ಪುರುಷ ಮಹಾಶಯನಿಗೆ ತಮ್ಮ ಗರ್ಲ್ ಫ್ರೆಂಡ್ಸ್‌ನಿಂದ ಇವನ್ನು ಕೇಳೋ ಆಸೆ!
ಹುಡುಗಿಯರು ಯಾವಾಗಲೂ ತಮ್ಮ ಬಗ್ಗೆ ಇತರರು ಹೇಳೋದನ್ನು, ಹೊಗಳೋದನ್ನು ಕೇಳಲು ಇಷ್ಟಪಡ್ತಾರೆ. ಅವರ ಡ್ರೆಸ್ ಬಗ್ಗೆ, ಮೇಕಪ್ ಬಗ್ಗೆ ಹೇಳಿದಾಗ ತುಂಬಾನೆ ಖುಷಿ ಪಡ್ತಾರೆ. ವಿಶೇಷವಾಗಿ ಅವರ ಬಾಯ್ ಫ್ರೆಂಡ್ ಅಥವಾ ಪತಿ ಹೊಗಳಿದಾಗ, ಹುಡುಗಿಯರಿಗಾಗುವ ಖುಷಿ ಅಷ್ಟಿಷ್ಟಲ್ಲ. ಆದರೆ ಹುಡುಗರೂ ಹುಡುಗಿಯರ ಬಾಯಿಯಿಂದ ಕೆಲವು ವಿಷಯಗಳನ್ನು ಕೇಳಲು ಇಷ್ಟಪಡುತ್ತಾರೆ ಎಂದು ನಿಮಗೆ ತಿಳಿದಿದೆಯೇ?
ಹೌದು, ಹುಡುಗರು ಸಹ ತಮ್ಮ ಸ್ಮಾರ್ಟ್‌ನೆಸ್ ಮತ್ತು ಸೌಂದರ್ಯವನ್ನು ಮೆಚ್ಚಬೇಕೆಂದು ಬಯಸುತ್ತಾರೆ. ಆದರೂ, ಹುಡುಗರು ತಮ್ಮ ಡ್ರೆಸ್ ಸೆನ್ಸ್ ಬಗ್ಗೆ, ಸ್ಮಾರ್ಟ್ ನೆಸ್ ಬಗ್ಗೆ ಹೊಗಳಿಕೆಯನ್ನು ಕೇಳೋದು ತುಂಬಾ ವಿರಳ. ಹುಡುಗಿಯರ ಬಾಯಿಯಿಂದ ಯಾವುದೇ ಹುಡುಗ ತನಗಾಗಿ ಹೊಗಳಿಕೆಯ ಮಾತುಗಳನ್ನ ಕೇಳುವುದು ಉತ್ತಮ. ಅವನು ಕೇಳಲು ಬಯಸುವ ವಿಷಯಗಳನ್ನು ತನ್ನ ಸಂಗಾತಿ ತನಗೆ ಹೇಳಬೇಕೆಂದು ಬಯಸುತ್ತಾನೆ. ಆದ್ರೆ, ಹುಡುಗಿಯರು ಇದನ್ನು ಅರ್ಥಮಾಡಿಕೊಳ್ಳೋದಿಲ್ಲ. ಇದರಿಂದ ಹುಡುಗನ ನಿರೀಕ್ಷೆಗಳು ಮುರಿದು ಹೋಗುತ್ತೆ.
ನೀವು ಒಬ್ಬ ಹುಡುಗನನ್ನು ಮೆಚ್ಚಿಸಲು ಅಥವಾ ನಿಮ್ಮ ಬಾಯ್ ಫ್ರೆಂಡ್ ಮತ್ತು ಗಂಡನನ್ನು ಸಂತೋಷಪಡಿಸಲು ಬಯಸಿದರೆ, ಅವರಿಗೆ ವಿಶೇಷ ಭಾವನೆಯನ್ನು ಮೂಡಿಸಲು, ನೀವು ಅವರನ್ನು ಹೊಗಳಬೇಕು, ಅವರ ಬಗ್ಗೆ ಒಳ್ಳೇದನ್ನು ಹೇಳಬೇಕು, ಜೊತೆಗೆ ಗೌರವದಿಂದ ಮಾತನಾಡಬೇಕು. ಇದರಿಂದ ಹುಡುಗರು ಬೇಗ ಇಂಪ್ರೆಸ್ ಆಗ್ತಾರೆ.
ಅವರ ಲುಕ್ ನ್ನು ಹೊಗಳಿ
ಹುಡುಗರು ತಮ್ಮ ಲುಕ್ ಅನ್ನು ಮೆಚ್ಚಿಕೊಳ್ಳುವ ಹುಡುಗಿಯರನ್ನು ಇಷ್ಟ ಪಡ್ತಾರೆ. ಅಲ್ಲದೇ ತನ್ನ ಸಂಗಾತಿಯ ಬಾಯಿಯಿಂದ ತನಗಾಗಿ ಹೊಗಳಿಕೆಯ ಮಾತುಗಳನ್ನು ಸಹ ಕೇಳಲು ಇಷ್ಟಪಡುತ್ತಾನೆ. ಹುಡುಗಿಯೊಬ್ಬಳು 'ನಿಮ್ಮ ಕಣ್ಣುಗಳು, ಲುಕ್ ಅಥವಾ ತುಟಿಗಳು ಚೆನ್ನಾಗಿವೆ' ಎಂದು ಹೇಳಿದರೆ, ಹುಡುಗನು ಈ ವಿಷಯಗಳನ್ನು ತುಂಬಾ ಇಷ್ಟಪಡುತ್ತಾನೆ.
ಗೌರವದಿಂದ ಮಾತನಾಡಿ
ಹುಡುಗರು ಜೆಂಟಲ್ ಮೆನ್ (gentleman) ಆಗಿರಬೇಕೆಂದು ಹುಡುಗಿಯರು ನಿರೀಕ್ಷಿಸುತ್ತಾರೆ. ಅವರು ಹುಡುಗಿಯರನ್ನು ಗೌರವಿಸುತ್ತಾರೆ. ಆದರೆ ಹುಡುಗರು ಸಹ ತಮ್ಮ ಸಂಗಾತಿಯಿಂದ ಅದನ್ನೇ ನಿರೀಕ್ಷಿಸುತ್ತಾರೆ. ಅವರು ತನ್ನ ಸಂಗಾತಿ ಕೂಡ ತನ್ನನ್ನು ಗೌರವಿಸಬೇಕೆಂದು ಬಯಸುತ್ತಾನೆ. ಆದುದರಿಂದ ಅವರನ್ನು ಇಂಪ್ರೆಸ್ ಮಾಡಲು ಅವರೊಂದಿಗೆ ಗೌರವದಿಂದ ಮಾತನಾಡಿ.
ನಂಬಿಕೆ ಇರಲಿ
ಹುಡುಗಿಯರು ತಮ್ಮ ಸಂಗಾತಿಯನ್ನು ನಂಬುತ್ತಾರೆ, ಅದೇ ರೀತಿ ಹುಡುಗರು ಸಹ ಸಂಗಾತಿಯನ್ನು ನಂಬುತ್ತಾರೆ. ಹುಡುಗಿಯರು ತಾವು ತಮ್ಮ ಸಂಗಾತಿಯನ್ನು ನಂಬುವುದಾಗಿ ಹೇಳಬೇಕು, ಅದಕ್ಕೆ ಸರಿಯಾಗಿ ನಡೆಯಬೇಕು, ಹಾಗಿದ್ರೆ ಮಾತ್ರ ಹುಡುಗನು ಇದನ್ನು ತುಂಬಾ ಇಷ್ಟಪಡುತ್ತಾನೆ. ಹುಡುಗಿಯರು ತಮ್ಮ ಸಂಗಾತಿಯನ್ನು ತಮ್ಮ ಜೀವನದ ಸೂಪರ್ ಹೀರೋ ಎಂದು ಪರಿಗಣಿಸಿದಾಗ, ಹುಡುಗರು ಅದರ ಬಗ್ಗೆ ಹೆಮ್ಮೆ ಪಡುತ್ತಾರೆ. ಹುಡುಗರು ತಮ್ಮ ಸಂಗಾತಿಯ ಬಾಯಿಂದ 'ನಾನು ನಿಮ್ಮನ್ನು ನಂಬುತ್ತೇನೆ' ಎಂದು ಕೇಳಲು ಬಯಸುತ್ತಾರೆ.
ಅವರ ಕೆಲಸಗಳನ್ನು ಗಮನಿಸಿ
ಹುಡುಗಿಯರು ತಮ್ಮ ಸಂಗಾತಿಯ ಕೆಲಸ ಮತ್ತು ಪ್ರಯತ್ನಗಳನ್ನು ಗಮನಿಸಿದಾಗ ಮತ್ತು ಅವರ ಕೆಲಸವನ್ನು ಹೊಗಳಿದಾಗ, ಹುಡುಗರು ತುಂಬಾ ಸಂತೋಷವಾಗಿರುತ್ತಾರೆ. ಹುಡುಗರು ಸಂಗಾತಿಯನ್ನು ಇಂಪ್ರೆಸ್ ಮಾಡಲು ಅನೇಕ ಕೆಲಸಗಳನ್ನು ಮಾಡುತ್ತಾರೆ. ಡೇಟಿಂಗ್‌ಗೆ ಸ್ಥಳ ಆಯ್ಕೆ ಮಾಡುವುದರಿಂದ ಹಿಡಿದು, ಊಟದಲ್ಲಿ ಸಂಗಾತಿಯ ನೆಚ್ಚಿನ ಭಕ್ಷ್ಯವನ್ನು ಆರ್ಡರ್ ಮಾಡುವವರೆಗೆ ತಮ್ಮ ಸಂಗಾತಿಗಾಗಿ ಎಲ್ಲವನ್ನೂ ಮಾಡ್ತಾರೆ.
ಹುಡುಗರು ಸಂಗಾತಿ ಬೇಕು, ಬೇಡಗಳ ಬಗ್ಗೆ ಇಷ್ಟೊಂದು ಗಮನ ಹರಿಸುವಾಗ, ತನ್ನ ಸಂಗಾತಿ ಅದನ್ನು ಗಮನಿಸಬೇಕೆಂದು ಅವರು ಬಯಸುತ್ತಾರೆ. ಅಷ್ಟೇ ಇವನ್ನು ಗಮನಿಸಬೇಕೆಂದೂ ಬಯಸುತ್ತಾರೆ. ಜೊತೆಗೆ ತಮ್ಮ ಪ್ರಯತ್ನಗಳನ್ನು ಗೆಳತಿ ಶ್ಲಾಘಿಸಿದರೆ ಮತ್ತು ಅವುಗಳನ್ನು ಉತ್ತೇಜಿಸಿದರೆ ಹುಡುಗರಿಗೆ ತುಂಬಾ ಖುಷಿ.