Asianet Suvarna News Asianet Suvarna News

Jobs in Karnataka ವೆಟರ್ನರಿ ಆಫೀಸರ್ ಆಗೋ ಆಸೆ ಇದ್ಯಾ? ಇಲ್ಲಿದೆ ನೋಡಿ ಅವಕಾಶ!

Karnataka AHVS Recruitment 2024 ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯಲ್ಲಿ ಖಾಲಿ ಇರುವ 400 ವೆಟರ್ನರಿ ಆಫೀಸರ್‌ (ಗುತ್ತಿಗೆ ಆಧಾರದಲ್ಲಿ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
 

Animal Husbandry Veterinary Services AVHS 400 veterinary officer Posts recruitment san
Author
First Published Jun 11, 2024, 4:25 PM IST

ಬೆಂಗಳೂರು (ಜೂ.11): ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಕರ್ನಾಟಕ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯಲ್ಲಿ ಖಾಲಿ ಇರುವ 400 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಕುರಿತಾಗಿ Animal Husbandry & Veterinary Services Karnataka -AHVS Karnataka ಪ್ರಕಟಣೆಯನ್ನೂ ನೀಡಿದೆ. ಇಲಾಖೆಯಲ್ಲಿ ಒಟ್ಟು 400 ವೆಟರ್ನರಿ ಆಫೀಸರ್‌ ಹುದ್ದೆಗಳು ಖಾಲಿ ಉಳಿದುಕೊಂಡಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಜೂನ್‌ 24ರ ಒಳಗಾಗಿ ಹುದ್ದೆಗೆ ಆಸಕ್ತಿಯಿರುವ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕು ಎಂದು ಹೇಳಲಾಗಿದೆ. ಹುದ್ದೆಯ ಮಾಹಿತಿಗಾಗಿ ahvs.kar.nic.in ಭೇಟಿ ನೀಡುವಂತೆ ಕೋರಲಾಗಿದೆ. ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಕೆ ಮಾಡುವ ಮುನ್ನ ಹುದ್ದೆಯ ಕುರಿತಾಗಿ ಸಂಪೂರ್ಣ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಈ ಕುರಿತಾದ ಮಾಹಿತಿಯನ್ನೂ ಇಲ್ಲೂ ನೀಡಲಾಗಿದೆ.

ವಯೋಮಿತಿ: ​ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ-ಕರ್ನಾಟಕ ನೇಮಕಾತಿಯ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ವಯಸ್ಸು ಜೂನ್ 24, 2024 ಕ್ಕೆ ಕನಿಷ್ಠ 18 ವರ್ಷ ಮತ್ತು 35 ವರ್ಷ ಮೀರಿರಬಾರದು ಎನ್ನಲಾಗಿದೆ. ಪ್ರವರ್ಗ-2A/2B/3A/3B, OBC ಅಭ್ಯರ್ಥಿಗಳಿಗೆ ಮೂರು ವರ್ಷ, SC/ST/ಪ್ರವರ್ಗ-I ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿವಿಎಸ್ಸಿ, ಬಿವಿಎಸ್ಸಿ & ಎಎಚ್, ಬಿ.ಎಸ್ಸಿ, ಪದವಿ ಪೂರ್ಣಗೊಳಿಸಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಲಾಗಿದೆ. ಇನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ-ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 52,640 ಸಂಬಳ ನೀಡಲಾಗುತ್ತದೆ. ಎಲ್ಲಾ ಹುದ್ದೆಗಳು ಕರ್ನಾಟಕ ವಲಯದಲ್ಲಿಯೇ ಇರಲಿದೆ. ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ: ಡಾ.ಪರಮೇಶ್ವರ್

ಪ್ರಮುಖ ದಿನಾಂಕ: ಜೂನ್‌ 14 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಜೂನ್‌ 24ಕ್ಕೆ ಅರ್ಜಿ ಸಲ್ಲಿಕೆ ಮುಕ್ತಾಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-23414446 ಗೆ ಕರೆ ಮಾಡಬಹುದಾಗಿದೆ. 

ಸೆಕ್ಯುರಿಟಿ ಏಜೆನ್ಸಿಗೆ ಶಿಕ್ಷಕರ ನೇಮಕ ಹೊಣೆ ಕಡೆಗೂ ರದ್ದು

Latest Videos
Follow Us:
Download App:
  • android
  • ios