Chanakya neeti : ಹೆಂಡತಿಯಲ್ಲಿ ಈ ಗುಣಗಳಿದ್ದರೆ ಗಂಡನಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ!
ಮದುವೆಯಾದ ಬಳಿಕ ಉತ್ತಮ ದಾಂಪತ್ಯ ಜೀವನ ಸಾಗಿಸಲು ಪತಿ ಮತ್ತು ಪತ್ನಿ ಇಬ್ಬರ ನಡವಳಿಕೆ ಉತ್ತಮವಾಗಿರಬೇಕು. ಪತ್ನಿಯ ಕೆಲವು ಗುಣಗಳು (Character of wife) ಇಡೀ ಕುಟುಂಬಕ್ಕೆ ಸಂತೋಷದ ಜೀವನವನ್ನು ನೀಡುತ್ತವೆ, ಜೊತೆಗೆ ಅವರನ್ನು ಅನೇಕ ತೊಂದರೆಗಳಿಂದ ರಕ್ಷಿಸುತ್ತವೆ. ಇಂತಹ ಸದ್ಗುಣಶೀಲ ಹೆಂಡತಿಯನ್ನು ಪಡೆಯುವ ಪುರುಷರು ಯಶಸ್ವಿ ಮತ್ತು ಸಂತೋಷದ ಜೀವನವನ್ನು ಪಡೆಯುತ್ತಾರೆ.
ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯು ಅದರ ಹಿಂದೆ ಮಹಿಳೆಯರು ಇರುತ್ತಾರೆ, ಎನ್ನಲಾಗುತ್ತದೆ. ಆದರೆ ಮಹಿಳೆ ತನ್ನ ಗಂಡನನ್ನು ಮಾತ್ರವಲ್ಲದೇ ಇಡೀ ಕುಟುಂಬದ ಜೀವನವನ್ನು ಹಿಮ್ಮುಖಗೊಳಿಸಬಹುದು ಅಥವಾ ಬೆಳವಣಿಗೆಗೆ ಕಾರಣವಾಗಬಹುದು. ಆಚಾರ್ಯ ಚಾಣಕ್ಯ (Acharya Chanakya) ಕೂಡ ಸ್ತ್ರೀ ಪುರುಷರ ಗುಣ ಮತ್ತು ದುರ್ಗುಣಗಳ ಬಗ್ಗೆ ಸಾಕಷ್ಟು ಪ್ರಸ್ತಾಪಿಸಿದ್ದಾರೆ.
ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾದ ಕೆಲವೊಂದು ವಿಷಯಗಳನ್ನು ಅಳವಡಿಸಿಕೊಂಡರೆ, ನಿಮ್ಮ ವೈವಾಹಿಕ ಜೀವನವು (Married Life) ಅತ್ಯುತ್ತಮವಾಗಿರಲು ಸಹಾಯ ಮಾಡುತ್ತದೆ. ಇಂದು, ಚಾಣಕ್ಯ ನೀತಿಯಲ್ಲಿ ಮಹಿಳೆಯರ ಗುಣಗಳ ಬಗ್ಗೆ ನೀಡಿರುವ ಮಾಹಿತಿಯ ಬಗ್ಗೆ ಒಂದಷ್ಟು ಮಾಹಿತಿಯನ್ನು ನೀಡಲಿದ್ದೇವೆ. ಇಂತಹ ಗುಣ ನಡತೆ ಹೊಂದಿರುವ ಹೆಂಡತಿಯನ್ನು ಪಡೆದ ಪುರುಷರು ಅದೃಷ್ಟಶಾಲಿಗಳು ಎಂದು ಹೇಳಲಾಗುತ್ತದೆ.
ಇಂತಹ ಹೆಂಡತಿಯಿದ್ದರೆ ಜೀವನವೇ ಬದಲಾಗುತ್ತದೆ
ಮಹಿಳೆಯರು ಇಡೀ ಕುಟುಂಬದ ಪ್ರಮುಖರಾಗಿದ್ದಾರೆ. ಅವಳು ವಿದ್ಯಾವಂತೆ, ಸುಸಂಸ್ಕೃತ ಮತ್ತು ಪ್ರತಿಭಾವಂತೆಯಾಗಿದ್ದರೆ, ಇಡೀ ಕುಟುಂಬವು ತುಂಬಾ ಸಂತೋಷದ ಜೀವನವನ್ನು ನಡೆಸುತ್ತದೆ. ಆಚಾರ್ಯ ಚಾಣಕ್ಯನ ಪ್ರಕಾರ, ತಮ್ಮ ಹೆಂಡತಿಯಲ್ಲಿ ಕೆಲವು ಗುಣಗಳನ್ನು ಹೊಂದಿರುವ ಪುರುಷರು ಅತ್ಯಂತ ಅದೃಷ್ಟವಂತರು (lucky person). ಇಂತಹ ಸದ್ಗುಣಶೀಲ ಪತ್ನಿ ಜೀವನದಲ್ಲಿ ಮುಂದೆ ಸಾಗಲು ಪ್ರೇರೇಪಿಸುವುದಲ್ಲದೆ, ಪ್ರತಿಯೊಂದು ಕಷ್ಟದಿಂದ ಹೊರಬರಲು ಸಾಕಷ್ಟು ಸಹಾಯ ಮಾಡುತ್ತಾಳೆ.
ತಾಳ್ಮೆ: ತಾಳ್ಮೆ (patience) ಎಂಬುದು ಎಲ್ಲರಿಗೂ ಬಹಳ ಮುಖ್ಯವಾಗಿ ಬೇಕಾಗಿರುವ ಗುಣ, ಆದರೆ ಹೆಂಡತಿ ತಾಳ್ಮೆಯಿಂದಿಲ್ಲದಿದ್ದರೆ, ತೊಂದರೆಗಳು ಅನೇಕ ಪಟ್ಟು ಹೆಚ್ಚಾಗುತ್ತವೆ. ಆದರೆ ಹೆಂಡತಿ ತನ್ನ ಗಂಡನನ್ನು ಪ್ರತಿಯೊಂದು ತೊಂದರೆಯಿಂದ ಹೊರಗಿಡಲು ತುಂಬಾ ಸಹಾಯ ಮಾಡುತ್ತಾಳೆ. ಅವಳು ಪ್ರತಿಯೊಂದು ಸನ್ನಿವೇಶದಲ್ಲೂ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುತ್ತಾಳೆ. ಇಂತಹ ಪತ್ನಿ ಸಿಕ್ಕವರು ಪುಣ್ಯವಂತರು.
ಸಂತೋಷ (Happiness): ತೃಪ್ತಿಯು (satisfaction) ಬಹಳ ಮುಖ್ಯ, ಇಲ್ಲದಿದ್ದರೆ ದುರಾಸೆಯು ವ್ಯಕ್ತಿಯನ್ನು ಹಾಳು ಮಾಡಲು ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಹೆಂಡತಿ ಸಂತೃಪ್ತಳಾಗಿದ್ದರೆ, ಅವಳು ತನ್ನ ಗಂಡನಿಗೆ ದೊಡ್ಡ ಶಕ್ತಿ ಎಂದು ಸಾಬೀತು ಪಡಿಸುತ್ತಾಳೆ ಮತ್ತು ಅತ್ಯಂತ ಕಷ್ಟದ ಸಮಯಗಳನ್ನು ಸಹ ಸುಲಭವಾಗಿ ಜಯಿಸುತ್ತಾಳೆ.
ಶಾಂತ: ಮಹಿಳೆಯ ಕೋಪಕ್ಕೆ ಎಲ್ಲವನ್ನೂ ಸುಟ್ಟು ಬೂದಿ ಮಾಡುವ ಶಕ್ತಿಯಿದ್ದರೆ, ಶಾಂತ ಸ್ವಭಾವದ ಮಹಿಳೆಯನ್ನು ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ತನ್ನ ಜೀವನದಲ್ಲಿ ಶಾಂತ ಹೆಂಡತಿಯ ಬೆಂಬಲವನ್ನು ಹೊಂದಿರುವ ವ್ಯಕ್ತಿಯು ಅತ್ಯಂತ ಅದೃಷ್ಟಶಾಲಿ. ಇಂತಹ ಹೆಂಡತಿ ಮನೆಯಲ್ಲಿ ಶಾಂತಿ ಮತ್ತು ಸಂತೋಷವನ್ನು (happiness) ಕಾಪಾಡಿಕೊಳ್ಳುವುದಷ್ಟೇ ಅಲ್ಲ, ತನ್ನ ಮತ್ತು ತನ್ನ ಕುಟುಂಬದ ಹಿತದೃಷ್ಟಿಯಿಂದ ಪ್ರತಿಯೊಂದು ನಿರ್ಧಾರವನ್ನು ಉದ್ದೇಶಪೂರ್ವಕವಾಗಿ ತೆಗೆದುಕೊಳ್ಳುತ್ತಾಳೆ.
ಸಿಹಿ ಮಾತು : ಕೇವಲ ಸಿಹಿಯಾಗಿ ಮಾತನಾಡುವ (good speaker) ಮೂಲಕ, ಪ್ರತಿಯೊಬ್ಬರೂ ಬಹಳಷ್ಟು ಸಮಸ್ಯೆಗಳನ್ನು ತಪ್ಪಿಸಬಹುದು. ಹೆಂಡತಿ ಮಧುರವಾಗಿ ಮಾತನಾಡಿದರೆ ಜೀವನ ಸುಖಕರವಾಗಿರುತ್ತದೆ ಎಂದುಕೊಳ್ಳಿ. ಇಂತಹ ಪತ್ನಿ ಕುಟುಂಬ, ನೆರೆಹೊರೆಯವರು, ಸಂಬಂಧಿಕರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುತ್ತಾರೆ. ಜೊತೆಗೆ ದಾಂಪತ್ಯ ಜೀವನವು ಸುಖಕರವಾಗಿರುತ್ತದೆ.