ನೀಲಿ ಕಣ್ಣಿನ ಗೊಂಬೆ ಮೇಲೆ ಲವ್… 6ನೇ ವೆಡ್ಡಿಂಗ್ ಆನಿವರ್ಸರಿ ಆಚರಿಸಿ, ತನ್ನ ಹುಚ್ಚು ಪ್ರೀತಿಯನ್ನ ಸಂಭ್ರಮಿಸಿದ ಜಪಾನ್ ಯುವಕ!
ಅನಿಮೇಶನ್ ಪಾತ್ರದ ಮೇಲೆ ಲವ್ ಮಾತ್ರವಲ್ಲದೇ, ಮದುವೆ ಕೂಡ ಆಗಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ. ಜಪಾನಿನ ವ್ಯಕ್ತಿಯೊಬ್ಬನಿಗೆ ಆನಿಮೇಷನ್ ಡಾಲ್ ಮೇಲೆ ಲವ್ ಆಗಿ, ಇದೀಗ ತಮ್ಮ 6 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ.
ಪ್ರೀತಿ ಯಾರಿಗಾದರೂ ಯಾರ ಮೇಲೆ ಬೇಕಾದ್ರೂ ಆಗಬಹುದು ಅನ್ನೋದನ್ನು ಹೆಚ್ಚಿನ ಜನರು ಹೇಳೊದನ್ನು ನೀವು ಕೇಳಿರಬಹುದು. ಒಂದು ಸಲ ನಿಜವಾದ ಪ್ರೀತಿಯಾದ್ರೆ, ಅದಕ್ಕೆ ಜಾತಿ, ಮತ, ಧರ್ಮ ಯಾವುದೂ ಅಡ್ಡ ಬರೋದಿಲ್ಲ. ಆದರೆ ಕೆಲವೊಮ್ಮೆ ಪ್ರೀತಿಯ ಹುಚ್ಚು ಹೆಚ್ಚಾದ್ರೆ, ನಮ್ಮ ಯೋಚನೆಗೂ ಸಿಲುಕದ ಘಟನೆಗಳು ನಡೆಯುತ್ತವೆ. ಅಲ್ಲಿ ಮಾನವರು ಎಐ ಚಾಟ್ (AI Chats) ಗಳು ಮತ್ತು ಹೊಲೊಗ್ರಾಮ್ ಗಳಿಂದ ರೋಬೋಟ್ ಗಳವರೆಗೆ ವಿಚಿತ್ರ ಸ್ಥಳಗಳಲ್ಲಿ ಪ್ರೀತಿಯನ್ನು ಕಂಡುಕೊಳ್ಳುತ್ತಾರೆ. ಮದುವೆಯಾಗುವ ಮೂಲಕವೂ, ಅವರು ತಮ್ಮ ಪ್ರೀತಿಯ ಹುಚ್ಚನ್ನು ಬೇರೆ ಲೆವೆಲ್ ಗೆ ಕೊಂಡೊಯ್ಯುತ್ತಾರೆ.
ಇವತ್ತು ನಾವಿಲ್ಲಿ ಹೇಳ್ತಿರೋದು ಜಪಾನಿನ ವ್ಯಕ್ತಿಯೊಬ್ಬನ ಬಗ್ಗೆ. ಈತನ ಹೆಸರು ಅಕಿಹಿಕೊ ಕೊಂಡೋ, 2018 ರಲ್ಲಿ, ಈತ ವರ್ಚುವಲ್ ಗಾಯಕಿ (virtual singer) ಹಟ್ಸುನೆ ಮಿಕು ಅವರನ್ನು ವಿವಾಹವಾದರು. ಕೆಲವು ದಿನಗಳ ಹಿಂದಷ್ಟೇ, ಈ ಜೋಡಿ ಆರನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ.
ಅನಿಮೆ ಪಾತ್ರದ ಮೇಲೆ ಲವ್ ಮತ್ತು ಮದುವೆಯ ಬಗ್ಗೆ ಕೇಳಲು ನಿಮಗೆ ವಿಚಿತ್ರವೆನಿಸಬಹುದು. ಆದರೆ ಇದು ಸಂಪೂರ್ಣವಾಗಿ ನಿಜ, ಅಕಿಹಿಕೊ ಕೊಂಡೋ ತನ್ನ ಪ್ರೇಮಕಥೆಯ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ (Instagram post) ಮಾಡುತ್ತಲೆ ಇರುತ್ತಾರೆ. ತುಂಬಾ ಜನ ರಿಜೆಕ್ಟ್ ಮಾಡಿದ ನಂತ್ರ ವರ್ಚುವಲ್ ಗಾಯಕಿ ಹಟ್ಸುನೆ ಮಿಕು ಅವರನ್ನ ಇಷ್ಟ ಪಡೋದಕ್ಕೆ ಶುರು ಮಾಡಿದ್ರು ಅಕಿಹಿಕೋ. ಆಕೆಯನ್ನು ಇಷ್ಟಪಟ್ಟು, ಪ್ರೀತಿ ಮಾಡಿ ಮದ್ವೆ ಕೂಡ ಆಗಿದ್ದಾರೆ ಅಕಿಹಿಕೊ.
ವರ್ಚುವಲ್ ಗಾಯಕಿ ಹಟ್ಸುನೆ ಮಿಕು ಯಾರು?
ಮೊದಲನೆಯದಾಗಿ, 41 ವರ್ಷದ ಅಕಿಹಿಕೊ ಕೊಂಡೋ (Akihiko kondo( 6 ವರ್ಷಗಳ ಹಿಂದೆ ನವೆಂಬರ್ 4 ರಂದು ಗಾಯಕಿ ಹಟ್ಸುನೆ ಮಿಕು (Hatsuke Miku) ಅವರನ್ನು ವಿವಾಹವಾದರು. ಇತ್ತೀಚೆಗೆ, ಅವರು ಮದುವೆಯ ಆರನೇ ವಾರ್ಷಿಕೋತ್ಸವದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ನಾನು ಮಿಕುವನ್ನು ತುಂಬಾ ಇಷ್ಟಪಡುತ್ತೇನೆ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಮಿಕು ಒಂದು ರೀತಿಯ ಹಾಡುವ ಧ್ವನಿ ಸಂಶ್ಲೇಷಕ ಸಾಫ್ಟ್ವೇರ್ ಆಗಿದೆ. ದೊಡ್ಡ ನೀಲಿ ಪೋನಿಟೈಲ್ ಮತ್ತು ನೀಲಿ ಕಣ್ಣುಗಳನ್ನು ಹೊಂದಿರುವ 16 ವರ್ಷದ ಪಾಪ್ ಗಾಯಕಿಯ ಅನಿಮೇಷನ್ ನಿರ್ಮಿಸಿ ಅದನ್ನೇ ಮದ್ವೆ ಆಗಿದ್ದಾನೆ ಈತ.
ಅನೇಕ ಬಾರಿ ರಿಜೆಕ್ಷನ್ ಗೆ ಒಳಗಾಗಿದ್ದ ಅಕಿಹಿಕೊ
ಅಕಿಹಿಕೊ ಕೊಂಡೋ ಜಪಾನಿನ ಮಾಧ್ಯಮಗಳಿಗೆ ತನ್ನ ಕಥೆಯನ್ನು ಹೇಳಿದ್ದು,ಈತ ಈ ಹಿಂದೆ ಏಳು ಜನರನ್ನು ಪ್ರೀತಿಸಿದ್ದನಂತೆ, ಆದರೆ ಏಳು ಬಾರಿ ಆತನ ಪ್ರೀತಿಯನ್ನು ರಿಜೆಕ್ಟ್ ಮಾಡಲಾಗಿತ್ತು. ಅನಿಮೇಷನ್ ಗೊಂಬೆ ಮೇಲೆ ಲವ್ ಆಗಿರೋದಕ್ಕೆ ಈತನನ್ನು ಜನ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರಂತೆ. ಆದರೆ ಅದೆಲ್ಲವನ್ನೂ ಮೀರಿ, ಇದೀಗ ಅಕಿಹಿಕೊ ತಮ್ಮ 6ನೇ ವರ್ಷದ ಆನಿವರ್ಸರಿ ಸಂಭ್ರಮದಲ್ಲಿದ್ದಾರೆ.
2017 ರಲ್ಲಿ, ಅಕಿಹಿಕೊ ಕೊಂಡೋ ಅವರ ಜೀವನದಲ್ಲಿ ಅವರು ಎಂದಿಗೂ ಊಹಿಸದ ಒಂದು ಘಟನೆ ನಡೆಯಿತು. ಕ್ರಿಪ್ಟನ್ ಫ್ಯೂಚರ್ ಮೀಡಿಯಾ ರಚಿಸಿದ ಉದ್ದನೆಯ ನೀಲಿ ಬಣ್ಣದ ಕೂದಲಿನ, ನೀಲಿ ಬಣ್ಣದ ಕಣ್ಣುಗಳನ್ನು ಹೊಂದಿರುವ 16 ವರ್ಷದ ವರ್ಚುವಲ್ ಗಾಯಕಿ ಹಟ್ಸುನೆ ಮಿಕು ಅವರನ್ನು ನೋಡಿದರು. ವರ್ಚುವಲ್ ಸಂಗೀತದ ಜಗತ್ತಿನಲ್ಲಿ ಹೆಸರುವಾಸಿಯಾದ ಮಿಕು ಶೀಘ್ರದಲ್ಲೇ ಕೊಂಡೋಗೆ ಕೇವಲ ಅನಿಮೆ ಪಾತ್ರಕ್ಕಿಂತ ಹೆಚ್ಚಾಗಿ ಹೃದಯಕ್ಕೆ ಹತ್ತಿರವಾಗತೊಡಗಿದಳು. ಕೊಂಡೋ ಹೊಲೊಗ್ರಾಮ್ ಸಾಧನದ ಮೂಲಕ ಮಿಕುಗೆ ಪ್ರಪೋಸ್ ಮಾಡಿದನು. ಅದಕ್ಕೆ ಮಿಕು ಕೂಡ ತಕ್ಷಣ ಒಪ್ಪಿಕೊಂಡಿರೋದಾಗಿ ಹೇಳಿದ್ದಾರೆ.
ಇದನ್ನು ಫಿಕ್ಟೋಸೆಕ್ಷುಯಲ್ಸ್ ಎನ್ನುತ್ತಾರೆ
ಜಪಾನ್ನಲ್ಲಿ, ಕಳೆದ ಕೆಲವು ದಶಕಗಳಲ್ಲಿ, ಜನರು ಕಾಲ್ಪನಿಕ ಪಾತ್ರಗಳನ್ನು ತಮ್ಮ ಸಂಗಾತಿಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ, ಆ ಸಾವಿರ ಜನರಲ್ಲಿ ಒಬ್ಬರು ಅಕಿಹಿಕೊ. ಫಿಕ್ಟೋಸೆಕ್ಷುಯಲ್ ಎಂಬುದು ಒಂದು ಅಂಬ್ರೆಲಾ ಟರ್ಮ್ ಆಗಿದೆ. ಜಪಾನೀಸ್ ಅಸೋಸಿಯೇಷನ್ ಫಾರ್ ಸೆಕ್ಸ್ ಎಜುಕೇಶನ್ ನಡೆಸಿದ ಸಮೀಕ್ಷೆಯ ಪ್ರಕಾರ, ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ 10% ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕಾಲ್ಪನಿಕ ಪಾತ್ರಗಳ ಮೇಲೆ ರೊಮ್ಯಾಂಟಿಕ್ ಫೀಲಿಂಗ್ ಹೊಂದಿರೋದು ತಿಳಿದು ಬಂದಿದೆ.