- Home
- Life
- Relationship
- ಒಂದೇ ವರ್ಷದಲ್ಲಿ 800 ಕೋಟಿ ಮೌಲ್ಯದ ಪುರುಷತ್ವ ಶಕ್ತಿವರ್ಧನೆ ಮಾತ್ರೆ ನುಂಗಿದ ಭಾರತೀಯರು, ಈ 2 ಟ್ಯಾಬ್ಲೆಟ್‌ಗೆ ಭಾರೀ ಡಿಮ್ಯಾಂಡ್!
ಒಂದೇ ವರ್ಷದಲ್ಲಿ 800 ಕೋಟಿ ಮೌಲ್ಯದ ಪುರುಷತ್ವ ಶಕ್ತಿವರ್ಧನೆ ಮಾತ್ರೆ ನುಂಗಿದ ಭಾರತೀಯರು, ಈ 2 ಟ್ಯಾಬ್ಲೆಟ್‌ಗೆ ಭಾರೀ ಡಿಮ್ಯಾಂಡ್!
Male Potency Drugs: ವಯಾಗ್ರದಲ್ಲಿನ ಸಕ್ರಿಯ ಘಟಕಾಂಶವಾದ ಸಿಲ್ಡೆನಾಫಿಲ್‌ನ ಮಾರಾಟವು ಸೆಪ್ಟೆಂಬರ್ 2024ಕ್ಕೆ ಕೊನೆಗೊಂಡ 12 ತಿಂಗಳುಗಳಲ್ಲಿ ಒಟ್ಟು ರೂ 525 ಕೋಟಿಗಳನ್ನು ತಲುಪಿದೆ. ಇದು ಹಿಂದಿನ ವರ್ಷ ರೂ 456 ಕೋಟಿಗಳಿಂದ 15% ಹೆಚ್ಚಳವನ್ನು ಕಂಡಿದೆ.

ದೇಶದಲ್ಲಿ ಸೆಕ್ಸ್‌ಗೆ ಉತ್ತೇಜನ ಹಾಗೂ ಸೆಕ್ಸ್ ಪವರ್ ಹೆಚ್ಚಿಸುವಂಥ ಔಷಧಿಗಳ ಮಾರಾಟ ವಿಪರೀತ ಎನಿಸುವಷ್ಟು ಏರಿಕೆಯಾಗಿದೆ. ಈ ಬಗ್ಗೆ ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.
Viagra for women
ಸೆಕ್ಸ್ ಪವರ್ ಹೆಚ್ಚಿಸಿಕೊಳ್ಳುವ ಮಾತ್ರೆಯನ್ನು ತಿನ್ನುವ ಬಗ್ಗೆ ಜನರಲ್ಲಿ ಹಿಂಜರಿಕೆ ಕಡಿಮೆಯಾಗುತ್ತಿದೆ ಎಂದಿದ್ದಾರೆ ಉದ್ಯಮದ ಜನರು. ಲೈಂಗಿಕ ಕಾಳಜಿಗಳನ್ನು ಪರಿಹರಿಸಲು ಮತ್ತು ಅವರ ಲೈಂಗಿಕ ಜೀವನವನ್ನು ಹೆಚ್ಚಿಸಲು ಜನರ ಬಯಕೆಯಿಂದಾಗಿ ಇದು ಸಾಧ್ಯವಾಗುತ್ತಿದೆ ಎಂದಿದ್ದಾರೆ.
ಮಾರುಕಟ್ಟೆ ಸಂಶೋಧನಾ ಸಂಸ್ಥೆ ಫಾರ್ಮಾಮಾರ್ಕ್‌ನ ಮಾಹಿತಿಯ ಪ್ರಕಾರ, ವಯಾಗ್ರ ಮತ್ತು ಸಾಲಿಸ್ ಬ್ರಾಂಡ್‌ಗಳ ಲೈಂಗಿಕ ಉತ್ತೇಜಕ ಉತ್ಪನ್ನಗಳ ಮಾರಾಟವು ಶೇಕಡಾ 17 ರಷ್ಟು ಹೆಚ್ಚಾಗಿದೆ.
ಉತ್ಪನ್ನ ಮಾರಾಟದಲ್ಲಿ ಈ ಹೆಚ್ಚಳವು ವರ್ಷದಿಂದ ವರ್ಷಕ್ಕೆ ಸಂಭವಿಸಿದೆ. ಸೆಪ್ಟೆಂಬರ್ 2024 ಕ್ಕೆ ಕೊನೆಗೊಂಡ 12 ತಿಂಗಳುಗಳಲ್ಲಿ, ವಯಾಗ್ರದಲ್ಲಿನ ಸಕ್ರಿಯ ಘಟಕಾಂಶವಾದ ಸಿಲ್ಡೆನಾಫಿಲ್ ಮಾರಾಟವು 525 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ವರ್ಷ ಇದರ ಪ್ರಮಾಣ 456 ಕೋಟಿ ಆಗಿತ್ತು. ಒಂದೇ ವರ್ಷದಲ್ಲಿ ಶೇ. 15ರಷ್ಟು ಏರಿಕೆಯಾಗಿದೆ.
ಅದೇ ರೀತಿ, ಇದೇ ಅವಧಿಯಲ್ಲಿ ತಡಾಲಾಫಿಲ್ ಬ್ರಾಂಡ್‌ನ ಮಾರಾಟವು 19% ರಷ್ಟು ಹೆಚ್ಚಾಗಿದೆ, 205 ಕೋಟಿ ರೂ.ಗಳಿಂದ 244 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಇದನ್ನೂ ಓದಿ: ಇದು ಬೆಂಗಳೂರಿನ 'ಬಿಲಿಯನೇರ್ ಸ್ಟ್ರೀಟ್', 67.5 ಕೋಟಿಗೆ ಸೇಲ್ ಆಗಿದೆ ಇಲ್ಲಿನ ಒಂದು ಸೈಟ್!
ಫಾರ್ಮಾರಾಕ್ ಅಂಕಿಅಂಶಗಳ ಪ್ರಕಾರ, ಈ ವರ್ಷದ ಸೆಪ್ಟೆಂಬರ್‌ವರೆಗಿನ 12 ತಿಂಗಳಲ್ಲಿ ಲೈಂಗಿಕ ಉತ್ತೇಜಕ ಮತ್ತು ಶಕ್ತಿಯನ್ನು ಹೆಚ್ಚಿಸುವ ಮಾತ್ರೆಗಳ ಒಟ್ಟು ಮಾರಾಟವು 829 ಕೋಟಿ ರೂಪಾಯಿಗಳಿಗೆ ತಲುಪಿದೆ.
ಇದನ್ನೂ ಓದಿ: ₹67,538 ಕೋಟಿ ಮೌಲ್ಯದ ಅಮೆಜಾನ್ ಷೇರು ಮಾರಾಟ ಮಾಡಿದ ಜೆಫ್ ಬೆಜೋಸ್ ಮಾಜಿ ಪತ್ನಿ!
ಮಾರುಕಟ್ಟೆಯಲ್ಲಿ ಬೇಡಿಕೆ ತುಂಬಾ ಉತ್ತಮವಾದ ಕಾರಣ ಕಂಪನಿಗಳು ಸೆಕ್ಸ್ ಪವರ್‌ಹೆಚ್ಚಿಸುವ ಉತ್ಪನ್ನಗಳನ್ನು ಪ್ರಾರಂಭಿಸಲು ಗಮನಹರಿಸುತ್ತಿವೆ ಎಂದು ಹೇಳಿದರು. ಸೆಕ್ಸ್ ಪವರ್ ಉತ್ಪನ್ನಗಳು ಅತ್ಯಂತ ವೇಗವಾಗಿ ಮಾರಾಟವಾಗುತ್ತವೆ ಮತ್ತು ಆಯುರ್ವೇದ ಮಾತ್ರೆಗಳಿಗೂ ಸಾಕಷ್ಟು ಬೇಡಿಕೆಯಿದೆ ಎಂದು ಉದ್ಯಮದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.