ಈ ಕೆಲಸ ಮಾಡೋರಿಗೆ ಹೆಚ್ಚಾಗಿ ಅಕ್ರಮ ಸಂಬಂಧ ಇರುತ್ತಂತೆ; ಮತ್ತೊಮ್ಮೆ ಸಮೀಕ್ಷೆಯಲ್ಲಿ ಬಹಿರಂಗ
Cheating by Profession: ಇತ್ತೀಚಿನ ಅಧ್ಯಯನದ ಪ್ರಕಾರ, ನಿಮ್ಮ ಸಂಗಾತಿಯ ವೃತ್ತಿಯು ಅವರು ಮೋಸ ಮಾಡುವ ಸಾಧ್ಯತೆಯಿದೆಯೇ ಅಥವಾ ಇಲ್ಲವೇ ಎಂಬುದರ ಪ್ರಮುಖ ಸೂಚಕವಾಗಿದೆ ಎಂದು ತೀರ್ಮಾನಿಸಿದೆ. ಕೇಳಲು ವಿಚಿತ್ರವೆನಿಸಬಹುದು. ಆದರೆ ಈ ಸಮೀಕ್ಷೆಯಿಂದ ಬಹಿರಂಗಗೊಂಡ ಸತ್ಯಗಳು ಆಶ್ಚರ್ಯಕರವಾಗಿವೆ.

ಸಮೀಕ್ಷೆಯಿಂದ ಬಹಿರಂಗಗೊಂಡ ಸತ್ಯಗಳು
ಕಾಲ ಕಳೆದಂತೆ ಜನರ ನಡುವಿನ ಸಂಬಂಧಗಳು ವಿಶೇಷವಾಗಿ ವೈವಾಹಿಕ ಸಂಬಂಧಗಳು ಮೊದಲಿನಂತೆ ಗಟ್ಟಿಯಾಗಿ ಇಲ್ಲ. ಮಾತೆತ್ತಿದರೆ ಡಿವೋರ್ಸ್ ಅಥವಾ ಅಫೇರ್. ಒಂದು ಕಾಲದಲ್ಲಿ ಸಪ್ತಪದಿ ತುಳಿದರೆಂದರೆ ಅವರ ಈ ಬಂಧವು ಏಳು ಜನ್ಮಗಳವರೆಗೆ ಇರುತ್ತದೆ ಹೇಳಲಾಗುತ್ತಿತ್ತು. ಆದರೆ ಇಂದು ಅದೇ ಬಂಧವು ದಾಂಪತ್ಯ ದ್ರೋಹಕ್ಕೆ ಕಾರಣವಾಗಿದೆ. ತಮ್ಮ ಸಂಗಾತಿ ಮೋಸ ಮಾಡುತ್ತಿದ್ದಾರೆ ಎಂದು ಅನುಮಾನಿಸುವುದು ಯಾರಿಗಾದರೂ ನರಕದಂತೆ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ, ನಿಮ್ಮ ಸಂಗಾತಿಯ ವೃತ್ತಿಯು ಅವರು ಮೋಸ ಮಾಡುವ ಸಾಧ್ಯತೆಯಿದೆಯೇ ಅಥವಾ ಇಲ್ಲವೇ ಎಂಬುದರ ಪ್ರಮುಖ ಸೂಚಕವಾಗಿದೆ ಎಂದು ತೀರ್ಮಾನಿಸಿದೆ. ಕೇಳಲು ವಿಚಿತ್ರವೆನಿಸಬಹುದು. ಆದರೆ ಈ ಸಮೀಕ್ಷೆಯಿಂದ ಬಹಿರಂಗಗೊಂಡ ಸತ್ಯಗಳು ಆಶ್ಚರ್ಯಕರವಾಗಿವೆ.
ಆಶ್ಲೇ ಮ್ಯಾಡಿಸನ್ ನಡೆಸಿದ ಸಮೀಕ್ಷೆ
ವಿವಾಹಿತರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಡೇಟಿಂಗ್ ಸೈಟ್ ಆಶ್ಲೇ ಮ್ಯಾಡಿಸನ್, ತನ್ನ ಸಾವಿರಕ್ಕೂ ಹೆಚ್ಚು ಬಳಕೆದಾರರ ಸಮೀಕ್ಷೆಯನ್ನು ನಡೆಸಿತು. ವಿಶೇಷವಾಗಿ ಕೆಲವು ಜಾಬ್‌ಗಳಲ್ಲಿ ಕೆಲಸ ಮಾಡುವ ಜನರು ಇತರರಿಗಿಂತ ವಿವಾಹೇತರ ಸಂಬಂಧಗಳನ್ನು ಹೊಂದುವ ಸಾಧ್ಯತೆ ಹೆಚ್ಚು ಎಂದು ಬಹಿರಂಗಪಡಿಸಿದೆ. ಹಾಗಾದರೆ ಈ ಪಟ್ಟಿಯಲ್ಲಿರುವ ವೃತ್ತಿ ಯಾವುವು ಎಂದು ನೋಡೋಣ.
ಒಂದು ನಿರ್ದಿಷ್ಟ ಗುಂಪಿನ ಅಧ್ಯಯನ ಮಾತ್ರ
ಆದರೆ ನೆನಪಿಡಿ ಒಂದೇ ವೃತ್ತಿಯಲ್ಲಿರುವ ಎಲ್ಲಾ ಜನರು ಮೋಸ ಮಾಡುತ್ತಾರೆ ಎಂದು ಭಾವಿಸುವುದು ಸರಿಯಲ್ಲ. ನಂಬಿಕೆ ಮತ್ತು ಸಂವಹನವು ಯಾವುದೇ ಸಂಬಂಧದ ಅಡಿಪಾಯ. ಈ ಸಮೀಕ್ಷೆಯು ಒಂದು ನಿರ್ದಿಷ್ಟ ಗುಂಪಿನ ಅಧ್ಯಯನ ಮಾತ್ರ. ವ್ಯಕ್ತಿಯ ನೈತಿಕ ಮೌಲ್ಯಗಳು ಮತ್ತು ವ್ಯಕ್ತಿತ್ವವು ಅವರ ವೃತ್ತಿಗಿಂತ ಹೆಚ್ಚು ಮುಖ್ಯವಾಗಿದೆ.
ಟ್ರೇಡ್ಸ್ (ಕನ್‌ಸ್ಟ್ರಕ್ಷನ್, ಪ್ಲಂಬಿಂಗ್, ವೆಲ್ಡಿಂಗ್)
ಹೌದು, ಕನ್‌ಸ್ಟ್ರಕ್ಷನ್, ಪ್ಲಂಬಿಂಗ್, ವೆಲ್ಡಿಂಗ್ ಕೆಲಸ ಮಾಡುವವರು ವಂಚನೆ ಮಾಡುವ ಸಾಧ್ಯತೆ ಹೆಚ್ಚು ಎಂದು ಸಮೀಕ್ಷೆಯು ಕಂಡುಹಿಡಿದಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇಕಡ 29 ರಷ್ಟು ಪುರುಷರು ಮತ್ತು ಶೇಕಡ 4 ರಷ್ಟು ಮಹಿಳೆಯರು ಎಂಬುದು ಗಮನಾರ್ಹ.
ವೈದ್ಯರು
ಜೀವ ಉಳಿಸುವ ವೈದ್ಯರು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ಎಂಬುದು ಶಾಕಿಂಗ್. ಒತ್ತಡದ ಕೆಲಸದ ಸಮಯ, ಲಾಂಗ್ ಶಿಫ್ಟ್ ಮತ್ತು ರೋಗಿಗಳೊಂದಿಗಿನ ಭಾವನಾತ್ಮಕ ನಿಕಟತೆಯಿಂದಾಗಿ ವೈದ್ಯರು ಮತ್ತು ದಾದಿಯರು ತಮ್ಮ ಪಾರ್ಟ್‌ನರ್ಸ್‌ಗೆ ಮೋಸ ಮಾಡುವ ಸಾಧ್ಯತೆ ಹೆಚ್ಚು ಎಂದು ಕಂಡುಬಂದಿದೆ. ಈ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ. 23 ರಷ್ಟು ಜನರು ವೈದ್ಯಕೀಯ ಕ್ಷೇತ್ರದ ಮಹಿಳೆಯರು. ಪುರುಷರು ಕೇವಲ ಶೇ. 5 ರಷ್ಟಿದ್ದಾರೆ.
ಐಟಿ
ಹೆಚ್ಚಿನ ಕೆಲಸದ ಹೊರೆ, ತೀವ್ರ ಒತ್ತಡ ಮತ್ತು ಪ್ರಾಜೆಕ್ಟ್ ಡೆಡ್‌ಲೈನ್ ಹಾಕಿಕೊಂಡು ಕೆಲಸ ಮಾಡುತ್ತಿರುವ ಐಟಿ ಪ್ರೊಫೆಶನಲ್ಸ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕಚೇರಿಗಳಲ್ಲಿ ಹೆಚ್ಚಿನ ಸಮಯ ಕಳೆಯುವುದು ಮತ್ತು ಸಹೋದ್ಯೋಗಿಗಳೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳುವುದರಿಂದ ಇದು ಸಂಭವಿಸಬಹುದು.
ಸ್ವಂತ ವ್ಯವಹಾರ
ಸ್ವಂತ ವ್ಯವಹಾರ ಹೊಂದಿರುವವರು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರಿಗೆ ನಿಗದಿತ ಕೆಲಸದ ಸಮಯವಿಲ್ಲ. ವ್ಯಾಪಾರ ಕಾರ್ಯಗಳಲ್ಲಿ ಅವರು ಆಗಾಗ್ಗೆ ಹೊಸ ಜನರನ್ನು ಭೇಟಿಯಾಗುತ್ತಾರೆ ಮತ್ತು ಮನೆ ಮತ್ತು ಸಂಗಾತಿಯಿಂದ ದೂರವಿರುತ್ತಾರೆ ಎಂಬ ಅಂಶವು ಅವರನ್ನು ದಾರಿ ತಪ್ಪಿಸಬಹುದು ಎಂದು ಸಮೀಕ್ಷೆ ಹೇಳಿದೆ.
ತಮ್ಮ ಸಂಗಾತಿಗೆ ಮೋಸ ಮಾಡುವ ಇತರ ಕ್ಷೇತ್ರಗಳೆಂದರೆ ಹಣಕಾಸು, ಶಿಕ್ಷಣ, ಮಾರ್ಕೆಟಿಂಗ್ ಮತ್ತು ಸಂವಹನ, ಸಾಮಾಜಿಕ ಕಾರ್ಯ, ಚಿಲ್ಲರೆ ವ್ಯಾಪಾರ ಮತ್ತು ಆತಿಥ್ಯ. ರಾಜಕೀಯ, ಕಲೆ ಮತ್ತು ಕಾನೂನು ವೃತ್ತಿಯಲ್ಲಿರುವವರು ಈ ಪಟ್ಟಿಯಲ್ಲಿ ಸ್ವಲ್ಪ ಕೆಳಗಿದ್ದಾರೆ.