'ಆ' ಅನುಭವ ಮೊದಲು ಪಡೆಯುತ್ತಿದ್ದೀರಾ? ಕೆಲವು ವಿಚಾರಗಳು ಗೊತ್ತಿರಲಿ
ನೀವು ಸಂಗಾತಿ ಜೊತೆ ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸುವ ಬಗ್ಗೆ ಯೋಚಿಸುತ್ತಿದ್ದರೆ, ನಿಸ್ಸಂಶಯವಾಗಿ ಮೊದಲ ಬಾರಿಗೆ ಲೈಂಗಿಕತೆಯ ಬಗ್ಗೆ ಅನೇಕ ಕನಸುಗಳು ಮತ್ತು ಅನೇಕ ಆಸೆಗಳನ್ನು ಹೊಂದುತ್ತೀರಿ. ಈಗ ಕನಸುಗಳನ್ನು ನನಸಾಗಿಸುವ ಮೊದಲು ಕೆಲವು ವಿಷಯಗಳಿಗೆ ಸಿದ್ಧರಾಗಬೇಕು. ಹೀಗೆ ಮಾಡಿದರೆ ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸಿದ ಅನುಭವವು ಸ್ಮರಣೀಯ ಮತ್ತು ಆನಂದದಾಯಕವಾಗುತ್ತದೆ. ಆದ್ದರಿಂದ, ಆ ಎಲ್ಲಾ ಸಿದ್ಧತೆಗಳು ಯಾವುವು ಎಂದು ತಿಳಿಯಿರಿ.

ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸಲು ಮಾನಸಿಕವಾಗಿ ಸಿದ್ಧರಾಗಿರಿ
ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸುವ ಮೊದಲು, ಸಂಬಂಧದಲ್ಲಿ ಸೆಕ್ಸ್ ಮಾತ್ರವೇ ಎಲ್ಲಾ ಅಲ್ಲ ಎಂಬುದನ್ನು ತಿಳಿದಿರಬೇಕು. ಮೊದಲ ಬಾರಿಗೆ ಪರಸ್ಪರ ಒಂದಾದಾಗ ಸ್ವಲ್ಪ ಕಷ್ಟವಾಗಬಹುದು. ಏಕೆಂದರೆ ಹಿಂಜರಿಕೆ ಮತ್ತು ನಾಚಿಕೆ ಅಡ್ಡ ಬರುತ್ತದೆ. ನೀವು ಭಾವನಾತ್ಮಕವಾಗಿ ಸಂಪರ್ಕ ಹೊಂದಿದ್ದರೆ, ಲೈಂಗಿಕ ಕ್ರಿಯೆ ಮಾಡುವುದು ತುಂಬಾ ಸುಲಭ. ಅದೇನೇ ಇದ್ದರೂ, ಲೈಂಗಿಕ ಕ್ರಿಯೆ ನಡೆಸುವ ಮೊದಲು, ನೀವಿಬ್ಬರೂ ಅದರ ಬಗ್ಗೆ ಮಾತನಾಡಬೇಕು, ಇದರಿಂದ ಇಬ್ಬರೂ ಮಾನಸಿಕವಾಗಿ ಸಿದ್ಧರಾಗುವಿರಿ. ಮೊದಲ ಬಾರಿಗೆ ಪಿನೆಟ್ರೇಶನ್ ಬಗ್ಗೆ ಹಿಂಜರಿಯುತ್ತಿದ್ದರೆ, ಓರಲ್ ಸೆಕ್ಸ್ ಮಾಡಬಹುದು.
ನರ್ವಸ್ ಆಗೋದು ಸಾಮಾನ್ಯ
ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸುವಾಗ ಹೃದಯ ಬಡಿತ ಹೆಚ್ಚಾಗುತ್ತದೆ, ನೀವು ಮತ್ತೆ ಮತ್ತೆ ಬಾಯಾರಿಕೆಗೆಯಿಂದ ಬಳಲುತ್ತೀರಿ, ಅದು ನ್ಯಾಚುರಲ್ ಆಗಿದೆ. ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸುವ ಮೊದಲು ಎಲ್ಲರೂ ಆತಂಕಗೊಂಡಿರುತ್ತಾರೆ. ಇದು ಜೀವನದ ಒಂದು ವಿಶೇಷ ಕ್ಷಣ, ಆದ್ದರಿಂದ ಅದನ್ನು ಬಹಿರಂಗವಾಗಿ ಆನಂದಿಸಿ. ಸ್ವಲ್ಪ ಆಳವಾದ ಉಸಿರನ್ನು ತೆಗೆದುಕೊಳ್ಳುವುದರಿಂದ ನಿರಾಳರಾಗುತ್ತೀರಿ.
ಲೈಂಗಿಕತೆಯ ಮಾಂತ್ರಿಕ ಭಾವನೆಯನ್ನು ಪಡೆಯಲು ತಯಾರಿ ನಡೆಸಿ
ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸಲು ಹೋಗುವಾಗ ಮಾದಕತೆಯನ್ನು ಅನುಭವಿಸಬೇಕು. ಮೊದಲನೆಯದಾಗಿ, ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವಾಗ ಇಬ್ಬರೂ ಸಂಗಾತಿಗಳು ವೈಯಕ್ತಿಕ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಪುರುಷರು ಸ್ನಾನ, ಕ್ಷೌರ, ಟೂತ್ ಬ್ರಷ್ ಗಳನ್ನು ಮಾಡಿರಬೇಕು ಮತ್ತು ಲೈಂಗಿಕ ಕ್ರಿಯೆಗೆ ಮೊದಲು ಉತ್ತಮ ಸುಗಂಧವನ್ನು ಹಚ್ಚುವ ಮೂಲಕ ಮಾದಕ ಮತ್ತು ಆತ್ಮವಿಶ್ವಾಸವನ್ನು ಅನುಭವಿಸಬೇಕು.
ಮಹಿಳೆಯರು ಸ್ನಾನ ಮಾಡಿದ ನಂತರ ಮಾದಕ ಒಳ ಉಡುಪು ಧರಿಸಬಹುದು. ಲೈಂಗಿಕ ಕ್ರಿಯೆಗೆ ಮೊದಲು ಈ ರೀತಿಯ ಉಡುಪನ್ನು ಧರಿಸುವುದು ಕಾಮಾಸಕ್ತಿ ಎಚ್ಚರಗೊಳ್ಳಲು ಮತ್ತು ಇಬ್ಬರಿಗೆ ಉತ್ತಮ ಮೂಡ್ ಬರಲು ಸಹಾಯ ಮಾಡುತ್ತೆ.
ಫೋರ್ ಪ್ಲೇ-ಆಫ್ಟರ್ ಪ್ಲೇ ಎರಡೂ ಅತ್ಯಗತ್ಯ
ಲೈಂಗಿಕ ಕ್ರಿಯೆಗೆ ಮೊದಲು ಫೋರ್ ಪ್ಲೇ ಆಡಬೇಕು ಎಂದು ಮೊದಲ ಬಾರಿಗೆ ಲೈಂಗಿಕ ಕ್ರಿಯೆನಡೆಸುವ ಮೊದಲು ತಿಳಿದು ಕೊಳ್ಳುವುದು ಬಹಳ ಮುಖ್ಯ. ಇದು ಸೆಕ್ಸ್ ಮಾಡಲು ಉತ್ತೇಜಿಸುತ್ತದೆ ಮತ್ತು ಪರಾಕಾಷ್ಠೆಯನ್ನು ಜಾಗೃತಗೊಳಿಸುತ್ತದೆ. ದೇಹದ ಸೂಕ್ಷ್ಮ ಅಂಗಗಳಲ್ಲಿ ಲೈಂಗಿಕತೆಗೆ ಮೊದಲು ಪರಸ್ಪರರ ಸೂಕ್ಷ್ಮ ಅಂಗಗಳನ್ನು ಟಚ್ ಮಾಡುವುದು, ಚುಂಬಿಸುವುದು ಮತ್ತು ಮುದ್ದಿಸುವುದು ಸೇರಿವೆ.
ಲೈಂಗಿಕ ಕ್ರಿಯೆ ಬಳಿಕ ಆಫ್ಟರ್ ಪ್ಲೇ ಮಾಡುವುದು ಕೂಡ ಬಹಳ ಮುಖ್ಯ. ಆದ್ದರಿಂದ ಲೈಂಗಿಕ ಕ್ರಿಯೆಯ ನಂತರ ಸಂಪೂರ್ಣವಾಗಿ ಬೇರ್ಪಡಬೇಡಿ. ಸ್ವಲ್ಪ ಸಮಯದವರೆಗೆ ಪರಸ್ಪರ ಹಗ್ ಮಾಡಿ, ಒಬ್ಬರನ್ನೊಬ್ಬರು ಮುದ್ದಿಸುತ್ತಿರಬೇಕು. ಇದು ಇಬ್ಬರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ.
ಲ್ಯೂಬ್ರಿಕೆಂಟ್ ಗಳನ್ನು ಒಟ್ಟಿಗೆ ಇರಿಸಿ
ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸುವ ಮೊದಲು ಲ್ಯೂಬ್ರಿಕೆಂಟ್‌ಗಳನ್ನು ಜೊತೆಗೆ ಇರಿಸಲು ಮರೆಯದಿರಿ. ಇದು ನಿಮಗೆ ಉಪಯೋಗವಾಗಬೇಕೆಂದೇನೂ ಇಲ್ಲ, ಆದರೆ ಲೈಂಗಿಕ ಕ್ರಿಯೆ ವೇಳೆ ಸಂಗಾತಿಗೆ ನೋವು ಕಾಣಿಸಿಕೊಂಡರೆ ಲ್ಯೂಬ್ರಿಕೆಂಟ್ ಗಳನ್ನು ಬಳಸುವುದು ಬಹಳ ಮುಖ್ಯ. ಲ್ಯೂಬ್ರಿಕೆಂಟ್‌ಗಳು ಲೈಂಗಿಕ ಅನುಭವವನ್ನು ಆರಾಮದಾಯಕ ಮತ್ತು ರೋಮ್ಯಾಂಟಿಕ್ ಆಗಿ ಮಾಡುತ್ತವೆ.
ಗರ್ಭಧಾರಣೆಯನ್ನು ತಪ್ಪಿಸಲು ಕಾಂಡೋಮ್ ಗಳನ್ನು ಬಳಸಿ
ಕಾಂಡೋಮ್‌ಗಳು ಅನಗತ್ಯ ಗರ್ಭಧಾರಣೆಯಿಂದ ಮಾತ್ರವಲ್ಲದೆ ಲೈಂಗಿಕವಾಗಿ ಹರಡುವ ರೋಗಗಳಿಂದ ರಕ್ಷಿಸುತ್ತದೆ. ಕಾಂಡೋಮ್ ಬಳಸುವುದು ಆರೋಗ್ಯಕರ ಅಭ್ಯಾಸವಾಗಿದ್ದು, ಇದು ಇಬ್ಬರನ್ನೂ ಸೋಂಕಿನಿಂದ ರಕ್ಷಿಸಲು ಅನುವು ಮಾಡಿಕೊಡುತ್ತದೆ. ನೆನಪಿನಲ್ಲಿಡಬೇಕಾದ ಒಂದು ವಿಷಯವೆಂದರೆ ಇದರಿಂದ ಇಬ್ಬರಿಗೂ ಅಲರ್ಜಿ ಇರೋದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.
ಫಸ್ಟ್ ಟೈಮ್ ಸೆಕ್ಸ್ ಮಾಡೋವಾಗ ರಕ್ತಸ್ರಾವ ಆಗಬೇಕೆಂದೇನೂ ಇಲ್ಲ
ಇಂದಿಗೂ, ಅನೇಕ ಜನರು ಮೊದಲ ಬಾರಿಗೆ ಲೈಂಗಿಕ ಸಮಯದಲ್ಲಿ ರಕ್ತಸ್ರಾವ ಸಂಭವಿಸುತ್ತದೆ ಎಂದು ನಂಬುತ್ತಾರೆ, ಆದರೆ ಇದು ನಿಜವಲ್ಲ. ರಕ್ತಸ್ರಾವದ ಅನುಪಸ್ಥಿತಿಯು ಸಂಪೂರ್ಣವಾಗಿ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ, ಇಂದಿನ ಹುಡುಗಿಯರು ದೈಹಿಕವಾಗಿ ಸಕ್ರಿಯರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಹುಡುಗಿಯರು ಸೈಕ್ಲಿಂಗ್, ನೃತ್ಯ, ಈಜು ಅಥವಾ ಕ್ರೀಡೆಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಇದು ಮೊದಲ ಬಾರಿಗೆ ಲೈಂಗಿಕಕ್ರಿಯೆಯಲ್ಲಿ ರಕ್ತಸ್ರಾವವನ್ನು ತಡೆಯುತ್ತದೆ. ಆದ್ದರಿಂದ ಮೊದಲ ಬಾರಿಗೆ ಲೈಂಗಿಕ ಕ್ರಿಯೆ ವೇಳೆ ರಕ್ತಸ್ರಾವ ಆಗದಿದ್ದರೆ ನಿಮ್ಮ ಗೆಳತಿ ಅಥವಾ ಪತ್ನಿಗೆ ವರ್ಜಿನ್ ಅಲ್ಲ ಅನ್ನೋ ತಪ್ಪು ಕಲ್ಪನೆ ಬಿಡಬೇಕು.