ಅಮೆರಿಕದ ಡಿವೋರ್ಸಿಗೆ ಭಾರತೀಯನ ಮೇಲೆ ಕ್ರಶ್, ಇಂಟೆರೆಸ್ಟಿಂಗ್ ಲವ್ ಸ್ಟೋರಿ ಇದು
ಸೋಶಿಯಲ್ ಮೀಡಿಯಾ ಫೋಟೋ, ವಿಡಿಯೋ ಪೋಸ್ಟ್ ಮಾಡೋಕೆ ಮಾತ್ರ ಸೀಮಿತ ಆಗಿಲ್ಲ. ಅನೇಕ ಸಂಬಂಧಗಳನ್ನು ಒಂದು ಮಾಡ್ತಿದೆ. ಈ ಜೋಡಿಗೆ ಇನ್ಸ್ಟಾಗ್ರಾಮ್ (Instagram) ಪ್ರೀತಿಯ ವರ ನೀಡಿದೆ. ಎಲ್ಲೋ ಇದ್ದ ಜಾಕ್ವೆಲಿನ್ ಹಾಗೂ ಇನ್ನೆಲ್ಲೋ ಇದ್ದ ಚಂದನ್ ಲವ್ ಸ್ಟೋರಿ ಇಂಟರೆಸ್ಟಿಂಗ್ ಆಗಿದೆ.

ಅಮೆರಿಕಾ ಹುಡುಗಿಗೆ ಭಾರತೀಯನ ಮೇಲೆ ಪ್ರೀತಿ
ಅಮೆರಿಕಾದ ಜಾಕ್ವೆಲಿನ್, ಫೋಟೋಗ್ರಾಫರ್. ಅವರ ಪ್ರೇಮಿ ಚಂದನ್, ಆಂಧ್ರಪ್ರದೇಶದ ಒಂದು ಸಣ್ಣ ಹಳ್ಳಿಯ ನಿವಾಸಿ. 2024ರಲ್ಲಿ ಇನ್ಸ್ಟಾಗ್ರಾಮ್ ಸ್ಕ್ರೋಲ್ ಮಾಡುವಾಗ ಜಾಕ್ವೆಲಿನ್ ಮೆಸ್ಸೇಜ್ ಬಂದಿದೆ. ಜಾಕ್ವೆಲಿನ್ ಹಾಗೂ ಚಂದನ್ ಗೆ ಕಾಮನ್ ಫ್ರೆಂಡ್ ಒಬ್ಬರು ಇರೋದ್ರಿಂದ ಭಯವಿಲ್ಲದೆ ಚಂದನ್, ಜಾಕ್ವೆಲಿನ್ ಅವರ ಮೆಸ್ಸೇಜ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದಾರೆ. ಅಲ್ಲಿಂದ ಇಬ್ಬರ ಮಾತುಕತೆ ಶುರುವಾಗಿದೆ.
ಮೆಸ್ಸೇಜ್ ವಿಡಿಯೋ ಕಾಲ್ ಆಗಿ ಬದಲಾಯ್ತು
ಆರಂಭದಲ್ಲಿ ಇಬ್ಬರೂ ಸಾಮಾನ್ಯ ವಿಷ್ಯಗಳ ಬಗ್ಗೆ ಮಾತನಾಡ್ತಿದ್ದರು. ದಿನಕಳೆದಂತೆ ಇಬ್ಬರ ಮಧ್ಯೆ ಸ್ನೇಹ ಚಿಗುರಿತ್ತು. ಇಬ್ಬರ ಆಸಕ್ತಿಗಳು ಒಂದೇ ಆಗಿದ್ದವು. ಹಾಗಾಗಿ ರಾತ್ರಿ ಇಬ್ಬರ ಚಾಟ್ ನಡೆಯುತ್ತಿತ್ತು. ನಿಧಾನವಾಗಿ ಜಾಕ್ವೆಲಿನ್ ಹಾಗೂ ಚಂದನ್ ವಿಡಿಯೋ ಕಾಲ್ ಗೆ ಬದಲಾದ್ರು.
ಪ್ರೀತಿ ಶುರು
ಜೀವನದಲ್ಲಿ ನಡೆಯುತ್ತಿದ್ದ ಸಣ್ಣಪುಟ್ಟ ವಿಷ್ಯಗಳನ್ನು ಪರಸ್ಪರ ಹಂಚಿಕೊಳ್ತಿದ್ದರು. ಅಂತರ ಕಡಿಮೆಯಾಗಿ ಇಬ್ಬರು ಆಪ್ತರಾಗಿದ್ರು. ಒಬ್ಬರನ್ನೊಬ್ಬರು ಅರಿತಿದ್ದರು. ಸ್ನೇಹ ಪ್ರೀತಿಗೆ ಚಿಗುರಲು ತುಂಬಾ ಸಮಯ ಹಿಡಿಯಲಿಲ್ಲ.
ಪ್ರೀತಿಗೆ ಅಡ್ಡಿ
ಜಾಕ್ವೆಲಿನ್ ಹಾಗೂ ಚಂದನ್ ಪ್ರೀತಿಯನ್ನು ಒಪ್ಪಿಕೊಳ್ಳೋದು ಸುಲಭವಿರಲಿಲ್ಲ. ಜಾಕ್ವೆಲಿನ್, ಚಂದನ್ ಗಿಂತ 9 ವರ್ಷ ದೊಡ್ಡವರು. ಇನ್ನೊಂದು ಸಮಸ್ಯೆ ಅಂದ್ರೆ ಜಾಕ್ವೆಲಿನ್ ವಿಚ್ಛೇದಿತ ಮಹಿಳೆ. ಭಾರತದಲ್ಲಿ ಈ ಎರಡನ್ನೂ ಒಪ್ಪಿಕೊಳ್ಳೋದು ಸುಲಭವಲ್ಲ. ಅದ್ರಲ್ಲೂ ಹಳ್ಳಿಯಲ್ಲಿರುವ ಚಂದನ್ ಗೆ ಇದೊಂದು ಸವಾಲಾಗಿತ್ತು.
ಮನೆಯವರ ಒಪ್ಪಿಗೆ
ಪ್ರೀತಿಗಾಗಿ ಚಂದನ್ ಏನು ಮಾಡಲೂ ಸಿದ್ಧ ಇದ್ರು. ಮನೆಯವರಿಗೆ ಜಾಕ್ವೆಲಿನ್ ಬಗ್ಗೆ ತಿಳಿಸಿದ ಚಂದನ್, ಮನೆಯವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದ್ರು. ವಿಡಿಯೋ ಕಾಲ್ ಮೂಲಕ ಜಾಕ್ವೆಲಿನ್ ಅವರನ್ನು ಮನೆಯವರಿಗೆ ಪರಿಚಯಿಸಿದ್ರು. ಇನ್ನು ಜಾಕ್ವೆಲಿನ್ ಮನೆಯಲ್ಲಿ ಇದು ಕಷ್ಟವಾಗ್ಲಿಲ್ಲ. ಚಂದನ್ ಅವರನ್ನು ಜಾಕ್ವೆಲಿನ್ ತಾಯಿ – ತಂದೆ ಇಬ್ಬರೂ ಸ್ವೀಕರಿಸಿದ್ದರು. ಜಾಕ್ವೆಲಿನ್ ತಾಯಿಗೆ ಬೆಕ್ಕೆಂದ್ರೆ ಪ್ರಾಣ. ಚಂದನ್ ಕೂಡ ಬೆಕ್ಕನ್ನು ಇಷ್ಟಪಡ್ತಿದ್ದರಿಂದ ಕೆಲ್ಸ ಮತ್ತಷ್ಟು ಸುಲಭವಾಗಿತ್ತು.
ಲಾಂಗ್ ಡಿಸ್ಟೆನ್ಸ್ ರಿಲೇಷನ್ಶಿಪ್
ಮನೆಯವರ ಒಪ್ಪಿಗೆ ಮುದ್ರೆ ಬಿದ್ರೂ ಚಂದನ್ ಹಾಗೂ ಜಾಕ್ವೆಲಿನ್ ಗೆ ಭೇಟಿಯಾಗುವ ಅವಕಾಶ ಸಿಕ್ಕಿರಲಿಲ್ಲ. 9 ತಿಂಗಳುಗಳ ಕಾಲ ಲಾಂಗ್ ಡಿಸ್ಟನ್ಸ್ ರಿಲೇಶನ್ಶಿಪ್ ಉಳಿಸಿಕೊಂಡಿದ್ರು ಚಂದನ್ ಹಾಗೂ ಜಾಕ್ವೆಲಿನ್. ಇದು ಅವರಿಗೆ ದೊಡ್ಡ ಸಮಸ್ಯೆ ಎನ್ನಿಸಿರಲಿಲ್ಲ.
ಬಂದೇ ಬಿಡ್ತು ಆ ದಿನ
ಕೊನೆಗೂ ಇಬ್ಬರು ಭೇಟಿಯಾಗುವ ಸಮಯ ಬಂದಿತ್ತು. ಜಾಕ್ವೆಲಿನ್ , 14000 ಕಿಲೋಮೀಟರ್ ಪ್ರಯಾಣ ಬೆಳೆಸಿ ಭಾರತಕ್ಕೆ ಬಂದಿದ್ದರು. ವಿಮಾನ ನಿಲ್ದಾಣದಲ್ಲಿ ಜಾಕ್ವೆಲಿನ್ ಅವರನ್ನು ಚಂದನ್ ಸ್ವಾಗತಿಸಿದ್ದರು. ಚಂದನ್ ಮನೆ, ಕುಟುಂಬ, ಅವರ ಪ್ರೀತಿ ಜಾಕ್ವೆಲಿನ್ ಗೆ ಇಷ್ಟವಾಗಿದೆ. ಸ್ವಲ್ಪ ಕಾಲ ಚಂದನ್ ಮನೆಯಲ್ಲಿ ಕಳೆದ ಜಾಕ್ವೆಲಿನ್, ಜನರ ಪ್ರೀತಿಯನ್ನು ಮೆಚ್ಚಿಕೊಂಡಿದ್ದಾರೆ. ಆದ್ರೆ ಚಂದನ್ ಬಿಟ್ಟು ಮತ್ತೆ ಅಮೆರಿಕಾಕ್ಕೆ ಹೋಗುವ ಸಮಯ ಬಂದಾಗ ಇಬ್ಬರೂ ಭಾವುಕರಾಗಿದ್ರು.
ಸಾಕಷ್ಟು ಕಮೆಂಟ್
ಚಂದನ್ ಹಾಗೂ ಜಾಕ್ವೆಲಿನ್ ಪ್ರೇಮ ಕಥೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಅನೇಕರು ಇವರ ಪ್ರೀತಿಯನ್ನು ಮೆಚ್ಚಿಕೊಂಡಿದ್ದಾರೆ. ಆದ್ರೆ ಕೆಲವರು ಬಣ್ಣ, ಜಾತಿ, ಪದ್ಧತಿ ಹೆಸರಿನಲ್ಲಿ ಅವಮಾನ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಕಮೆಂಟ್ ಅನೇಕ ದಿನ ನನ್ನ ನಿದ್ರೆ ಹಾಳು ಮಾಡಿತ್ತು ಎಂದು ಜಾಕ್ವೆಲಿನ್ ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

