ಈ ರೀತಿ ವೀಕೆಂಡ್ ಪ್ಲ್ಯಾನ್ ಮಾಡಿ, ದಾಂಪತ್ಯದ ರೊಮ್ಯಾನ್ಸ್ ಹೆಚ್ಚಿಸಿಕೊಳ್ಳಿ
ಕೆಲಸದ ಒತ್ತಡದಿಂದಾಗಿ ಇಂದು ಎಲ್ಲರೂ ಎಷ್ಟೊಂದು ಬ್ಯುಸಿಯಾಗಿರುತ್ತೇವೆ ಅಂದ್ರೆ ಸಂಗಾತಿಗೆ ಸರಿಯಾಗಿ ಟೈಮ್ ಕೋಡೋದಕ್ಕೂ ಯಾರಿಗೂ ಸಾಧ್ಯವಾಗೋದಿಲ್ಲ. ಹೀಗಿರುವಾಗ ಕೆಲವೊಂದು ವಿಷ್ಯಗಳ ಬಗ್ಗೆ ಜವಾಬ್ಧಾರಿ ತೆಗೆದುಕೊಳ್ಳೋದು ಮುಖ್ಯ. ಹಾಗಿದ್ದರೆ ಮಾತ್ರ ಮ್ಯಾರೀಡ್ ಲೈಫಿನಲ್ಲಿ ರೊಮ್ಯಾನ್ಸ್ ಹುಟ್ಟಲು ಸಾಧ್ಯ. ಹಾಗಿದ್ರೆ ಅದಕ್ಕಾಗಿ ವೀಕೆಂಡ್ ಅನ್ನು ಸ್ಪೆಷಲ್ ಆಗಿಸಲು ಕೆಲವೊಂದು ಕೆಲಸಗಳನ್ನು ಮಾಡಬೇಕು. ಅವುಗಳ ಬಗ್ಗೆ ತಿಳಿಯೋಣ.

ಬ್ಯುಸಿ ಲೈಫ್ ಸ್ಟೈಲ್ ನಲ್ಲಿ, ದಂಪತಿಗಳಿಗೆ ಪರಸ್ಪರ ಸಮಯವ ಕೊಡೋದೆ ಸಾಧ್ಯವಾಗೋದಿಲ್ಲ. ಕರಿಯರ್ ಬೆಳವಣಿಗೆ (Career Growth ಬಗ್ಗೆ ಗಮನ ಹರಿಸುತ್ತಾ ಹೋದಂತೆ ರೊಮ್ಯಾನ್ಸ್‌ನತ್ತ ಗಮನ ಹರಿಸಲು ಸಾಧ್ಯವಾಗೋದಿಲ್ಲ. ಆದರೂ, ಜೀವನದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡೊ ಮೂಲಕ ಮತ್ತು ಕೆಲವು ವಿಷಯಗಳನ್ನು ಸಂಗಾತಿ ಜೊತೆ ಸೇರಿ ಒಟ್ಟಿಗೆ ಮಾಡುವ ಮೂಲಕ, ಸಂಬಂಧದಲ್ಲಿ ಪ್ರೀತಿ ಮತ್ತು ಉತ್ಸಾಹ ಸದಾ ಇರುವಂತೆ ಮಾಡಬಹುದು.
ವಾರದ ಮಧ್ಯದಲ್ಲಿ ತುಂಬಾ ಕೆಲಸ ಇರೋದರಿಂದ ಸಂಗಾತಿಗೆ ಸಮಯ ನೀಡಲು ಸಾಧ್ಯವಾಗದಿರಬಹುದು, ಆದರೆ ವೀಕೆಂಡ್ ನಲ್ಲಿ ನೀವು ಕೆಲಸದ ಬದಲಾಗಿ ನಿಮ್ಮ ಸಂಬಂಧಕ್ಕೆ ಆದ್ಯತೆ ನೀಡಬೇಕು. ಹಾಗಾದ್ರೆ ಮಾತ್ರ ವೈವಾಹಿಕ ಜೀವನದಲ್ಲಿ (married life) ರೊಮ್ಯಾನ್ಸ್ ಹೆಚ್ಚುತ್ತೆ. ವಾರಾಂತ್ಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ಮಾಡಬಹುದಾದ ನಾಲ್ಕು ವಿಷಯಗಳು ಇಲ್ಲಿವೆ, ಇದು ಜೀವನದಲ್ಲಿ ರೊಮ್ಯಾನ್ಸ್ ಅನ್ನು ಮರಳಿ ತರಲು ಸಹಾಯ ಮಾಡುತ್ತೆ.
ವೀಕೆಂಡ್ ಟ್ರಿಪ್ ಮಾಡಿ
ವೀಕೆಂಡ್ ಗಾಗಿ ನೀವು ಒಂದು ಸಣ್ಣ ಟ್ರಿಪ್ ಪ್ಲ್ಯಾನ್ (weekend trip) ಮಾಡಿ. ನಗರದ ಹೊರಗಿರುವ ರೆಸಾರ್ಟ್ ಗಳಿಂದ ಹಿಡಿದು ಹೊಸ ನಗರವನ್ನು ಒಟ್ಟಿಗೆ ಅನ್ವೇಷಿಸುವವರೆಗೆ, ನಿಮ್ಮ ಸಂಗಾತಿಯೊಂದಿಗೆ ಸಣ್ಣ ಪ್ರವಾಸಕ್ಕೆ ಹೋಗೋದ್ರಿಂದ ನಿಮ್ಮ ಸಂಬಂಧದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹೊಸ ಸ್ಥಳಗಳನ್ನು ಸುತ್ತಾಡೋ ಜೊತೆಗೆ, ಇದು ನಿಮಗೆ ಉತ್ತಮ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡಲು ಸಹಾಯ ಮಾಡುತ್ತೆ.
ಫೋನ್ ಬಿಟ್ಟು, ಜೊತೆಯಾಗಿ ಕೂತು ಮಾತನಾಡಿ
ನಾವೆಲ್ಲರೂ ವಾರವಿಡೀ ಫೋನ್ ಅಥವಾ ಲ್ಯಾಪ್ ಟಾಪ್ ಜೊತೆಯೇ ಕಾಲ ಕಳೆಯುತ್ತೇವೆ, ಇದರಿಂದ ನಾವು ನಮ್ಮ ಸಂಗಾತಿ ಜೊತೆ ಮಾತನಾಡೋದನ್ನೆ ಮರೆತು ಬಿಡುತ್ತೇವೆ. ವೀಕೆಂಡ್‌ನಲ್ಲಿ ರಜೆ ಇರೋವಾಗ ಲ್ಯಾಪ್ ಟಾಪ್, ಮೊಬೈಲ್ ಎಲ್ಲವನ್ನೂ ದೂರ ಇಟ್ಟು ನಿಮ್ಮ ಸಂಗಾತಿಯೊಂದಿಗೆ ಬಾಲ್ಕನಿಯಲ್ಲಿ ಒಂದು ಕಪ್ ಕಾಫಿ ಸಿಪ್ ಮಾಡುತ್ತಾ, ಮಾತನಾಡಿ. ಇದು ನಿಮ್ಮ ದಿನವನ್ನು ತುಂಬಾ ಖುಶಿಯಾಗಿರುವಂತೆ ಮಾಡುತ್ತೆ.
ಒಟ್ಟಿಗೆ ಪಾರ್ಟಿ ಮಾಡಿ
ದಂಪತಿಗಳಲ್ಲಿ ಇಬ್ಬರೂ ಪಾರ್ಟಿ ಮಾಡೋದನ್ನು ಇಷ್ಟಪಡುತ್ತಿದ್ದರೆ, ನೀವು ಅದನ್ನು ಬೇರೆ ಬೇರೆಯಾಗಿ ಮಾಡಬೇಡಿ. ಪಾರ್ಟಿಗಳಿಗೆ ಇಬ್ಬರೂ ಜೊತೆಯಾಗಿಯೇ ಹೋಗಿ, ಜೊತೆಗೆ ನಿಮ್ಮ ಇತರ ಕಪಲ್ ಫ್ರೆಂಡ್ಸ್ ಅನ್ನು ಸಹ ಆಹ್ವಾನಿಸಿ. ಹೀಗೆ ಮಾಡೊದ್ರಿಂದ ನಿಜವಾಗಿಯೂ ನೀವು ಈ ಸಮಯವನ್ನು ಚೆನ್ನಾಗಿ ಎಂಜಾಯ್ ಮಾಡಬಹುದು.
ಒಟ್ಟಿಗೆ ಅಡುಗೆ ಮಾಡಿ
ಅಡುಗೆ ಮಾಡೋದು (cooking) ಒಂದು ರೊಮ್ಯಾಂಟಿಕ್ ಕ್ರಿಯೆಯೂ ಆಗಿದೆ ಅನ್ನೋದು ನಿಮಗೆ ಗೊತ್ತಾ? ಹೌದು ನೀವು ಮಾಡಬಹುದಾದ ಮೋಜಿನ ಚಟುವಟಿಕೆಗಳಲ್ಲಿ ಒಂದು ಒಟ್ಟಿಗೆ ಅಡುಗೆ ಮಾಡುವುದು. ಹಾಗಂತ ದೊಡ್ಡ ದೊಡ್ಡ ಅಡುಗೆ ಮಾಡಬೇಡಿ. ಬದಲಾಗಿ ಬೇಗನೆ ಸಿದ್ಧವಾಗೋವಂತಹ ಅಡುಗೆಯನ್ನು ಜೊತೆಯಾಗಿ ಕುಕ್ ಮಾಡಿ, ಇದರಿಂದ ಇಬ್ಬರು ಎಂಜಾಯ್ ಮಾಡುತ್ತಾ ಬೇಗನೆ ಅಡುಗೆ ಮಾಡಬಹುದು, ಇದರ ಜೊತೆ ಸ್ವಲ್ಪ ತುಂಟಾಟ, ಸ್ವಲ್ಪ ರೊಮ್ಯಾನ್ಸ್ ಜೊತೆಗೆ ಸೇರಿದ್ರೆ ವಾವ್ ತುಂಬಾನೆ ಚೆನ್ನಾಗಿರುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.