ಸೀತಾ ಮಾತೆಯ ಈ ಗುಣಗಳೂ ಪತ್ನಿಯಲ್ಲೂ ಇರಬೇಕೆಂದು ಬಯಸ್ತಾರೆ ಪುರುಷರು
ಪ್ರತಿಯೊಬ್ಬ ಪುರುಷನು ತನ್ನ ಹೆಂಡತಿಯಲ್ಲಿ ಸೀತಾ ಮಾತೆಯ ಕೆಲವು ಗುಣಗಳು ಇರಬೇಕು ಎಂದು ಬಯಸುತ್ತಾನೆ. ಆದರ್ಶ ಪತ್ನಿಯಾಗಿ ಸದಾ ಮೊದಲ ಸ್ಥಾನದಲ್ಲಿರುವ ಸೀತಾ ಮಾತೆಯ ಯಾವ ಗುಣಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡೋಣ.
ಪ್ರತಿಯೊಬ್ಬ ಗಂಡ ಮತ್ತು ಹೆಂಡತಿ ಸಂಬಂಧ ಗಟ್ಟಿಯಾಗಿರಬೇಕು ಎಂದು ಪ್ರತಿಯೊಬ್ಬರು ಬಯಸುತ್ತಾರೆ. ನೀವು ಸೀತಾ ಮಾತೆ (SIta Mata) ಮತ್ತು ಭಗವಾನ್ ರಾಮನನ್ನು ನೋಡಿದರೆ, ಇಂತಹ ಆದರ್ಶ ಜೋಡಿ ಯಾರೂ ಇರಲು ಸಾಧ್ಯವಿಲ್ಲ ಎನಿಸುತ್ತೆ. ಇಬ್ಬರೂ ಒಬ್ಬರನ್ನೊಬ್ಬರು ಸಂಪೂರ್ಣವಾಗಿ ನಂಬುತ್ತಿದ್ದರು, ಆದರೆ ಇದು ಇಂದು ದಂಪತಿಗಳಲ್ಲಿ ಕಂಡುಬರೋದೇ ಇಲ್ಲ. ಅದೇ ಕಾರಣಕ್ಕಾಗಿ ಡಿವೋರ್ಸ್ ಸಂಖ್ಯೆ ಹೆಚ್ಚುತ್ತೆ.
ನಾವು ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ, ಧೈರ್ಯಕ್ಕೆ, ಸಾಹಸಕ್ಕೆ ಉದಾಹರಣೆ ನೀಡಬಹುದಾದಂತಹ ಹಲವಾರು ಮಹಿಳೆಯರ ಹೆಸರು ಕಾಣಸಿಗುತ್ತದೆ. ನಾವು ಮಹಿಳೆಯಲ್ಲಿನ ಗುಣಗಳ ಬಗ್ಗೆ ಹೇಳೋದಾದರೆ, ಸೀತೆಯ ಹೆಸರು ಸದಾ ಮುಂಚೂಣಿಯಲ್ಲಿದೆ. ಪುರುಷರು ತಮ್ಮ ಪತ್ನಿಯಲ್ಲಿ ಸೀತೆಯ ಯಾವ ಗುಣ ಇರಬೇಕೆಂದು ಬಯಸುತ್ತಾರೆ ನೋಡೋಣ.
ಜೀವನ ಪೂರ್ತಿ ಹೋರಾಟಗಳಿಂದ ತುಂಬಿದ್ದರೂ, ಭಗವಾನ್ ರಾಮ (Lord Rama) ಮತ್ತು ತಾಯಿ ಸೀತೆಯ ಜೀವನ ಇಂದಿಗೂ ಸಹ ಸಮಾಜಕ್ಕೆ ಆದರ್ಶವಾಗಿ ಉಳಿದಿದೆ. ಗಂಡ ಮತ್ತು ಹೆಂಡತಿ ಈ ಜೋಡಿಯಿಂದ ಅನೇಕ ಪಾಠಗಳನ್ನು ಕಲಿಯಬಹುದು ಮತ್ತು ಆ ಮೂಲಕ ತಮ್ಮ ವೈವಾಹಿಕ ಜೀವನವನ್ನು ಯಶಸ್ವಿಗೊಳಿಸಬಹುದು. ಮದುವೆ ಅನ್ನೋದು ಎರಡು ಜೀವಗಳು ಒಂದಾಗಿ ಬಾಳುವ ಒಂದು ಬಂಧವಾಗಿದೆ.
ಸಂಬಂಧದ ಪ್ರಾರಂಭವು ಎಷ್ಟೇ ಸಿಹಿಯಾಗಿದ್ದರೂ, ಅದನ್ನು ಜೀವನ ಪೂರ್ತಿ ಸಂತೋಷದಿಂದ ಕಳೆಯಲು ಸಂಗಾತಿಯೊಂದಿಗೆ ಆಳವಾದ ಸಂಬಂಧವನ್ನು ಹೊಂದಿರುವುದು ಮುಖ್ಯವಾಗಿದೆ. ಸೀತಾಮಾತೆಯ ಬಗ್ಗೆ ಮಾತನಾಡುವುದಾದರೆ, ಆಕೆಯ ಗುಣಗಳು ಎಂದಿಗೂ ಮಹತ್ತವಾದ ಸ್ಥಾನವನ್ನು ಪಡೆಯುತ್ತವೆ. ಇಂದಿಗೂ, ಮಹಿಳೆಯ ಗುಣಗಳ ವಿಷಯಕ್ಕೆ ಬಂದಾಗ, ಪುರುಷರು ಹೆಚ್ಚಾಗಿ ಸೀತೆಯಂತಹ ಗುಣಗಳ ಬಗ್ಗೆ ಮಾತನಾಡುತ್ತಾರೆ. ಪುರುಷರು ತಮ್ಮ ಹೆಂಡತಿಯಲ್ಲಿ ಬಯಸುವ ಗುಣಗಳು ಸೀತೆಯ ಆ ಗುಣಗಳು (Characters of Sita) ಯಾವುವು ಎಂದು ತಿಳಿಯೋಣ.
ತ್ಯಾಗ (Sacrifice)
ತಾಯಿ ಸೀತಾ ತನ್ನ ಜೀವನದಲ್ಲಿ ತನ್ನ ಗಂಡನಿಗಾಗಿ ಎಲ್ಲವನ್ನೂ ತ್ಯಾಗ ಮಾಡುವ ಮೂಲಕ ಪತ್ನಿಯ ಪಾತ್ರಕ್ಕೆ ಉತ್ತಮ ಉದಾಹರಣೆ ನೀಡಿದ್ದಾಳೆ. ಅರಮನೆಯ ಎಲ್ಲಾ ಸೌಕರ್ಯಗಳನ್ನು ಒಂದೇ ಹೊಡೆತದಲ್ಲಿ ಬಿಟ್ಟು, ಅವಳು ತನ್ನ ಗಂಡನೊಂದಿಗೆ ವನವಾಸಕ್ಕೆ ಹೋಗಲು ನಿರ್ಧರಿಸಿದಳು. ಅಂತೆಯೇ, ಯಾವಾಗಲೂ ಹಣಕ್ಕಿಂತ ಸಂಬಂಧಗಳಿಗೆ ಆದ್ಯತೆ ನೀಡುವ ಮಹಿಳೆಯರನ್ನು ಪುರುಷರು ಇಷ್ಟಪಡುತ್ತಾರೆ.
ಗೌರವ (Respect)
ಸಂಬಂಧವನ್ನು ಆರೋಗ್ಯಕರವಾಗಿಡಲು, ಪರಸ್ಪರ ಗೌರವಿಸುವುದು ಸಹ ಬಹಳ ಮುಖ್ಯ. ನೆನಪಿಡಿ, ಸೀತಾಮಾತೆಯ ಪತಿ ಧರ್ಮದ ಬಗ್ಗೆ ಪ್ರಶ್ನೆಗಳು ಎದ್ದಾಗ, ಸ್ವತಃ ತಾನು ಸರಿ ಎಂದು ತಿಳಿದಿದ್ದರೂ ಸಹ, ಸಮಾಜದಲ್ಲಿ ಶ್ರೀ ರಾಮನ ಗೌರವಕ್ಕಾಗಿ ಅವಳು ಅಗ್ನಿಪರೀಕ್ಷೆಯನ್ನು ಎದುರಿಸಿದಳು. ಈ ಗುಣಗಳನ್ನು ಪುರುಷರು ಯಾವಾಗಲೂ ಇಷ್ಟಪಡುತ್ತಾರೆ.
ಸಮರ್ಪಣೆ (Dedication)
ತಾಯಿ ಸೀತಾ ತನ್ನನ್ನು ಸಂಪೂರ್ಣವಾಗಿ ರಾಮನಿಗೆ ಸಮರ್ಪಿಸಿಕೊಂಡಳು. ರಾವಣನಿಂದ ಅಪಹರಿಸಲ್ಪಟ್ಟ ನಂತರವೂ, ಒಂದು ಕ್ಷಣಕ್ಕೂ ಆಕೆ ಇತರ ಗಂಡಸರು ತನ್ನನ್ನು ಮುಟ್ಟಲು ಸಹ ಬಿಟ್ಟಿಲ್ಲ. ಯಾವಾಗಲೂ ಆದರ್ಶ ಪತ್ನಿಯಾಗಿ ತನ್ನನ್ನು ನಿರೂಪಿಸಿದಳು. ಅವರ ಈ ಗುಣವೂ ತುಂಬಾ ವಿಶೇಷವಾಗಿದೆ ಮತ್ತು ಯಾವುದೇ ಸಂಬಂಧದಲ್ಲಿ ಸಂಗಾತಿಯಲ್ಲಿ ಸಂಪೂರ್ಣ ನಂಬಿಕೆ ಮತ್ತು ಪ್ರಾಮಾಣಿಕತೆಯನ್ನು ಹೊಂದಿರುವುದು ಎಷ್ಟು ಮುಖ್ಯ ಎಂದು ಇದು ಹೇಳುತ್ತದೆ.
ಕರುಣೆ (Mercy)
ಸೀತೆಯನ್ನು ದಯೆ ಮತ್ತು ಔದಾರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಶೋಕ ವಾಟಿಕಾದಲ್ಲಿ, ಸೀತಾ ಮಾತೆಯು ಹನುಮಂತನಿಗೆ ಹೇಳುತ್ತಾಳೆ, "ಈ ರಾಕ್ಷಸರು ರಾವಣನ ಆದೇಶವನ್ನು ಮಾತ್ರ ಅನುಸರಿಸುತ್ತಿದ್ದರು. ಅವರ ತಪ್ಪೇನೂ ಇಲ್ಲ. ಅಷ್ಟೆಲ್ಲಾ ಕಷ್ಟ ಅನುಭವಿಸಿದರೂ ಸಹ ಶತ್ರುಗಳಿಗಾಗಿ ಮಿಡಿಯಲು ಕರುಣಾಮಯಿಗೆ ಮಾತ್ರ ಸಾಧ್ಯ. ಇದಲ್ಲದೆ, ರಾವಣನು ಭಿಕ್ಷುಕನಾಗಿ ಬೇಡಲು ಬಂದಾಗ, ತನ್ನ ರಕ್ಷಣೆಗಾಗಿ ಹಾಕಿದ ರೇಖೆಯನ್ನೇ ದಾಟಿ ಬಂದ ಸೀತೆ, ಹಸಿದವನಿಗೆ ಊಟ ನೀಡಲು ಬಯಸಿದಳು. ಈ ಕರುಣಾಮಯ ಗುಣವನ್ನು ಹೆಚ್ಚಿನ ಗಂಡಸರು ಬಯಸುತ್ತಾರೆ.