ನಟ ದಳಪತಿ ವಿಜಯ್ ಮತ್ತು ನಟಿ ತ್ರಿಶಾ ನಡುವಿನ ಪ್ರೀತಿಯ ವಿಚಾರ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದೆ. ರಾಜಕೀಯ ಪ್ರವೇಶಿಸಿರುವ ವಿಜಯ್, ಪತ್ನಿ ಸಂಗೀತಾ ಅವರಿಂದ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಇದಕ್ಕೆ ತ್ರಿಶಾ ಜೊತೆಗಿನ ಸಂಬಂಧವೇ ಕಾರಣ ಎನ್ನಲಾಗುತ್ತಿದೆ.

ಭಾರತೀಯ ಚಿತ್ರರಂಗದ ಕ್ವೀನ್ ರಶ್ಮಿಕಾ ಮಂದಣ್ಣ ಹಾಗು ವಿಜಯ್ ದೇವರಕೊಂಡ ಮದುವೆ ಆಗಿ ಇಡೀ ದೇಶಕ್ಕೆ ಸಿಹಿ ಹಂಚಿದ್ದಾರೆ. ಇವರಿಬ್ಬರ ಪ್ರೀತಿ, ಮದುವೆ ಮುಗಿದ ಕಥೆ. ಆದ್ರೆ ಈಗ ತಮಿಳು ನಾಡಿನಾದ್ಯಂತ ಸೂಪರ್ ಸ್ಟಾರ್​ ನಟ ದಳಪತಿ ವಿಜಯ್ ಹಾಗೂ ಮೋಸ್ಟ್ ಬ್ಯೂಟಿಫುಲ್​ ನಟಿ ತ್ರಿಶಾ ಪ್ರೀತಿಯ ವಿಚಾರ ದೊಡ್ಡ ಸಂಚಲನ ಸೃಷ್ಟಿಸಿದೆ. ತಮಿಳುನಾಡು ಪೊಲಿಟಿಕ್ಸ್‌ನಲ್ಲಿ ಈ ತಾರಾ ಜೋಡಿಯ ಹೊಸ ಜಗತ್ತೇ ತೆರೆದುಕೊಳ್ಳುತ್ತಿದೆ. ಹಾಗಾದ್ರೆ ಏನಿದು ತ್ರಿಶಾ ವಿಜಯ್ ಕಥೆ ವ್ಯತೆ.. ನೋಡೋಣ ಇವತ್ತಿನ ಸ್ಪೆಷಲ್‌ನಲ್ಲಿ.

ದಳಪತಿ ವಿಜಯ್ ಸಂಸಾರದಲ್ಲಿ ಬಿರುಗಾಳಿ, ತಮಿಳುನಾಡು ರಾಜಕಾರಣದಲ್ಲಿ ಸುಂಟರಗಾಳಿ..!

ಯೆಸ್, ಮಧ್ಯಪ್ರಾಚ್ಯ ಯುದ್ಧದಲ್ಲಿ ನಲುಗಿ ಹೋಗುತ್ತಿದೆ. ಆ ಕಡೆ ತೆಲುಗು ನಾಡಲ್ಲಿ ರಶ್ಮಿಕಾ ವಿಜಯ್​ ದಾಂಪತ್ಯಕ್ಕೆ ದೇಶಾದ್ಯಂತ ಶುಭಾಷಯ ಬರ್ತಾ ಇದೆ. ಈ ಎರಡು ಘಟನೆಗಳ ಮಧ್ಯೆ ತಮಿಳುನಾಡು ಜನ ಬೆರಗುಗಣ್ಣಿನಿಂದ ನೋಡೋ ಒಂದೊಂದೇ ವಿಷಯಗಳು ಹೊರ ಬರ್ತಾ ಇದೆ. ಅದೇ ದಳಪತಿ ವಿಜಯ್​ ಬದುಕಲ್ಲಿ ಬಿರುಗಾಳಿ ಬೀಸುತ್ತಿರೋದು, ಇದರಿಂದ ತಮಿಳುನಾಡು ರಾಜಕಾರಣದಲ್ಲಿ ಸುಂಟಗಾಳಿ ಎದ್ದಿರೋದು, ಹಾಗೆ ನಟಿ ತ್ರಿಶಾ ಹೃದಯದಲ್ಲಿ ಪ್ರೀತಿಯ ತಂಗಾಳಿ ಸೃಷ್ಟಿಯಾಗಿರೋದು.

ಪತ್ನಿಗೆ ಡಿವೋರ್ಸ್​​, ಗೆಳತಿ ಜೊತೆ ವಿಜಯ್ ಕ್ಲೋಸ್..?

ಹೌದು, ನಟ ದಳಪತಿ ವಿಜಯ್ ಈಗ ತಮಿಳು ನಾಡು ಮಾತ್ರವಲ್ಲ ಅಕ್ಕಪಕ್ಕದ ರಾಜ್ಯದಲ್ಲಿ ಹಾಟ್ ಟಾಪಿಕ್​. ಅದಕ್ಕೆ ಕಾರಣ ನಟ ದಳಪತಿ ವಿಜಯ್ ರ ಡಿವೋರ್ಸ್​ ವಿಚಾರ. ಹಾಗೇ ಅದೇ ಟೈಮ್​​ನಲ್ಲಿ ವಿಜಯ್‌ರನ್ನ ಸುತ್ತಿಕೊಳ್ಳುತ್ತಿರೋ ತ್ರಿಶಾಳ ಸಮಾಚಾರ. ಇವರಿಬ್ಬರು ಮ್ಯಾಚಿಂಗ್ ಡ್ರೆಸ್ ಹಾಕಿಕೊಂಡು ನಿಗೂಢ ನಗುವಿನೊಂದಿಗೆ ಒಟ್ಟೊಟ್ಟಿಗೆ ಓಡಾಡೋಕೆ ಶುರು ಮಾಡಿದ್ದಾರೆ.

ನಟ ವಿಜಯ್ ಹಾಗು ನಟಿ ತ್ರಿಶಾ ಪ್ರೀತಿಸುತ್ತಿದ್ದಾರೆ ಅಂತ ಸೌತ್ ಸಿನಿ ದುನಿಯಾದಲ್ಲಿ ಕಳೆದ ಒಂದು ವರ್ಷದಿಂದ ಭಾರೀ ಸುದ್ದಿಯಾಗುತ್ತಿದೆ. ಇದು ಒಂದು ಕಡೆ ಆದ್ರೆ ನಟ ದಳಪತಿ ವಿಜಯ್ ಸಿನಿಮಾ ರಂಗಕ್ಕೆ ಗುಡ್‌ಬೈ ಹೇಳಿ ರಾಜಕೀಯ ಶುರು ಮಾಡಿದ್ದಾರೆ. ತಮಿಳಿಗ ವೆಟ್ರಿಂ ಕಳಗಂ ಪಕ್ಷ ಕಟ್ಟಿರೋ ವಿಜಯ್ ಮುಂದಿನ ತಮಿಳು ನಾಡ ವಿಧಾನ ಸಭೆ ಗದ್ದುಗೆ ಏರೋ ಕನಸು ಕಾಣುತ್ತಿದ್ದಾರೆ.

ಎಲೆಕ್ಷನ್​ ಮೊದಲೇ ವಿಜಯ್ ಇಮೇಜ್ ಡ್ಯಾಮೇಜ್..!

ಮುಂದಿನ ತಮಿಳುನಾಡು ವಿಧಾನ ಸಭೆಗೆ ತನ್ನ ಟಿವಿಕೆ ಪಕ್ಷವನ್ನ ಅಧಿಕಾರಕ್ಕೆ ತರೋದಕ್ಕೆ ಶತ ಪ್ರಯತ್ನ ಮಾಡುತ್ತಿರೋ ದಳಪತಿ ವಿಜಯ್ ಇಡೀ ತಮಿಳುನಾಡಿನಾದ್ಯಂತ ದೊಡ್ಡ ದೊಡ್ಡ ಸಮಾವೇಶ ಮಾಡಿದ್ದಾರೆ. ಜನ ಸೇವೆ ಮಾಡೋದಕ್ಕೆ ನನಗೆ ಅವಕಾಶ ಕೊಡಿ ಅಂತ ಕೇಳಿರೋ ವಿಜಯ್​​​, ಎಂ.ಜಿ. ರಾಮಚಂದ್ರನ್, ಜೆ. ಜಯಲಲಿತಾ ಮತ್ತು ಎಂ. ಕರುಣಾನಿಧಿ ಅವರನ್ನು ತಮ್ಮ ರಾಜಕೀಯ ಮಾರ್ಗದರ್ಶಕರು ಎಂದಿದ್ದಾರೆ. ಹೀಗಾಗಿ ಒಂದು ಚಾನ್ಸ್​ ವಿಜಯ್​ಗೂ ಕೊಟ್ಟು ನೋಡೋಣ ಅನ್ನೋ ಚರ್ಚೆಯಲ್ಲಿ ತಮಿಳಿಗರಿದ್ದಾರೆ. ಆದ್ರೆ ವಿಜಯ್​ ಎಲೆಕ್ಷನ್​​ಗೂ ಮೊದಲೇ ತನ್ನ ಇಮೇಜ್ ಮೇಲೆ ಡಿವೋರ್ಸ್​ ಮತ್ತು ಪ್ರೀತಿಯ ಬಣ್ಣ ಹಚ್ಚಿಕೊಳ್ಳುತ್ತಿದ್ದಾರೆ.

ದಳಪತಿಗೆ ಡಿವೋರ್ಸ್​ ಕೇಳಿರೋ ಪತ್ನಿ ಸಂಗೀತಾ; ವಿಜಯ್ ಸಂಸಾರ ಮುರಿಯಲು ಕಾರಣ ಆದ್ರಾ ತ್ರಿಶಾ..?

ನಟ ವಿಜಯ್​ ಈಗ ರಾಜಕೀಯ ಭವಿಷ್ಯ ಕಂಡುಕೊಳ್ಳೋ ಜತೆ ಜೊತೆಗೆ ಪತ್ನಿಗೆ ಡಿವೋರ್ಸ್​ ಕೊಡೋದಕ್ಕೆ ಮುಂದಾಗಿದ್ದಾರೆ. ಅದರ ಜೊತೆ ಗೆಳತಿ ತ್ರಿಶಾ ಜತೆ ಸುತ್ತಾಡುತ್ತಿದ್ದಾರೆ. ಇದು ತಮಿಳು ನಾಡು ಪೊಲಿಟಿಕ್ಸ್​​ನಲ್ಲಿ ರಣರಂಗ ಸೃಷ್ಟಿಸಿದೆ. ಅಷ್ಟಕ್ಕೂ ವಿಜಯ್​ ಬಳಿ ಪತ್ನಿ ಸಂಗೀತಾ ವಿಚ್ಛೇಧನ ಕೇಳೋಕೆ ಕಾರಣನೇ ನಟಿ ತ್ರಿಶಾ ಅನ್ನೋ ಮರೆ ಮಾಚಿದ್ದ ಸತ್ಯಕ್ಕೆ ಈಗ ರೆಕ್ಕೆ ಪುಕ್ಕಗಳು ಬಂದಂತೆ ಕಾಣುತ್ತಿದೆ.

ತ್ರಿಶಾ ಪ್ರೀತಿಯ ಬಲೆಯಲ್ಲಿ ದಳಪತಿ ವಿಜಯ್..?

ಹೌದು, ವಿಜಯ್​​​​ ಹಾಗು ತ್ರಿಶಾ ಮಧ್ಯೆ ಪ್ರೀತಿ ಮೊಳಕೆ ಒಡೆದಿದೆ ಅನ್ನೋ ಸುದ್ದಿ ತಮಿಳು ನಾಡಿನಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಇದೇ ವಿಷಯಕ್ಕೆ ವಿಜಯ್​ರ ಪತ್ನಿ ಸಂಗೀತಾ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದು. ನಟಿಯೊಬ್ಬಳ ಜೊತೆಗಿನ ವಿಜಯ್ ಅನೈತಿಕ ಸಂಬಂಧ ಇದೆ. ಅನ್ನೋ ಕಾರಣ ಕೊಟ್ಟು ಸಂಗೀತಾ ಡಿವೋರ್ಸ್​ ಕೇಳಿದ್ದಾರೆ. ಆ ನಟಿ ತ್ರಿಶಾನಾ ಅನ್ನೋದೇ ಈಗ ಡೌಟ್​. ಯಾಕಂದ್ರೆ ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಿದ್ದಂತೆ ಈ ಕಡೆ ದಳಪತಿ ತ್ರಿಶಾ ಜೊತೆ ಅಲ್ಲಿ ಇಲ್ಲಿ ಕಾರ್ಯಕ್ರಮಗಳು ಅಂತ ಸುತ್ತಾಡುತ್ತಿದ್ದಾರೆ.

ಮದುವೆ ಕಾರ್ಯಕ್ರಮಕ್ಕೆ ಜೊತೆಯಾಗಿ ಬಂದ ತ್ರಿಶಾ-ವಿಜಯ್..!

ನಟಿಯೊಬ್ಬಳ ಜೊತೆ ಅನೈತಿಕ ಸಂಬಂಧ ಅಂತ ಆರೋಪಿಸಿ ಸಂಗೀತಾ ವಿಜಯ್​ರಿಂದ ಡಿವೋರ್ಸ್ ಕೇಳಿದ್ದೇ ತಡ. ವಿಜಯ್ ಹಾಗೂ ತ್ರಿಶಾ ಒಂದೇ ಕಾರಿನಲ್ಲಿ ಸುತ್ತಾಡಲು ಆರಂಭಿಸಿದ್ದಾರೆ. ಚೆನ್ನೈನಲ್ಲಿ ನಡೆದ ತಮಿಳು ನಿರ್ಮಾಪಕ ಕಲ್ಪತಿ ಎಸ್. ಸುರೇಶ್ ಮಗನ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ವಿಜಯ್ ಹಾಗೂ ತ್ರಿಶಾ ಜೋಡಿಯಾಗಿ ಬಂದಿದ್ದಾರೆ. ಇಬ್ಬರು ಮ್ಯಾಚಿಂಗ್​ ಡ್ರೆಸ್​​ನಲ್ಲಿ ಬಂದಿರೋ ಫೋಟೊ, ವಿಡಿಯೋ ವೈರಲ್ ಆಗ್ತಿದೆ.

ತ್ರಿಶಾ ಹಾಗೂ ವಿಜಯ್ ಮ್ಯಾಚಿಂಗ್​ ಡ್ರೆಸ್​ ಧರಿಸಿ ಒಂದೇ ಕಾರಿಲ್ಲಿ ಒಟ್ಟಿಗೆ ಮದುವೆ ಕಾರ್ಯಕ್ರಮವೊಂದಕ್ಕೆ ಜೊತೆಯಾಗಿ ಬಂದಿದ್ದೇ ತಡ. ವಿಜಯ್ ಪತ್ನಿ ಸಂಗೀತಾ ಹೇಳಿದ್ದು ನಿಜ ಅಂತ ತಮಿಳು ಪಡಸಾಲೆಯಲ್ಲಿ ಚರ್ಚೆಗಳಾಗ್ತಾ ಇದೆ. ತ್ರಿಶಾ ವಿಜಯ್​ ಮಧ್ಯೆ ಪ್ರೀತಿ ಮೂಡಿದೆ. ಅದಕ್ಕೆ ಇಬ್ಬರು ಮ್ಯಾಚಿಂಗ್ ಡ್ರೆಸ್​​ನಲ್ಲಿ ಒಟ್ಟೊಟ್ಟಿಗೆ ಓಡಾಡುತ್ತಿದ್ದಾರೆ. ಇದಕ್ಕಿಂತ ಸಾಕ್ಷಿ ಮತ್ತೊಂದು ಬೇಕಾಗಿಲ್ಲ ಅಂತ ತಮಿಳು ರಾಜಕೀಯ ಹಾಗು ಸಿನಿಮಾ ರಂಗದಲ್ಲಿ ಮಾತಿನ ಬಾಣಗಳು ಬೀಳುತ್ತಿವೆ..

ತ್ರಿಶಾ ಮನೆಯಿಂದ ಹೊರ ಬನ್ನಿ ಎಂದಿದ್ದ ಬಿಜೆಪಿ ನಾಯಕ..!

ಕಳೆದೊಂದು ವಾರದಿಂದ ವಿಜಯ್ ಹಾಗೂ ಸಂಗೀತಾ ದಂಪತಿ ಡಿವೋರ್ಸ್ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದ್ದೇ ತಡ. ಎರುರಾಳಿ ಪಕ್ಷದ ನಾಯಕರು ಇದನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ವಿಜಯ್ ಮೇಲೆ ಮುಗಿಬಿದ್ದಿದ್ದಾರೆ. ತಮಿಳು ನಾಡು ಬಿಜೆಪಿ ನಾಯಕ ತಿರುಚ್ಚಿ ಸೂರ್ಯ ಮಾತನಾಡಿದ್ದು, ನಾನು ವಿಜಯ್ ಹಾಗೂ ತ್ರಿಶಾ ಅವರನ್ನು ಒಂದೇ ಹೋಟೆಲ್​​​ನಲ್ಲಿ ನೋಡಿದ್ದೇನೆ. ಈ ಹೇಳಿಕೆ ಬಳಿಕ ವಿಜಯ್ ಹಾಗೂ ತ್ರಿಶಾ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬಹುದು. ನಾನು ಅವರನ್ನು ಎಲ್ಲಿ ನೋಡಿದ್ದೇನೆ ಎಂಬುದಕ್ಕೆ ನನ್ನ ಬಳಿ ಸಾಕ್ಷಿ ಇದೆ. ನಾನು ಅದನ್ನು ಕೋರ್ಟ್​​ಗೆ ನೀಡುತ್ತೇನೆ ಎಂದಿದ್ದಾರೆ.

ತಮಿಳುನಾಡು ರಾಜಕೀಯದಲ್ಲಿ 'ಕಮಾಂಡರ್' ಆಗಿ ಛಾಪು ಮೂಡಿಸಲು ಪ್ರಯತ್ನಿಸುತ್ತಿರುವ ವಿಜಯ್ ಗೆ ಈಗ ವೈಯಕ್ತಿಕ ವಿಚಾರವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ತಮಿಳುನಾಡಿನಲ್ಲಿ ದಳಪತಿ ಈಗ ಚಿತ್ರರಂಗದ ನಾಯಕ ಅಲ್ಲ. ಬದಲಿಗೆ ಪೂರ್ಣ ಪ್ರಮಾಣದ ರಾಜಕೀಯ ನಾಯಕ. ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ ಎಂದು ಹೇಳುತ್ತಲೇ ಜನ ಸೇವೆ ಮಾಡಲು ವಿಜಯ್ ಬಂದಿದ್ದು, ಇದೇ ಸಮಯದಲ್ಲಿ ವಿಜಯ್ ವೈಯಕ್ತಿಕ ಬದುಕು ಹಳ್ಳ ಹಿಡಿದಿದೆ. ಫ್ಯಾಮಿಲಿ ಇಮೇಜ್ ಡ್ಯಾಮೇಜ್ ಆಗಿದೆ.