- Home
- Life
- Relationship
- 'ನನ್ನೆಲ್ಲಾ ಪ್ಲ್ಯಾನ್ ಉಲ್ಟಾ ಆಗಿದೆ...' ಸಲಿಂಗ ವಿವಾಹದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿಗೆ ಭಾರತದ ಖ್ಯಾತ ಅಥ್ಲೀಟ್ ಬೇಸರ!
'ನನ್ನೆಲ್ಲಾ ಪ್ಲ್ಯಾನ್ ಉಲ್ಟಾ ಆಗಿದೆ...' ಸಲಿಂಗ ವಿವಾಹದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿಗೆ ಭಾರತದ ಖ್ಯಾತ ಅಥ್ಲೀಟ್ ಬೇಸರ!
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಬೆನ್ನಲ್ಲಿಯೇ, ದೇಶದ ಪ್ರಮುಖ ಸಲಿಂಗಿ ಜೋಡಿಗಳಲ್ಲಿ ಆತಂಕ ಶುರುವಾಗಿದೆ. ಭಾರತದ ಖ್ಯಾತ ಸ್ಪ್ರಿಂಟರ್ ಹಾಗೂ ಒಲಿಂಪಿಯನ್ ದ್ಯುತಿ ಚಂದ್ ಕೂಡ ಇದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಸಲಿಂಗ ವಿವಾಹದ ಕುರಿತಾಗಿ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಅದರಂತೆ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ನಿರಾಕರಿಸಿದೆ.
ಸುಪ್ರೀಂ ಕೋರ್ಟ್ ತಮ್ಮ ಪರವಾಗಿ ತೀರ್ಪು ನೀಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ದೇಶದ ಪ್ರಮುಖ ಸಲಿಂಗ ಜೋಡಿಗಳಿಗೆ ಇದರಿಂದ ದೊಡ್ಡ ಆಘಾತವಾಗಿದೆ.
ಇದರಲ್ಲಿ ಭಾರತದ ಪ್ರಖ್ಯಾತ ಅಥ್ಲೀಟ್ ಹಾಗೂ ಒಲಿಂಪಿಯನ್ ದ್ಯುತಿ ಚಂದ್ ಕೂಡ ಹೊರತಾಗಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ನನ್ನೆಲ್ಲಾ ಪ್ಲ್ಯಾನ್‌ಗಳನ್ನು ಉಲ್ಟಾ ಮಾಡಿದೆ ಎಂದು ಅವರು ಹೇಳಿದ್ದಾರೆ.
ನಾನು ನನ್ನ ಜೊತೆಗಾರ್ತಿ ಮೊನಾಲಿಸಾರನ್ನು ಮದುವೆಯಾಗುವ ಎಲ್ಲಾ ಪ್ಲ್ಯಾನ್ ಮಾಡಿದ್ದೆ. ಆದರೆ, ಸುಪ್ರೀಂ ಕೋರ್ಟ್ ತೀರ್ಪು ಈ ಪ್ಲ್ಯಾನ್‌ಗಳನ್ನು ಹಾಳು ಮಾಡಿದೆ ಎಂದು ದ್ಯುತಿ ಚಂದ್ ಹೇಳಿದ್ದಾರೆ.
ನಾನು ಹಾಗೂ ಮೋನಾಲಿಸಾ ಕಳೆದ ಐದು ವರ್ಷಗಳಿಂದ ಜೊತೆಯಾಗಿ ಬದುಕುತ್ತಿದ್ದೇವೆ. ವಯಸ್ಕರಾರಿಗೂ ನಾವು ತುಂಬಾ ಸಂತೋಷದಿಂದ ಬದುಕುತ್ತಿದ್ದೇವೆ ಎಂದು ದ್ಯುತಿ ಹೇಳಿದ್ದಾರೆ.
ನಮ್ಮ ಬದುಕಿನಲ್ಲಿ ನಮ್ಮದೇ ಆದಂಥ ಸ್ವಂಥ ನಿರ್ಧಾರಗಳನ್ನು ಮಾಡಲು ನಾವೀಗ ಶಕ್ತರಾಗಿದ್ದೇವೆ. ಸಲಿಂಗ ವಿವಾಹವನ್ನು ಮಾನ್ಯ ಮಾಡಿ ಸಂಸತ್ತು ಹೊಸ ಕಾನೂನು ಜಾರಿ ಮಾಡಲಿದೆ ಎನ್ನುವ ವಿಶ್ವಾಸ ನಮಗಿದೆ ಎಂದು ದ್ಯುತಿ ತಿಳಿಸಿದ್ದಾರೆ.
2019ರ ಮೇ ತಿಂಗಳಲ್ಲಿ ಭಾರತದಲ್ಲಿ ಮುಕ್ತವಾಗಿ ಹೇಳಿಕೊಂಡ ದೇಶದ ಮೊದಲ ಲೆಸ್ಬಿಯನ್ ಅಥ್ಲೀಟ್ ಆಗಿ ದ್ಯುತಿ ಚಂದ್ ಗುರುತಿಸಿಕೊಂಡರು. ಇದಕ್ಕಾಗಿ ಅವರು ತಮ್ಮ ಕುಟುಂಬದಿಂದ ದೊಡ್ಡ ಮಟ್ಟದ ಟೀಕೆ ಎದುರಿಸಿದ್ದರು.
2021 ರಲ್ಲಿ, ದ್ಯುತಿ ಬರ್ಮಿಂಗ್ಹ್ಯಾಮ್‌ನಲ್ಲಿ ಕ್ವೀನ್ಸ್ ಬ್ಯಾಟನ್‌ನಲ್ಲಿ ಭಾಗವಹಿಸಿದ್ದಲ್ಲದೇ, ಕಾಮನ್‌ವೆಲ್ತ್ ದೇಶಗಳಲ್ಲಿ ಹೋಮೋಫೋಬಿಯಾ ಬಗ್ಗೆ ಬೆಳಕು ಚೆಲ್ಲುವ ಅವಕಾಶವನ್ನು ಪಡೆದರು.
2022 ರ ಕಾಮನ್‌ವೆಲ್ತ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ LGBTQIA+ ಧ್ವಜವನ್ನು ಹಿಡಿದಿದ್ದ ದ್ಯುತಿ ಅವರು ಹೋಮೋಫೋಬಿಯಾ ವಿರುದ್ಧ ಪ್ರಬಲ ಸಂದೇಶವನ್ನು ಕಳುಹಿಸಿದ್ದರು.
2015 ರಲ್ಲಿ ಸ್ಪೋರ್ಟ್ಸ್ ಆರ್ಬಿಟ್ರೇಷನ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಐಎಎಎಫ್ ವಿರುದ್ಧ ದ್ಯುತಿ ಚಂದ್ 'ಲಿಂಗ' ಪ್ರಕರಣವನ್ನು ಗೆದ್ದಿದ್ದರು. ಒಂದು ವರ್ಷ ಅಮಾನತುಗೊಂಡ ನಂತರ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಲಾಯಿತು.
ಸಿಎಎಸ್ ಎರಡು ವರ್ಷಗಳವರೆಗೆ ಹೈಪರ್ಆಂಡ್ರೊಜೆನಿಸಂನ ಐಎಎಎಫ್ ನೀತಿಯನ್ನು ಅಮಾನತುಗೊಳಿಸಿತು. ನಂತರ ವಿಶ್ವ ಅಥ್ಲೆಟಿಕ್ಸ್ ಸಂಸ್ಥೆಯು ನೀತಿಯನ್ನು ಬದಲಾಯಿಸಿತು, ಇದು ಈಗ 400m ನಿಂದ 1500m ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಮಹಿಳಾ ಅಥ್ಲೀಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ, 100m ಮತ್ತು 200m ನಲ್ಲಿ ಸ್ಪರ್ಧಿಸುವ ದ್ಯುತಿಯನ್ನು ತನ್ನ ವ್ಯಾಪ್ತಿಯಿಂದ ಹೊರಗಿಟ್ಟಿತು.
ದ್ಯುತಿ ಈಗ ಕೆಲವು ವರ್ಷಗಳಿಂದ ಮೊನಾಲಿಸಾ ಅವರೊಂದಿಗೆ ಬದುಕುತ್ತಿದ್ದಾರೆ. ಈ ಜೋಡಿಯು ಒಡಿಯಾ ನಿಯತಕಾಲಿಕೆ ಕದಂಬಿನಿ ಮುಖಪುಟದಲ್ಲಿ ಕಾಣಿಸಿಕೊಂಡಿದೆ.
ಮೊನಾಲಿಸಾ ತನ್ನ ಗ್ರಾಮದಲ್ಲಿ ಖುದುರ್ಕುನಿ ಪೂಜೆಯ ಸಮಯದಲ್ಲಿ ದ್ಯುತಿ ಚಂದ್‌ರನ್ನು ಮೊದಲು ಭೇಟಿಯಾಗಿದ್ದರು ಮತ್ತು ಬಿಎ ಪದವಿಯನ್ನು ಪೂರ್ಣಗೊಳಿಸಿದ ನಂತರ ದಂಪತಿಗಳು ಒಟ್ಟಿಗೆ ವಾಸ ಮಾಡಲು ಆರಂಭಿಸಿದ್ದಾರೆ.
ದ್ಯುತಿ ಚಂದ್ ಹಾಗೂ ಮೋನಾಲಿಸಾ ಈಗಾಗಲೇ ಸಾಕಷ್ಟು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಹಳ ಮುಕ್ತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಎದೆ ಸೀಳು ಕಾಣುವಂತೆ ಬಟ್ಟೆ ಹಾಕ್ಕೊಂಡು ಮೊಬೈಲ್ ಫೋನ್‌ನಿಂದ ಮಾನ ಮುಚ್ಚಿಕೊಳ್ಳೋದೇಕೆ ಅನನ್ಯಾ?