MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ತಾಳಿ ಕಟ್ಟೋವಾಗ ಮದುವೆ ಮಂಟಪಕ್ಕೆ ಪ್ರಿಯಕರನ ಎಂಟ್ರಿ, ಕೊನೆಯ ಕ್ಷಣದಲ್ಲಿ ವಧು ಮಾಡಿದ್ದೇನು? ಇದು ಸಿನಿಮಾ ಅಲ್ಲ, ರಿಯಲ್ ಸ್ಟೋರಿ

ತಾಳಿ ಕಟ್ಟೋವಾಗ ಮದುವೆ ಮಂಟಪಕ್ಕೆ ಪ್ರಿಯಕರನ ಎಂಟ್ರಿ, ಕೊನೆಯ ಕ್ಷಣದಲ್ಲಿ ವಧು ಮಾಡಿದ್ದೇನು? ಇದು ಸಿನಿಮಾ ಅಲ್ಲ, ರಿಯಲ್ ಸ್ಟೋರಿ

ಸಿನಿಮಾಗಳಲ್ಲಿ ನೋಡುವಂಥಾ ದೃಶ್ಯವೊಂದು ಆಂಧ್ರಪ್ರದೇಶದಲ್ಲಿ ನಿಜವಾಗಿಯೂ ನಡೆದಿದೆ. ಹಿರಿಯರು ನಿಶ್ಚಯಿಸಿದ ಮದುವೆಗೆ ಒಪ್ಪಿಕೊಂಡಿದ್ದ ವಧು, ತಾಳಿ ಕಟ್ಟುವ ಕೊನೇ ಕ್ಷಣದಲ್ಲಿ ಪ್ರಿಯಕರನ ಜೊತೆ ಹೋಗಲು ನಿರ್ಧರಿಸಿದಳು. ಮದುವೆ ಮಂಟಪದಲ್ಲಿ ನಡೆದ ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

2 Min read
Author : Naveen Kodase
Published : Mar 08 2026, 11:19 AM IST
Share this Photo Gallery
  • FB
  • TW
  • Linkdin
  • Whatsapp
16
ಮದುವೆ ಮಂಟಪದಲ್ಲಿ ಅಪರೂಪದ ಘ‌ಟ‌ನೆ
Image Credit : Gemini AI

ಮದುವೆ ಮಂಟಪದಲ್ಲಿ ಅಪರೂಪದ ಘ‌ಟ‌ನೆ

ಮದುವೆ ಮಂಟಪದಲ್ಲಿ ಮಂಗಳವಾದ್ಯ ಮೊಳಗುತ್ತಿತ್ತು. ಪುರೋಹಿತರು ಮಂತ್ರ ಪಠಿಸುತ್ತಿದ್ದರೆ, ನೆಂಟರಿಷ್ಟರು ಖುಷಿಯಿಂದ ಮದುವೆ ನೋಡುತ್ತಿದ್ದರು. ಮುಹೂರ್ತ ಸಮೀಪಿಸುತ್ತಿದ್ದಂತೆ ವಧು-ವರರಿಗೆ ಜೀರಿಗೆ-ಬೆಲ್ಲ ಶಾಸ್ತ್ರವೂ ಮುಗಿದಿತ್ತು. ಇನ್ನೇನು ತಾಳಿ ಕಟ್ಟುವ ಶುಭಗಳಿಗೆ ಬಂದೇ ಬಿಟ್ಟಿತು ಎಂದು ಎಲ್ಲರೂ ಕಾಯುತ್ತಿದ್ದರು. ಆಗ ನಡೆದ ಒಂದು ಘಟನೆ ಅಲ್ಲಿನ ವಾತಾವರಣವನ್ನೇ ಬದಲಿಸಿಬಿಟ್ಟಿತು.
26
ಮದುವೆಗೆ ಎಂಟ್ರಿಕೊಟ್ಟ ಪ್ರಿಯಕರ
Image Credit : Gemini AI

ಮದುವೆಗೆ ಎಂಟ್ರಿಕೊಟ್ಟ ಪ್ರಿಯಕರ

ತಾಳಿ ಕಟ್ಟುವ ಸಮಯ ಹತ್ತಿರವಾಗುತ್ತಿದ್ದಂತೆ, ಓರ್ವ ಯುವಕ ಆತುರವಾಗಿ ಮದುವೆ ಮಂಟಪಕ್ಕೆ ಬಂದ. ಅವನನ್ನು ನೋಡಿದ ಕೂಡಲೇ ವಧು ಆಶ್ಚರ್ಯದಿಂದ ಪ್ರತಿಕ್ರಿಯಿಸಿದಳು. ಮದುವೆ ಮಂಟಪದಲ್ಲಿ ಕುಳಿತಿದ್ದ ಆಕೆ, ಒಮ್ಮೆಗೇ ಎದ್ದು ಮಂಟಪದಿಂದ ಕೆಳಗಿಳಿದಳು. 'ಬಂದ್ಯಾ...' ಎನ್ನುತ್ತಾ ಆ ಯುವಕನ ಬಳಿ ಹೋಗಿ ನಿಂತಳು. ಈ ದೃಶ್ಯದಿಂದ ಅಲ್ಲಿದ್ದವರೆಲ್ಲರೂ ಕ್ಷಣಕಾಲ ದಂಗಾದರು. ವರ ಹಾಗೂ ಆತನ ಕುಟುಂಬದವರು ಸಂಪೂರ್ಣ ಆಘಾತಕ್ಕೊಳಗಾದರು.

Related Articles

Related image1
ಸ್ಯಾಂಡಲ್​ವುಡ್​ ಚೆಲುವೆ ಪ್ರೇಮಾ ಮದುವೆ? ಹಿಂಟ್ಸ್​ ಕೊಟ್ಟ ನಟಿ ತಾರಾ ಅನುರಾಧ- ಯಾರೀ ಚೆಲುವ?
Related image2
ತಮ್ಮದೇ ಮದುವೆ ಆರತಕ್ಷತೆಯಲ್ಲಿ ಸ್ಟ್ಯಾಚ್ಯೂ ಥರ ನಿಂತ ಅರ್ಜುನ್ ತೆಂಡೂಲ್ಕರ್! ಸ್ವಲ್ಪ ಸ್ಮೈಲ್ ಮಾಡು ಬ್ರದರ್ ಎಂದ ನೆಟ್ಟಿಗರು
36
ಅಸಲಿ ವಿಚಾರ ಬಾಯ್ಬಿಟ್ಟ ವಧು
Image Credit : Gemini AI

ಅಸಲಿ ವಿಚಾರ ಬಾಯ್ಬಿಟ್ಟ ವಧು

ವಧುವಿನ ಈ ನಡೆಯನ್ನು ನೋಡಿ ಸಂಬಂಧಿಕರು ತಕ್ಷಣ ಆಕೆಯನ್ನು ಪ್ರಶ್ನಿಸಿದರು. ಆಗ ಆಕೆ ಅಸಲಿ ವಿಷಯವನ್ನು ಬಾಯ್ಬಿಟ್ಟಳು. 'ಈ ಯುವಕ ನಮ್ಮೂರಿನವನು. ನಾವಿಬ್ಬರೂ ಪ್ರೀತಿಸುತ್ತಿದ್ದೇವೆ. ನನಗೆ ಈ ಮದುವೆ ಇಷ್ಟವಿಲ್ಲ' ಎಂದು ಸ್ಪಷ್ಟವಾಗಿ ಹೇಳಿದಳು. ಇದರಿಂದ ಅಲ್ಲಿದ್ದವರೆಲ್ಲರೂ ದಿಗ್ಭ್ರಮೆಗೊಂಡರು. ಈ ಘಟನೆ ಎನ್‌ಟಿಆರ್ ಜಿಲ್ಲೆಯ ಮೈಲವರಂ ಕ್ಷೇತ್ರದಲ್ಲಿ ನಡೆದಿದೆ

46
ತೀವ್ರ ಆಕ್ರೋಶ ವ್ಯಕ್ತಪಡಿಸಿದ ವರನ ಕಡೆಯವರು
Image Credit : Gemini AI

ತೀವ್ರ ಆಕ್ರೋಶ ವ್ಯಕ್ತಪಡಿಸಿದ ವರನ ಕಡೆಯವರು

ವಧುವಿನ ಮಾತು ಕೇಳಿದ ವರನ ಕಡೆಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೊನೇ ಕ್ಷಣದಲ್ಲಿ ಬಂದು ಮದುವೆ ನಿಲ್ಲಿಸಿದ ಯುವಕನ ಮೇಲೆ ಕೆಲವರು ಹಲ್ಲೆಗೂ ಯತ್ನಿಸಿದರು. ಇದರಿಂದಾಗಿ ಅಲ್ಲಿನ ಪರಿಸ್ಥಿತಿ ಉದ್ವಿಗ್ನಗೊಂಡಿತು. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಆದರೆ, ಈ ಗದ್ದಲದಿಂದಾಗಿ ಮದುವೆ ಕಾರ್ಯಕ್ರಮ ಅಲ್ಲಲ್ಲೇ ನಿಂತುಹೋಯಿತು.
56
ನೋವು ತೋಡಿಕೊಂಡ ವರನ ಕಡೆಯವರು
Image Credit : Gemini AI

ನೋವು ತೋಡಿಕೊಂಡ ವರನ ಕಡೆಯವರು

ಈ ಘಟನೆಯಿಂದ ವರನ ಪೋಷಕರು ತಮ್ಮ ನೋವನ್ನು ತೋಡಿಕೊಂಡರು. 'ನಮಗೆ ಇರೋದು ಒಬ್ಬನೇ ಮಗ. ಅವನ ಮದುವೆಯನ್ನು ಅದ್ದೂರಿಯಾಗಿ ಮಾಡಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೆವು. ಎಲ್ಲಾ ಸಂಬಂಧಿಕರನ್ನು ಕರೆದಿದ್ದೆವು. ಸುಮಾರು 20 ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ. ಭರ್ಜರಿ ಊಟದ ವ್ಯವಸ್ಥೆ ಮಾಡಿದ್ದೆವು. ಸಾವಿರಾರು ಮಂದಿ ಈಗಾಗಲೇ ಊಟ ಮಾಡಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಮದುವೆ ನಿಂತುಹೋದಿದ್ದರಿಂದ ಎಲ್ಲರ ಮುಂದೆ ನಮ್ಮ ಮರ್ಯಾದೆ ಹೋಯಿತು' ಎಂದು ಅವರು ಅಳಲು ತೋಡಿಕೊಂಡರು.

66
ಗ್ರಾಮದ ಹಿರಿಯರ ಪಂಚಾಯ್ತಿಯಿಂದ ಪರಿಹಾರ*
Image Credit : Asianet News

ಗ್ರಾಮದ ಹಿರಿಯರ ಪಂಚಾಯ್ತಿಯಿಂದ ಪರಿಹಾರ*

ಈ ಘಟನೆಯ ನಂತರ, ಎರಡೂ ಕುಟುಂಬಗಳು ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸಭೆ ಸೇರಿವೆ. ಶನಿವಾರ ನಡೆದ ಪಂಚಾಯ್ತಿಯಲ್ಲಿ ವಿಷಯವನ್ನು ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ. ಆದರೆ, ಮದುವೆ ಮಂಟಪದಲ್ಲಿ ನಡೆದ ಈ ಅನಿರೀಕ್ಷಿತ ಘಟನೆ ಸ್ಥಳೀಯವಾಗಿ ದೊಡ್ಡ ಚರ್ಚೆಯ ವಿಷಯವಾಗಿದೆ. ಪ್ರೀತಿ, ಕುಟುಂಬದ ನಿರ್ಧಾರ ಮತ್ತು ಸಾಮಾಜಿಕ ಒತ್ತಡಗಳ ನಡುವಿನ ಸಂಘರ್ಷಕ್ಕೆ ಈ ಘಟನೆ ಒಂದು ಉದಾಹರಣೆಯಾಗಿ ನಿಂತಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಆಂಧ್ರ ಪ್ರದೇಶ
ಮದುವೆ
ಪ್ರೀತಿ

Latest Videos
Recommended Stories
Recommended image1
ಇನ್ಮುಂದೆ ನಿನ್​ ಜೊತೆ ಸಿನಿಮಾ ಮಾಡಲ್ಲ: ವಿಜಯ್ ದೇವರಕೊಂಡ​ಗೆ ರಶ್ಮಿಕಾ ಪ್ರತಿಜ್ಞೆ! ಆಗಿದ್ದೇನು?
Recommended image2
ಮೌನ ಮುರಿದ Rakshit Shetty ಹೀಗೊಂದು ಮನವಿ: FB ​ ಫೋಟೋ ಚೇಂಜ್​ ಆಗುತ್ತಲೇ, ಈ ವಿಡಿಯೋ ವೈರಲ್​
Recommended image3
ಸ್ಯಾಂಡಲ್​ವುಡ್​ ಚೆಲುವೆ ಪ್ರೇಮಾ ಮದುವೆ? ಹಿಂಟ್ಸ್​ ಕೊಟ್ಟ ನಟಿ ತಾರಾ ಅನುರಾಧ- ಯಾರೀ ಚೆಲುವ?
Related Stories
Recommended image1
ಸ್ಯಾಂಡಲ್​ವುಡ್​ ಚೆಲುವೆ ಪ್ರೇಮಾ ಮದುವೆ? ಹಿಂಟ್ಸ್​ ಕೊಟ್ಟ ನಟಿ ತಾರಾ ಅನುರಾಧ- ಯಾರೀ ಚೆಲುವ?
Recommended image2
ತಮ್ಮದೇ ಮದುವೆ ಆರತಕ್ಷತೆಯಲ್ಲಿ ಸ್ಟ್ಯಾಚ್ಯೂ ಥರ ನಿಂತ ಅರ್ಜುನ್ ತೆಂಡೂಲ್ಕರ್! ಸ್ವಲ್ಪ ಸ್ಮೈಲ್ ಮಾಡು ಬ್ರದರ್ ಎಂದ ನೆಟ್ಟಿಗರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved