ಚೆನ್ನೈ ನಂಟಿರುವ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅಪ್ಪ-ಅಮ್ಮ ವಿಚ್ಚೇದನ ಪಡೆದಿದ್ದೇಕೆ?
ಅಮೆರಿಕದ ಉಪಾಧ್ಯಕ್ಷರಾಗಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಗೆ ಈಗ 49 ವರ್ಷ. ಅಮೆರಿಕದ ಇತಿಹಾಸದದಲ್ಲಿ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿದ್ದಾರೆ. ಈ ಬಾರಿ ಕಮಲಾ ಹ್ಯಾರಿಸ್ ಅವರು 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ಕಮಲಾ ಅವರು ಚುನಾವಣೆಯಲ್ಲಿ ಗೆದ್ದು ಯುಎಸ್ ಅಧ್ಯಕ್ಷರಾದರೆ, ಮೊದಲ ಮಹಿಳಾ ಮತ್ತು ಮೊದಲ ಏಷ್ಯನ್-ಅಮೆರಿಕನ್ ಅಧ್ಯಕ್ಷರಾಗುತ್ತಾರೆ. ಇದೆಲ್ಲದರ ನಡುವೆ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿಯೋಣ.
ಕಮಲಾ ಹ್ಯಾರಿಸ್ ಮೂಲತಃ ಅಮೇರಿಕನ್ ವಕೀಲರಾಗಿರುವ ಮತ್ತು ಯುನೈಟೆಡ್ ಸ್ಟೇಟ್ಸ್ನ ಎರಡನೇ ಪ್ರಭಾವಿ ವ್ಯಕ್ತಿಯಾದ ಡಗ್ಲಾಸ್ ಕ್ರೇಗ್ ಎಮ್ಹೋಫ್ ಅವರನ್ನು ವಿವಾಹವಾದರು. ಅದಕ್ಕೂ ಮುನ್ನ ಡಗ್ಲಾಸ್ ಕ್ರೇಗ್ ಗೆ ಅಮೆರಿಕನ್ ಚಲನಚಿತ್ರ ನಿರ್ಮಾಪಕಿಕೆರ್ಸ್ಟಿನ್ ಮ್ಯಾಕಿನ್ ಅವರರೊಂದಿಗೆ ವಿವಾಹವಾಗಿತ್ತು. 1992 ರಲ್ಲಿ ಮೊದಲ ಮದುವೆಯಾದ ಡಗ್ಲಾಸ್ 2008 ರಲ್ಲಿ ಬೇರ್ಪಟ್ಟರು. ಕೆರ್ಸ್ಟಿನ್ ಜತೆಗಿನ ವಿಚ್ಛೇದನದ ನಂತರ, ಡೌಗ್ಲಾಸ್ 2014 ರಲ್ಲಿ ಕಮಲಾ ಅವರನ್ನು ವಿವಾಹವಾದರು.
ಕಮಲಾ ಅವರು ಅಕ್ಟೋಬರ್ 20, 1964 ರಂದು ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್‌ನಲ್ಲಿ ಡೊನಾಲ್ಡ್ ಜೆ. ಹ್ಯಾರಿಸ್ ಮತ್ತು ಶ್ಯಾಮಲಾ ಗೋಪಾಲನ್‌ಗೆ ಜನಿಸಿದರು. 1962 ರಲ್ಲಿ ಬರ್ಕ್ಲಿ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ ಶ್ಯಾಮಲಾ ಮತ್ತು ಡೊನಾಲ್ಡ್ ಇಬ್ಬರೂ ಮೊದಲ ಬಾರಿಗೆ ಭೇಟಿಯಾದರು. ಡೊನಾಲ್ಡ್ ಜಮೈಕಾದವರಾಗಿದ್ದರೆ, ಶ್ಯಾಮಲಾ ಭಾರತದ ಚೆನ್ನೈ ಮೂಲದವರು. ಡೊನಾಲ್ಡ್ ಗೆ ಭಾರತದ ಬಗ್ಗೆ ಅಪಾರ ಕುತೂಹಲ ಮೂಡಿತು. ಇಬ್ಬರು ಸ್ನೇಹಿತರಾಗಿ ಕೆಲವು ತಿಂಗಳುಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, ಡೊನಾಲ್ಡ್ ಜೆ. ಹ್ಯಾರಿಸ್ ಮತ್ತು ಶ್ಯಾಮಲಾ ಗೋಪಾಲನ್ 1963 ರಲ್ಲಿ ವಿವಾಹವಾದರು.
ದಂಪತಿ ತಮ್ಮ ಮೊದಲ ಮಗು ಕಮಲಾ ಹ್ಯಾರಿಸ್ ಅವರನ್ನು 1964 ರಲ್ಲಿ ಮತ್ತು ಅವರ ಎರಡನೇ ಮಗಳು ಮಾಯಾಳನ್ನು 1967 ರಲ್ಲಿ ಸ್ವಾಗತಿಸಿದರು. ತಮ್ಮ ಪದವಿಯನ್ನು ಪೂರ್ಣಗೊಳಿಸಿದ ನಂತರ, ಡೊನಾಲ್ಡ್ ಮತ್ತು ಶ್ಯಾಮಲಾ ಅವರು ಮಿಡ್‌ವೆಸ್ಟ್‌ಗೆ ಸ್ಥಳಾಂತರಗೊಂಡರು. ಅಲ್ಲಿ ಡೊನಾಲ್ಡ್ ಗೆ ಉಪನ್ಯಾಸಕರಾಗಿ ಕೆಲಸ ಸಿಕ್ಕಿತು. ಇಂದಿಗೂ ಅವರು ಫೇಮಸ್ ಉಪನ್ಯಾಸಕರಾಗಿದ್ದಾರೆ. ಮಧ್ಯಪಶ್ಚಿಮಕ್ಕೆ ಸ್ಥಳಾಂತರಗೊಂಡ ನಂತರ ಅವರ ಸಂತೋಷದ ವೈವಾಹಿಕ ಜೀವನದಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು.
ಕೊನೆಗೆ ಡೊನಾಲ್ಡ್ ಜೆ. ಹ್ಯಾರಿಸ್ ಮತ್ತು ಶ್ಯಾಮಲಾ ಗೋಪಾಲನ್ 1972 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಡೊನಾಲ್ಡ್ ಮಿಡ್‌ವೆಸ್ಟ್‌ನಲ್ಲಿ ಉಳಿದುಕೊಂಡಾಗ, ಶ್ಯಾಮಲಾ ತನ್ನ ಹೆಣ್ಣುಮಕ್ಕಳಾದ ಕಮಲಾ ಮತ್ತು ಮಾಯಾ ಅವರೊಂದಿಗೆ ಉತ್ತರ ಕ್ಯಾಲಿಫೋರ್ನಿಯಾಗೆ ಮರಳಿದರು. ಸಿಂಗಲ್ ಪೇರೆಂಟ್ ಆಗಿ ಲಾರೆನ್ಸ್ ಬರ್ಕ್ಲಿ ನ್ಯಾಷನಲ್ ಲ್ಯಾಬೊರೇಟರಿಯಲ್ಲಿ ಕೆಲಸ ಮಾಡಿದರು. ಅವರು ಒಬ್ಬ ವಿಶಿಷ್ಟ ಸ್ತನ ಕ್ಯಾನ್ಸರ್ ಸಂಶೋಧಕರಾಗಿದ್ದರು. ಲೇಡಿ ಡೇವಿಸ್ ಇನ್‌ಸ್ಟಿಟ್ಯೂಟ್ ಫಾರ್ ಮೆಡಿಕಲ್ ರಿಸರ್ಚ್ ಮತ್ತು ಮೆಕ್‌ಗಿಲ್ ಯೂನಿವರ್ಸಿಟಿ ಫ್ಯಾಕಲ್ಟಿ ಆಫ್ ಮೆಡಿಸಿನ್‌ನಲ್ಲಿ 16 ವರ್ಷಗಳ ಕಾಲ ಬಯೋಮೆಡಿಕಲ್ ವಿಜ್ಞಾನಿಯಾಗಿ ಕೆಲಸ ಮಾಡಿದರು.
ಕಮಲಾ ಹ್ಯಾರಿಸ್ ತನ್ನ ಹೆತ್ತವರು ಬೇರೆಯಾಗಲಿದ್ದಾರೆ ಎಂದು ಅರಿತುಕೊಂಡಾಗ ಅವರಿಗೆ ಸುಮಾರು ಐದು ವರ್ಷ. 2019 ರಲ್ಲಿ, ಕಮಲಾ ಅವರು ದ ಟ್ರೂತ್ಸ್ ವಿ ಹೋಲ್ಡ್ ಎಂಬ ಆತ್ಮಚರಿತ್ರೆಯನ್ನು ಬರೆದರು. ಅದರಲ್ಲಿ ತಮ್ಮ ಪೋಷಕರ ವಿಚ್ಛೇದನದ ಬಗ್ಗೆ ನಮೂದಿಸಿದ್ದಾರೆ. ಪೋಷಕರ ವಿಚ್ಚೇದನದ ಬಗ್ಗೆ ಬರೆದ ಕಮಲಾ "ಅವರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು, ಆದರೆ ಅವರು ಎಣ್ಣೆ ಮತ್ತು ನೀರಿನಂತೆ ಆಗಿದ್ದಾರೆಂದು ತೋರುತ್ತದೆ." ಎಂದು ಬರೆದುಕೊಂಡಿದ್ದರು.
ಆ ದಿನಗಳಲ್ಲಿ ತನ್ನ ಹೆತ್ತವರು ಸ್ವಲ್ಪ ಪ್ರಬುದ್ಧರಾಗಿದ್ದರೆ, ಅವರ ಸಂಬಂಧ ಉಳಿಯಬಹುದಿತ್ತು. ಅವರು ಸ್ವಲ್ಪ ವಯಸ್ಸಾಗಿದ್ದರೆ, ಸ್ವಲ್ಪ ಹೆಚ್ಚು ಭಾವನಾತ್ಮಕವಾಗಿ ಪ್ರಬುದ್ಧರಾಗಿದ್ದರೆ, ಬಹುಶಃ ಸಾಂಸಾರಿಕ ಜೀವನ ಉಳಿಯಬಹುದಿತ್ತು. ಆದರೆ ಅವರು ತುಂಬಾ ಚಿಕ್ಕವರಾಗಿದ್ದರು ಎಂದು ಬರೆದುಕೊಂಡಿದ್ದಾರೆ. ವಿಚ್ಛೇದನದ ನಂತರ, ಶ್ಯಾಮಲಾ ತನ್ನ ಇಬ್ಬರು ಹೆಣ್ಣು ಮಕ್ಕಳಾದ ಕಮಲಾ ಮತ್ತು ಮಾಯಾಳನ್ನು ತಾನೇ ಬೆಳೆಸಿದಳು. ತನ್ನ ಹಿರಿಯ ಮಗಳು ಕಮಲಾಳ ವೃತ್ತಿಜೀವನವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದಳು. ಹೆಣ್ಣು ಮಕ್ಕಳನ್ನು ಸಾಕಲು ಹಗಲಿರುಳು ಶ್ರಮಿಸುತ್ತಿದ್ದಳು.
ಕಮಲಾ ಹ್ಯಾರಿಸ್ ಅವರ ತಾಯಿ, ಶ್ಯಾಮಲಾ ಗೋಪಾಲನ್ ಫೆಬ್ರವರಿ 11, 2009 ರ ತಮ್ಮ 70 ನೇ ವಯಸ್ಸಿನಲ್ಲಿ ಕರುಳಿನ ಕ್ಯಾನ್ಸರ್‌ನಿಂದ ನಿಧನರಾದರು. ಕಮಲಾ ಅವರಿಗೆ ಇದು ದೊಡ್ಡ ಆಘಾತವಾಗಿತ್ತು ಏಕೆಂದರೆ ತಾಯಿ ದೊಡ್ಡ ಶಕ್ತಿಯಾಗದಿದ್ದರು. ತನ್ನ ಆತ್ಮಚರಿತ್ರೆಯಲ್ಲಿ, ಕಮಲಾ ತನ್ನ ತಾಯಿಯ ನಿಧನದ ಬಗ್ಗೆ ಬರೆದುಕೊಂಡು , ತಾನು ಪ್ರತಿದಿನ ಅವಳನ್ನು ನೆನಪಿಸಿಕೊಳ್ಳುತ್ತೇನೆ ಮತ್ತು ಆಕೆ ನೆನಪನ್ನು ನನ್ನೊಂದಿಗೆ ಒಯ್ಯುತ್ತೇನೆ ಎಂದಿದ್ದಾರೆ. ಅಷ್ಟೇ ಅಲ್ಲ, ಕಮಲಾ ತನ್ನ ತಾಯಿಯನ್ನು ತನ್ನ ಜೀವನದ ಬಹುದೊಡ್ಡ ಸ್ಪೂರ್ತಿ ಎಂದು ಬಿಂಬಿಸಿದ್ದಾರೆ.
ಕಮಲಾ ಹ್ಯಾರಿಸ್ ಅವರು ತಮ್ಮ ಆತ್ಮಚರಿತ್ರೆಯಾದ ದಿ ಟ್ರೂತ್ಸ್ ವಿ ಹೋಲ್ಡ್‌ನಲ್ಲಿ ತಮ್ಮ ತಾಯಿ ಶ್ಯಾಮಲಾ ಗೋಪಾಲನ್ ಅವರು ಸಾವಿಗೂ ಮುನ್ನ ಭಾರತಕ್ಕೆ ಬರಲು ಬಯಸಿದ್ದರು ಎಂದಿದ್ದಾರೆ. ಆದರೆ ಹಲವಾರು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಆದರೆ, ತಾಯಿ ನಿಧನರಾದ ನಂತ ಕಮಲಾ ತನ್ನ ಅಜ್ಜನೊಂದಿಗೆ ಅಡ್ಡಾಡಲು ಹೋಗುತ್ತಿದ್ದ ತಮಿಳುನಾಡಿನ ಬೆಸೆಂಟ್ ನಗರದ ಬೀಚ್‌ನಲ್ಲಿ ತಾಯಿಯ ಚಿತಾಭಸ್ಮವನ್ನು ವಿಸರ್ಜಿಸಿದರು. ತನ್ನ ತಾಯಿಯ ತ್ಯಾಗವನ್ನು ಸಂಕ್ಷಿಪ್ತವಾಗಿ ಹೇಳಲು, ಕಮಲಾ ಹ್ಯಾರಿಸ್ ತನ್ನ ಆತ್ಮಚರಿತ್ರೆಯಲ್ಲಿ ಒಂದು ಸುಂದರವಾದ ಮನಮುಟ್ಟುವ ಸಾಲನ್ನು ಬರೆದಿದ್ದಾರೆ.
"ನಾನು ಶ್ಯಾಮಲಾ ಗೋಪಾಲನ್ ಹ್ಯಾರಿಸ್ ಎಂಬವರ ಮಗಳು ಎಂದು ಹೇಳಿಕೊಳ್ಳುವುದೇ ನನಗೆ ದೊಡ್ಡ ಆಸ್ತಿ ಅದಕ್ಕಿಂತ ದೊಡ್ಡ ಹೆಸರು ಗೌರವ ಭೂಮಿಯ ಮೇಲೆ ಬೇರೆ ಇಲ್ಲ"
ಕಮಲಾ ಹ್ಯಾರಿಸ್ ಅವರ ತಾಯಿ ಚೆನ್ನೈ ಮೂಲದವರಾಗಿರುವುದರಿಂದ ಬಾಲ್ಯದಲ್ಲಿ ತನ್ನ ಅಜ್ಜನ ಜೊತೆಗೆ ಕಾಲ ಕಳೆದಿದ್ದಾರೆ. ಕಮಲಾ ಹ್ಯಾರಿಸ್ ಅವರ ಅಜ್ಜ ಪೈಂಗನಾಡು ವೆಂಕಟರಮಣ ಗೋಪಾಲನ್ ಬ್ರಾಹ್ಮಣ ಕುಟುಂಬದಿಂದ ಬಂದವರು. ಭಾರತದ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದರು ಮತ್ತು ಸ್ವಾತಂತ್ಯ ಹೋರಾಟಗಾರರಾಗಿದ್ದರು. ಅಜ್ಜಿ ರಾಜಂ ಗೋಪಾಲನ್. ಹೀಗಾಗಿ ತನ್ನ ತಾಯಿಯ ಅಸ್ಥಿಯನ್ನು ಅವರು ಚೆನ್ನೈನಲ್ಲಿ ವಿಸರ್ಜಿಸಿದ್ದರು.