ಡಿವೋರ್ಸ್ ಬಳಿಕ ಕಾಡೋ ಸಮಸ್ಯೆ, ಎಚ್ಚರ ತಪ್ಪಿದರೆ ಜೀವಕ್ಕೆ ಅಪಾಯ
ಮದುವೆ ಬಳಿಕ ಪತಿ ಪತ್ನಿ ಅನ್ಯೋನ್ಯವಾಗಿ ಸಂಸಾರ ಮಾಡುತ್ತಾರೆ. ಆದರೆ ದಿನ ಕಳೆದಂತೆ ಇಬ್ಬರ ನಡುವೆ ಏನಾದರೂ ಒಂದು ಕಾರಣಕ್ಕೆ ಸಮಸ್ಯೆ, ಕಲಹ ಉಂಟಾಗುತ್ತದೆ. ಇದೆ ಹೆಚ್ಚಾಗುತ್ತ ಹೋದಂತೆ ಅಂತರ ಉಂಟಾಗಿ ಕೊನೆಗೆ ಡಿವೋರ್ಸ್ ನಲ್ಲಿ ಕೊನೆಯಾಗುತ್ತದೆ. ಇದರಿಂದ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ.

ಇಬ್ಬರ ನಡುವೆ ಅನ್ಯೋನತೆ ಇಲ್ಲದೆ ಇರುವ ಕಾರಣದಿಂದ ಈಗ ಸಂಗಾತಿಗಳು ಪರಸ್ಪರ ವಿಚ್ಛೇದನ ನೀಡುವುದು ಸಾಮಾನ್ಯವಾಗಿ ಹೋಗಿದೆ. ಈ ವಿಚ್ಛೇದನವೂ ಸಂಗಾತಿಗಳಿಗೆ ಕಷ್ಟಕರವಾಗಿ ಪರಿಣಮಿಸುತ್ತದೆ. ಸಂಗಾತಿಯಿಂದ ಬೇರ್ಪಡುವಿಕೆಯು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೃದಯವನ್ನು ನುಚ್ಚುನೂರುಗೊಳಿಸುವ ಬ್ರೇಕಪ್ ಕ್ರಮೇಣ ನಿಮ್ಮನ್ನು ತೀವ್ರ ಕಾಯಿಲೆಗೂ ಗುರಿ ಮಾಡುತ್ತದೆ. ಇಂಥ ಕೆಲವು ಅನಾರೋಗ್ಯಗಳ ವಿವರ ಇಲ್ಲಿದೆ.

ದೀರ್ಘಕಾಲದ ಒತ್ತಡ
ವಿಚ್ಛೇದನದ ನಂತರ ಕಾಣಿಸಿಕೊಳ್ಳುವ ಒತ್ತಡದಿಂದಾಗಿ ದೇಹದಲ್ಲಿ ಕಾರ್ಟಿಸಲ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದರ ನಿರಂತರ ಬಿಡುಗಡೆಯಿಂದ ನಿಮ್ಮಲ್ಲಿ ದೀರ್ಘಕಾಲದ ಒತ್ತಡ ಕಾಣಿಸಿಕೊಳ್ಳುತ್ತದೆ.
ರಕ್ತದೊತ್ತಡ ಹೆಚ್ಚಳ:
ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಟಿಸಲ್ ಬಿಡುಗಡೆಯಾದರೆ ಅದು ಕ್ರಮೇಣ ಹೃದಯ ಬಡಿತ ಮತ್ತು ರಕ್ತದೊತ್ತಡ ಸೇರಿದಂತೆ ದೇಹದ ಪ್ರತಿ ಅಂಗಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ನಿದ್ರಾಹೀನತೆ
ಪ್ರತಿದಿನ ಹಾಸಿಗೆಯಲ್ಲಿ ಸಂಗಾತಿಯಿಲ್ಲದೆ ಒಬ್ಬಂಟಿಯಾಗಿ ಮಲಗುವುದರಿಂದ ಕ್ರಮೇಣ ದೈಹಿಕ ಒತ್ತಡ ಕಾಣಿಸಿಕೊಳ್ಳುತ್ತದೆ. ದೀರ್ಘಕಾಲದವರೆಗೆ ನಿಮ್ಮ ಪಕ್ಕ ಯಾರಾದರೂ ಸಂಗಾತಿಯಿಲ್ಲದಿದ್ದರೆ ನಿಮಗೆ ಚೆನ್ನಾಗಿ ನಿದ್ರೆ ಬರುವುದಿಲ್ಲ.
ಇನ್ನಿತರ ಸಮಸ್ಯೆ :
ಒತ್ತಡಕ್ಕೆ ಕಾರಣವಾಗುವ ಕಾರ್ಟಿಸಲ್ ಹಾರ್ಮೋನ್‌ನ ಬಿಡುಗಡೆಯಿಂದ ನಿದ್ರೆ ದೂರವಾಗುತ್ತದೆ. ನಿದ್ರೆ ಇಲ್ಲದೆ ರಾತ್ರಿ ಕಳೆಯುವುದು ಇನ್ನೂ ಕಷ್ಟ. ನಿದ್ರೆ ಕಡಿಮೆಯಾದರೆ ಇನ್ನಿತರ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.
ದುರ್ಬಲ ರೋಗ ನಿರೋಧಕ ಶಕ್ತಿ
ವಿಚ್ಛೇದನವು ವ್ಯಕ್ತಿಗಳಲ್ಲಿ ಒತ್ತಡವನ್ನುಂಟು ಮಾಡುತ್ತದೆ. ಹಾಗೂ ಈ ಒತ್ತಡವು ತಕ್ಷಣಕ್ಕೆ ದೇಹದ ರೋಗ ನಿರೋಧಕ ಶಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಗಣನೀಯವಾಗಿ ಕಡಿಮೆಯಾಗುತ್ತದೆ ಮತ್ತು ನೀವು ಫ್ಲೂ ಮತ್ತು ನೆಗಡಿಯಂತಹ ಕಾಯಿಲೆಗಳಿಗೆ ಹೆಚ್ಚು ಗುರಿಯಾಗುತ್ತೀರಿ.
ಅಸಮರ್ಪಕ ತೂಕ :
ಡಿವೋರ್ಸ್ ಬಳಿಕ ಬದಲಾದ ಮನಸ್ಥಿತಿ, ಸಮಯ ಇನ್ನಿತರ ಕಾರಣದಿಂದಾಗಿ ನಿವು ಗಮನಾರ್ಹವಾದ ತೂಕವನ್ನು ಪಡೆಯುವುದು ಅಥವಾ ಕಳೆದುಕೊಳ್ಳುವುದು ಯಾವುದಾದರು ಒಂದು ಸಮಸ್ಯೆಗೆ ಒಳಗಾಗುತ್ತೀರಿ. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಹೃದಯ ಸಮಸ್ಯೆ :
ಅಧ್ಯಯನವೊಂದು ತಿಳಿಸಿದಂತೆ ವಿಚ್ಛೇದಿತ ಪುರುಷರಲ್ಲಿ ಕ್ಯಾನ್ಸರ್ ಮತ್ತು ಹೃದ್ರೋಗ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತದೆ.
ಅಪಾಯಕಾರಿ ಸಮಸ್ಯೆಗಳು :
ಅಧಿಕ ರಕ್ತದೊತ್ತಡ, ಅಧಿಕ ರಕ್ತದ ಸಕ್ಕರೆ, ಹೆಚ್ಚುವರಿ ಹೊಟ್ಟೆಯ ಕೊಬ್ಬು ಮತ್ತು ಅಧಿಕ ಕೊಲೆಸ್ಟ್ರಾಲ್ ಸೇರಿದಂತೆ ನೀವು ಏಕಕಾಲದಲ್ಲಿ ಹಲವಾರು ಅಪಾಯಕಾರಿ ಪರಿಸ್ಥಿತಿಗಳನ್ನು ಹೊಂದಿರುವಾಗ ಚಯಾಪಚಯ ಸಿಂಡ್ರೋಮ್ ಸಂಭವಿಸುವ ಸಾಧ್ಯತೆ ಇದೆ.
ಆದ್ದರಿಂದ ನೀವು ಸಂಗಾತಿಯಿಂದ ವಿಚ್ಛೇದನಗೊಂಡಿದ್ದರೆ ಸಾಧ್ಯವಾದಷ್ಟು ಆಶಾವಾದಿಯಾಗಿರಿ. ಹಾಗೂ ಯಾವುದೇ ಪರಿಸ್ಥಿತಿಯನ್ನೂ ಅದು ಬಂದ ಹಾಗೆಯೇ ಸ್ವೀಕರಿಸಿ.