ಸಂಗಾತಿ ದೊಡ್ಡವರಾಗಿದ್ರೆ, ಸಂಬಂಧ ಹೀಗ್ ನಿಭಾಯಿಸಬಹುದು!
ಪ್ರೀತಿ ಕುರುಡು ಎಂದು ಹೆಚ್ಚಿನವರು ಹೇಳ್ತಾರೆ ಮತ್ತು ಅನೇಕ ಸಂದರ್ಭಗಳಲ್ಲಿ ಇದು ನಿಜ ಅನ್ನೋದು ಪ್ರೂವ್ ಆಗಿದೆ. ಪ್ರೀತಿಯಲ್ಲಿ ಬಿದ್ದವರು ಸಂಗಾತಿಯ ವಯಸ್ಸನ್ನು ನೋಡೋದಿಲ್ಲ. ಬಹುಶಃ, ಅವಳು 31 ವರ್ಷದವಳಾಗಿರಬಹುದು ಮತ್ತು ಅವನಿಗೆ 25 ವರ್ಷ, ಆದರೆ ಅವರಿಬ್ಬರ ಮಧ್ಯ ಹೇಳಲಾಗದ ಕೆಮಿಸ್ಟ್ರಿ ಇರುತ್ತೆ, ಅಥವಾ ಅವನು ತನಗಿಂತ 10 ವರ್ಷ ದೊಡ್ಡವನಾಗಿದ್ದರೂ ಸಹ ದಂಪತಿ ಸುಂದರವಾದ ಸಂಬಂಧವನ್ನು ಹೊಂದಿರಬಹುದು. ಅಷ್ಟಕ್ಕೂ ಹೆಚ್ಚಿಗೆ ಗ್ಯಾಪ್ ಇರುವ ಸಂಬಂಧಗಳ ಬಾಂಡಿಂಗ್ ಸ್ಟ್ರಾಂಗ್ ಆಗಿಡೋದು ಹೇಗೆ?
ನಾವು ಹಿಂದಿನಿಂದ ನಂಬಿಕೊಂಡು ಬಂದಿರುವ ಒಂದು ಸಂಪ್ರದಾಯ ಎಂದರೆ ಪತಿಯ ವಯಸ್ಸು ಪತ್ನಿಯ ವಯಸ್ಸಿಗಿಂತ ಹೆಚ್ಚಾಗಿರಬೇಕು ಎಂದು. ಆದರೆ ಇವು ನಿಜ ಅಲ್ಲ. ದಂಪತಿಗಳಲ್ಲಿ ಮಹಿಳೆ ಪುರುಷನಿಗಿಂತ ವಯಸ್ಸಿನಲ್ಲಿ ಚಿಕ್ಕವಳಾಗಿರಬೇಕೆಂದೇನಿಲ್ಲ. ನೀವು ಸಹ ಇದನ್ನು ನಂಬುತ್ತೀರಿ ಎಂದಾದ್ರೆ ಮತ್ತು ನಿಮ್ಮ ಸಂಗಾತಿ ನಿಮಗಿಂತ ದೊಡ್ಡವರಾಗಿದ್ರೆ, ಸಂಬಂಧವನ್ನು(Relationship) ಕಾಪಾಡಿಕೊಳ್ಳಲು ನೀವು ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.
ನಿಮ್ಮ ರಿಲೇಶನ್ ಶಿಪ್ ನಲ್ಲೂ ಹುಡುಗಿಗಿಂತ, ಹುಡುಗ ಸಣ್ಣವರಾಗಿದ್ದರೆ, ಇಲ್ಲಿ ಹೇಳಿರುವ ಸಲಹೆಗಳನ್ನು ಪಾಲಿಸಿ. ಇದರಿಂದ ನೀವಿಬ್ಬರೂ ನಿಮ್ಮ ಸಂಬಂಧವನ್ನು ಬಲಪಡಿಸಲು ಸಾಧ್ಯವಾಗುತ್ತೆ. ಈ ರಿಲೇಷನ್‌ಶಿಪ್ ಟಿಪ್ಸ್(Relation tips) ನಿಮಗೆ ತುಂಬಾ ಉಪಯುಕ್ತವಾಗುತ್ತೆ. ಈ ಟಿಪ್ಸ್ ಫಾಲೋ ಮಾಡಿ ನೋಡಿ. ಐಡಿಯಲ್ ಕಪಲ್ಸ್ ನೀವಾಗುವಿರಿ.
ನೀವು ಪರಸ್ಪರರಿಂದ ಏನನ್ನು ಬಯಸುತ್ತೀರಿ?
ಈ ವಯಸ್ಸಿನ ವ್ಯತ್ಯಾಸ ನಿಮ್ಮಿಬ್ಬರ ನಡುವಿನ ಪ್ರೀತಿ ಕಡಿಮೆ ಮಾಡಲು ಸಾಧ್ಯವಾಗೋದಿಲ್ಲ, ಆದರೆ ಸೋಶಿಯಲ್ ಇಶ್ಯೂಸ್ ನಿಮ್ಮಿಬ್ಬರ ನಡುವೆ ಅನೇಕ ಬಾರಿ ಬರಬಹುದು. ಆದ್ದರಿಂದ ಪರಸ್ಪರರಿಂದ ನಿಮ್ಮ ನಿರೀಕ್ಷೆಗಳು(Expectation) ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳುವುದು, ಸಂಬಂಧದ ಮಾಧುರ್ಯತೆ ಹೆಚ್ಚಲು ಸಹಾಯ ಮಾಡುತ್ತೆ.
ಸಂಬಂಧದಲ್ಲಿ ಪರಸ್ಪರ ಏನು ಬಯಸುತ್ತಾರೆ ಅನ್ನೋದನ್ನು ತಿಳಿದರೆ, ಯಾವುದೇ ಸಮಸ್ಯೆ ಉದ್ಭವಿಸಿದಾಗಲೆಲ್ಲಾ, ನಿಮ್ಮಿಬ್ಬರ ನಡುವಿನ ರಿಲೇಷನ್‌ಶಿಪ್ ಹದಗೆಡೋದಿಲ್ಲ. ಸಂಬಂಧ ಉತ್ತಮವಾಗಿರುತ್ತೆ. ಕನಿಷ್ಠ ಪಕ್ಷ ನಿಮ್ಮಿಬ್ಬರ ವಯಸ್ಸಿನ ವ್ಯತ್ಯಾಸವು(Age difference) ನಿಮ್ಮಿಬ್ಬರ ನಡುವೆ ಬರಬಾರದು ಎಂಬುದನ್ನು ನೆನಪಿನಲ್ಲಿಡಿ.
ಅವಳು ದೊಡ್ಡವಳು
ನಿಮ್ಮ ಸಂಗಾತಿ ನಿಮಗಿಂತ ದೊಡ್ಡವರು, ಆದ್ದರಿಂದ ಅವರಿಂದ ಎಲ್ಲಾ ತಿಳುವಳಿಕೆಯನ್ನು ನಿರೀಕ್ಷಿಸೋದು ಸರಿಯಲ್ಲ. ಅವಳು ವಯಸ್ಸಿನಲ್ಲಿ ದೊಡ್ಡವಳಾಗಿರಬಹುದು ಆದರೆ ಅವಳು ತನ್ನ ಪ್ರೇಮಿಯ(Lover) ನಡವಳಿಕೆಯಲ್ಲಿ ಪ್ರೀತಿ ಮಾತ್ರ ಬಯಸುತ್ತಾಳೆ. ಅವರು ಹಾಗೆ ಯೋಚಿಸೋದ್ರಲ್ಲಿ ತಪ್ಪೇನಿಲ್ಲ. ವಯಸ್ಸಿನಲ್ಲಿ ಹಿರಿಯರಾದ ಮಾತ್ರಕ್ಕೆ ಯಾವಾಗಲೂ ಎಲ್ಲವನ್ನೂ ನಿಭಾಯಿಸಬೇಕೆಂದಿಲ್ಲ ಆದರೆ ಆಕೆಯನ್ನು ಪ್ರೀತಿಸುವ ಸಂಗಾತಿ ಸಿಕ್ಕರೆ ಸಾಕು.
ಸಂಗಾತಿ(Partner) ದೊಡ್ಡವರಾಗಿದ್ದರೆ, ಎಲ್ಲವೂ ತಿಳಿದಿರಬೇಕೆಂದಿಲ್ಲ
ನಿಮ್ಮ ಸಂಗಾತಿ ನಿಮಗಿಂತ ದೊಡ್ಡವರಾಗಿದ್ದರೆ, ಒಂದು ಹಂತದಲ್ಲಿ ಅವಳು ಖಂಡಿತವಾಗಿಯೂ ತನ್ನ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾಳೆ. ಕೆಲವೊಮ್ಮೆ ನಿಮಗೆ ಅವರಿಗಿಂತ ಕಡಿಮೆ ವಿಷಯ ತಿಳಿದಿರಬಹುದು. ಆಗ ನೀವು ಅವರ ಮಾತುಗಳಿಗೆ ಬೆಲೆ ಕೊಡಬೇಕು. ಕೆಲವೊಮ್ಮೆ ಅವರಿಗೆ ಕೆಲವು ವಿಷಯಗಳು ತಿಳಿದಿರದೇ ಇರಬಹುದು, ಆವಾಗ ನೀವು ಎಲ್ಲವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರಬೇಕು.
ಇಬ್ಬರ ಆಯ್ಕೆಗಳು ಡಿಫರೆಂಟ್(Different) ಆಗಿರಬಹುದು
ಈ ವಯಸ್ಸಿನ ವ್ಯತ್ಯಾಸದಿಂದಾಗಿ, ನಿಮ್ಮಿಬ್ಬರ ಆಯ್ಕೆಯೂ ವಿಭಿನ್ನವಾಗಿರಬಹುದು. ಇದು ಯಾವಾಗಲೂ ಸಂಭವಿಸದಿದ್ದರೂ, ಆಗಾಗ ಸಂಭವಿಸಬಹುದು. ಅವರಿಗೆ ನಿಮ್ಮ ವಯಸ್ಸಿನಲ್ಲಿ ಡಿಸ್ಕೋ ಗೆ ಹೋಗಲು ಇಷ್ಟವಿರಬಹುದು, ಆದರೆ ಈಗ ಅವರಿಗೆ ಅದು ಚೈಲ್ಡಿಶ್ ಅನಿಸಬಹುದು. ಆದ್ದರಿಂದ ನೀವು ಸಂಬಂಧದಲ್ಲಿ ಪ್ರೀತಿ ಉಳಿಸಿಕೊಳ್ಳಲು ಈ ಆಯ್ಕೆಯ ವ್ಯತ್ಯಾಸವನ್ನು ಒಪ್ಪಿಕೊಳ್ಳಲೇಬೇಕು.
ನಿಮ್ಮ ಸಂಗಾತಿ ಅಷ್ಟು ಮೆಚ್ಯುರ್(Mature) ಆಗಿರದೇ ಇರಬಹುದು
ವಯಸ್ಸಾದ್ದರೂ ಪ್ರಬುದ್ಧತೆ ಇರುತ್ತೆ ಎನ್ನೋದು ಗ್ಯಾರಂಟಿ ಇಲ್ಲ. ನೀವು ಮೆಚ್ಯುರ್ ಮತ್ತು ಸಂವೇದನಾಶೀಲ ಸಂಗಾತಿಯನ್ನು ಕಂಡುಕೊಳ್ಳುವ ಕಾರಣದಿಂದಾಗಿ ನಿಮಗಿಂತ ದೊಡ್ಡ ಸಂಗಾತಿಯನ್ನು ಬಯಸಿದರೆ, ನೀವು ಈ ಆಲೋಚನೆಯನ್ನು ಬದಲಾಯಿಸಬೇಕಾಗಬಹುದು. ಯಾಕಂದ್ರೆ ವಯಸ್ಸಾದ ವ್ಯಕ್ತಿಗಳೆಲ್ಲಾ ಮೆಚ್ಯೂರ್ ಆಗಿ ಯೋಚನೆ ಮಾಡುತ್ತಾರೆ ಎಂದು ಹೇಳಲಾರದು.
ನಿಮಗಿಂತ ಹಿರಿಯ ವಯಸ್ಸಿನ ಸಂಗಾತಿ, ಅವರ ವಯಸ್ಸಿಗೆ ಅನುಗುಣವಾಗಿ ಪ್ರಬುದ್ಧರಾಗಿರಬೇಕೆಂದೇನಿಲ್ಲ. ಅವಳು ಒಂದು ವಯಸ್ಸಿನ ನಂತರವೂ ಚೈಲ್ಡಿಶ್(Childish) ಆಗಿರಬಹುದು. ಆವಾಗ ನೀವು ಅವರ ಈ ಗುಣಗಳ ಬಗ್ಗೆ ತಲೆಕೆಡಿಸಿಕೊಳ್ಳದೇ, ನೀವು ಇದನ್ನು ಸಹ ಒಪ್ಪಿಕೊಳ್ಳಬೇಕು.ಆಗ ಮಾತ್ರ ಹ್ಯಾಪಿ ಲೈಫ್ ನಿಮ್ಮದಾಗುತ್ತೆ.