ಅಜ್ಜ ಅಜ್ಜಿ ಜೊತೆ ಬೆಳೆದ ಮಕ್ಕಳು ಯಾವಾಗ್ಲೂ ಈ ಎಲ್ಲಾ ವಿಷ್ಯದಲ್ಲೂ ಆಗಿರ್ತಾರೆ ಬೆಸ್ಟ್
ಭಾರತದಲ್ಲಿ, ಪೋಷಕರೊಂದಿಗೆ, ಅಜ್ಜ ಅಜ್ಜಿಯರು ಸಹ ಮಕ್ಕಳ ಪಾಲನೆಗೆ ಕೊಡುಗೆ ನೀಡುತ್ತಾರೆ. ಅಜ್ಜ ಅಜ್ಜಿಯರೊಂದಿಗೆ ವಾಸಿಸುವ ಮಕ್ಕಳು ವಿಭಿನ್ನವಾಗಿ ಯೋಚಿಸುತ್ತಾರೆ. ವಿಭಿನ್ನವಾಗಿ ಕೆಲಸ ಮಾಡ್ತಾರೆ. ಈ ಮಕ್ಕಳು ಇತರರಿಗಿಂತ ಏಕೆ ಭಿನ್ನರಾಗಿದ್ದಾರೆ, ಅವರ ಸ್ಪೆಷಲ್ ಗುಣಗಳು ಯಾವುವು ನೋಡೋಣ.
ಭಾರತದಲ್ಲಿ ಅಜ್ಜಿಯರಿಗೆ ತುಂಬಾನೆ ಪ್ರಾಮುಖ್ಯತೆ ನೀಡಲಾಗುತ್ತೆ. ಮಕ್ಕಳನ್ನು ಬೆಳೆಸುವಲ್ಲಿ (parenting) ತಂದೆ ತಾಯಿಯಷ್ಟೇ ಅವರ ಅಜ್ಜಿಯರು ಸಹ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಮಕ್ಕಳು ಅಜ್ಜ -ಅಜ್ಜಿಯಿಂದ ಬಹಳಷ್ಟು ಕಲಿಯುತ್ತಾರೆ ಮತ್ತು ಅವರು ತಮ್ಮ ಅಜ್ಜಿಯರಿಂದ ಉತ್ತಮ ಮೌಲ್ಯಗಳನ್ನು ಕಲಿಯುತ್ತಾರೆ. ನಿಮ್ಮ ಮಗುವೂ ತನ್ನ ಅಜ್ಜ ಅಜ್ಜಿಯರೊಂದಿಗೆ ವಾಸಿಸುತ್ತಿದ್ದರೆ, ಅವನು ಕೆಲವು ಕಾರ್ಯಗಳಲ್ಲಿ ಉಳಿದ ಮಕ್ಕಳಿಗಿಂತ ಭಿನ್ನವಾಗಿರಬಹುದು.
ಈ ಲೇಖನದಲ್ಲಿ, ಅಜ್ಜಿಯರೊಂದಿಗೆ ವಾಸಿಸುವ ಮಕ್ಕಳು ವಿಭಿನ್ನವಾಗಿರುವ ವಿಷಯಗಳ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ. ಈ ಮಕ್ಕಳು ಕೆಲವು ಕೆಲಸಗಳನ್ನು ವಿಭಿನ್ನವಾಗಿ ಮಾಡುತ್ತಾರೆ ಅಥವಾ ಅವರು ಕೆಲವು ವಿಭಿನ್ನ ಗುಣಗಳು ಮತ್ತು ಅಭ್ಯಾಸ, ಹವ್ಯಾಸಗಳನ್ನು ಹೊಂದಿರುತ್ತಾರೆ.
ಕಲಿಕೆಯ ವೇಗದಲ್ಲಿ ವ್ಯತ್ಯಾಸವಿದೆ
ಅಜ್ಜ ಅಜ್ಜಿಯರ ಜೊತೆ ವಾಸಿಸುವ ಮಕ್ಕಳ ಕಲಿಕೆಯ ವೇಗದಲ್ಲಿ (learning speed) ಗಮನಾರ್ಹ ವ್ಯತ್ಯಾಸವಿದೆ. ಅಜ್ಜ ಅಜ್ಜಿಯರು ಹೆಚ್ಚಾಗಿ ತಮ್ಮ ಉದ್ಯೋಗ ಮತ್ತು ಇತರ ಜವಾಬ್ದಾರಿಗಳಿಂದ ಮುಕ್ತರಾಗಿದ್ದಾರೆ, ಇದು ಮಕ್ಕಳೊಂದಿಗೆ ಸಮಯ ಕಳೆಯಲು ಹೆಚ್ಚಿನ ಅವಕಾಶವನ್ನು ನೀಡುತ್ತದೆ. ಈ ನಿಧಾನಗತಿಯ ವಾತಾವರಣವು ಮಕ್ಕಳಿಗೆ ಪ್ರಯೋಜನಕಾರಿಯಾಗಿದೆ, ಏಕೆಂದರೆ ಅವರು ತಮ್ಮ ಪ್ರಶ್ನೆಗಳನ್ನು ಕೇಳಬಹುದು, ಆಳವಾದ ಸಂಭಾಷಣೆಗಳನ್ನು ನಡೆಸಬಹುದು ಮತ್ತು ಯಾವುದೇ ಸಮಯ ಮಿತಿಯಿಲ್ಲದೆ ಅವರ ಕುತೂಹಲಗಳನ್ನು ಅನ್ವೇಷಿಸಬಹುದು.
ಭಾವನಾತ್ಮಕ ಮತ್ತು ಸಾಮಾಜಿಕ ಕಲಿಕೆ
ಮಕ್ಕಳ ಭಾವನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ (emotional and social developement) ಅಜ್ಜ ಅಜ್ಜಿಯರು ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ಸಾಮಾನ್ಯವಾಗಿ ಹೆಚ್ಚು ತಾಳ್ಮೆಯಿಂದಿರುತ್ತಾರೆ ಮತ್ತು ಶಿಕ್ಷಿಸುವ ಬದಲು ಮಕ್ಕಳಿಗೆ ಜೀವನದ ಮೌಲ್ಯವನ್ನು ವಿವರಿಸುವಲ್ಲಿ ನಂಬಿಕೆ ಇಟ್ಟಿದ್ದಾರೆ. ಈ ವಿಧಾನವು ಮಕ್ಕಳಲ್ಲಿ ಉತ್ತಮ ಭಾವನಾತ್ಮಕ ಸಮತೋಲನ ಮತ್ತು ಸ್ವಯಂ ನಿಯಂತ್ರಣವನ್ನು ಅಭಿವೃದ್ಧಿಪಡಿಸುತ್ತದೆ, ಏಕೆಂದರೆ ಅವರು ಯಾವುದೇ ಭಯ ಅಥವಾ ಒತ್ತಡವಿಲ್ಲದೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಬಹುದು.
ಪ್ರಾಯೋಗಿಕ ಜೀವನ ಕೌಶಲ್ಯಗಳು
ಅಜ್ಜಿಯರು ಹೆಚ್ಚಾಗಿ ಮನೆಯಲ್ಲಿ ತಮ್ಮ ಹೆತ್ತವರಿಂದ ಪಡೆದ ಪ್ರಾಯೋಗಿಕ ಜೀವನ ಕೌಶಲ್ಯಗಳನ್ನು (practical life skills)ಮಕ್ಕಳಿಗೆ ಕಲಿಸುತ್ತಾರೆ. ಈ ಕೌಶಲ್ಯಗಳು ಅಡುಗೆ, ಸ್ವಚ್ಛಗೊಳಿಸುವುದು ಅಥವಾ ಮನೆಯಲ್ಲಿ ಏನನ್ನಾದರೂ ಸರಿಪಡಿಸುವಂತಹ ಕಾರ್ಯಗಳಿಗೆ ಸಂಬಂಧಿಸಿರಬಹುದು. ಪೋಷಕರು ಹೆಚ್ಚಾಗಿ ಶೈಕ್ಷಣಿಕ ಶಿಕ್ಷಣ ಮತ್ತು ಇತರ ಚಟುವಟಿಕೆಗಳ ಮೇಲೆ ಗಮನ ಹರಿಸಿದರೆ, ಅಜ್ಜಿಯರು ಹೆಚ್ಚು ಸಾಂಪ್ರದಾಯಿಕ ಜೀವನ ಕೌಶಲ್ಯಗಳಿಗೆ ಒತ್ತು ನೀಡುತ್ತಾರೆ, ಇದು ಮಕ್ಕಳು ಸ್ವಾವಲಂಬಿಗಳಾಗಲು ಸಹಾಯ ಮಾಡುತ್ತದೆ.
ಕಥೆ ಮತ್ತು ನೆನಪುಗಳು
ಅಜ್ಜಿಯರು ಕಥೆ (stoty telling) ಹೇಳುವ ಮೂಲಕ ಮಕ್ಕಳಿಗೆ ಜೀವನದ ಪ್ರಮುಖ ಮೌಲ್ಯಗಳನ್ನು ಕಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ಕುಟುಂಬದ ಇತಿಹಾಸ, ವೈಯಕ್ತಿಕ ಅನುಭವಗಳು ಮತ್ತು ಜೀವನದ ಹೋರಾಟಗಳ ಬಗ್ಗೆ ಮಾತುಕತೆ ನಡೆಸುತ್ತಾರೆ, ಇದು ಮಕ್ಕಳು ತಮ್ಮ ಕುಟುಂಬ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಭದ್ರತೆ ಮತ್ತು ಪ್ರೀತಿ
ಅಜ್ಜ ಅಜ್ಜಿಯರೊಂದಿಗೆ ವಾಸಿಸುವುದು ಮಕ್ಕಳಿಗೆ ಪ್ರೀತಿ ಮತ್ತು ರಕ್ಷಣೆಯ (saftey adn love)ಭಾವನೆಯನ್ನು ನೀಡುತ್ತದೆ. ಅವರು ಹೆಚ್ಚಾಗಿ ತಮ್ಮ ಹೆತ್ತವರಿಗಿಂತ ಕಡಿಮೆ ಒತ್ತಡವನ್ನು ಹೊಂದಿರುತ್ತಾರೆ ಮತ್ತು ಮಕ್ಕಳಿಗೆ ಕೊನೆ ಇಲ್ಲದ ಪ್ರೀತಿ ಮತ್ತು ಬೆಂಬಲವನ್ನು ನೀಡುತ್ತಾರೆ. ಈ ರೀತಿಯ ವಾತ್ಸಲ್ಯ ಮತ್ತು ಭದ್ರತೆಯು ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಉತ್ತೇಜಿಸುತ್ತದೆ, ಏಕೆಂದರೆ ಅವರು ಭಯವಿಲ್ಲದೆ ತಮ್ಮ ಅಜ್ಜಿಯರ ಮುಂದೆ ತಮ್ಮನ್ನು ತಾವು ವ್ಯಕ್ತಪಡಿಸಬಹುದು ಎಂದು ಮಕ್ಕಳಿಗೆ ತಿಳಿದಿದೆ.