- Home
- Life
- Relationship
- ಎರಡು ವರ್ಷ ಡೇಟಿಂಗ್, ಜ್ಯೂಸ್‌ನಲ್ಲಿ ಏನಾದ್ರೂ ಮಿಕ್ಸಿಂಗ್: Anchor Anushree ರೋಚಕ ಲವ್ ಸ್ಟೋರಿ
ಎರಡು ವರ್ಷ ಡೇಟಿಂಗ್, ಜ್ಯೂಸ್‌ನಲ್ಲಿ ಏನಾದ್ರೂ ಮಿಕ್ಸಿಂಗ್: Anchor Anushree ರೋಚಕ ಲವ್ ಸ್ಟೋರಿ
ನಿರೂಪಕಿ ಅನುಶ್ರೀ ಅವರು ತಮ್ಮ ಪತಿ ರೋಷನ್ ಜೊತೆಗಿನ ಎರಡು ವರ್ಷಗಳ ರಹಸ್ಯ ಡೇಟಿಂಗ್ ಮತ್ತು ಪ್ರೇಮಕಥೆಯನ್ನು ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ತಮ್ಮಿಬ್ಬರ ಪ್ರೇಮಕ್ಕೆ ನಟ ರಾಜ್ ಬಿ. ಶೆಟ್ಟಿ ಹೇಗೆ ಪ್ರಮುಖ ಪಾತ್ರ ವಹಿಸಿದರು ಎನ್ನುವ ಸ್ವಾರಸ್ಯಕರ ಸಂಗತಿಯನ್ನು ಅವರು ಹಂಚಿಕೊಂಡಿದ್ದಾರೆ.

ಮದ್ವೆ ಬಗ್ಗೆ ಅನುಶ್ರೀ ಗಪ್ಚುಪ್
ಕನ್ನಡದ ಕಿರುತೆರೆ ಕಂಡ ಅಪರೂಪದ ನಿರೂಪಕಿ ಆ್ಯಂಕರ್ ಅನುಶ್ರೀ (Anchcor Anushree) ಅವರು ಸದ್ಯ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಕೊಡಗಿನ ರೋಷನ್ ಅವರನ್ನು ಮದುವೆಯಾಗಿದ್ದಾರೆ. ಅನುಶ್ರೀ ಎಲ್ಲಿ ಹೋದರೂ ಅವರಿಗೆ ಎದುರಾಗುತ್ತಿದ್ದುದು ಒಂದೇ ಪ್ರಶ್ನೆ ಮದ್ವೆ ಯಾವಾಗ ಎನ್ನೋದು. ಆದರೆ ಎಲ್ಲಿಯೂ ಅನುಶ್ರೀ ಮದುವೆ, ಹುಡುಗನ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಪ್ರಶ್ನೆ ಕೇಳಿದಾಗಲೆಲ್ಲಾ ಏನೋ ಒಂದು ತಮಾಷೆ ಮಾಡಿ ಮಾತನ್ನು ಬದಲಿಸಿಬಿಡುತ್ತಿದ್ದರು.
ಲವ್ ಸ್ಟೋರಿ ರಿವೀಲ್
ಆದರೆ ಇದೀಗ ಅವರು ತಮ್ಮ ಲವ್ಸ್ಟೋರಿಯನ್ನು ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ. ಎರಡು ವರ್ಷಗಳಿಂದ ನಾನು ಮತ್ತು ರೋಷನ್ ಡೇಟಿಂಗ್ನಲ್ಲಿ ಇದ್ವಿ. ಆದರೆ ಇದು ಯಾರಿಗೂ ಗೊತ್ತಾಗಲಿಲ್ಲ. ಕೆಲವರು ಅವರನ್ನು ನನ್ನ ಬಾಡಿಗಾರ್ಡ್ ಎಂದು ತಿಳಿದುಕೊಂಡಿದ್ದರು ಎಂದು Gold Class With Mayuraa ಯುಟ್ಯೂಬ್ ಚಾನೆಲ್ ಜೊತೆ ಗುಟ್ಟನ್ನು ರಿವೀಲ್ ಮಾಡಿದ್ದಾರೆ ಅನುಶ್ರೀ.
ರಾಜ್ ಬಿ. ಶೆಟ್ಟಿಯೇ ಸೇತುವೆ
ಅಷ್ಟಕ್ಕೂ ಅನುಶ್ರೀ ಅವರಿಗೆ ರೋಷನ್ ಪರಿಚಯವಾದದ್ದು, ಶ್ರೀದೇವಿ ಎನ್ನುವವರ ಮೂಲಕ. ಆದರೆ ಬಳಿಕ ಇವರಿಬ್ಬರ ನಂಟು ಬೆಳೆದದ್ದು ನಟ ರಾಜ್ ಬಿ. ಶೆಟ್ಟಿ ಅವರ ಮೂಲಕ ಎನ್ನುವ ಗುಟ್ಟು ಕೂಡ ಈಗ ರಿವೀಲ್ ಆಗಿದೆ. ಮೊದಲು ರೋಷನ್ ಅವರನ್ನು ಅಪ್ಪು ಅವರ ಮೆಚ್ಚಿನ ಜಾಗ ಹೊಸಪೇಟೆಯಲ್ಲಿ ಮೀಟ್ ಆಗಿದ್ದೆ. ರೋಷನ್ ನನ್ನನ್ನು ನೋಡಿ ಕಾಫಿಗೆ ಕರೆದುಕೊಂಡು ಹೋಗಲು ಇಷ್ಟಪಟ್ಟಿದ್ದರು. ಅಲ್ಲಿಯವರೆಗೂ ಇಂಥ ಮಾತನ್ನು ಯಾರೂ ಹೇಳಿರಲಿಲ್ಲ. ಅವರು ಯಾರು ಎನ್ನೋದೂ ನನಗೆ ಸರಿಯಾಗಿ ಗೊತ್ತಿರಲಿಲ್ಲ. ಅವರು ಹೀಗೆ ಹೇಳಿದ್ದು ಕೇಳಿ ಶಾಕ್ ಆಗೋಯ್ತು ಎಂದು ಆ ದಿನ ನೆನಪಿಸಿಕೊಂಡಿದ್ದಾರೆ ಅನುಶ್ರೀ.
ನೀನೇನು ಐಶ್ವರ್ಯ ರೈನಾ?
ಹೇಳಿ ಕೇಳಿ ಸಿಂಗಲ್ ಹುಡುಗ, ಹೀಗೆ ಕಾಫಿಗೆ ಕರೆದ್ರೆ ಹೇಗೆ? ಭಯ ಆಗೋಯ್ತು, ಜ್ಯೂಸ್‌ನಲ್ಲಿ ಏನಾದ್ರೂ ಮಿಕ್ಸ್ ಮಾಡಿ ಕೊಟ್ಟರೆ ಅಂತ ಹೆದರಿಕೆ ಆಯ್ತು. ಆಗಿದ್ದು ಆಗಲಿ ಎಂದು ರಾಜ್ ಶೆಟ್ಟಿ ಅವರ ಬಳಿ ಎಲ್ಲಾ ವಿಷ್ಯ ಹೇಳಿದೆ. ಅದಕ್ಕೆ ಅವ್ರು, ಒಹೊ, ನೀನು ದೊಡ್ಡ ಮಿಸ್ ಯೂನಿವರ್ಸ್, ಐಶ್ವರ್ಯಾ ರೈ ನೋಡು, ಜ್ಯೂಸ್‌ನಲ್ಲಿ ಬೇರೆ ಮಿಕ್ಸ್ ಮಾಡಿ ಕೊಟ್ಟು ಬಿಡ್ತಾರಾ ನಿನಗೆ, ಸುಮ್ಮನೇ ಹೋಗು ಅಂತ ಹೇಳಿ ಕಳುಹಿಸಿದ ಮೇಲೆ ಹೆದರುತ್ತಲೇ ಹೋದೆ. ಅಷ್ಟಕ್ಕೂ ರಾಜ್ ಅವರು, ಮದ್ವೆ, ಗಿದ್ವೆ ಅಂತ ಮೊದ್ಲೇ ಯೋಚನೆ ಮಾಡ್ಬೇಡ. ಮೊದಲು ಮಾತನಾಡು, ಆಮೇಲೆ ಡಿಸೈಡ್ ಮಾಡು ಅಂತ ಬುದ್ಧಿ ಹೇಳಿ ಕಳಿಸಿದ್ರು ಎಂದಿದ್ದಾರೆ ಅನುಶ್ರೀ.
ನಾಲ್ಕು ಗಂಟೆ ಮಾತುಕತೆ
ರಾಜ್ ಶೆಟ್ರು ಧೈರ್ಯ ತುಂಬಿದ ಮೇಲೆ ಮೀಟ್ ಆದೆ. ಶೇಕ್ ಹ್ಯಾಂಡ್ ಮಾಡುವಷ್ಟರಲ್ಲಿಯೇ ಅವ್ರು ಬೆವರಿ ಬಿಟ್ರು. ಆಮೇಲೆ ನಮ್ಮ ಮಾತುಕತೆ ಶುರುವಾಯ್ತು. 2 ಗಂಟೆಯಾಗಿ ನಾಲ್ಕು ಗಂಟೆಯಾದ್ರೂ ಮಾತುಕತೆ ಮುಗಿಯಲೇ ಇಲ್ಲ. ರಾಜ್ ಕಾಲ್ ಮಾಡಿದ್ರು. ಆಮೇಲೆ ವಾಸ್ತವ ಲೋಕಕ್ಕೆ ಬಂದ್ವಿ ಎಂದು ಅಂದು ನಡೆದ ಘಟನೆಯನ್ನು ತೆರೆದಿಟ್ಟಿದ್ದಾರೆ ಅನುಶ್ರೀ.
ಎರಡು ವರ್ಷ ಡೇಟಿಂಗ್
ಬಳಿಕ, ರಾಜ್ ಅವರು ಹುಡುಗನ ಬಗ್ಗೆ ವಿಚಾರಿಸಿದಾಗ, ಇಷ್ಟ ಆದ ಎಂದೆ. ಹೀಗೆ ನಮ್ಮ ಸ್ನೇಹ ಮುಂದುವರೆದು, ಎರಡು ವರ್ಷ ಡೇಟಿಂಗ್ ಮಾಡಿದ್ವಿ. ಅನೇಕ ಕಡೆ ಸುತ್ತಾಡಿದ್ವಿ. ಆದರೆ ಯಾರಿಗೂ ಈ ವಿಷ್ಯ ಗೊತ್ತಾಗಲಿಲ್ಲ. ತುಂಬಾ ಮಂದಿ ಅವ್ರು ನನ್ನ ಬಾಡಿಗಾರ್ಡ್ ಎಂದುಕೊಂಡಿದ್ರು ಎಂದಿದ್ದಾರೆ ನಟಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

