MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ಮದುವೆಯಾಗಿದ್ಯಾ? ಹಾಗಿದ್ರೆ ಮಿಸ್ ಮಾಡದೇ ಈ 8 ನಿಯಮ ಪಾಲಿಸಿ…

ಮದುವೆಯಾಗಿದ್ಯಾ? ಹಾಗಿದ್ರೆ ಮಿಸ್ ಮಾಡದೇ ಈ 8 ನಿಯಮ ಪಾಲಿಸಿ…

ನಿಮ್ಮ ವೈವಾಹಿಕ ಜೀವನ ಸುಂದರವಾಗಿರಬೇಕು ಅಂದ್ರೆ ಒಂದಿಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತೆ. ಇಲ್ಲಿ ನೀಡಿರೋ ವಿಷಯಗಳನ್ನು ನೀವು ಪಾಲಿಸಿದ್ದೇ ಆದರೆ ವೈವಾಹಿಕ ಜೀವನ ಬೊಂಬಾಟ್ ಆಗಿರುತ್ತೆ.  

2 Min read
Pavna Das
Published : Jan 18 2025, 12:36 PM IST| Updated : Jan 18 2025, 01:14 PM IST
Share this Photo Gallery
  • FB
  • TW
  • Linkdin
  • Whatsapp
19

ಮದುವೆ ಒಂದು ಸುಂದರವಾದ ಪ್ರಯಾಣ (marriage is a journey) ಆದರೆ ಅದನ್ನು ಸಂತೋಷವಾಗಿ ಮತ್ತು ಯಶಸ್ವಿಯಾಗಿಡಲು ಪ್ರಯತ್ನ ಪಡಲೇಬೇಕು. ಈ ಸಂಬಂಧದಲ್ಲಿ ಅನುಸರಿಸಬೇಕಾದ 9 ನಿಯಮಗಳು ಇಲ್ಲಿವೆ. ಅವುಗಳನ್ನು ನೀವು ಪಾಲಿಸಿದ್ದೇ ಆದರೆ ನಿಮ್ಮ ವೈವಾಹಿಕ ಜೀವನ ಬೊಂಬಾಟ್ ಆಗಿರುತ್ತೆ. 
 

29

ಪರಸ್ಪರ ಚಿಯರ್ ಲೀಡರ್ ಆಗಿರಿ
ಕೆಲಸದಲ್ಲಿ ಪರಸ್ಪರ ಬೆಂಬಲಿಸಿ ಮತ್ತು ಒಬ್ಬರಿಗೊಬ್ಬರು ಸಲಗೆ ನೀಡಿ. ಉತ್ತಮ ಕೇಳುಗರಾಗಿ ಮತ್ತು ಉತ್ತಮ ಮಾತುಗಾರರಾಗಿ. ಅಂದರೆ, ಬೇಸರದ ಸಮಯದಲ್ಲೂ, ಸಂತೋಷದ ಸಮಯದಲ್ಲೂ ಒಬ್ಬರಿಗೊಬ್ಬರು ಸಾಥ್ ನೀಡಿ, ಚಿಯರ್ ಲೀಡರ್ (cheer leader) ಆಗಿ. 

39

ಬೇಗ ಕ್ಷಮಿಸಿ
ನಿಮ್ಮ ಸಂಗಾತಿ ಜೊತೆ ಸಂಬಂಧದಲ್ಲಿ ಕಹಿ ಅಥವಾ ಭಿನ್ನಾಭಿಪ್ರಾಯ ಉಂಟಾದಾಗ, ಅದನ್ನು ತುಂಬಾ ದಿನಗಳವರೆಗೆ ಮುಂದುವರೆಸಿಕೊಂಡು ಹೋಗಬೇಡಿ. ಬದಲಾಗಿ ಅವತ್ತೇ ಮರೆತುಬಿಡಿ, ಇಬ್ಬರು ಮತ್ತೆ ಒಂದಾಗಿ, ಬೇಗನೆ ಒಬ್ಬರನ್ನೊಬ್ಬರು ಕ್ಷಮಿಸಿ. 

49

ಸಮಯ ಏನೇ ಇರಲಿ ಬದ್ಧರಾಗಿರಿ
ಜೀವನದಲ್ಲಿ ಏರಿಳಿತಗಳು ಬರೋದು ಸಾಮಾನ್ಯ. ವೈವಾಹಿಕ ಜೀವನದಲ್ಲೂ(marriage life) ಇಂತಹ ಸಮಸ್ಯೆಗಳು ಬರೋದು ಸರ್ವೇ ಸಾಮಾನ್ಯ. ಇದರ ಹೊರತಾಗಿಯೂ, ನಿಮ್ಮ ಸಂಬಂಧದಲ್ಲಿ ನೀವು ಬದ್ಧರಾಗಿರೋದು, ಜೀವನದ ಪರೀಕ್ಷೆಯಲ್ಲಿ ಗೆಲ್ಲೋದಕ್ಕೆ ಸಾಧ್ಯವಾಗುತ್ತೆ. 

59

ಹಣಕಾಸಿನ ಬಗ್ಗೆ ಮುಕ್ತವಾಗಿ ಮಾತನಾಡಿ
ನಿಮ್ಮ ಮನೆ ಮತ್ತು ಸಂಬಂಧವು ನಿಮ್ಮದೇ ಆಗಿದೆ. ಉಳಿದ ವಿಷ್ಯಗಳನ್ನು ಮನಸ್ಸು ಬಿಚ್ಚಿ ಮಾತನಾಡುವಂತೆ, ಸಂಗಾತಿ ಜೊತೆ ಹಣದ ಬಗ್ಗೆ ಮುಕ್ತವಾಗಿ ಮಾತನಾಡಿ. ಉಳಿತಾಯ, ಹೂಡಿಕೆ, ಖರ್ಚು ಇವೆಲ್ಲವುಗಳ ಬಗ್ಗೆ ಮಾತನಾಡಿದರೆ, ಇದು ಅನಗತ್ಯ ಒತ್ತಡದಿಂದ ಸಂಬಂಧವನ್ನು ಉಳಿಸುತ್ತದೆ.

69

ಸ್ಪಾರ್ಕ್ ಯಾವಾಗಲೂ ಇರಲಿ
ಮದುವೆಯೊಂದಿಗೆ ಬರುವ ಜವಾಬ್ದಾರಿಗಳು ನಿಮ್ಮ ನಡುವಿನ ಕಿಡಿಯನ್ನು ಕಡಿಮೆ ಮಾಡಲು ಬಿಡಬೇಡಿ. ಆವಾಗವಾಗ ಸಣ್ಣ ಸಣ್ಣ ಸರ್ಪ್ರೈಸ್ ಗಳನ್ನು ನೀಡೋದನ್ನು ಮರಿಬೇಡಿ. ಜೊತೆಗೆ ಕಿಸ್, ಡೇಟ್ ನೈಟ್ (date night), ಸಣ್ಣ ಟ್ರಿಪ್ ಇದೆಲ್ಲವೂ ಇರಲಿ. 
 

79

ಜೋಕ್ಸ್ ಮಾಡಿ ನಗಿ

ಸಂಬಂಧ ಗಟ್ಟಿಯಾಗಿರಬೇಕು ಅಂದ್ರೆ ಅದರಲ್ಲಿ ನಗುವಿಗೂ ಜಾಗಬೇಕು. ಹಾಗಾಗಿ ಒಬ್ಬರನ್ನೊಬ್ಬರು ಕಾಲೆಳೆಯಿರಿ, ಜೋಕ್ಸ್ ಮಾಡಿ ನಗಿ, ಇದರಿಂದ ಜೀವನ ತುಂಬಾನೆ ಖುಷಿಯಾಗಿರುತ್ತೆ. 

89

ನೋಯಿಸಬೇಡಿ
ಒಬ್ಬರನ್ನೊಬ್ಬರು ಅವಮಾನಿಸಬೇಡಿ. ಮಾತನಾಡುವಾಗ ಯಾವಾಗಲೂ ನಿಮ್ಮ ಭಾಷೆಯನ್ನು ಸಭ್ಯವಾಗಿ ಮತ್ತು ಗೌರವಯುತವಾಗಿರಿಸಿಕೊಳ್ಳಿ. ಸಂಬಂಧದಲ್ಲಿ ಇದು ತುಂಬಾನೆ ಮುಖ್ಯ. ಒಬ್ಬರನ್ನು ನೋಯಿಸಿದ್ರೆ, ಅವಮಾನ ಮಾಡಿದ್ರೆ ಸಂಬಂಧ ಹಳಸಿ ಹೋಗಬಹುದು. ಹಾಗಾಗಿ ಈ ರೀತಿ ಆಗದಂತೆ ತಡೆಯಿರಿ. 
 

99

ಕೋಪದಲ್ಲಿ ಮಲಗಬೇಡಿ
ಜಗಳವಾಡಿದ ನಂತರ ಅಥವಾ ಪರಸ್ಪರ ವಾದಿಸಿದ ನಂತರ ಕೋಪದಲ್ಲಿ ಎಂದಿಗೂ ಮಲಗಬೇಡಿ. ವಿಷಯಗಳನ್ನು ಆರಾಮವಾಗಿ ಕೂತು ಚರ್ಚಿಸಿ, ಬಳಿಕ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಸಾರಿ ಕೇಳಿ ಮಲಗಿ, ಇದರಿಂದ ಸಂಬಂಧ ಚೆನ್ನಾಗಿರುತ್ತೆ. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved