ಈ ಪುಟ್ಟ ಪುಟ್ಟ ವಿಷ್ಯಗಳಿಗೆ ಖುಷಿಯಾಗಿ, ಪಾಸಿಟಿವ್ ವೈಬ್ಸ್ ನಿಮ್ಮೊಳಗೆ ಮೂಡುತ್ತೆ

First Published May 8, 2021, 2:19 PM IST

ಇತ್ತೀಚಿಗೆ ಜನರ ಮನಸಲ್ಲಿ ಒಂದು ರೀತಿಯ ಭಯ ಆವರಿಸಿದೆ. ಕೊರೋನಾ ಪ್ರಕರಣಗಳ ಏರಿಕೆ, ಸಾವು ಎಲ್ಲವನ್ನೂ ನೋಡಿ ನೋಡಿ... ಸುತ್ತಲೂ ಕಣ್ತೆರೆದು ನೋಡಲು ಭಯವಾಗುತ್ತಿದೆ. ಆದರೆ ಈ ಕಷ್ಟಗಳನ್ನು ದೂರ ಮಾಡಿ ಹೊರ ಬರಬೇಕು ಎಂದರೆ ನಾವು ಸಂತೋಷವಾಗಿರಲೇಬೇಕು. ಇದರಿಂದ ಮಾತ್ರ ನಮ್ಮ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆದರೆ ಜೀವನ ಸಂತೋಷದಿಂದ ಕೂಡಿರಬೇಕಾದರೆ ದೊಡ್ಡ ದೊಡ್ಡ ಸಂತೋಷಕ್ಕೆ ಕಾದು ಕುಳಿತು ಕೊಳ್ಳಬೇಕಾಗಿಲ್ಲ. ಯಾಕೆಂದರೆ ಆ ದೊಡ್ಡ ಸಂತೋಷಕ್ಕೆ ಕಾದು ಕೂತರೆ ಸಣ್ಣ ಸಣ್ಣ ಸಂತೋಷಗಳು ಮರೆಯಾಗುತ್ತವೆ. ಅದಕ್ಕಾಗಿ ಜೀವನದಲ್ಲಿ ಸಣ್ಣ ಸಣ್ಣ ಖುಷಿಯನ್ನು ಎಂಜಾಯ್ ಮಾಡಲು ಕಲಿಯಬೇಕು. ಹೀಗೆ ಮಾಡಿದರೆ ಆದಷ್ಟು ಬೇಗ ಈ ಜಗತ್ತು ಚೇತರಿಸಿಕೊಳ್ಳಿದೆ.