- Home
- Jobs
- Private Jobs
- Nikhil Kamath: ಕಾಲೇಜಿನ 4 ವರ್ಷದ ಕೋರ್ಸ್ ವೇಸ್ಟ್, ಮುಂದಿನ 10 ವರ್ಷದಲ್ಲಿ ಈ ಉದ್ಯೋಗಕ್ಕೆ ಬೇಡಿಕೆ ಜಾಸ್ತಿ: ನಿಖಿಲ್ ಕಾಮತ್
Nikhil Kamath: ಕಾಲೇಜಿನ 4 ವರ್ಷದ ಕೋರ್ಸ್ ವೇಸ್ಟ್, ಮುಂದಿನ 10 ವರ್ಷದಲ್ಲಿ ಈ ಉದ್ಯೋಗಕ್ಕೆ ಬೇಡಿಕೆ ಜಾಸ್ತಿ: ನಿಖಿಲ್ ಕಾಮತ್
ಇಂದು ಉದ್ಯೋಗ ಸಿಗೋದು ಕಷ್ಟ ಆಗಿದೆ. ಹೀಗಿರುವಾಗ ಮುಂದಿನ 10 ವರ್ಷಗಳಲ್ಲಿ ಉದ್ಯೋಗದಲ್ಲಿ ಈ ಕೌಶಲ ಬೇಕು ಎಂದು ನಿಖಿಲ್ ಕಾಮತ್ ಅವರು ಹೇಳಿದ್ದಾರೆ. ಹಾಗಾದರೆ ಏನದು?

ಇಂದು ಸಾಕಷ್ಟು ಕಂಪೆನಿಗಳು ಲೇಆಫ್ ಮಾಡುತ್ತಿವೆ. ಕೆಲವರು ಕೆಲಸ ಇಲ್ಲದೆ ಒದ್ದಾಡುತ್ತಿದ್ದಾರೆ. ಎಐ ತಂತ್ರಜ್ಞಾನ, ಚಾಟ್ ಜಿಪಿಟಿಯಿಂದ ಸಾಕಷ್ಟು ಉದ್ಯೋಗಗಳು ಕಟ್ ಆಗುತ್ತಿವೆ. ಈ ಬಗ್ಗೆ ಜೀರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರು ವಿಶ್ವ ಆರ್ಥಿಕ ವೇದಿಕೆಯ (WEF) ಇತ್ತೀಚಿನ ಫ್ಯೂಚರ್ ಆಫ್ ಜಾಬ್ಸ್ ರಿಪೋರ್ಟ್ 2025ಕ್ಕೆ ಪ್ರತಿಕ್ರಿಯೆ ನೀಡುವಾಗ ಈ ಬಗ್ಗೆ ಮಾತನಾಡಿದ್ದಾರೆ.
ನಾಲ್ಕು ವರ್ಷಗಳ ಕಾಲೇಜು ಲೈಫ್ ಮುಗಿಯಿತು. ಉದ್ಯೋಗದ ದೃಷ್ಟಿಕೋನ ಬದಲಾಗ್ತಿರುವ ಟೈಮ್‌ನಲ್ಲಿ ಕಲಿಕೆಯು ನಿರಂತರವಾಗಿದೆ ಎಂದು ಅವರು ಹೇಳಿದ್ದಾರೆ. 10 ವರ್ಷಗಳ ನಂತರ ಯಾವ ಜಾಬ್ ಇರುತ್ತವೆ ಎಂಬ ಪ್ರಶ್ನೆ ಕೇಳಲಾಗಿತ್ತು. ಆಗ ನಿಖಿಲ್ ಕಾಮತ್ ಅವರು ವೈಯಕ್ತಿಕವಾಗಿ, 4 ವರ್ಷದ ಕಾಲೇಜು ಕೋರ್ಸ್‌ಗಳ ದಿನಗಳು ಮುಗಿದಿವೆ ಅಂತ ಅಂದುಕೊಂಡಿದೀನಿ. ಈಗ ಜೀವನಪರ್ಯಂತ ಕಲಿಯೋದು ಹೊಸ ರೂಢಿಯಾಗಿದೆ…” ಎಂದು ನಿಖಿಲ್ ಕಾಮತ್ ಅವರು ಪೋಸ್ಟ್ ಮಾಡಿದ್ದಾರೆ.
ನಿಖಿಲ್ ಕಾಮತ್ ಮಾತುಗಳು WEF ವರದಿಯ ಪ್ರಮುಖ ಸಂಶೋಧನೆಗಳನ್ನು ಹೇಳುತ್ತದೆ. ಅಷ್ಟೇ ಅಲ್ಲದೆ ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಉದ್ಯೋಗಳಲ್ಲಿ ಗಮನಾರ್ಹ ಬದಲಾವಣೆಗಳು ಆಗೋದನ್ನು ತಿಳಿಸುತ್ತವೆ. ಈ ವರದಿಯು ಫ್ರಂಟ್‌ಲೈನ್, ಕೇರ್ ಎಕಾನಮಿ ರೋಲ್‌ಗಳಲ್ಲಿ ಗಮನಾರ್ಹ ಬೆಳವಣಿಗೆ ಆಗೋದನ್ನು ಎತ್ತಿ ತೋರಿಸುತ್ತದೆ. ಡೆಲಿವರಿ ಡ್ರೈವರ್‌ಗಳು, ಕೃಷಿ ಕಾರ್ಮಿಕರು, ನರ್ಸ್‌ಗಳು, ಸಾಮಾಜಿಕ ಕಾರ್ಯಕರ್ತರು, Personal care assistants ಕೆಲಸಕ್ಕೆ ಬೇಡಿಕೆ ಬರುವುದು.
ತಂತ್ರಜ್ಞಾನವು ಶೇಕಡಾವಾರು ಬೆಳವಣಿಗೆಯಾಗುತ್ತಿದೆ. ಎಐ, ಮಷಿನ್ ಲರ್ನಿಂಗ್ ಸ್ಪೆಶಲಿಸ್ಟ್‌ಗಳು, ಫಿನ್‌ಟೆಕ್ ಇಂಜಿನಿಯರ್‌ಗಳು, ಸಾಫ್ಟ್‌ವೇರ್ ಡೆವಲಪರ್‌ಗಳಂತಹ ಉದ್ಯೋಗಗಳು ಈಗಾಗಲೇ ಮೇಲುಗೈ ಸಾಧಿಸಿವೆ. ಇಂಧನ ಇಂಜಿನಿಯರ್‌ಗಳು, EV specialists ಸಹ ಏರಿಕೆಯಾಗುತ್ತಿವೆ.
ಗುಮಾಸ್ತ, ಕಾರ್ಯದರ್ಶಿ ಕೆಲಸಗಳಾದ ಡೇಟಾ ಎಂಟ್ರಿ ಕ್ಲರ್ಕ್‌ಗಳು, ಬ್ಯಾಂಕ್ ಟೆಲ್ಲರ್‌ಗಳು, ಡಾಕ ಸೇವಾ ಕ್ಲರ್ಕ್‌ಗಳಂತಹ ಹುದ್ದೆಗಳು ತೀವ್ರವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.
ವಿಶ್ಲೇಷಣಾತ್ಮಕ ಚಿಂತನೆಯು ಅತ್ಯಂತ ಬೇಡಿಕೆಯಿರುವ ಕೌಶಲವಾಗಿದೆ. ಸ್ಥಿತಿಸ್ಥಾಪಕತ್ವ, ನಮ್ಯತೆ, ಚುರುಕುತನ, ನಾಯಕತ್ವ ಕೂಡ ಬೇಡಿಕೆಯಲ್ಲಿದೆ. ಎಐ, ಬಿಗ್ ಡೇಟಾ, ಸೈಬರ್‌ಸೆಕ್ಯೂರಿಟಿ, ಟೆಕ್ ಸಾಕ್ಷರತೆಯು ತ್ವರಿತವಾಗಿ ಬೆಳೆಯುತ್ತಿರುವ ಕೌಶಲ್ಯಗಳ ಪಟ್ಟಿಯಲ್ಲಿ ಪ್ರಾಬಲ್ಯವನ್ನು ಸಾಧಿಸಿವೆ.