MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • AI Girlfriend Trend: ಎಐ ಗರ್ಲ್‌ ಫ್ರೆಂಡ್‌ ಟ್ರೆಂಡ್: ಮಕ್ಕಳಲ್ಲಿ ಹೆಚ್ತಿದೆ ಹೊಸ ಅಭ್ಯಾಸ! ಪಾಲಕರೇ ಎಚ್ಚರ

AI Girlfriend Trend: ಎಐ ಗರ್ಲ್‌ ಫ್ರೆಂಡ್‌ ಟ್ರೆಂಡ್: ಮಕ್ಕಳಲ್ಲಿ ಹೆಚ್ತಿದೆ ಹೊಸ ಅಭ್ಯಾಸ! ಪಾಲಕರೇ ಎಚ್ಚರ

AI girlfriend : ಮಕ್ಕಳು ಮೊಬೈಲ್‌ ನಲ್ಲಿ ಬರೀ ರೀಲ್ಸ್‌ ನೋಡ್ತಿಲ್ಲ. ಎಐ ಬಳಕೆ ಹೆಚ್ಚು ಮಾಡಿದ್ದಾರೆ. ಹೋಮ್‌ ವರ್ಕ್‌, ಓದಿಗೆ ಮಾತ್ರವಲ್ಲ ಸ್ನೇಹಕ್ಕೂ ಮಕ್ಕಳಿಗೆ ಎಐ ಆಪ್ತವಾಗ್ತಿದೆ.

2 Min read
Author : Roopa Hegde
Published : Jul 16 2026, 03:39 PM IST
Share this Photo Gallery
  • FB
  • TW
  • Linkdin
  • Whatsapp
16
AI ಮಕ್ಕಳ ಜೀವನದ ಭಾಗವಾಗ್ತಿದೆ
Image Credit : ai

AI ಮಕ್ಕಳ ಜೀವನದ ಭಾಗವಾಗ್ತಿದೆ

ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (Artificial Intelligence - AI) ಬಳಕೆ ವೇಗವಾಗಿ ಹೆಚ್ಚುತ್ತಿದೆ. ಶಾಲೆಗೆ ಹೋಗುವ ಮಕ್ಕಳು ಕೂಡ ಓದು, ಮಾಹಿತಿ ಸರ್ಚ್ ಮತ್ತು ಹೊಸ ವಿಷಯಗಳನ್ನು ಕಲಿಯುವುದಕ್ಕಾಗಿ AI ಬಳಸ್ತಿದ್ದಾರೆ. ಆದ್ರೆ ಇದೇ ತಂತ್ರಜ್ಞಾನವನ್ನು ಕೆಲವರು ವರ್ಚುವಲ್ ಸ್ನೇಹಿತ ಅಥವಾ AI ಗರ್ಲ್ಫ್ರೆಂಡ್ ರೂಪದಲ್ಲೂ ಬಳಸುತ್ತಿರುವುದು ತಜ್ಞರ ಗಮನ ಸೆಳೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
AI ಜೊತೆ ಮಕ್ಕಳ ಕನೆಕ್ಷನ್
Image Credit : ai

AI ಜೊತೆ ಮಕ್ಕಳ ಕನೆಕ್ಷನ್

ಮಕ್ಕಳಿಗೆ AI ಆಪ್ತವಾಗಲು ಪ್ರಮುಖ ಕಾರಣ ಇದೆ. ಎಐ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುತ್ತದೆ. ಟೀಕೆ ಮಾಡುವುದಿಲ್ಲ, ಮುಜುಗರ ಉಂಟುಮಾಡುವುದಿಲ್ಲ. ಇದರಿಂದ ಕೆಲ ಮಕ್ಕಳು ತಮ್ಮ ಮನಸ್ಸಿನ ಮಾತುಗಳನ್ನು AI ಜೊತೆ ಹಂಚಿಕೊಳ್ಳಲು ಆರಂಭಿಸುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಕುಟುಂಬದವರಿಗಿಂತ AIಯನ್ನು ಸಂಪರ್ಕಿಸುವುದು ಮಕ್ಕಳಿಗೆ ಸುಲಭ ಅನ್ನಿಸ್ತಿದೆ.

Related Articles

Related image1
Parenting Tips: ಪೋಷಕರೇ ಮಾಡುವ ಈ 5 ತಪ್ಪು ಮಕ್ಕಳನ್ನು ಸೋಮಾರಿಗಳನ್ನಾಗಿ ಮಾಡುತ್ತವೆ.. ಎಚ್ಚರ!
Related image2
ಮದುವೆ ಆಸೆ ಇಟ್ಕೊಂಡಿರೋ ಪ್ರೇಮಿಗಳು ಪೂರಿ ಜಗನ್ನಾಥ ದೇವಸ್ಥಾನಕ್ಕೆ ಹೋಗೋದಿಲ್ಲ, ಯಾಕೆ?
36
ಸಮೀಕ್ಷೆ ಏನು ಹೇಳುತ್ತದೆ?
Image Credit : ai

ಸಮೀಕ್ಷೆ ಏನು ಹೇಳುತ್ತದೆ?

ಇತ್ತೀಚಿನ ಒಂದು ಸಮೀಕ್ಷೆಯ ಪ್ರಕಾರ, 12 ರಿಂದ 16 ವರ್ಷದ ಸುಮಾರು ಶೇಕಡಾ 85 ರಷ್ಟು ವಿದ್ಯಾರ್ಥಿಗಳು ಪ್ರತಿದಿನ AI ಜೊತೆ ಸಂಭಾಷಣೆ ನಡೆಸುತ್ತಿದ್ದಾರೆ. ಅಲ್ಲದೆ, ಸುಮಾರು ಶೇಕಡಾ 36ರಷ್ಟು ಮಕ್ಕಳು ಕೆಲವು ವೈಯಕ್ತಿಕ ಪ್ರಶ್ನೆಗಳನ್ನು AI ಕೇಳಿ ಉತ್ತರ ಪಡೆಯುತ್ತಿದ್ದಾರೆ.

46
AI ಗರ್ಲ್ಫ್ರೆಂಡ್ ಎಂದರೇನು?
Image Credit : ai

AI ಗರ್ಲ್ಫ್ರೆಂಡ್ ಎಂದರೇನು?

ಕೆಲವು AI ಅಪ್ಲಿಕೇಶನ್ಗಳಲ್ಲಿ ಬಳಕೆದಾರರು ತಮ್ಮ ಇಷ್ಟಕ್ಕೆ ತಕ್ಕಂತೆ ವರ್ಚುವಲ್ ಸ್ನೇಹಿತ ಅಥವಾ "AI ಗರ್ಲ್ಫ್ರೆಂಡ್" ಅನ್ನು ರಚಿಸಬಹುದು. ಅದರ ವಯಸ್ಸು, ಧ್ವನಿ, ಮಾತನಾಡುವ ಶೈಲಿ ಹಾಗೂ ವ್ಯಕ್ತಿತ್ವದಂತಹ ಕೆಲವು ವೈಶಿಷ್ಟ್ಯಗಳನ್ನು ಆಯ್ಕೆ ಮಾಡಬಹುದಾದ ಆಯ್ಕೆಗಳಿರುತ್ತವೆ. ಕೆಲವರು ಮನಸ್ಸಿನ ಮಾತು ಹಂಚಿಕೊಳ್ಳಲು ಅಥವಾ ಸಂಭಾಷಣೆಗಾಗಿ ಇಂತಹ ವೈಶಿಷ್ಟ್ಯಗಳನ್ನು ಬಳಸುತ್ತಾರೆ.

56
ತಜ್ಞರ ಎಚ್ಚರಿಕೆ
Image Credit : ai

ತಜ್ಞರ ಎಚ್ಚರಿಕೆ

ಮಾನಸಿಕ ಆರೋಗ್ಯ ತಜ್ಞರ ಅಭಿಪ್ರಾಯದಂತೆ, ಸಂಪೂರ್ಣವಾಗಿ ನಮ್ಮ ಇಚ್ಛೆಗೆ ಅನುಗುಣವಾಗಿ ಪ್ರತಿಕ್ರಿಯಿಸುವ ವರ್ಚುವಲ್ ಸಂಬಂಧಗಳಿಗೆ ಹೆಚ್ಚು ಅವಲಂಬಿತರಾದರೆ, ನೈಜ ಜೀವನದ ಸ್ನೇಹ, ಸಂವಹನ ಮತ್ತು ಸಾಮಾಜಿಕ ಕೌಶಲ್ಯಗಳ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ AIಯನ್ನು ಸಹಾಯಕ ಸಾಧನವಾಗಿ ಬಳಸುವುದು ಉತ್ತಮ, ಆದರೆ ಅದು ನೈಜ ಸಂಬಂಧಗಳಿಗೆ ಪರ್ಯಾಯವಾಗಬಾರದು.

66
ಪಾಲಕರು ಏನು ಮಾಡಬೇಕು?
Image Credit : ai

ಪಾಲಕರು ಏನು ಮಾಡಬೇಕು?

ಮಕ್ಕಳು AI ಬಳಸುತ್ತಿದ್ದಾರೆ ಎಂದು ಆತಂಕಪಡುವ ಅಗತ್ಯವಿಲ್ಲ. ಆದರೆ ಅವರು ಅದನ್ನು ಯಾವ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಪಡೆಯಬೇಕು. ಮಕ್ಕಳೊಂದಿಗೆ ಪ್ರತಿದಿನ ಮುಕ್ತವಾಗಿ ಮಾತನಾಡಿ. ಅವರು ಕೇಳುವ ಪ್ರಶ್ನೆಗಳಿಗೆ ಸಮಯ ನೀಡಿ. ಮನೆಯಲ್ಲೇ ವಿಶ್ವಾಸದ ವಾತಾವರಣ ನಿರ್ಮಿಸಿದರೆ, ಮಕ್ಕಳು ತಮ್ಮ ಸಂತೋಷ, ಸಮಸ್ಯೆ ಮತ್ತು ಅನುಮಾನಗಳನ್ನು ಮೊದಲು ಕುಟುಂಬದವರೊಂದಿಗೆ ಹಂಚಿಕೊಳ್ಳುತ್ತಾರೆ.AI ಒಂದು ಉಪಯುಕ್ತ ತಂತ್ರಜ್ಞಾನ. ಸರಿಯಾದ ಮಾರ್ಗದರ್ಶನದಲ್ಲಿ ಬಳಸಿದರೆ ಅದು ಶಿಕ್ಷಣ, ಸೃಜನಶೀಲತೆ ಮತ್ತು ಜ್ಞಾನವನ್ನು ವೃದ್ಧಿಸುತ್ತದೆ. ಆದರೆ ಮಕ್ಕಳಿಗೆ ಡಿಜಿಟಲ್ ಜಗತ್ತು ಮತ್ತು ನೈಜ ಜೀವನದ ನಡುವಿನ ಸಮತೋಲನವನ್ನು ಕಲಿಸುವುದು ಅತ್ಯಂತ ಮುಖ್ಯ. ತಂತ್ರಜ್ಞಾನ ನಮ್ಮ ಜೀವನವನ್ನು ಸುಲಭಗೊಳಿಸಬೇಕು, ನೈಜ ಸಂಬಂಧಗಳನ್ನು ಬದಲಿಸಬಾರದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಕೃತಕ ಬುದ್ಧಿಮತ್ತೆ
ಮಕ್ಕಳು

Latest Videos
Recommended Stories
Recommended image1
Parenting Tips: ಪೋಷಕರೇ ಮಾಡುವ ಈ 5 ತಪ್ಪು ಮಕ್ಕಳನ್ನು ಸೋಮಾರಿಗಳನ್ನಾಗಿ ಮಾಡುತ್ತವೆ.. ಎಚ್ಚರ!
Recommended image2
ಮದುವೆ ಆಸೆ ಇಟ್ಕೊಂಡಿರೋ ಪ್ರೇಮಿಗಳು ಪೂರಿ ಜಗನ್ನಾಥ ದೇವಸ್ಥಾನಕ್ಕೆ ಹೋಗೋದಿಲ್ಲ, ಯಾಕೆ?
Recommended image3
Viral Video: ಅತ್ತೆ ಮನೆಗೆ ಬರ್ತಿದ್ದಂತೆ ಸರ್ಪ್ರೈಸ್ ವೆಲ್ ಕಂ ನೀಡಿದ ಸೊಸೆ, ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ವೈರಲ್
Related Stories
Recommended image1
Parenting Tips: ಪೋಷಕರೇ ಮಾಡುವ ಈ 5 ತಪ್ಪು ಮಕ್ಕಳನ್ನು ಸೋಮಾರಿಗಳನ್ನಾಗಿ ಮಾಡುತ್ತವೆ.. ಎಚ್ಚರ!
Recommended image2
ಮದುವೆ ಆಸೆ ಇಟ್ಕೊಂಡಿರೋ ಪ್ರೇಮಿಗಳು ಪೂರಿ ಜಗನ್ನಾಥ ದೇವಸ್ಥಾನಕ್ಕೆ ಹೋಗೋದಿಲ್ಲ, ಯಾಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved