MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • Tina Dabi -Pradeep Gawande: ಐಎಎಸ್ ಅಧಿಕಾರಿ ಟೀನಾ ದಾಬಿ- ಪ್ರದೀಪ್ ಗವಾಂಡೆ ಲವ್ ಸ್ಟೋರಿ

Tina Dabi -Pradeep Gawande: ಐಎಎಸ್ ಅಧಿಕಾರಿ ಟೀನಾ ದಾಬಿ- ಪ್ರದೀಪ್ ಗವಾಂಡೆ ಲವ್ ಸ್ಟೋರಿ

Tina Dabi-Pradeep Gawande Love Story |  ಟೀನಾ ದಾಬಿ 2015 ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಾಗಿನಿಂದ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಜನಪ್ರಿಯತೆಯಿಂದಾಗಿ ಸುದ್ದಿಯಲ್ಲಿದ್ದರು. ಅಲ್ಲದೇ ಇವರ ಒಂದಲ್ಲ ಒಂದು, ಸುದ್ದಿ ಸೋಶಿಯಲ್ ಮೀಡಿಯಾ, ಟಿವಿ ಮಾಧ್ಯಮಗಳಲ್ಲಿ ಹಾಟ್ ನ್ಯೂಸ್ ಆಗಿದ್ದು, ಸುಳ್ಳಲ್ಲ. ಇದೀಗ ತನಗಿಂತ 13 ವರ್ಷ ಹಿರಿಯ ಐಎಎಸ್ ಅಧಿಕಾರಿ ಜೊತೆ ಮದ್ವೆಯಾಗಿರೋ ಟೀನಾ ಅವರ ಲವ್ ಸ್ಟೋರಿ ಇಲ್ಲಿದೆ. 

2 Min read
Suvarna News
Published : Mar 11 2023, 12:35 PM IST
Share this Photo Gallery
  • FB
  • TW
  • Linkdin
  • Whatsapp
18

ಭಾರತೀಯ ಆಡಳಿತ ಸೇವೆ (IAS officer) ಅಧಿಕಾರಿ ಟೀನಾ ದಾಬಿ (tina Dabi) ದೇಶದ ಅತ್ಯಂತ ಪ್ರಸಿದ್ಧ ಐಎಎಸ್ ಅಧಿಕಾರಿ. ಅವರು ಐಎಎಸ್ ಅಧಿಕಾರಿ ಪ್ರದೀಪ್ ಗವಾಂಡೆ ಅವರನ್ನು ವಿವಾಹವಾಗಿದ್ದು, ಇವರಿಬ್ಬರ ನಡುವಿನ ಏಜ್ ಗ್ಯಾಪ್ 13 ವರ್ಷ. ಟೀನಾ - ಪ್ರದೀಪ್ ಮ್ಯಾರೇಜ್ ಸ್ಟೋರಿ ಬಗ್ಗೆ ಇಲ್ಲಿ ಒಂದಿಷ್ಟು ಇಂಟ್ರೆಸ್ಟಿಂಗ್ ಮಾಹಿತಿ ನೀಡಲಾಗಿದೆ. ನೀವೂ ಓದಿ… 

28

ಕಳೆದ ವರ್ಷ ಟೀನಾ ದಾವಿ, ಐಎಎಸ್ ಅಧಿಕಾರಿ ಡಾ. ಪ್ರದೀಪ್ ಗವಾಂಡೆ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಇದು ಟೀನಾ ದಾಬಿ ಅವರ ಮೊದಲ ಮದುವೆಯಲ್ಲ. ಅವರು ಈ ಹಿಂದೆ ಐಎಎಸ್ ಅಧಿಕಾರಿ ಅಥರ್ ಅಮೀರ್ ಖಾನ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು, ಆವಾಗ ಇವರ ಮದ್ವೆ ಭಾರಿ ಸುದ್ದಿಯಾಗಿತ್ತು. ಬಳಿಕ ಅವರು ಪರಸ್ಪರ ವಿಚ್ಛೇದನ ಪಡೆದರು. ಅಥರ್ ಅಮೀರ್ ಖಾನ್ ಅವರು ಡಾ.ಮೆಹ್ರೀನ್ ಖಾಜಿ ಅವರನ್ನು ವಿವಾಹವಾದರು. ದಾಬಿ ಅವರು ಗವಾಂಡೆಯನ್ನು ವಿವಾಹವಾದರು. 

38

ಹಳೆಯ ಸಂದರ್ಶನವೊಂದರಲ್ಲಿ, ದಾಬಿ ವಿಚ್ಛೇದನದ ನೋವನ್ನು ಹಂಚಿಕೊಂಡಿದ್ದರು. ವಿಚ್ಛೇದನವು ಒಬ್ಬ ವ್ಯಕ್ತಿಯನ್ನು ಒಳಗಿನಿಂದ ಖಾಲಿ ಮಾಡುತ್ತದೆ ಎಂದು ಟೀನಾ ಹೇಳಿದ್ದರು. ವಿಚ್ಛೇದನವು ವ್ಯಕ್ತಿಯನ್ನು ಉದ್ವೇಗ ಮತ್ತು ದುಃಖದಿಂದ ತುಂಬುವಂತೆ ಮಾಡುತ್ತೆ ಎಂದು ಅವರು ಹೇಳಿದ್ದರು. ಇದೀಗ ಎಲ್ಲಾ ನೋವುಗಳಿಂದ ಹೊರ ಬಂದು, ಟೀನಾ ದಾಬಿ ಈಗ ಡಾ.ಗವಾಂಡೆ ಅವರನ್ನು ಮದ್ವೆಯಾಗಿ ಸಂತೋಷವಾಗಿದ್ದಾರೆ. ತಮ್ಮ ಪತಿ ಜೊತೆಗಿನ ಹಲವಾರು ಫೋಟೋಗಳನ್ನು ಟೀನಾ ಸೋಶಿಯಲ್ ಮೀಡಿಯಾದಲ್ಲೂ (social media) ಶೇರ್ ಮಾಡುತ್ತಾ ತಮ್ಮ ಸಂತಸ ಹಂಚಿಕೊಳ್ಳುತ್ತಿರುತ್ತಾರೆ.

48

ಟೀನಾ ದಾಬಿ 2015 ರ ಯುಪಿಎಸ್ಸಿ ಪರೀಕ್ಷೆಯಲ್ಲಿ (Topped UPSC 2015) ಅಗ್ರಸ್ಥಾನದಲ್ಲಿದ್ದರು. ಅಂದಿನಿಂದ, ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಜನಪ್ರಿಯತೆಯಿಂದಾಗಿ ಸುದ್ದಿಯಲ್ಲಿದ್ದರು. ಸದ್ಯ ಅವರು ಜೈಸಲ್ಮೇರ್ ನ ಜಿಲ್ಲಾಧಿಕಾರಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ, ಅವರನ್ನು ಬ್ಯೂಟಿ ವಿತ್ ಬ್ರೈನ್ ಎಂದು ಕರೆಯಲಾಗುತ್ತದೆ. ಟೀನಾ ದಾಬಿ ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಫಾಲೋವರ್ ಗಳನ್ನು ಸಹ ಹೊಂದಿದ್ದಾರೆ.
 

58

ಹಿಂದಿನ ಸಂದರ್ಶನವೊಂದರಲ್ಲಿ, ಟೀನಾ ದಾಬಿ ಅವರು ಡಾ.ಗವಾಂಡೆ ಅವರೊಂದಿಗಿನ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದರು. ವಿಚ್ಛೇದನದ ನೋವಿನಿಂದ (pain of divorce) ಹೊರಬರಲು, ಅವರು ಕೆಲಸದಲ್ಲಿ ಬ್ಯುಸಿಯಾಗಿರುತ್ತಿದ್ದರಂತೆ. ಈ ಸಂದರ್ಭದಲ್ಲಿ ಗವಾಂಡೆ ಜೊತೆಗೆ ಸ್ನೇಹ, ಮದುವೆ ಎಲ್ಲಾ ಹೇಗೆ ಆಯಿತು ಅನ್ನೊದನ್ನು ಅವರೇ ಹೇಳಿದ್ದಾರೆ. 

68

ಎರಡನೇ ಕರೋನವೈರಸ್ ಅಲೆಯ ಸಮಯದಲ್ಲಿ, ಅವರು ರಾಜಸ್ಥಾನದ ಆರೋಗ್ಯ ಇಲಾಖೆಯಲ್ಲಿ ಡಾ.ಗವಾಂಡೆ (Dr. Pradeep Gawande)ಅವರನ್ನು ಭೇಟಿಯಾದರು. ಅಂದಿನಿಂದ ಇಬ್ಬರೂ ನಿಜವಾಗಿಯೂ ಉತ್ತಮ ಸ್ನೇಹಿತರಾಗಿದ್ದರಂತೆ. ನಂತರ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡರು. ಒಂದು ವರ್ಷದ ನಂತರ, ಅವರು ಮದುವೆಯಾಗಲು ನಿರ್ಧರಿಸಿದರಂತೆ, ಬಳಿಕ ಇಬ್ಬರ ಕುಟುಂಬಗಳು ಒಪ್ಪಿಗೆ ನೀಡಿ, ಮದುವೆ ಮಾತುಕತೆ ಕೂಡ ನಡೆಸಿದರಂತೆ. 

78

ಟೀನಾ ದಾಬಿ (Tina Dabi) ಅವರು ಡಾ.ಗವಾಂಡೆ ಅವರಿಗಿಂತ 13 ವರ್ಷ ಚಿಕ್ಕವರು. ಈ ಬಗ್ಗೆ ಮಾತನಾಡುವ ಟೀನಾ ಮದುವೆಗೆ ವಯಸ್ಸು ಮುಖ್ಯವಲ್ಲ, ಹೊಂದಾಣಿಕೆ ಮತ್ತು ತಿಳುವಳಿಕೆ ಮುಖ್ಯ ಎಂದು ಅವರು ಹೇಳುತ್ತಾರೆ. ಇನ್ನು ಟೀನಾ ಅವರಿಗೆ ಇದು ಎರಡನೇ ಮದುವೆಯಾಗಿದ್ದರೂ, ಗವಾಂಡೆ ಅವರಿಗೆ ಇದು ಮೊದಲನೆ ಮದುವೆ. 
 

88

ಪ್ರದೀಪ್ ಗವಾಂಡೆ ತಾವಾಗಿಯೇ ಮದುವೆ ಬಗ್ಗೆ ಪ್ರಪೋಸ್ ಮಾಡಿದ್ದಾಗಿ ಹೇಳುವ ಟೀನಾ, ಪ್ರದೀಪ್ ಉತ್ತಮ ಮನುಷ್ಯ, ಅವರ ಗುಣ ನಡತೆ ಎಲ್ಲವೂ ನನಗೂ, ನನ್ನ ಮನೆಯವರಿಗೂ ಇಷ್ಟವಾಗಿತ್ತು.. ನಮ್ಮ ಕುಟುಂಬ ಸದಸ್ಯರು ಕೂಡ ಅವರೊಂದಿಗೆ ತುಂಬಾ ಸಂತೋಷವಾಗಿದ್ದಾರೆ. ಏಕೆಂದರೆ ಪ್ರದೀಪ್ ಒಬ್ಬ ವೈದ್ಯ ಮತ್ತು ಐಎಎಸ್ ಅಧಿಕಾರಿ (doctor and IAS officer) ಎನ್ನುತ್ತಾರೆ ಟೀನಾ ದಾಬಿ. 
 

About the Author

SN
Suvarna News
ಐಎಎಸ್
ಯುಪಿಎಸ್ಸಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved