ChatGPT ಮಾತು ಕೇಳಿ ಗಂಡನಿಗೆ ಸೋಡಾ ಚೀಟಿ ಕೊಟ್ಟ ಮಹಿಳೆ
ChatGPT ಸಲಹೆ ಮೇರೆಗೆ ಗ್ರೀಸ್ ಮಹಿಳೆಯೊಬ್ಬರು ತಮ್ಮ ಗಂಡನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. AI ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತರಾಗುವುದರಿಂದ ಸ್ವವಿವೇಚನಾ ಶಕ್ತಿ ಕಡಿಮೆಯಾಗುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ.
17

ಇಂದು ಎಲ್ಲವೂ AI ಆಗುತ್ತಿದೆ. ಯಾವುದೇ ವಿಷಯದ ಮಾಹಿತಿ ಕೇಳಿದರೂ AI ತನ್ನದೇ ಶೈಲಿಯಲ್ಲಿ ವಿವರವಾದ ಉತ್ತರವನ್ನು ನೀಡುತ್ತದೆ. ಇಂದು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್ ನೆರವು ಪಡೆದುಕೊಂಡು ಯಾವ ಮಾಹಿತಿಯನ್ನಾದ್ರೂ ಕೆಲವೇ ಕ್ಷಣಗಳಲ್ಲಿ ಪಡೆದುಕೊಳ್ಳಬಹುದು. ಮಹಿಳೆಯೊಬ್ಬಳು ChatGPT ನೀಡಿದ ಸಲಹೆ ಕೇಳಿ ಗಂಡನಿಗೆ ಸೋಡಾಚೀಟಿ ನೀಡಿದ್ದಾಳೆ. (ಸಾಂದರ್ಭಿಕ ಚಿತ್ರ)
27
ಕಂಪ್ಯೂಟರ್, ಮೊಬೈಲ್, ಕ್ಯಾಮೆರಾ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ AI ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ವಿಶೇಷವಾಗಿ ಯುವ ಪೀಳಿಗೆಯರವರು AI ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತರಾಗುತ್ತಿರೋದು ಕಂಡು ಬರುತ್ತಿದೆ. ಸ್ವವಿವೇಚನಾ ಶಕ್ತಿ ಎಂಬುವುದು ಇದೇ ಅನ್ನೋದನ್ನೇ ಮರೆಯುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
37
ಗ್ರೀಸ್ ಮಹಿಳೆಯೊಬ್ಬಳು ChatGPT ನೀಡಿದ ಮಾರ್ಗದರ್ಶನದ ಆಧಾರದ ಮೇಲೆ ವೈವಾಹಿಕ ಜೀವನವನ್ನು ಅಂತಿಮಗೊಳಿಸಲು ಮುಂದಾಗಿದ್ದಾಳೆ. ಆಕೆಯ ಗಂಡ, ChatGPT ನೀಡಿದ ಮಾಹಿತಿ ನೂರಕ್ಕೆ ನೂರರಷ್ಟು ಸುಳ್ಳು ಅಂದ್ರೂ ಮಹಿಳೆ ನಂಬುತ್ತಿಲ್ಲ. (ಸಾಂದರ್ಭಿಕ ಚಿತ್ರ)
47
ChatGPT ಮಾತು ಕೇಳಿ ಪತ್ನಿ ತನಗೆ ಡಿವೋರ್ಸ್ ನೀಡಲು ಮುಂದಾಗಿರುವ ವಿಷಯವನ್ನು ಗ್ರೀಕ್‌ನಲ್ಲಿ ಪ್ರಸಾರವಾಗುವ ಟು ಪ್ರೊಯಿನೊ ಎಂಬ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾನೆ. (ಸಾಂದರ್ಭಿಕ ಚಿತ್ರ)
57
ಆಡಿಟಿ ಸೆಂಟ್ರಲ್ (OddityCentral) ವರದಿಯ ಪ್ರಕಾರ, ಮಹಿಳೆ ಸೋಶಿಯಲ್ ಮೀಡಿಯಾದ ಟ್ರೆಂಡ್‌ನಲ್ಲಿ ಭಾಗಿಯಾಗಿದ್ದರು. ಈ ಟ್ರೆಂಡ್‌ನಲ್ಲಿ ಕಾಫಿ ಗ್ರೌಂಡ್ ಮಾಡಲಾಗಿರುತ್ತದೆ. ಈ ಗ್ರೌಂಡ್ ಸಲ್ಲಿಕೆ ಮಾಡಲುವ ವಸ್ತು/ಪುರುಷ/ಮಹಿಳೆಯರ ಭವಿಷ್ಯವಾಣಿಯನ್ನು ChatGPT ವಿಶ್ಲೇಷಣೆ ಮಾಡುತ್ತದೆ. ಇದೇ ರೀತಿ ಮಹಿಳೆ ಇಲ್ಲಿ ತನ್ನ ಮತ್ತು ಗಂಡನ ಫೋಟೋ ಅಪ್ಲೋಡ್ ಮಾಡಿದ್ದಾಳೆ. (ಸಾಂದರ್ಭಿಕ ಚಿತ್ರ)
67
ಫೋಟೋ ಸ್ವೀಕರಿಸಿದ ChatGPT, ನಿನ್ನ ಗಂಡ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಹೇಳಿದೆ. ChatGPT ಮಾತನ್ನು ಬಲವಾಗಿ ನಂಬಿದ ಮಹಿಳೆ, ಆತನೊಂದಿಗೆ ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದಾಳೆ. ನಿನ್ನ ಗಂಡ "E" ಅಕ್ಷರದ ಮಹಿಳೆಯೊಂದಿಗೆ ಸಂಬಂಧ ಹೊಂದಲು ಪ್ಲಾನ್ ಮಾಡಿಕೊಂಡಿದ್ದು, ಆಕೆಯೊಂದಿಗಿನ ಬದುಕನ್ನು ಕಲ್ಪನೆ ಮಾಡಿಕೊಳ್ಳುತ್ತಿದ್ದಾನೆ. ಈಗಾಗಲೇ ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ AI ಸಹ ಹೇಳಿದೆ. ಈ ಮಾತುಗಳು ಮಹಿಳೆಯ ನಂಬಿಕೆಯನ್ನು ಮತ್ತಷ್ಟು ದೃಢವಾಗಿಸಿತ್ತು. (ಸಾಂದರ್ಭಿಕ ಚಿತ್ರ)
77
ಸದ್ಯ ಇಬ್ಬರ ಡಿವೋರ್ಸ್ ಪ್ರಕರಣ ನ್ಯಾಯಾಲಯದಲ್ಲಿದೆ. ಪತಿಯ ಪರ ವಕೀಲರು, AI ಮತ್ತು ChatGPT ಮಾತು ಕೇಳಿ ನೀಡಲಾದ ವಿಚ್ಚೇದನ ಅರ್ಜಿಯನ್ನು ಪ್ರಶ್ನೆ ಮಾಡಿದ್ದಾರೆ. ಮತ್ತೊಂದೆಡೆ ಮಹಿಳೆಯ ಪತಿ, ತಾನು ಎಂದಿಗೂ ದಾಂಪತ್ಯ ದ್ರೋಹದಲ್ಲಿ ತೊಡಗಿಲ್ಲ ಎಂದು ಹೇಳಿದ್ದಾರೆ. ಮುಂದೆ ಈ ಪ್ರಕರಣ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ. (ಸಾಂದರ್ಭಿಕ ಚಿತ್ರ)
Latest Videos