23ನೇ ವರ್ಷಕ್ಕೆ ವರ್ಜಿನಿಟಿ ಕಳೆದುಕೊಳ್ತಾರಂತೆ ಭಾರತೀಯರು!
ಜಗತ್ತಿನ ಬೇರೆ ಎಲ್ಲಾ ದೇಶಗಳಿಗೆ ಹೋಲಿಸಿದರೆ, ಭಾರತೀಯರು ತಮ್ಮ ವರ್ಜಿನಿಟಿ ಕಳೆದುಕೊಳ್ಳುವುದು ಅತ್ಯಂತ ಲೇಟ್ ಎಂದು ಗ್ಲೋಬಲ್ ಸೆಕ್ಸ್ ರಿಪೋರ್ಟ್ ವರದಿ ಹೇಳಿದೆ.
ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಸುದ್ದಿಗಳು ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚೆಗೆ ಗ್ಲೋಬಲ್ ಸೆಕ್ಸ್ ರಿಪೋರ್ಟ್ ಎನ್ನುವ ಹಳೆಯ ವರದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಗ್ಲೋಬಲ್ ಸೆಕ್ಸ್ ರಿಪೋರ್ಟ್‌ನ ವರದಿ ಹೊಸ ಚರ್ಚೆಗೆ ನಾಂದಿಯಾಗುತ್ತಿದೆ. ಅದೇನೆಂದರೆ, ಭಾರತೀಯರು ಸರಾಸರಿ 23ನೇ ವರ್ಷಕ್ಕೆ ತಮ್ಮ ವರ್ಜಿನಿಟಿ ಕಳೆದುಕೊಳ್ತಾರಂತೆ.
ವರ್ಜಿನಿಟಿ ಕಳೆದುಕೊಳ್ಳೋದು ಅಂದ್ರೆ ಮೊದಲ ಬಾರಿಗೆ ಸೆಕ್ಸ್‌ನಲ್ಲಿ ಭಾಗಿಯಾಗೋದನ್ನ ಸೂಚಿಸುತ್ತದೆ. ಸಾಮಾನ್ಯವಾಗಿ ಭಾರತೀಯರು ತಮ್ಮ ವರ್ಜಿನಿಟಿಯನ್ನು ಕಳೆದುಕೊಳ್ಳುವ ಸರಾಸರಿ ವಯಸ್ಸು 22.9 ವರ್ಷ ಎಂದು ಗ್ಲೋಬಲ್ ಸೆಕ್ಸ್ ರಿಪೋರ್ಟ್ ತಿಳಿಸಿದೆ.
ಹಾಗಾಗಿ ನೀವೇನಾದರೂ 22 ವರ್ಷದ ಒಳಗಿನ ವ್ಯಕ್ತಿಯಾದರೆ, ಹೆಮ್ಮೆಯಿಂದ ನೀವು ವರ್ಜಿನ್ ಎಂದು ಹೇಳಿಕೊಳ್ಳಬಹುದು ಅದಕ್ಕೆ ಈ ರಿಪೋರ್ಟ್‌ಅನ್ನೇ ದಾಖಲೆಯಾಗಿ ನೀಡಬಹುದು.
ಭಾರತೀಯರು ತಮ್ಮ ಕನ್ಯತ್ವವನ್ನು ಕಳೆದುಕೊಳ್ಳುವ ಸರಾಸರಿ ವಯಸ್ಸು 22.9 ಆಗಿದೆ. 16 ರಿಂದ 19 ವಯಸ್ಸಿನ ಟೀನೇಜರ್‌ಗಳು ಗರ್ಭನಿರೋಧಕವನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ಹೇಳಿದೆ.
ಪ್ರತಿ ವರ್ಷ ಭಾರತೀಯರಲ್ಲಿ ವರ್ಜಿನಿಟಿ ಕಳೆದುಕೊಳ್ಳುವ ವರ್ಷ ಡಿಲೇ ಆಗುತ್ತಲೇ ಇದೆ ಎಂದು ವರದಿ ಹೇಳಿದೆ. 18 ವರ್ಷ ದಾಟಿದ ಬಳಿಕ ಹೆಚ್ಚಿನವರು ಗರ್ಭನಿರೋಧಕ ಬಳಸುವುದನ್ನು ಕಡಿಮೆ ಮಾಡುತ್ತಾರೆ ಎಂದಿದೆ.
ಕನ್ಯತ್ಯ ಕಳೆದುಕೊಳ್ಳುವ ಸರಾಸರಿ ವಯಸ್ಸಿನಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಮಲೇಷ್ಯಾದಲ್ಲಿ ಇದರ ಸರಾಸರಿ ವಯಸಸು 23 ವರ್ಷವಾಗಿದೆ. ಸಿಂಗಾಪುರದಲ್ಲಿ 22.8 ವರ್ಷವಾಗಿದ್ದರೆ, ಚೀನಾದವರು 22.1 ವರ್ಷದವರೆಗೂ ಕಾಯುತ್ತಾರಂತೆ.
ತಮ್ಮ ಹಿರಿಯರೊಂದಿಗೆ ಸೆಕ್ಸ್ ಹಾಗೂ ಸೆಕ್ಸ್ ಹೆಲ್ತ್ ಬಗ್ಗೆ ಮಾತನಾಡುವ ಹೆಚ್ಚಿನ ಮಂದಿ ಗರ್ಭನಿರೋಧಕವನ್ನೇ ಬಳಕೆ ಮಾಡಲು ಇಷ್ಟಪಡುತ್ತಾರಂತೆ.
ಭಾರತದಲ್ಲಿ ಮೊದಲ ಬಾರಿಗೆ ಸೆಕ್ಸ್‌ನಲ್ಲಿ ಪಾಲ್ಗೊಳ್ಳುವ ವೇಳೆ ಶೇ. 67.2ರಷ್ಟು ಮಂದಿ ಗರ್ಭನಿರೋಧಕವನ್ನು ಬಳಸಿಕೊಳ್ಳುತ್ತಾರೆ ಎಂದು ವರದಿ ಹೇಳಿದೆ.
ಮಹಿಳೆಯರು ಹೇಳುವ ಪ್ರಕಾರ ವರ್ಜಿನಿಟಿ ಕಳೆದುಕೊಳ್ಳುವ ಸಮಯದಲ್ಲಿ ಶೇ. 25ರಷ್ಟು ಪುರುಷರು ಮಾತ್ರವೇ ಗರ್ಭನಿರೋಧಕವನ್ನು ಬಳಸಿಕೊಳ್ಳುತ್ತಾರೆ ಎನ್ನಲಾಗಿದೆ.
ಒಟ್ಟಾರೆ 26 ದೇಶದಲ್ಲಿ ಈ ಸರ್ವೆ ಮಾಡಲಾಗಿದೆ. ಇದಕ್ಕೆ ಒಟ್ಟು 26 ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿವೆ. ಇದರಲ್ಲಿ 23 ಸಾವಿರ ಮಂದಿ ಸೆಕ್ಯುಯಲ್‌ನಲ್ಲಿ ಆಕ್ಟೀವ್ ಆಗಿದ್ದವರೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿ ವರ್ಷ ಕೂಡ ಡ್ಯುರೆಕ್ಸ್ ಈ ರಿಪೋರ್ಟ್‌ಅನ್ನು ನೀಡುತ್ತದೆ. ಗ್ಲೋಬಲ್ ಸೆಕ್ಸ್ ರಿಪೋರ್ಟ್ ಅಥವಾ ಗ್ಲೋಬಲ್ ಸೆಕ್ಸ್ ಸರ್ವೆ ಎನ್ನುವ ಹೆಸರಿನಲ್ಲಿ ಈ ವಿವರವನ್ನು ರಿಲೀಸ್ ಮಾಡುತ್ತದೆ.