Male ego ನಿಮಗೂ ಇದೆಯೇ? ಬಿಟ್ ಬಿಡಿ… ಸಂಬಂಧ ಚೆನ್ನಾಗಿರುತ್ತೆ
'ಮೇಲ್ ಇಗೋ' ನೀವು ಇದನ್ನು ಕೇಳಿರಬಹುದು. ಅಥವಾ ನೀವು ಇದನ್ನು ಹೇಳಿರಬಹುದು, ಆದರೆ ಒಂದು ಹಂತದಲ್ಲಿ ಎಲ್ಲಾರು ಇದನ್ನು ಹೇಳೆ ಹೇಳಿರ್ತಾರೆ. ಅಥವಾ ಈ ಮೇಲ್ ಇಗೋ ನಿಮ್ಮೊಳಗೆ ಇರಬಹುದು ಮತ್ತು ನಿಮಗೆ ಅರ್ಥವಾಗದೇಯಿರಬಹುದು. ಅನೇಕ ಬಾರಿ ಆಲೋಚನಾ ವಿಧಾನ ಮತ್ತು ಸಂಪ್ರದಾಯವಾದಿ ಚಿಂತನೆಯು ಮೇಲ್ ಇಗೋ ಗೆ ಕಾರಣವಾಗುತ್ತೆ. ಈ ಮೇಲ್ ಇಗೋ ಬಗ್ಗೆ ತಿಳಿದುಕೊಳ್ಳಬೇಕು ಅನ್ನೋದಾದ್ರೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಈ ಮೇಲ್ ಇಗೋ ಕೆಲವೊಮ್ಮೆ ಸಂಬಂಧಗಳು ದೂರವಾಗಲು ಕಾರಣವಾಗುತ್ತೆ. ಆದ್ದರಿಂದ, ಈ ಮೇಲ್ ಇಗೋ ಗುರುತಿಸೋದು ಮತ್ತು ನಕಾರಾತ್ಮಕ ಆಲೋಚನೆ ಮತ್ತು ಪರಿಸ್ಥಿತಿಗಳಿಂದ ನಿಮ್ಮನ್ನು ದೂರವಿಡೋದು ಬಹಳ ಮುಖ್ಯ. ಇದಕ್ಕಾಗಿ, ಮೇಲ್ ಇಗೋ ಗುರುತಿಸೋದು ಮತ್ತು ಅದನ್ನು ತೊಡೆದುಹಾಕುವ ಮಾರ್ಗಗಳ ಬಗ್ಗೆ ಮಾತನಾಡೋದು ಬಹಳ ಮುಖ್ಯ. ಇಲ್ಲಿದೆ ನೋಡಿ ಕೆಲವು ಟಿಪ್ಸ್.
ಮೇಲ್ ಇಗೋ ಎಂದರೇನು?
ಮೇಲ್ ಇಗೋ (male ego) ಎಂಬುದು ಸುತ್ತಲಿನ ಜನರ ಬಗ್ಗೆ ಯೋಚಿಸದೆ ನಿಮ್ಮ ಸ್ವಂತ ಸುಧಾರಣೆಗಾಗಿ ಮಾತ್ರ ಕೆಲಸ ಮಾಡಲು ಒತ್ತಡವನ್ನು ಹೇರುವ ಆಲೋಚನೆಯಾಗಿದೆ. ಪುರುಷರು ತಮ್ಮ ಆಲೋಚನೆಗಳಿಗೆ ಅನುಗುಣವಾಗಿ ಮಾತ್ರ ಮುಂದುವರಿಯುತ್ತಾರೆ ಮತ್ತು ತಮ್ಮ ಬಗ್ಗೆ ಯೋಚಿಸುತ್ತಾರೆ. ಅಲ್ಲದೇ ಸಾಮಾಜಿಕವಾಗಿ ಮತ್ತು ಸಾಂಪ್ರದಾಯಿಕವಾಗಿ ಯೋಚಿಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ.
ಪುರುಷರು ಉತ್ತಮರು...
ಮೇಲ್ ಇಗೋ ಪುರುಷರಿಗೆ ಅವರು ಮಹಿಳೆಯರಿಗಿಂತ ಉತ್ತಮ ಎಂದು ಭಾವಿಸೋ ಹಾಗೆ ಮಾಡುತ್ತೆ. ಅವರು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಮಹಿಳೆಯರಿಗಿಂತ ಬಲಶಾಲಿಗಳು (stronger than women) ಎಂದು ಯೋಚಿಸುತ್ತಾರೆ. ಆದರೆ ವಾಸ್ತವವೇ ಬೇರೆ. ಪುರುಷರು ಅಹಂಕಾರದಿಂದ, ತಮ್ಮನ್ನು ತಾವು ಸಾಮಾಜಿಕ ಕೊರತೆಯಿಂದ ಮುಚ್ಚಿಕೊಳ್ಳುತ್ತಾರೆ, ಇದರಲ್ಲಿ ಪುರುಷರನ್ನು ಮೇಲು ಮತ್ತು ಮಹಿಳೆಯರನ್ನು ಕೀಳು ಎಂದು ಪರಿಗಣಿಸಲಾಗುತ್ತೆ.
ಈ ಕಾರಣದಿಂದಾಗಿ, ಪುರುಷರು ಆಗಾಗ್ಗೆ ತಪ್ಪು ಮಾಡುತ್ತಲೇ ಇರುತ್ತಾರೆ, ಅದು ಅವರ ಇಮೇಜ್ ಅನ್ನು ನಕಾರಾತ್ಮಕವಾಗಿಸುತ್ತೆ. ಅಂತಹ ಪುರುಷರು ಎಲ್ಲದರಲ್ಲೂ ಹುಡುಗಿಯರ ಕೆಲಸ ಎಂದು ಹೇಳುವ ಮೂಲಕ ಮಹಿಳೆಯರು ಮತ್ತು ಪುರುಷರ ನಡುವೆ ವ್ಯತ್ಯಾಸವನ್ನುಂಟು ಮಾಡುತ್ತಾರೆ.
ನಿಮ್ಮ ಜೀವನವು ಮೇಲ್ ಇಗೋ ವನ್ನು ಒಳಗೊಂಡಿದ್ದರೆ, ನೀವು ಎಲ್ಲಾ ಕೆಲಸವನ್ನು ನಾನೇ ಮಾಡೋದು ಎಂದು ಅಂದುಕೊಳ್ಳುತ್ತೀರಿ. ನೀವು ಹಾಗೆ ಯೋಚಿಸುತ್ತೀರಾ? ನಿಮ್ಮ ಉತ್ತರ ಹೌದು ಎಂದಾದಲ್ಲಿ, ಆಗ ನೀವು ನಿಮ್ಮೊಳಗೆ ಇತರ ಕೆಲವು ವಿಷಯಗಳನ್ನು ಸಹ ಕೇಳಿಕೊಳ್ಳಿ, ಅವುಗಳೆಂದರೆ-
ಮಹಿಳೆಯರ ನಡುವೆ ನೀವು ಹೆಡ್ ಆಗಿದ್ದೀರಾ?
ನೀವು ಶಕ್ತಿಶಾಲಿಯಾಗಿದ್ದೀರಾ ?
ಕುಟುಂಬವನ್ನು ನೋಡಿಕೊಳ್ಳೋದು, ಅದಕ್ಕಾಗಿ ಸಂಪಾದಿಸೋದು ಸಹ ನಿಮ್ಮ ಜವಾಬ್ದಾರಿಯಾಗಿದೆಯೇ?.
ಇವೆಲ್ಲದ್ದಕ್ಕೂ ನಿಮ್ಮ ಉತ್ತರ ಹೌದು ಎಂದಾದಲ್ಲಿ ನಿಮ್ಮಲ್ಲಿ ಮೇಲ್ ಇಗೋ ಇದೆ ಎಂದು ಅರ್ಥ.
ಹುಡುಗರು ಅಳೋದಿಲ್ಲ
ಹೌದು, ಬಾಲ್ಯದಿಂದಲೂ 'ಹುಡುಗರು ಅಳೋದಿಲ್ಲ' (boys don't cry) ಅಳಬಾರದು ಎಂದು ಕೇಳುವ ಪುರುಷರು ಸಹ ಸಾಕಷ್ಟು ಮೇಲ್ ಇಗೋ ಹೊಂದಿರುತ್ತಾರೆ. ಅವನು ತೊಂದರೆಗೆ ಸಿಲುಕಿದಾಗಲೆಲ್ಲಾ, ಅವನು ತನ್ನ ಭಾವನೆಯನ್ನು ಯಾರ ಮುಂದೆಯೂ ಹೇಳೋದಿಲ್ಲ. ಈ ಕಾರಣದಿಂದಾಗಿ, ಅವರಲ್ಲಿ ಕೋಪ ಹೆಚ್ಚಾಗುತ್ತೆ. ಯಾರ ಮುಂದೆಯೂ ಅವರು ಅಳಲು ಇಷ್ಟಪಡೋದಿಲ್ಲ. ಆದರೆ ಅವರು ಈ ಎಲ್ಲಾ ಭಾವನೆಗಳನ್ನು ಕೋಪವಾಗಿ ಹೊರತರುತ್ತಾರೆ.
ಮೇಲ್ ಇಗೋ ಬಗ್ಗೆ ಗೊಂದಲ
ಮೇಲ್ ಇಗೋಗೆ ಸಂಬಂಧಿಸಿದ ಕೆಲವು ಗೊಂದಲಗಳು ಸಹ ಇವೆ. ಇದು ಸರಿ ಎಂದು ಹೆಚ್ಚಿನ ಜನರು ನಂಬುತ್ತಾರೆ. ಆದರೆ ಕೆಲವು ವಿಷಯಗಳು ನಿಜವಾಗಿಯೂ ಕೇವಲ ಆಲೋಚನೆಗೆ ಸೀಮಿತವಾಗಿರುತ್ತೆ, ಅವುಗಳೆಂದರೆ-
ಮೇಲ್ ಇಗೋ ಹೊಂದಿರುವ ಪುರುಷನು ಯಾವಾಗಲೂ ಮಹಿಳೆಯರು ಜೀವನದಲ್ಲಿ ಮುಂದೆ ಬರೋದನ್ನ ಸಹಿಸಲಾರರು.
ಪುರುಷರು ಅಳಬಾರದು ಎಂದು ಹೇಳಿರೋದನ್ನು ನೀವು ಕೇಳಿರುವಿರಿ, ಆದರೆ ಕಾಲ ಸ್ವಲ್ಪ ಬದಲಾಗಿದೆ, ಪುರುಷರು ಸಹ ಈಗ ತಮ್ಮ ಭಾವನೆಗಳನ್ನು ಎಲ್ಲರ ಮುಂದೆ ತರುತ್ತಿದ್ದಾರೆ ಮತ್ತು ಅವರಿಗೆ ಅದರಲ್ಲಿ ಯಾವುದೇ ಸಮಸ್ಯೆಯಿಲ್ಲ. ತಮ್ಮ ಮನಸ್ಸನ್ನು ಹಗುರ ಮಾಡಲು ಪುರುಷರು ಅಳುತ್ತಾರೆ.
ಪುರುಷರ ಅಹಂ ಬೇಗನೆ ಘಾಸಿಗೊಳ್ಳುತ್ತೆ ಎಂದು ಮಹಿಳೆಯರು ಹೆಚ್ಚಾಗಿ ಭಾವಿಸುತ್ತಾರೆ. ಆದಾರೆ ಎಲ್ಲಾ ಸಂದರ್ಭದಲ್ಲಿ ಇದು ನಿಜ ಆಗಿರೋದಿಲ್ಲ. ಪುರುಷರು ಸಹ ಈಗ ಹೆಚ್ಚಿನ ಸಂದರ್ಭಗಳಲ್ಲಿ ತಲೆಬಾಗಲು ಸಿದ್ಧರಾಗಿದ್ದಾರೆ. ಇದು ಅನೇಕ ಸಂದರ್ಭಗಳಲ್ಲಿಯೂ ಕಂಡುಬಂದಿದೆ.
ಪುರುಷರು ತಮ್ಮನ್ನು ತಾವು ಬುದ್ಧಿವಂತರೆಂದು ಪರಿಗಣಿಸುತ್ತಾರೆ. ಅದು ಹಾಗಲ್ಲ, ಈಗ ಪುರುಷರು ಸಹ ತಮಗಿಂತ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಅವರಿಗೂ ಸಹ ಹೆಚ್ಚಿನ ಸ್ಥಾನ ಮಾನ ಸಿಗಲು ಪ್ರಯತ್ನಿಸುತ್ತಿದ್ದಾರೆ. ಅವರ ಬೆನ್ನೆಲುಬಾಗಿ ಸಹ ನಿಲ್ಲುತ್ತಾರೆ.
ಮೇಲ್ ಇಗೋ ತೊಡೆದು ಹಾಕೋದು ಮುಖ್ಯ
ನಿಮ್ಮೊಳಗೆ ಮೇಲ್ ಇಗೋ ಇದ್ದರೆ, ಅದನ್ನು ಕೊನೆಗೊಳಿಸುವ ಬಗ್ಗೆ ನೀವು ಯೋಚಿಸಬೇಕು. ಇದಕ್ಕಾಗಿ, ನೀವು ನಿಮ್ಮಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕಾಗುತ್ತೆ. ಪುರುಷ ಅಹಂ ಅನ್ನು ತೊಡೆದುಹಾಕಿದ ನಂತರ, ನೀವು ಮುಕ್ತ ಮನಸ್ಸು ಮತ್ತು ಮುಕ್ತವಾಗಿ ಬದುಕಲು ಸಾಧ್ಯವಾಗುತ್ತೆ.
ಸ್ಪರ್ಧೆಯನ್ನು ಬಿಟ್ಟುಬಿಡಿ
ನೀವು ಮೇಲ್ ಇಗೋ ತೊಡೆದುಹಾಕಲು ಬಯಸಿದರೆ, ನೀವು ಸ್ಪರ್ಧೆಯನ್ನು ಬಿಡಬೇಕು. ಪ್ರತಿ ಸಂದರ್ಭದಲ್ಲೂ ನೀವು ಇತರರೊಂದಿಗೆ ಏನು ಮಾತಾಡುತ್ತೀರಿ, ಹೇಗೆ ವ್ಯವಹರಿಸುತ್ತೀರಿ ಎಂಬುದು ಮುಖ್ಯ. ನೀವು ಪ್ರತಿಯೊಂದು ಸಂದರ್ಭದಲ್ಲೂ ನಿಮ್ಮನ್ನು ಉತ್ತಮವಾಗಿ ಸಾಬೀತುಪಡಿಸಲು ಬಯಸುತ್ತೀರಾ. ಈ ಸ್ಪರ್ಧೆ ಸರಿಯಲ್ಲ. ಇದು ನಿಮ್ಮ ಮೇಲ್ ಇಗೋವನ್ನು ಹೆಚ್ಚಿಸುತ್ತೆ.
ನಿಮ್ಮ ಜಗತ್ತಿನಲ್ಲಿ ನೀವು ಮಾತ್ರವಲ್ಲ, ಇತರರೂ ಇದ್ದಾರೆ. ಇದನ್ನು ಅರಿತುಕೊಳ್ಳಿ ಮತ್ತು ಇತರರ ನೋವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಇತರರ ಯಾತನೆಯನ್ನು ನಿರ್ಲಕ್ಷಿಸೋದು ಎಂದಿಗೂ ಒಳ್ಳೆಯ ಮನುಷ್ಯನ ಸಂಕೇತವಾಗಲಾರದು. ಆದುದರಿಂದ ಮೇಲ್ ಇಗೋವನ್ನು ಬದಿಗಿಟ್ಟು ಉತ್ತಮರಾಗಿ ಬಾಳಿ.