ಬಾಯ್‌ಫ್ರೆಂಡ್‌ಗೆ ಕೇಶವಿನ್ಯಾಸ ಮಾಡಿ ನೆಟ್ಟಿಗರ ಮನ ಗೆದ್ದ ಹೀದಿ!

First Published 11, Aug 2020, 7:05 PM

ಇತ್ತೀಚೆಗೆ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಗೆ ಹೇರ್‌ಕಟ್ ಮಾಡಿದ್ದು ನೋಡಿದ್ದೇವೆ. ಅದು ಬಿಟ್ಟರೆ ಸಾಮಾನ್ಯವಾಗಿ ಯಾವ ಹುಡುಗರೂ ತಮ್ಮ ತಲೆಕೂದಲ ಮೇಲೆ ಪ್ರಯೋಗ ಮಾಡಲು ಗರ್ಲ್‌ಫ್ರೆಂಡ್‌ಗೆ ಅಷ್ಟು ಸುಲಭವಾಗಿ ಬಿಡುವುದಿಲ್ಲ! ಆದರೆ ಇಲ್ಲೊಬ್ಬ ಸಾಫ್ಟ್‌ವೇರ್ ಎಂಜಿನಿಯರ್ ತನ್ನ ಜುಟ್ಟನ್ನು ಸಂಪೂರ್ಣವಾಗಿ ಗರ್ಲ್‌ಫ್ರೆಂಡ್‌ಗೆ ಬಿಟ್ಟುಕೊಟ್ಟಿದ್ದಾನೆ. ಅದರಿಂದ ಫೇಮಸ್ ಕೂಡಾ ಆಗಿದ್ದಾನೆ. ಹೌದು, ಜಾರ್ಜಿಯಾದ ಈ ಜೋಡಿ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದಾರೆ. ಹೀದಿ ಎಂಬಾಕೆ ಲಾಕ್‌ಡೌನ್ ಕಾರಣದಿಂದ ಸಲೂನ್ ಮುಚ್ಚಬೇಕಾಗಿ ಬಂದಿತು. ಹೀಗಾಗಿ, ಆಕೆ ವಿವಿಧ ಹೇರ್‌ಸ್ಟೈಲ್‌ಗಳನ್ನು ತನ್ನ ಬಾಯ್‌ಫ್ರೆಂಡ್ ಜಿಯೋಫ್ ಕ್ಲಾರ್ಕ್ ಮೇಲೆ ಪ್ರಯೋಗ ಮಾಡಿದ್ದಾಳೆ. ಈ ವಿವಿಧ ಹೇರ್‌ಸ್ಟೈಲ್‌ಗಳನ್ನು ಜೋಡಿಯು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

'ನನಗೆ ಇನ್ನು ತಿಂಗಳ ಕಾಲ ಕೆಲಸವಿರುವುದಿಲ್ಲವೆಂದು ಲಾಕ್‌ಡೌನ್ ಆರಂಭವಾದಾಗ ಮನವರಿಕೆಯಾಯಿತು. ಹಾಗಾಗಿ, ನಾನು ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿದ್ದ ಬಾಯ್‌ಫ್ರೆಂಡ್ ಕೂದಲಿಗೆ ಹೊಸ ಹೇರ್‌ಸ್ಟೈಲ್ ಮಾಡಲು ಶುರು ಮಾಡಿದೆ,' ಎಂದು ಇದೆಲ್ಲ ಹೇಗಾಯಿತೆಂಬುದನ್ನು ವಿವರಿಸುತ್ತಾಳೆ ಹೀದಿ.

'ಮೊದಲ ದಿನ ನಿನ್ನನ್ನು ಜಾರ್ಜ್ ವಾಷಿಂಗ್ಟನ್‌ನಂತೆ ಮಾಡುತ್ತೇನೆಂದು ಗೆಳೆಯನಿಗೆ ಹೇರ್‌ಸ್ಟೈಲ್ ಮಾಡಿದೆ. ಅದನ್ನು ಫೇಸ್‌ಬುಕ್‌ನ ಕೆಲ ಪೇಜ್‌ಗಳಲ್ಲಿ ಹಂಚಿಕೊಂಡೆ. ಅಲ್ಲಿ ಸಿಕ್ಕ ಪ್ರತಿಕ್ರಿಯೆ ನನ್ನ ನಿರೀಕ್ಷೆಗೂ ಮೀರಿದ್ದು. ಇದು ನನಗೆ ಆಥನ ಕೂದಲಲ್ಲಿ ಇನ್ನಷ್ಟು ಹೊಸ ಹೇರ್‌ಸ್ಟೈಲ್ ಮಾಡಲು ಪ್ರೇರೇಪಿಸಿತು' ಎನ್ನುತ್ತಾಳೆ ಆಕೆ.

ನಂತರದಲ್ಲಿ ಹೀದಿ ಸ್ಟಾರ್ ವಾರ್ಸ್‌ನ ಪ್ರಿನ್ಸೆಸ್ ಲೀಯಾ, ದಿ ಗ್ರಿಂಚ್‌ನ ಸಿಂಡಿ ಲೂ ಹೂ, ಗಾಯಕಿ ಆಮಿ ವೈನ್‌ಹೌಸ್‌ನ ಹೇರ್‌ಸ್ಟೈಲ್‌ಗಳಿಂದ ಪ್ರೇರಿತವಾಗಿ ಹಲವಾರು ವಿನ್ಯಾಸಗಳನ್ನು ಪ್ರಯೋಗಿಸಿದ್ದಾಳೆ.

ಜಿಯೋಫ್‌ನ ಕೂದಲು ಕರ್ಲಿಯಾಗಿದ್ದು, ಪ್ರಯೋಗಕ್ಕೆ ಹೇಳಿ ಮಾಡಿಸಿದಂತಿದೆ. ಆತ ಕೂಡಾ ನನ್ನ ಈ ಪ್ರಯೋಗಗಳನ್ನು ಎಂಜಾಯ್ ಮಾಡುತ್ತಿದ್ದ. ಹಾಗಾಗಿ ಇದು ನಮ್ಮಿಬ್ಬರಿಗೂ ವಿನ್ ವಿನ್ ಟೈಂ ಎನ್ನುತ್ತಾಳೆ ಹೀದಿ.

ಇನ್ನು ಜಿಯೋಫ್ ಕೂಡಾ ಗರ್ಲ್‌ಫ್ರೆಂಡ್‌ನ ಈ ಪ್ರಯೋಗಗಳನ್ನು ಬಹಳ ಕ್ರೀಡಾ ಮನೋಭಾವದಿಂದ ಕಂಡಿದ್ದಾನೆ.

ಆಕೆಯು ಕೂದಲಿಗೆ ಕಲರ್ ಮಾಡುವುದರಲ್ಲಿ ತಜ್ಞೆ ಎಂದು ತಿಳಿದಿದ್ದರೂ ವಿವಿಧ ಹೇರ್‌ಸ್ಟೈಲ್ ಮಾಡಲು ಬಹಳ ನಂಬಿಕೆಯಿಂದ ಬಿಟ್ಟಿದ್ದಾನೆ.

ಜೆಡೆ, ಜುಟ್ಟು, ಚಿತ್ರವಿಚಿತ್ರ ಹೇರ್‌ಸ್ಟೈಲ್‌ಗಳನ್ನು ಮಾಡಿಸಿಕೊಂಡಿದ್ದಷ್ಟೇ ಅಲ್ಲ, ಅದಕ್ಕೆ ಅಷ್ಟೇ ಸುಂದರವಾಗಿ ಪೋಸ್ ನೀಡಿ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾನೆ. ಹೆಮ್ಮೆಯಿಂದ ಗರ್ಲ್‌ಫ್ರೆಂಡ್ ಕ್ರಿಯೇಟಿವಿಟಿಯನ್ನು ಕೊಂಡಾಡಿದ್ದಾನೆ. ಈಗ ಈತನ ಗುಣ, ಆಕೆಯ ಪ್ರಯೋಗ ಎರಡೂ ನೆಟ್ಟಿಗರ ಮನ ಗೆದ್ದಿವೆ.

ಅಷ್ಟೇ ಅಲ್ಲ, ಗರ್ಲ್‌ಫ್ರೆಂಡ್‌ಗೆ ಕೂಡಾ ಆತನ ಮೇಲಿದ್ದ ಪ್ರೀತಿ ಇಮ್ಮಡಿಯಾಗಿದೆ. 'ಆತ ನನಗಿದನ್ನು ಮಾಡಲು ಬಿಡಬೇಕೆಂದರೆ ಅವನಲ್ಲಿ ಚಿನ್ನದ ಹೃದಯವಿರಬೇಕು' ಎಂದು ಹೀದಿ ಕೊಂಡಾಡಿದ್ದಾಳೆ. ಈ ಕ್ವಾರಂಟೈನ್ ಪ್ರಾಜೆಕ್ಟ್‌ನಲ್ಲಿ ಕ್ರಿಯೇಟಿವಿಟಿ ಜೊತೆಗೆ ಇವರಿಬ್ಬರ ಪ್ರೀತಿಯೂ ಎದ್ದು ತೋರುತ್ತದಲ್ಲವೇ?

loader