MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • Love Marriageಗೆ ಮನೆಯವರು ಒಪ್ಪುತ್ತಿಲ್ವಾ? ಹೀಗ್ ಮಾಡಿ… ತಾವೇ ಮುಂದೆ ನಿಂತು ಮದ್ವೆ ಮಾಡಿಸ್ತಾರೆ !

Love Marriageಗೆ ಮನೆಯವರು ಒಪ್ಪುತ್ತಿಲ್ವಾ? ಹೀಗ್ ಮಾಡಿ… ತಾವೇ ಮುಂದೆ ನಿಂತು ಮದ್ವೆ ಮಾಡಿಸ್ತಾರೆ !

Love Marriage: ಲವ್ ಮ್ಯಾರೇಜ್‌ಗೆ ಮನೆಯವರು ಒಪ್ಪುತ್ತಿಲ್ಲವೇ? ಪೋಷಕರ ಮನ ಗೆಲ್ಲಲು ಏನು ಮಾಡಬೇಕು, ಯಾವ ತಪ್ಪುಗಳನ್ನು ತಪ್ಪಿಸಬೇಕು ಮತ್ತು ಪ್ರೇಮ ವಿವಾಹಕ್ಕೆ ಕುಟುಂಬದ ಒಪ್ಪಿಗೆ ಪಡೆಯುವ ಸರಳ ಹಾಗೂ ಪರಿಣಾಮಕಾರಿ ಸಲಹೆಗಳನ್ನು ಇಲ್ಲಿ ತಿಳಿಯಿರಿ. ಖಂಡಿತಾ ಮನೆಯವರು ಒಪ್ಪುತ್ತಾರೆ.

2 Min read
Author : Pavna Das
Published : Aug 07 2026, 04:31 PM IST
Share this Photo Gallery
  • FB
  • TW
  • Linkdin
  • Whatsapp
17
ಲವ್ ಮ್ಯಾರೇಜ್‌ಗೆ ಮನೆಯವರನ್ನು ಒಪ್ಪಿಸಲು ಈ ಸುಲಭ ಮಾರ್ಗಗಳು
Image Credit : AI

ಲವ್ ಮ್ಯಾರೇಜ್‌ಗೆ ಮನೆಯವರನ್ನು ಒಪ್ಪಿಸಲು ಈ ಸುಲಭ ಮಾರ್ಗಗಳು

ಪ್ರೀತಿ ಮಾಡಿ ಮದುವೆ ಆಗೋದೇನೋ ಚೆಂದ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಲವ್ ಮ್ಯಾರೇಜ್‌ಗೆ ಮನೆಯವರನ್ನು ಒಪ್ಪಿಸುವುದೇ ಕಷ್ಟವಾಗಿರುತ್ತದೆ. ಜಾತಿ, ಧರ್ಮ, ಕುಟುಂಬದ ಪ್ರತಿಷ್ಠೆ, ಆರ್ಥಿಕ ಸ್ಥಿತಿ ಅಥವಾ ಸಾಮಾಜಿಕ ಹಿನ್ನೆಲೆ ಮುಂತಾದ ಕಾರಣಗಳಿಂದ ಕೆಲವೊಮ್ಮೆ ಪೋಷಕರು ಲವ್ ಮ್ಯಾರೇಜ್‌ಗೆ ಒಪ್ಪಿಕೊಳ್ಳುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಕೋಪಗೊಳ್ಳುವುದು, ಪ್ರತಿದಿನ ಜಗಳವಾಡುವುದು ಅಥವಾ ಆತುರದ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ತಾಳ್ಮೆಯಿಂದ ಮಾತನಾಡಿ, ವಿಶ್ವಾಸ ಗಳಿಸುವುದು ಮುಖ್ಯ. ಅದಕ್ಕಾಗಿ ಏನು ಮಾಡಬೇಕು ನೋಡೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಮೊದಲು ನಿಮ್ಮನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯೊಂದಿಗೆ ಮಾತನಾಡಿ
Image Credit : AI Generated

ಮೊದಲು ನಿಮ್ಮನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯೊಂದಿಗೆ ಮಾತನಾಡಿ

ಕುಟುಂಬದ ಎಲ್ಲರ ಮುಂದೆ ಒಮ್ಮೆಲೇ ವಿಷಯ ಹೇಳುವುದಕ್ಕಿಂತ ಮೊದಲು ನಿಮ್ಮ ಮಾತನ್ನು ನಿಮ್ಮ ಚೆನ್ನಾಗಿ ಅರ್ಥಮಾಡಿಕೊಳ್ಳುವ ವ್ಯಕ್ತಿಯೊಂದಿಗೆ ಹೇಳಿ. ಅವರು ತಾಯಿ, ತಂದೆ, ಅಣ್ಣ, ಅಕ್ಕ ಅಥವಾ ಕುಟುಂಬದ ಮತ್ತೊಬ್ಬ ಸದಸ್ಯರಾಗಿರಬಹುದು. ನೀವು ಸಂಗಾತಿಯನ್ನು ಏಕೆ ಆಯ್ಕೆ ಮಾಡಿಕೊಂಡಿದ್ದೀರಿ ಮತ್ತು ಮದುವೆಯಾಗಲು ಕಾರಣವೇನು ಎಂಬುದನ್ನು ಶಾಂತವಾಗಿ ವಿವರಿಸಿ. ಅವರು ನಿಮ್ಮ ಪರವಾಗಿ ಉಳಿದವರನ್ನು ಮನವೊಲಿಸಲು ಸಹಾಯ ಮಾಡಬಹುದು.

Related Articles

Related image1
Love marriage ಆದ್ರೂ ಪ್ರೀತಿ ಕೊರತೆನಾ? ಈ 7 Vastu Tips ಅನುಸರಿಸಿ
Related image2
Marriage Prediction: ಶ್ರಾವಣ ಮಾಸದಲ್ಲಿ ಈ 4 ರಾಶಿಯವರಿಗೆ ವಿವಾಹ ಯೋಗ! ಜೀವನ ಸಂಗಾತಿ ಸಿಗುವ ಸಾಧ್ಯತೆ ಹೆಚ್ಚು
37
ಸಡನ್ ಆಗಿ ಮದುವೆ ನಿರ್ಧಾರವನ್ನು ಘೋಷಿಸಬೇಡಿ
Image Credit : Asianet News

ಸಡನ್ ಆಗಿ ಮದುವೆ ನಿರ್ಧಾರವನ್ನು ಘೋಷಿಸಬೇಡಿ

ಮದುವೆ ತೀರ್ಮಾನವನ್ನು ಏಕಾಏಕಿ ಮನೆಯವರಿಗೆ ತಿಳಿಸುವುದರಿಂದ ಅವರನ್ನು ನೀವು ಕಡೆಗಣಿಸಿದಂತಾಗುತ್ತದೆ. ಹಾಗಾಗಿ ಸಾಧ್ಯವಾದರೆ ಮೊದಲು ನಿಮ್ಮ ಸಂಗಾತಿಯ ಗುಣಗಳು, ಶಿಕ್ಷಣ, ಉದ್ಯೋಗ, ಕುಟುಂಬ ಮತ್ತು ವ್ಯಕ್ತಿತ್ವದ ಬಗ್ಗೆ ನಿಧಾನವಾಗಿ ಮನೆಯವರಿಗೆ ಪರಿಚಯಿಸಿ. ನಂತರ ಸೂಕ್ತ ಸಮಯದಲ್ಲಿ ಭೇಟಿಯಾಗುವ ಅವಕಾಶ ಕಲ್ಪಿಸಿ. ಬಳಿಕ ಮದುವೆ ಬಗ್ಗೆ ಮಾತುಕತೆ ನಡೆಸಿ.

47
ಮನೆಯವರ ವಿರೋಧದ ಕಾರಣವನ್ನು ತಿಳಿದುಕೊಳ್ಳಿ
Image Credit : AI

ಮನೆಯವರ ವಿರೋಧದ ಕಾರಣವನ್ನು ತಿಳಿದುಕೊಳ್ಳಿ

ಮನೆಯವರು ಯಾಕೆ ವಿರೋಧಿಸುತ್ತಿದ್ದಾರೆ, ಮದುವೆಗೆ ಯಾಕೆ ಒಪ್ಪಿಕೊಳ್ಳುತ್ತಿಲ್ಲ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ. ಜಾತಿ, ಧರ್ಮ, ಉದ್ಯೋಗ, ಆರ್ಥಿಕ ಸ್ಥಿತಿ, ವಯಸ್ಸಿನ ಅಂತರ ಅಥವಾ ಕುಟುಂಬದ ಹಿನ್ನೆಲೆ ಅವರ ಚಿಂತೆಯ ವಿಷಯವಾಗಿರಬಹುದು. ಕಾರಣ ತಿಳಿದ ನಂತರವೇ ಸರಿಯಾದ ರೀತಿಯಲ್ಲಿ ಉತ್ತರಿಸಬಹುದು.

57
ನೀವೆಷ್ಟು ಜವಾಬ್ಧಾರಿಯುತರಾಗಿದ್ದೀರಿ ಎಂಬುದನ್ನು ತಿಳಿಸಿ
Image Credit : Asianet News

ನೀವೆಷ್ಟು ಜವಾಬ್ಧಾರಿಯುತರಾಗಿದ್ದೀರಿ ಎಂಬುದನ್ನು ತಿಳಿಸಿ

'ನಾವು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತೇವೆ' ಎಂದು ಹೇಳುವುದಷ್ಟೇ ಸಾಕಾಗುವುದಿಲ್ಲ. ಮದುವೆಯ ನಂತರದ ಜೀವನ, ಉದ್ಯೋಗ, ಆರ್ಥಿಕ ಜವಾಬ್ದಾರಿ, ವಾಸಸ್ಥಳ ಮತ್ತು ಕುಟುಂಬದ ಬಗ್ಗೆ ನೀವು ಮಾಡಿಕೊಂಡಿರುವ ಯೋಜನೆಗಳನ್ನು ವಿವರಿಸಿ. ನಿಮ್ಮ ಜವಾಬ್ದಾರಿಯುತ ವರ್ತನೆಯೂ ಮನೆಯವರಲ್ಲಿ ವಿಶ್ವಾಸ ಮೂಡಿಸುತ್ತದೆ.

67
ನಂಬಿಕೆಯಿರುವ ಸಂಬಂಧಿಕರ ಸಹಾಯ ಪಡೆಯಿರಿ*
Image Credit : AI

ನಂಬಿಕೆಯಿರುವ ಸಂಬಂಧಿಕರ ಸಹಾಯ ಪಡೆಯಿರಿ*

ಕೆಲವೊಮ್ಮೆ ಮಕ್ಕಳ ಮಾತಿಗಿಂತ ಕುಟುಂಬದ ವಿಶ್ವಾಸಾರ್ಹ ಸಂಬಂಧಿಕ ಅಥವಾ ಆಪ್ತ ಸ್ನೇಹಿತರ ಮಾತನ್ನು ಪೋಷಕರು ಹೆಚ್ಚು ಪರಿಗಣಿಸುತ್ತಾರೆ. ನಿಮ್ಮ ಸಂಬಂಧವನ್ನು ಅರ್ಥಮಾಡಿಕೊಳ್ಳುವ ಹಾಗೂ ಮನೆಯವರು ಗೌರವಿಸುವ ವ್ಯಕ್ತಿಯೊಬ್ಬರ ಸಹಾಯ ಪಡೆದು ನಿಮ್ಮ ಅಭಿಪ್ರಾಯವನ್ನು ತಿಳಿಸುವುದು ಉತ್ತಮ. ಆದರೆ ಒಂದೇ ಸಮಯದಲ್ಲಿ ಹಲವರಿಂದ ಒತ್ತಡ ತರಿಸುವ ಪ್ರಯತ್ನ ಮಾಡಬೇಡಿ.

77
ಎಲ್ಲೂ ಸಂಯಮ ಕಳೆದುಕೊಳ್ಳಬೇಡಿ
Image Credit : AI Generated

ಎಲ್ಲೂ ಸಂಯಮ ಕಳೆದುಕೊಳ್ಳಬೇಡಿ

ಒಂದು ವೇಳೆ ಕೋಪದಿಂದ ಮಾತನಾಡಿದರೆ ಅಥವಾ ಅವರನ್ನೇ ಮದುವೆಯಾಗುತ್ತೇನೆ ಎಂದು ಹಠ ಮಾಡಿದರೆ, ಮನೆಯವರು ಒಪ್ಪಿಕೊಳ್ಳದೇ ಇರಬಹುದು. ಆದರೆ ನೀವು ನಿಧಾನವಾಗಿ, ಶಾಂತಿಯುತವಾಗಿ, ಎಲ್ಲರ ಭರವಸೆಯನ್ನು ಗೆಲ್ಲುವಂತೆ ಮಾತನಾಡಿದರೆ, ನೀವೆಷ್ಟು ಜವಾಬ್ಧಾರಿಯುತರಾಗಿದ್ದೀರಿ ಎಂಬುದನ್ನು ಅವರಿಗೆ ತಿಳಿಸಿದರೆ ಖಂಡಿತವಾಗಿಯೂ ನಿಮ್ಮ ಮನೆಯವರಿಗೆ ನಿಮ್ಮ ಮೇಲೆ ನಂಬಿಕೆ ಬರುತ್ತದೆ. ಬಳಿಕ ಅವರೇ ಮುಂದೆ ನಿಂತು ನಿಮ್ಮ ಮದುವೆ ಮಾಡಿಸುತ್ತಾರೆ ನೋಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಪ್ರೀತಿ
ಪ್ರೇಮ ವಿವಾಹ
ಸಂಬಂಧಗಳು
ಮದುವೆ
Latest Videos
Recommended Stories
Recommended image1
ಸಿಎಂ ವಿಜಯ್ ಡಿವೋರ್ಸ್ ಕೇಸ್‌ಗೆ ಬಿಗ್ ಟ್ವಿಸ್ಟ್, ಪತ್ನಿ ಸಂಗೀತಾ ಅನಿರೀಕ್ಷಿತ ನಡೆ, ಪ್ರಕರಣ ಕ್ಲೋಸ್!
Recommended image2
Parenting Tips: ಪ್ರತಿದಿನ ಮಕ್ಕಳಿಗೆ ಒಂದು ಕಥೆ ಹೇಳಿದರೆ ಏನೆಲ್ಲಾ ಬದಲಾವಣೆಯಾಗುತ್ತದೆ? ತಜ್ಞರು ಬಿಚ್ಚಿಟ್ಟ ಅಚ್ಚರಿ ಮಾಹಿತಿ!
Recommended image3
ಇಂದು ಸಿಎಂ ವಿಜಯ್-ಸಂಗೀತಾ ಡಿವೋರ್ಸ್ ಕೇಸ್ ವಿಚಾರಣೆ; ಗಂಡ-ಹೆಂಡ್ತಿ ಒಂದಾಗೋ ಚಾನ್ಸ್‌ ಎಷ್ಟು ಪರ್ಸೆಂಟ್ ಇದೆ?
Related Stories
Recommended image1
Love marriage ಆದ್ರೂ ಪ್ರೀತಿ ಕೊರತೆನಾ? ಈ 7 Vastu Tips ಅನುಸರಿಸಿ
Recommended image2
Marriage Prediction: ಶ್ರಾವಣ ಮಾಸದಲ್ಲಿ ಈ 4 ರಾಶಿಯವರಿಗೆ ವಿವಾಹ ಯೋಗ! ಜೀವನ ಸಂಗಾತಿ ಸಿಗುವ ಸಾಧ್ಯತೆ ಹೆಚ್ಚು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved