MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • 'ನಾನು ಕಷ್ಟಪಟ್ಟು ಆ ಸೀನ್‌ನಲ್ಲಿ ನಟಿಸಿದ್ದೇನೆ, ನೀವದನ್ನ ಸೆಕ್ಸ್‌ ಕ್ಲಿಪ್‌ ಎನ್ನುತ್ತಿದ್ದೀರಿ..' ಮಾಧ್ಯಮಗಳ ವಿರುದ್ಧ ನಟಿ ಕಿಡಿ

'ನಾನು ಕಷ್ಟಪಟ್ಟು ಆ ಸೀನ್‌ನಲ್ಲಿ ನಟಿಸಿದ್ದೇನೆ, ನೀವದನ್ನ ಸೆಕ್ಸ್‌ ಕ್ಲಿಪ್‌ ಎನ್ನುತ್ತಿದ್ದೀರಿ..' ಮಾಧ್ಯಮಗಳ ವಿರುದ್ಧ ನಟಿ ಕಿಡಿ

ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಕಳೆದ ಅಕ್ಟೋಬರ್‌ 13 ರಂದು ಹೊಸ ವೆಬ್‌ ಸಿರೀಸ್‌ ಸುಲ್ತಾನ್‌ ಆಫ್‌ ಡೆಲ್ಲಿ ಬಿಡುಗಡೆಯಾಗಿದೆ. ಇದರ ಬೆನ್ನಲ್ಲಿಯೇ ಈ ಸಿರೀಸ್‌ನಲ್ಲಿ ನಟಿಸಿದ್ದ ನಟಿಯೊಬ್ಬರು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.' 

2 Min read
Santosh Naik
Published : Oct 17 2023, 08:14 PM IST| Updated : Oct 17 2023, 10:48 PM IST
Share this Photo Gallery
  • FB
  • TW
  • Linkdin
  • Whatsapp
116

ನಟಿ ಮೆಹ್ರೀನ್ ಪಿರ್ಜಾದಾ ಗರಂ ಆಗಿದ್ದಾರೆ. ಬೇರೆ ಯಾವುದೇ ನಟ, ನಿರ್ದೇಶಕರ ವಿರುದ್ಧವಲ್ಲ.ಮಾಧ್ಯಮಗಳ ವಿರುದ್ಧವೇ 27 ವರ್ಷದ ನಟಿ ಕಿಡಿಕಾರಿದ್ದಾರೆ.

216

ಅದಕ್ಕೆ ಕಾರಣವೂ ಉಂಟು. ತೆಲುಗಿನಲ್ಲಿ ಸಖತ್‌ ರೆಸ್ಪಾನ್ಸ್‌ ಪಡೆದ ಫನ್‌ ಆಂಡ್‌ ಫ್ರಸ್ಟ್ರೇಷನ್‌ ಸಿನಿಮಾದ ಮೂಲಕ ಜನಪ್ರಿಯತೆ ಪಡೆದ ನಟಿ ಇತ್ತೀಚೆಗೆ ವೆಬ್‌ ಸಿರೀಸ್‌ಗೆ ಪಾದಾರ್ಪಣೆ ಮಾಡಿದ್ದಾರೆ.

316

ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸುಲ್ತಾನ್‌ ಆಫ್‌ ಡೆಲ್ಲಿ ವೆಬ್‌ ಸಿರೀಸ್‌ ಕಳೆದವಾರ ಅಂದರೆ, ಅಕ್ಟೋಬರ್‌ 13 ರಂದು ಬಿಡುಗಡೆಯಾಗಿದೆ.

416

ಡಿಸ್ನಿ ಹಾಟ್‌ಸ್ಟಾರ್‌ ನಿರ್ಮಾಣದ ಈ ವೆಬ್‌ ಸಿರೀಸ್‌ಗೆ ಅಷ್ಟೇನೋ ಉತ್ತಮ ಪ್ರತಿಕ್ರಿಯೆ ಪ್ರೇಕ್ಷಕರಿಂದ ವ್ಯಕ್ತವಾಗಿಲ್ಲ. ಆದರೆ, ನಟಿ ಮೆಹ್ರೀನ್ ಪಿರ್ಜಾದಾ ಅವರ ಸೀನ್‌ಅನ್ನು ಮಾತ್ರ ನೆನಪಿಸಿಕೊಂಡಿದ್ದಾರೆ.

516

ಈ ವೆಬ್‌ಸಿರೀಸ್‌ನ ಒಂದು ದೃಶ್ಯದಲ್ಲಿ ನಟಿ ಮೆಹ್ರೀನ್ ಪಿರ್ಜಾದಾ ಬಹಳ ಮಾದಕವಾಗಿ ಬೆಡ್‌ ಸೀನ್‌ಗಳಲ್ಲಿ ನಟಿಸಿದ್ದಾರೆ. ಇದನ್ನೇ ಮಾಧ್ಯಮಗಳು ಹೈಲೈಟ್‌ ಮಾಡಿದ್ದವು.

616

ಮಾಧ್ಯಮಗಳು ಆ ಸೀನ್‌ಅನ್ನು ಎಷ್ಟರ ಮಟ್ಟಿಗೆ ಹೈಪ್‌ ಮಾಡಿದ್ದವು ಎಂದರೆ, ನಟಿ ಮೆಹ್ರೀನ್ ಪಿರ್ಜಾದಾ ಹಿಂದಿನ ಯಾವ ಚಿತ್ರದಲ್ಲೂ ಇಷ್ಟು ಬೋಲ್ಡ್‌ ಆಗಿ ನಟಿಸಿರಲಿಲ್ಲ ಎಂದಿದೆ.

716

ಇದನ್ನು ಮಾಧ್ಯಮಗಳು ಸೆಕ್ಸ್‌ ಸೀನ್‌ ಎಂದು ಹೇಳಿದ್ದೇ ನಟಿ ಮೆಹ್ರೀನ್ ಪಿರ್ಜಾದಾ ಅವರ ಸಿಟ್ಟಿಗೆ ಕಾರಣವಾಗಿದೆ. ಅವರ ಪ್ರಕಾರ ಇದು ಸೆಕ್ಸ್‌ ಸೀನ್‌ ಅಲ್ಲವಂತೆ.

816

ನನ್ನ ಅಭಿಮಾನಿಗಳು ಈ ವೆಬ್‌ ಸಿರೀಸ್‌ ನೋಡಿ ಇಷ್ಟಪಟ್ಟಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಕೆಲವೊಮ್ಮೆ ನಮ್ಮ ಸ್ಕ್ರಿಪ್ಟ್‌ಗಳು ನಮ್ಮ ಇಷ್ಟಕ್ಕೆ ವಿರುದ್ಧವಾದ ಕೆಲವೊಂದು ಸೀನ್‌ಗಳಲ್ಲಿ ನಟಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ ಎಂದು ಮೆಹ್ರೀನ್‌ ಎಕ್ಸ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

916

ನಟನೆಯನ್ನು ಕಲೆ ಮತ್ತು ಅದೇ ಸಮಯದಲ್ಲಿ ಕೆಲಸ ಎಂದು ಪರಿಗಣಿಸುವ ವೃತ್ತಿಪರ ನಟಿಯಾಗಿ ನಾನು ಕೆಲವು ದೃಶ್ಯಗಳನ್ನು ಮಾಡಲೇಬೇಕಾಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

1016

ಸುಲ್ತಾನ್‌ ಆಫ್‌ ಡೆಲ್ಲಿ ವೆಬ್‌ ಸಿರೀಸ್‌ನಲ್ಲಿಯೂ ಅಂಥ ಒಂದು ದೃಶ್ಯದಲ್ಲಿ ನಟಿಸಿದ್ದೇನೆ. ಇದು ಅತ್ಯಂತ ಕ್ರೂರವಾದ ವೈವಾಹಿಕ ಅತ್ಯಾಚಾರದ ಬಗ್ಗೆ ತಿಳಿಸುವ ದೃಶ್ಯವಾಗಿತ್ತು ಎಂದು ಅವರು ಬರೆದಿದ್ದಾರೆ.

1116

ವೈವಾಹಿಕ ಅತ್ಯಾಚಾರದಂಥ ಗಂಭೀರ ವಿಚಾರವನ್ನು ಮಾಧ್ಯಮಗಳಲ್ಲಿ ಅನೇಕರು ಒಂದು ಸೆಕ್ಸ್‌ ಸೀನ್‌ ಎನ್ನುವಂತೆ ವಿವರಿಸಿರುವುದು ನನಗೆ ಬಹಳ ನೋವು ತಂದಿದೆ ಎಂದು ಅವರು ಬರೆದಿದ್ದಾರೆ.

1216

ಪ್ರಪಂಚದಾದ್ಯಂತ ಅನೇಕ ಮಹಿಳೆಯರು ಪ್ರಸ್ತುತ ವ್ಯವಹರಿಸುತ್ತಿರುವ ಗಂಭೀರವಾದ ಸಮಸ್ಯೆಯನ್ನು ಇದು ಸಣ್ಣದು ಎನಿಸುವಂತೆ ತೋರಿಸಲಾಗಿದೆ. ಕೆಲವು ಮಾಧ್ಯಮಗಳು ಮತ್ತು ಸೋಶಿಯಲ್‌ ಮೀಡಿಯಾ ಹ್ಯಾಂಡಲ್‌ಗಳು ಈ ದೃಶ್ಯವನ್ನು ಆರಿಸಿಕೊಂಡಿರುವುದು ನನಗೆ ಬೇಸರ ಉಂಟು ಮಾಡಿದೆ ಎಂದಿದ್ದಾರೆ.

1316

ಈ ಜನರು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ನನ್ನ ಯಾವೊಬ್ಬ ಸಹೋದರಿಯರು, ಹೆಣ್ಣುಮಕ್ಕಳು ಕೂಡ ತಮ್ಮ ಜೀವನದಲ್ಲಿ ಇಂಥ ಆಘಾತವನ್ನು ಎಂದಿಗೂ ಅನುಭವಿಸಬಾರದು.ಏಕೆಂದರೆ ಅಂತಹ ಕ್ರೌರ್ಯ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಚಿಂತನೆಯೇ ಅಸಹ್ಯವಾಗಿದೆ ಎಂದಿದ್ದಾರೆ.

1416


ಮೆಹ್ರೀನ್ ತನ್ನ ಸುದೀರ್ಘ ಟಿಪ್ಪಣಿಯಲ್ಲಿ, ದೆಹಲಿಯ ಸುಲ್ತಾನ್ ತಂಡವು 'ಅತ್ಯಂತ ಕಷ್ಟಕರವಾದ' ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ಅವರು ಯಾವುದೇ ಹಂತದಲ್ಲಿ ಅತ್ಯಂತ ವೃತ್ತಿಪರವಾಗಿ ತೊಡಗಿಕೊಂಡರು ಎಂದು ಹೇಳಿದ್ದಾರೆ.

1516

ಮೆಹ್ರೀನ್ ಮುಖ್ಯವಾಗಿ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಅವರು 2016 ರಲ್ಲಿ ಕೃಷ್ಣ ಗಾಡಿ ವೀರ ಪ್ರೇಮ ಗಾಧ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅವರು ಅನುಷ್ಕಾ ಶರ್ಮಾ ಅವರ ಫಿಲೌರಿಯಲ್ಲಿಯೂ ನಟಿಸಿದ್ದರು.

'ದೇವತೆ ರೀತಿಯಲ್ಲೇ ಕಾಣ್ತಿದ್ದೀರಿ..' ರಾಮಚಾರಿಯ ಚಾರು ನವರಾತ್ರಿ ಫೋಟೋಸ್‌ ವೈರಲ್‌!

1616

ಕನ್ನಡದಲ್ಲಿ ನೀ ಸಿಗೋವರೆಗೂ ಚಿತ್ರದಲ್ಲಿ ನಟಿಸಲು ಮೆಹ್ರೀನ್ ಪಿರ್ಜಾದಾ ಸಹಿ ಹಾಕಿದ್ದಾರೆ. ಚಿತ್ರದ ಮಹೂರ್ತಕ್ಕೂ ಇವರು ಬಂದಿದ್ದರು. ಆ ಬಳಿಕ ಚಿತ್ರದ ಶೂಟಿಂಗ್‌ ನಡೆದಿಲ್ಲ.

ಎದೆ ಸೀಳು ಕಾಣುವಂತೆ ಬಟ್ಟೆ ಹಾಕ್ಕೊಂಡು ಮೊಬೈಲ್ ಫೋನ್‌ನಿಂದ ಮಾನ ಮುಚ್ಚಿಕೊಳ್ಳೋದೇಕೆ ಅನನ್ಯಾ?

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಮಹಿಳೆಯರು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved