ಅಷ್ಟಕ್ಕೂ ಈ ಡೇಟಿಂಗ್ ಅಂದ್ರೇನು, ಅಲ್ಲಿ ಸೆಕ್ಸೂ ಇರುತ್ತಾ?

First Published 14, Sep 2020, 5:49 PM

ವಯಸ್ಸಿಗೆ ಬಂದ ಒಂದು ಹುಡುಗ, ಹುಡುಗಿ ಮದುವೆಯಾಗುತ್ತಾರೋ, ಬಿಡುತ್ತಾರೋ. ಆದರೆ, ಸುತ್ತಿ ಸುತ್ತಿ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಯತ್ನಿಸುತ್ತಾರಲ್ಲ ಅದಕ್ಕೆ ಡೇಟಿಂಗ್ ಎಂಬ ಹೆಸರು ಇದೆ. ಬೇರೆ ಬೇರೆ ಜೋಡಿಗಳಲ್ಲಿ ಇದರ ಆಳ, ಅಗಲ ಬೇರೆಯಾಗಿರುವುದು ಹೌದಾದರೂ, ಡೇಟಿಂಗ್ ಎನ್ನುವುದು ಸೀದಾಸಾದ ಗೆಳೆತನಕ್ಕಿಂತ ಒಂದು ಮೆಟ್ಟಿಲು ಮೇಲೆ. ಬೆಸೆದುಕೊಂಡ ಪ್ರೇಮ ಬಂಧಕ್ಕಿಂತ ಒಂದು ಮೆಟ್ಟಿಲು ಕೆಳಗೆ. ಹೀಗೆ ವಯಸ್ಕ ಮನಸ್ಸುಗಳು ಗಾರ್ಡನ್, ಪಾರ್ಕ್, ಥಿಯೇಟರ್, ಶಾಪಿಂಗ್ ಮಾಲ್‌ಗಳನ್ನು ಸುತ್ತಿ ಸುತ್ತೀ ಮದುವೆ ಬೇಕಾದರೂ ಆಗಬಹುದು, ಇಲ್ಲ ಹೊಂದಾಣಿಕೆ ಬರಲಿಲ್ಲವಂದರೆ ತಮ್ಮ ದಾರಿ ತಾವು ನೋಡಿಕೊಳ್ಳಬಹುದು. ಒಟ್ಟಿನಲ್ಲಿ ತನ್ನ ಜೀವನಕ್ಕೆ ಉತ್ತಮ companion ಬೇಕೆಂಬ ಹಪಾಹಪಿಯಲ್ಲಿ ಎರಡು ಜೀವಗಳು ತಮ್ಮಿಷ್ಟದಂತೆ ಸುತ್ತಾಡುತ್ತರಲ್ಲ ಅದು ಡೇಟಿಂಗ್. ಅದರ ಸುತ್ತೊಂದು ಸುತ್ತು....

ಹಿಂದೊಂದು ಕಾಲವಿತ್ತು. ಆಕರ್ಷಿತನಾದ ಹುಡುಗಿಗೆ ಹುಡುಗ ಗೀಚಿ ಗೀಚಿ, ಸರಿ ಹೋಗಲಿಲ್ಲವೆಂದು ಹರಿದು ಹಾಕಿ, ಕಡೆಗೊಂದು ಪತ್ರವೊಂದನ್ನು ಕೈಗಿಡುತ್ತಿದ್ದ. ಒಪ್ಪಿದರೆ ಒಪ್ಪುತ್ತಿದ್ದಳು. ಇಲ್ಲವೆಂದರೆ ಇಲ್ಲ. ಅಕಸ್ಮಾತ್ ಒಪ್ಪಿದರೆ ಅಲ್ಲೆಲ್ಲೋ ಕದ್ದು ಮುಚ್ಚಿ ಭೇಟಿಯಾಗುತ್ತಿದ್ದರು. ಮನೆಯವರಿಗೆ ಗೊತ್ತಾಗಿ ಬಿಟ್ಟರೆ ಏನೋ ಅನಾಹುತವಾಗುತ್ತಿದೆ ಎಂದು ಆ ಜೋಡಿಗೆ ಮದುವೆ ಮಾಡಿಸುತ್ತಿದ್ದರು, ಇಲ್ಲ ಹುಡುಗಿಗೆ ಬೇರೆ ಹುಡುಗನೊಂದಿಗೆ ಧಾರೆ ಎರೆದು ಕೊಡುತ್ತಿದ್ದರು. ಒಬ್ಬರಿಗೊಬ್ಬರು ಸುತ್ತಿದ್ದೂ ಇಲ್ಲ, ಅರ್ಥ ಮಾಡಿಕೊಂಡಿದ್ದು ಸೊನ್ನೆ. ದಾಂಪತ್ಯದ ಬಂಧನದೊಳಗೆ ಬಂಧಿಯಾಗುತ್ತಿದ್ದರು. ಆ ಹುಡಿಗಿಯ ಮನಸ್ಸಲ್ಲಿ ಸಾವಿರ ಬೇಗೆ.

ಕಾಲ ಬದಲಾಗಿದೆ. ಕೈಯಲ್ಲಿ ಮೊಬೈಲ್ ಬಂದಾಗಿದೆ. ಲವ್ ಆ್ಯಟ್ ಫಸ್ಟ್ ಸೈಟ್‌ನಂಥ ಉನ್ಮಾದಗಳು ಕಡಿಮೆಯಾಗಿದೆ. ಕಡೇ ಉಸಿರಿರುವರೆಗೂ ಪ್ರೀತಿಸುತ್ತೇನೆಂಬ ವಾಗ್ವಾದಗಳು ಅರ್ಥ ಕಳೆದುಕೊಂಡಿದೆ. ಮೊಬೈಲ್ ಚಾಟಿಂಗ್ ಶುರುವಾದ ಕೂಡಲೇ, ಡೇಟಿಂಗ್ ಸಹ ಶುರುವಾಗುತ್ತೆ. ಈ ಎಳೇ ಜೀವಗಳು ಎಷ್ಟು ಪ್ರಬುದ್ಧವಾಗಿವೆ ಎಂಬುದರ ಮೇಲೆ ಅವರ ಸಂಬಂಧಗಳು ಮುಂದುವರಿಯುತ್ತೆ. ವಯಸ್ಸು, ಸ್ಟೇಟಸ್‌ಗೆ ತಕ್ಕಂತೆ ಡೇಟಿಂಗ್ ಮೂಲಕ ಬಾಂಧವ್ಯ ಬೆಸೆದುಕೊಳ್ಳುತ್ತೆ. ಪ್ರಬುದ್ಧರಾಗಿಲ್ಲವೆಂದರೆ ಪಾರ್ಕಿನಲ್ಲಿಯೇ ಚಕ್ಕಂದ ಶುರು ಮಾಡಿಕೊಂಡು, ಸುತ್ತಮುತ್ತಲಿರೋ ಮಂದಿಗೆ ಇರಿಸು ಮುರಿಸು ಮಾಡೋ ಜೋಡಿಗಳೂ ಏನೂ ಕಡಿಮೆ ಇಲ್ಲ.

ಜೀವನದಲ್ಲಿ ಸೆಟಲ್ ಆದ್ಮೇಲೆ ಸಂಗಾತಿ ಹುಡುಕುತ್ತಿದ್ದ ಕಾಲ ಇದಲ್ಲ. ಹುಡುಗಿ ಸಿಕ್ಕಾಗ ಸುತ್ತಾಡೋ ಕಾಲ. ಕೈಯಲ್ಲಿ ದುಡ್ಡಿದ್ದರೆ ಮತ್ತಷ್ಟು ಮಜಾ. ಆರ್ಥಿಕವಾಗಿ ಸದೃಢವಾಗಿಲ್ಲದವನು ಅವಕಾಶವಂಚಿತನಾಗಿ ಅವಮಾನಕ್ಕೀಡಾಗುವುದೂ ಇದೆ. ಆತ್ಮವಿಶ್ವಾಸದಿಂದ ಕುಗ್ಗಿ ಹೋಗುವ ಉದಾಹರಣೆಗಳೂ ಇವೆ. ಆದರೆ, ಡೇಟಿಂಗ್ ಒಂದೇ ಜೀವದ ಎಂಡ್ ಪಾಯಿಂಟ್ ಅಲ್ಲ ಎಂಬುವುದು ಅರ್ಥ ಮಾಡಿಕೊಳ್ಳಬೇಕು.

ಕೆಲಸ ಗಿಟ್ಟಿಸಿಕೊಳ್ಳುವುದು ಕೆಲವರಿಗೆ ಕಷ್ಟವಲ್ಲ. ಹುಡುಗ-ಹುಡುಗಿ ಎಂಬ ತಾರತಮ್ಯವಿಲ್ಲದೇ ಕೆಲಸದಲ್ಲಿ ಸೆಟಲ್ ಆಗುತ್ತಾರೆ. ಆರ್ಥಿಕವಾಗಿ ಬಹಳ ಬೇಗ ಸ್ವತಂತ್ರರಾಗುತ್ತಾರೆ. ತಮ್ಮಿಷ್ಟ ಬಂದಂತೆ ಬದುಕುವ ಈಗಿನ ಯುವ ಜನಾಂಗಕ್ಕೆ ತಮ್ಮಿಷ್ಟ ಬಂದ ಸಾಂಗತ್ಯವನ್ನು ಹುಡುಕಿಕೊಳ್ಳುವಷ್ಟು ಸ್ವಾತಂತ್ರ್ಯವನ್ನೂ ಪೋಷಕರು ಕೊಟ್ಟಾಗಿದೆ. ಆದ್ದರಿಂದ ಡೇಟಿಂಗ್ ಎಂಬ ನಿಗೂಢ ಜಗತ್ತಿನೆಡೆಗೆ ಇಂದಿನವರಿಗೆ ಅಗತ್ಯಕ್ಕಿಂತ ಹೆಚ್ಚೇ ಆಕರ್ಷಣೆ.

ಈ ಡೇಟಿಂಗ್‌ನಲ್ಲಿ ಸಾಕಷ್ಟು ವೆರೈಟಿಗಳಿವೆ. ಒಬ್ಬೊಬ್ಬರದ್ದು ಒಂದು ರೀತಿಯ ಅನುಭವ. ಒಂದು ಹುಡುಗ-ಹುಡುಗಿ ಒಟ್ಟಿಗೆ ಓಡಾಡುವುದು, ಒಟ್ಟಾಗಿ ಕಾಲ ಕಳೆಯುವುದು ಹಾಗೂ ಒಬ್ಬರನ್ನೊಬ್ಬರು ಓಲೈಸಿಕೊಳ್ಳಲು ಯತ್ನಿಸುವುದು ಡೇಟಿಂಗ್ ಎನ್ನುತ್ತಾರದರೂ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಇದು ವಿಭಿನ್ನವಾಗಿರುತ್ತದೆ.

ಒಂದಿಬ್ಬರು ಹುಡಗ, ಹುಡುಗಿಯರು ಒಟ್ಟಿಗೆ ಊರಾಚೆ ಎಲ್ಲಿಗೋ ಹೋಗಿ ಸಮಯ ಕಳೆಯಲು ಇಚ್ಛಿಸಿದರೆ ಅದು ಟಬ್ಬಲ್ ಡೇಟಿಂಗ್. ನಾಲ್ಕಾರೂ ಹುಡುಗಿಯರು, ನಾಲ್ಕಾರು ಹುಡಗರೊಂದಿಗೆ ಹೋದರೆ ಗ್ರೂಪ್ ಡೇಟಿಂಗ್. ಇವೆಲ್ಲ ಬಿಡಿ, ಈಗೀಗ ಗುರುತು ಪರಿಚಯವೇ ಇಲ್ಲದವರೊಂದಿಗೂ ಏಕಾಂತ ಅನುಭವಿಸಲು ಹೋಗುವವರಿದ್ದಾರೆ. ಇಂಥ ಸಂಗಾತಿಗಳನ್ನು ಹುಡುಕಿ ಕೊಡಲೆಂದೇ ಹಲವು ಆ್ಯಪ್ ಹಾಗೂ ಹಲವು ವೆಬ್‌ಸೈಟ್‌ಗಳಿವೆ. ಅದಕ್ಕೆ Blind Dating ಎನ್ನುತ್ತಾರೆ.

ತಮ್ಮ ಉದ್ಯೋಗದಲ್ಲಿ ಯಶ ಕಂಡ ಆತ್ಮ ಸ್ಥೈರ್ಯ ಹೊಂದಿರುವ ಹುಡುಗಿ ಅಥವಾ ಹುಡಗನಿಗೆ ತಾವು ಆರಿಸಿಕೊಳ್ಳುವ ಸಂಗಾತಿಯೂ ಹೀಗೆ ಇರಬೇಕೆಂಬ ಅತ್ಯದ್ಭುತ ಕಲ್ಪನೆ ಇರುತ್ತೆ. ಈ ನಿಟ್ಟಿನಲ್ಲಿ ತಮಗೆ ಸರಿ ಹೋಗಬಹುದೆಂಬ ಆಶಯದೊಂದಿಗೆ ಒಬ್ಬಳು ಅಥವಾ ಒಬ್ಬನೊಂದಿಗೆ ಡೇಟಿಂಗ್ ಆರಂಭಿಸುತ್ತಾರೆ. ಆರಂಭದಲ್ಲಿ ಅಲ್ಲೇಯೇ ಆಫೀಸ್ ಸುತ್ತ ಆರಂಭವಾಗುವ ಈ ಸುತ್ತಾಡುವಿಕೆ, ನಿಧಾನವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತದೆ. ಈತ ಅಥವಾ ಈಕೆ ತನ್ನ ಜೀವನದ ಪರ್ಫೆಕ್ಟ್ ಪಾರ್ಟನರ್ ಆಗುತ್ತಾಳಾ ಎಂಬುದನ್ನು ಲೆಕ್ಕಚಾರ ಹಾಕುತ್ತಲೇ ಈ ಡೇಟಿಂಗ್ ಮುಂದುವರಿಯುತ್ತದೆ.

ತಮ್ಮ ಆಶಯಗಳು, ಆಕಾಂಕ್ಷೆಗಳು, ಬೇಕು ಬೇಡಗಳು...ಹೀಗೆ ಜೀವನದಲ್ಲಿ ಪ್ರಮುಖ ಅಗತ್ಯ ಅಂಶಗಳನ್ನು ಪ್ರಬುದ್ಧ ವಯಸ್ಕರು ಒಬ್ಬರಿಗೊಬ್ಬರು ಶೇರ್ ಮಾಡಿಕೊಂಡು, ಸುತ್ತಾಡುವುದಿದೆ. ಓಕೆ, ಇವನೊಂದಿಗೆ ಬದುಕಬಲ್ಲೆ ಎಂಬ ವಿಶ್ವಾಸ ಮೂಡಿದಾಗ ತಮ್ಮ ಸಂಬಂಧವನ್ನು ಮತ್ತೊಂದು ಮೆಟ್ಟಿಲು ಮೇಲೇರಿಸಲು ಮುಂದಾಗುತ್ತದೆ ಜೋಡಿ. ಅಲ್ಲಿಯೂ ಇವನೇ ಸೂಕ್ತ ಕಂಪಾನಿಯನ್ ಎನಿಸಿದರೆ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಡಬಹುದು.

ಮನಸ್ಸು, ವ್ಯಕಿತ್ವಕ್ಕೆ ಸರಿ ಹೋಗುವವರೊಂದಿಗೆ ಡೇಟಿಂಗ್ ಆರಂಭಿಸುವುದು ಒಳ್ಳೆಯ ಲಕ್ಷಣ. ಇಲ್ಲದಿದ್ದರೆ ಅಲ್ಲಿಯೂ ಕಿರಿಕಿರಿ ಆರಂಭವಾಗುತ್ತದೆ. ತಮ್ಮ individualityಯನ್ನು ಬಿಟ್ಟು ಕೊಡಬೇಕಾದ ಪರಿಸ್ಥಿತಿ ಬಂದರೆ ಅಥವಾ ಸ್ವಾಭಿಮಾನಕ್ಕೆ ಧಕ್ಕೆ ತರುವಂತ ಸಂಬಂಧ ಇದಾಗಿದ್ದರೆ, ಅಂಥದ್ದೊಂದು ಸಂಬಂಧವನ್ನು ಅಲ್ಲಿಯೇ ಮುರಿದುಕೊಳ್ಳುವುದು ಒಳ್ಳೆಯದು. ಎಲ್ಲವನ್ನೂ ಕಳೆದುಕೊಂಡ ಮೇಲೆ ಪರಿತಪಿಸುವುದಕ್ಕಿಂತ, ಇನ್ನೂ ಏನೂ ಆರಂಭವಾಗುವ ಮುನ್ನವೇ ಸಂಬಂಧದಿಂದ ಕಳಚಿಕೊಳ್ಳುವಂಥ ಚಾಕಚಕ್ಯತೆ ಇದ್ದರೆ ಮಾತ್ರ ಇಂಥದ್ದೊಂದು ವ್ಯೂಹದೊಳಗೆ ಎಂಟ್ರಿ ಕೊಡುವುದು ಒಳಿತು. ಇಲ್ಲದಿದ್ದರೆ ಜೀವನ ಬರ್ಬಾದ್ ಆಗಬಹುದು.

ಈಗಂತೂ ಆನ್‌ಲೈನ್ ಜಮಾನ. ಸ್ನೇಹ, ಪ್ರೀತಿ ಎಲ್ಲವೂ ಆನ್‌ಲೈನ್‌ನಲ್ಲಿಯೇ ಆರಂಭವಾಗಿ ನಂತರ ಜೋಡಿಗಳು ಭೇಟಿಯಾಗುವುದಿದೆ. ಅಲ್ಲಿ ಮತ್ತೆ ಏನು ಬೇಕಾದರೂ ಆಗಬಹುದು. ಚಾಟಿಂಗ್ ಮಾಡುವಾಗ ಹೇಳಿದ್ದಲ್ಲವೂ ಸುಳ್ಳೂ ಆಗಿರಬಹುದು. ಆ ಸಂಬಂಧ ವಂಚನೆಗೂ ಎಡೆ ಮಾಡಿಕೊಡಬಹುದು. ಒಟ್ಟಿನಲ್ಲಿ ನಮ್ಮ ಜೀವನ ನಮ್ಮ ಕೈಯಲ್ಲಿ ಎಂಬುದನ್ನು ಮರೆಯಬಾರದು. ಪ್ರತಿ ಹೆಜ್ಜೆ ಇಡುವಾಗಲೂ ಅಗತ್ಯಕ್ಕಿಂತ ಹೆಚ್ಚು ಎಚ್ಚರ ತೆಗೆದುಕೊಂಡರೆ ಮಾತ್ರ ಬದುಕು ಬಂಗಾರವಾಗುತ್ತದೆ ಎಂಬುದನ್ನು ಮರೆಯಬಾರದು.

loader