- Home
- Life
- Relationship
- ಬ್ರೇಕಪ್ನಿಂದ ಮಹಿಳೆಯರಿಗಿಂತ ಪುರುಷರೇ ಹೆಚ್ಚು ನೊಂದಿಕೊಳ್ಳುತ್ತಾರಾ? ಬಹಿರಂಗವಾಯ್ತು ಅಚ್ಚರಿಯ ಸತ್ಯ!
ಬ್ರೇಕಪ್ನಿಂದ ಮಹಿಳೆಯರಿಗಿಂತ ಪುರುಷರೇ ಹೆಚ್ಚು ನೊಂದಿಕೊಳ್ಳುತ್ತಾರಾ? ಬಹಿರಂಗವಾಯ್ತು ಅಚ್ಚರಿಯ ಸತ್ಯ!
ಬ್ರೇಕಪ್ ಬಳಿಕ ಮಹಿಳೆಯರೇ ಹೆಚ್ಚು ನೋವನ್ನು ಅನುಭವಿಸುತ್ತಾರೆ ಎಂದು ಹೇಳಿರೋದನ್ನು ನೀವು ಕೇಳಿರುವಿರಿ. ಆದರೆ ಅಸಲಿ ಸತ್ಯ ಬೇರೆ ಇದೆ. ಬ್ರೇಕಪ್ ಆದಾಗ ಹೆಚ್ಚು ನೋವು ಅನುಭವಿಸುವವರು ಪುರುಷರಂತೆ. ಸಂಶೋಧನೆ ಈ ಬಗ್ಗೆ ಏನು ಹೇಳುತ್ತೆ ಅನ್ನೋದನ್ನು ನೋಡೋಣ.

ಬ್ರೇಕಪ್
ಬ್ರೇಕಪ್ ಬಳಿಕ ಮಹಿಳೆಯರೇ ಹೆಚ್ಚು ಕುಗ್ಗಿಹೋಗುತ್ತಾರೆ ಎಂದು ನಿಮಗೂ ಅನಿಸಿದರೆ, ವಿಯೆನ್ನಾ ವಿಶ್ವವಿದ್ಯಾಲಯದ ಸಂಶೋಧನೆಯ ಬಗ್ಗೆ ತಿಳಿದುಕೊಳ್ಳಲೇಬೇಕು. ಈ ಸಂಶೋಧನೆಯ ಪ್ರಕಾರ, ಸಂಬಂಧ ಮುರಿದುಬಿದ್ದ ಬಳಿಕ ಪುರುಷರು ಹೆಚ್ಚು ಭಾವನಾತ್ಮಕ ನೋವನ್ನು ಅನುಭವಿಸುತ್ತಾರೆ ಎನ್ನಲಾಗುತ್ತದೆ.
ಮಹಿಳೆಯರು ಹೆಚ್ಚು ಭಾವನಾತ್ಮಕವಾಗಿರುತ್ತಾರೆ
ಸಾಮಾನ್ಯವಾಗಿ ಯಾವುದೇ ಸಂಬಂಧದ ವಿಚಾರದಲ್ಲಿ ಮಹಿಳೆಯರು ಹೆಚ್ಚು ಭಾವನಾತ್ಮಕವಾಗಿರುತ್ತಾರೆ ಮತ್ತು ಅವರಿಗೆ ಹೆಚ್ಚು ನೋವಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಮನೋವಿಜ್ಞಾನಕ್ಕೆ ಸಂಬಂಧಿಸಿದ ಹೊಸ ಸಂಶೋಧನೆಯು ಈ ಕಲ್ಪನೆಗಿಂತ ವಾಸ್ತವ ಬೇರೆಯೇ ಇರಬಹುದು ಎಂಬುದನ್ನು ಸೂಚಿಸುತ್ತದೆ. ಸಂಬಂಧ ಮುರಿದುಬಿದ್ದ ಬಳಿಕ ಮಹಿಳೆಯರಿಗಿಂತ ಪುರುಷರು ಹೆಚ್ಚು ಮಾನಸಿಕವಾಗಿ ಕುಗ್ಗಬಹುದು. ಅವರು ಹೆಚ್ಚು ದುಃಖಿತರಾಗುತ್ತಾರೆ ಮತ್ತು ನಡೆದ ಸಂಗತಿಗಳನ್ನು ಮರೆತು ಮುಂದೆ ಸಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂದು ಹೇಳಿದೆ.
ಪುರುಷರು ಆತ್ಮ*ತ್ಯೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು
ಮೈಕೆಲ್ ವಿಲ್ಸನ್ ಅವರ ಸಂಶೋಧನೆಯಲ್ಲಿ, ಸಂಬಂಧ ಮುರಿದುಬಿದ್ದ ಬಳಿಕ ಪುರುಷರಲ್ಲಿ ಆತ್ಮ*ತ್ಯೆಯ ಅಪಾಯ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಸಂಶೋಧನೆಯ ಪ್ರಕಾರ, ಪುರುಷರಿಗೆ ಸಂಗಾತಿ ಎಂದರೆ ಕೇವಲ ಜೀವನದ ಒಬ್ಬ ಸಂಗಾತಿಯಲ್ಲ; ಸ್ನೇಹಿತರು ಅಥವಾ ಕುಟುಂಬದವರಿಗಿಂತಲೂ ಹೆಚ್ಚು ನಂಬಿಕೆಗೆ ಅರ್ಹರಾದ ವ್ಯಕ್ತಿಯಾಗಿರಬಹುದು. ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಮತ್ತು ಭಾವನಾತ್ಮಕ ಬೆಂಬಲ ಪಡೆಯಲು ಅವರು ಸಂಗಾತಿಯನ್ನೇ ಹೆಚ್ಚಾಗಿ ಅವಲಂಬಿಸಿರುತ್ತಾರೆ.
ಸಂಗಾತಿಯಿಂದ ಸಿಗುತ್ತದೆ ಭಾವನಾತ್ಮಕ ಬೆಂಬಲ
ವಿಯೆನ್ನಾ ವಿಶ್ವವಿದ್ಯಾಲಯದ ಸಂಶೋಧಕಿ ಐರಿಸ್ ವಾರಿಂಗ್ ಅವರ ಪ್ರಕಾರ, ಸಂಬಂಧಗಳ ಬಗ್ಗೆ ಸಮಾಜದಲ್ಲಿ ಇರುವ ಸಾಮಾನ್ಯ ಕಲ್ಪನೆಗೂ ವಾಸ್ತವಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಂಬಂಧ ಕೊನೆಗೊಂಡ ಬಳಿಕ ಮಹಿಳೆಯರಿಗಿಂತ ಪುರುಷರು ಹೆಚ್ಚು ಮಾನಸಿಕವಾಗಿ ಕುಗ್ಗಬಹುದು ಎಂದು ಅವರು ಹೇಳಿದ್ದಾರೆ. 50ಕ್ಕೂ ಹೆಚ್ಚು ಸಂಶೋಧನೆಗಳು ಮತ್ತು ಮೆಟಾ-ವಿಶ್ಲೇಷಣೆಗಳ ಆಧಾರದ ಮೇಲೆ ಈ ಅಭಿಪ್ರಾಯವನ್ನು ಮಂಡಿಸಲಾಗಿದೆ. ಪ್ರೀತಿ ಮತ್ತು ಸಂಬಂಧಗಳ ವಿಚಾರದಲ್ಲಿ ಪುರುಷರು ಸಂಗಾತಿಯನ್ನು ಹೆಚ್ಚು ಅವಲಂಬಿಸಬಹುದು. ಹೀಗಾಗಿ ಬ್ರೇಕಪ್ ಬಳಿಕ ಅವರು ದುಃಖ ಮತ್ತು ಒಂಟಿತನವನ್ನು ಅನುಭವಿಸುವ ಸಾಧ್ಯತೆ ಇದೆ.
ಪ್ರೀತಿಯನ್ನು ಮೊದಲು ವ್ಯಕ್ತಪಡಿಸುವುದು ಪುರುಷರು
ಪುರುಷರು ಸಾಮಾನ್ಯವಾಗಿ ಮೊದಲು ಪ್ರೀತಿಯನ್ನು ವ್ಯಕ್ತಪಡಿಸುವ ಸಾಧ್ಯತೆ ಹೆಚ್ಚಿರುತ್ತದೆ. ಬ್ರೇಕಪ್ ಬಳಿಕ ನೋವನ್ನು ಎದುರಿಸುವಾಗಲೂ ಅವರು ಹೆಚ್ಚು ಭಾವನಾತ್ಮಕವಾಗಿ ಪ್ರತಿಕ್ರಿಯಿಸಬಹುದು. ಇದಕ್ಕೆ ಪ್ರಮುಖ ಕಾರಣವೆಂದರೆ ಸಂಬಂಧ ಕೊನೆಗೊಂಡಾಗ ಅವರ ಭಾವನಾತ್ಮಕ ಬೆಂಬಲದ ವ್ಯವಸ್ಥೆಯೇ ಕುಸಿಯಬಹುದು. ಅಲ್ಲದೆ, ಒಂಟಿಯಾಗಿ ಬದುಕುವುದು ಅಥವಾ ಮದುವೆಯಾಗದೆ ಉಳಿಯುವ ವಿಚಾರದಲ್ಲಿ ಕೆಲವು ಪುರುಷರು ಹೆಚ್ಚು ಆತಂಕ ಅನುಭವಿಸಬಹುದು.
ಸಂಬಂಧವನ್ನು ಮೊದಲು ಮುರಿಯುವವರು ಮಹಿಳೆಯರು
ಪ್ರೀತಿಯನ್ನು ಮೊದಲು ವ್ಯಕ್ತಪಡಿಸುವವರು ಪುರುಷರಾಗಿರಬಹುದು. ಆದರೆ ಕೆಲವು ಅಂಕಿಅಂಶಗಳ ಪ್ರಕಾರ, ವಿಚ್ಛೇದನ ಅಥವಾ ಸಂಬಂಧವನ್ನು ಕೊನೆಗೊಳಿಸುವ ನಿರ್ಧಾರವನ್ನು ಸುಮಾರು ಶೇ. 70ರಷ್ಟು ಮಹಿಳೆಯರು ಮೊದಲು ತೆಗೆದುಕೊಳ್ಳುತ್ತಾರೆ. ಮಹಿಳೆಯರು ಕ್ರಮೇಣ ಹೊಸ ಜೀವನಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸಿದರೆ, ಕೆಲವು ಪುರುಷರು ಒಂಟಿತನ ಮತ್ತು ಒತ್ತಡಕ್ಕೆ ಒಳಗಾಗಬಹುದು. ಕೆಲವರು ಮದ್ಯಪಾನ ಸೇರಿದಂತೆ ಹಾನಿಕಾರಕ ಅಭ್ಯಾಸಗಳತ್ತಲೂ ಆಕರ್ಷಿತರಾಗಬಹುದು. ಇನ್ನು ಕೆಲವರು ಮದುವೆಯಾಗುವುದರಿಂದ ದೂರ ಉಳಿಯಬಹುದು ಅಥವಾ ಹೊಸ ಸಂಬಂಧಗಳನ್ನು ಬೆಳೆಸಲು ಹಿಂಜರಿಯಬಹುದು.
ಪುರುಷರ ಜೀವನದ ಮೇಲೆ ಬ್ರೇಕಪ್ನ ಪರಿಣಾಮ
ಸಂಶೋಧನೆಯಲ್ಲಿ ಪುರುಷರಲ್ಲಿ ಆತ್ಮ*ತ್ಯೆಯ ಅಪಾಯದ ಬಗ್ಗೆಯೂ ಚರ್ಚಿಸಲಾಗಿದೆ. ಲೇಖನದಲ್ಲಿ ಉಲ್ಲೇಖಿಸಿರುವ ಅಂಕಿಅಂಶಗಳ ಪ್ರಕಾರ, ಸಂಬಂಧ ಮುರಿದುಬಿದ್ದ ಬಳಿಕ ಶೇ. 42ರಷ್ಟು ಪುರುಷರು ಆತ್ಮ*ತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮಹಿಳೆಯರಲ್ಲಿ ಈ ಪ್ರಮಾಣ ಶೇ. 22ರಷ್ಟಿದೆ ಎಂದೂ ಉಲ್ಲೇಖಿಸಲಾಗಿದೆ. ಇಷ್ಟಾದರೂ ಸಮಾಜದಲ್ಲಿ ಪುರುಷರನ್ನು ಮೋಸ ಮಾಡುವವರು ಅಥವಾ ಕಡಿಮೆ ಭಾವನಾತ್ಮಕತೆಯುಳ್ಳವರು ಎಂದು ಭಾವಿಸಲಾಗುತ್ತದೆ. ವಾಸ್ತವದಲ್ಲಿ, ಸಂಬಂಧ ಮುರಿದುಬಿದ್ದಾಗ ಪುರುಷರೂ ತೀವ್ರವಾದ ಮಾನಸಿಕ ನೋವನ್ನು ಅನುಭವಿಸುತ್ತಾರೆ. ಆದ್ದರಿಂದ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರಿಗೆ ಸೂಕ್ತವಾದ ಮಾನಸಿಕ ಬೆಂಬಲ ನೀಡುವುದು ಅತ್ಯಂತ ಮುಖ್ಯ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.






