರು. ಈ ಕಾರ್ಯಕ್ರಮದಲ್ಲಿ ಸಿವಶ್ರಿ ಹಾಡು ಕೇಳಲು ಸಿಕ್ಕಿರುವ ಅವಕಾಶ ನನ್ನ ಭಾಗ್ಯ ಎಂದಿದ್ದರು.
ಹಾಗಾದರೆ ತೇಜಸ್ವಿ ಸೂರ್ಯ ಹಾಗೂ ಸಿವಶ್ರಿ ಆತ್ಮೀಯರಾಗಿದ್ದು ಎಲ್ಲಿ? ಪ್ರಮುಖವಾಗಿ ಹಲವು ವರ್ಷಗಳಿಂದ ಸಂಸದ ತೇಜಸ್ವಿ ಸೂರ್ಯಗೆ,ಗಾಯಕಿ ಸಿವಶ್ರಿ ಬಲ್ಲವರಾಗಿದ್ದಾರೆ. ಆದರೆ ಇವರಿಬ್ಬರ ಸೋಶಿಯಲ್ ಮೀಡಿಯಾ ಖಾತೆಗಳು ಗೋವಾದ ಐರನ್ ಮ್ಯಾನ್ ಚಾಂಪಿಯನ್‌ಶಿಪ್ ಕತೆ ಹೇಳುತ್ತಿದೆ. ಇವರಿಬ್ಬರು ಗೋವಾದಲ್ಲಿ ನಡೆದ ಐರನ್ ಮ್ಯಾನ್ ಚಾಲೆಂಜ್ ರಿಲೆಯಲ್ಲಿ ಆತ್ಮೀಯರಾಗಿರುವ ಸಾಧ್ಯತೆಯನ್ನು ಹೇಳುತ್ತಿದೆ.
ಗೋವಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಐರನ್‌ಮ್ಯಾನ್ ರೇಸ್‌ನಲ್ಲಿ ಇಬ್ಬರು ಪಾಲ್ಗೊಂಡಿದ್ದಾರೆ. ವಿಶೇಷ ಅಂದರೆ ಈ ಐರನ್ ಮ್ಯಾನ್ ರೇಸ್ ಯಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ಸಂಸದ ತೇಜಸ್ವಿ ಸೂರ್ಯ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದೇ ರೇಸ್‌ನ‌್ನು ಸಿವಶ್ರಿ ಕೂಡ ಪೂರ್ಣಗೊಳಿಸಿದ್ದಾರೆ.
1900 ಮೀಟರ್ ಈಜು, ಬರೋಬ್ಬರಿ 90 ಕಿಲೋಮೀಟರ್ ಸೈಕ್ಲಿಂಗ್ ಹಾಗೂ 21.1 ಕಿಲೋಮೀಟರ್ ಓಟ ಈ ಐರನ್‌ಮ್ಯಾನ್ ರೇಸ್ ವಿಶೇಷತೆ, ಇಬ್ಬರೂ ತಮ್ಮ ಸಾಧನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಗೋವಾದ ರೇಸ್ ಇವರಿಬ್ಬರ ಆತ್ಮೀಯತೆಗೆ ಕಾರಣವಾಗಿರಬಹುದು ಅನ್ನೋ ಲೆಕ್ಕಾಚಾರಗಳು ಶುರುವಾಗಿದೆ.