MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Politics
  • ರಾಮಲಿಂಗಾ ರೆಡ್ಡಿ 4 ಸಾಲಿನ ರಾಜೀನಾಮೆ ಪತ್ರದಲ್ಲಿ ಇಷ್ಟೊಂದು ದೋಷ? ಜೈ ಕನ್ನಡಾಂಬೆ- ಜಾಲತಾಣದಲ್ಲಿ ಟ್ರೋಲ್​

ರಾಮಲಿಂಗಾ ರೆಡ್ಡಿ 4 ಸಾಲಿನ ರಾಜೀನಾಮೆ ಪತ್ರದಲ್ಲಿ ಇಷ್ಟೊಂದು ದೋಷ? ಜೈ ಕನ್ನಡಾಂಬೆ- ಜಾಲತಾಣದಲ್ಲಿ ಟ್ರೋಲ್​

ಜಲಸಂಪನ್ಮೂಲ ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡ ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿದ್ದರು. ಆದರೆ, ಅವರ ನಾಲ್ಕು ಸಾಲಿನ ರಾಜೀನಾಮೆ ಪತ್ರದಲ್ಲಿದ್ದ ಮೂರು ಕಾಗುಣಿತ ದೋಷಗಳನ್ನು ನೆಟ್ಟಿಗರು ಪತ್ತೆ ಹಚ್ಚಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

2 Min read
Author : Suchethana D
Published : Jun 06 2026, 12:53 PM IST
Share this Photo Gallery
  • FB
  • TW
  • Linkdin
  • Whatsapp
16
ರಾಮಲಿಂಗಾ ರೆಡ್ಡಿ ರಾಜೀನಾಮೆ
Image Credit : X

ರಾಮಲಿಂಗಾ ರೆಡ್ಡಿ ರಾಜೀನಾಮೆ

ಉಪ ಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್​ ಅವರ ಮುಖ್ಯಮಂತ್ರಿಯ ಕನಸು ನನಸಾಯ್ತು ಎನ್ನುವಷ್ಟರಲ್ಲಿಯೇ ರಾಜ್ಯ ರಾಜಕೀಯದಲ್ಲಿ ಅಲ್ಲೋ ಕಲ್ಲೋಲವೇ ಸೃಷ್ಟಿಯಾಗುತ್ತಿದೆ. ಜಲಸಂಪನ್ಮೂಲ ಖಾತೆಯಿಂದ ತೀವ್ರ ಅಸಮಾಧಾನಗೊಂಡಿರುವ ಸಚಿವ ರಾಮಲಿಂಗಾ ರೆಡ್ಡಿ ನಿನ್ನೆ ರಾಜೀನಾಮೆ ಪತ್ರಕ್ಕೆ ಅಧಿಕೃತವಾಗಿ ಸಹಿ ಮಾಡಿದರು. ಇದರ ನಡುವೆ ರಾಮಲಿಂಗಾ ರೆಡ್ಡಿ ಮನ ಒಲಿಕೆ ಪ್ರಯತ್ನಗಳು ವಿಫಲಗೊಂಡಿದ್ದವು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಯಶಸ್ವಿಯಾಯಿತಾ ಸಂಧಾನ?
Image Credit : X

ಯಶಸ್ವಿಯಾಯಿತಾ ಸಂಧಾನ?

ಆದರೆ, ಇಂದು, ರಾಮಲಿಂಗಾ ರೆಡ್ಡಿ ಅವರ ಮನವೊಲಿಸಲು ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ನಡೆಸಿದ ಯತ್ನ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆಯ ನಡುವೆ ರಾಮಲಿಂಗಾ ರೆಡ್ಡಿಯವರು ತಮ್ಮ ರಾಜೀನಾಮೆಯನ್ನು ಹಿಂಪಡೆಯುವ ಸಾಧ್ಯತೆಗಳಿವೆ ಎಂದು ಸದ್ಯ ಬಂದಿರುವ ವರದಿಗಳು ಹೇಳುತ್ತಿವೆ.

Related Articles

Related image1
ಕೆಟ್ಟ ಲಗ್ನದಲ್ಲಿ ಡಿಕೆಶಿ ಪ್ರಮಾಣವಚನ? ಕಾಂಗ್ರೆಸ್​ ಛಿದ್ರ ಛಿದ್ರ- ಅಧಿಕಾರಿಗಳ ಆತ್ಮಹತ್ಯೆ! ಭಯಾನಕ ಭವಿಷ್ಯವಾಣಿ
Related image2
2028ರಿಂದ ಡಿಕೆಶಿಗೆ ಡೇಂಜರ್​: ವಿಜಯ್​ ಪಿಎಂ ಆಗೋ ಮೊದಲು ಜೈಲಿಗೆ- ತ್ರಿಷಾ ಸಿಎಂ; ಗುರೂಜಿ ಭವಿಷ್ಯವಾಣಿ ಏನಿದೆ
36
ಕೊಡುತ್ತಾರೋ, ಬಿಡುತ್ತಾರೋ
Image Credit : X

ಕೊಡುತ್ತಾರೋ, ಬಿಡುತ್ತಾರೋ

ಅವರು ರಾಜೀನಾಮೆ ಹಿಂದಕ್ಕೆ ಪಡೆಯುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಆದರೆ, ಅವರ ರಾಜೀನಾಮೆ ಪತ್ರ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್​ಗೆ ಒಳಗಾಗಿದೆ. ನಾಲ್ಕು ಸಾಲುಗಳ ರಾಜೀನಾಮೆ ಪತ್ರದಲ್ಲಿ ಮೂರು ಕಾಗುಣಿತ ದೋಷಗಳನ್ನು ನೆಟ್ಟಿಗರು ಕಂಡು ಹಿಡಿದಿದ್ದಾರೆ. ಒಂದು ರಾಜೀನಾಮೆ  ಪತ್ರವನ್ನು ಕೊಡುವಾಗ ಅದನ್ನು ಹಲವಾರು ಅಧಿಕಾರಿಗಳು, ನೌಕರರು ನೋಡಿರುತ್ತಾರೆ. ದೋಷಗಳನ್ನು ಸರಿಪಡಿಸಿರುತ್ತಾರೆ. ಇದರ ಹೊರತಾಗಿಯೂ ಇಷ್ಟು ದೋಷಗಳು ಇವೆ ಎನ್ನುವುದರ ಬಗ್ಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

46
ಕಾಗುಣಿತ ದೋಷಗಳು
Image Credit : Asianet News

ಕಾಗುಣಿತ ದೋಷಗಳು

ಸತೀಶ್​ ನಾಯ್ಕ ಭದ್ರಾವತಿ ಎನ್ನುವವರು ತಮ್ಮ ಫೇಸ್​ಬುಕ್ ಖಾತೆಯಲ್ಲಿ ರಾಜೀನಾಮೆ ಪತ್ರವನ್ನು ಶೇರ್​ ಮಾಡಿದ್ದು, ಅದರಲ್ಲಿನ ಕಾಗುಣಿತ ದೋಷವನ್ನು ಎತ್ತಿ ತೋರಿಸಿದ್ದಾರೆ. ಹೇರಿಕೆ ಎಂದು ಅನ್ಯ ಭಾಷೆಗಳ ವಿರುದ್ಧ ಹೋರಾಡುವ ನಮ್ಮ ಕನ್ನಡಪರ ಹೋರಾಟಗಾರರಿಗೆ, ಆಡಳಿತ ಸರ್ಕಾರದವರ ಈ ತಪ್ಪುಗಳು ಏಕೆ ಕಾಣಿಸುವುದಿಲ್ಲ, ಕಂಡರೂ ತೆಪ್ಪಗಿರುವರಾ, ಅಥವ ಅವರ ಕನ್ನಡ ಭಾಷೆಯ ಕುರಿತಾಗಿನ ಅಸಡ್ಡೆಗೆ ಉದಾಸೀನತೆಯೇ ಅವರ ಕ್ರಮವಾ? ಇದರ ವಿರುದ್ಧವಾಗಿ ಕನ್ನಡಪರ ನಿರ್ದೇಶಕರು ಮತ್ತು ಕರವೇ ಹೋರಾಟಗಾರರು ಏಕೆ ಕ್ರಮವನ್ನು ಕೈಗೊಳ್ಳುವುದಿಲ್ಲ ಎಂದು ಪ್ರಶ್ನಿಸುತ್ತಲೇ ಈ ಪೋಸ್ಟ್​ ಅನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ.

56
ಎಷ್ಟೊಂದು ದೋಷಗಳು!
Image Credit : X

ಎಷ್ಟೊಂದು ದೋಷಗಳು!

ರಾಜೀನಾಮೆ ಪತ್ರದಲ್ಲಿ ಎಷ್ಟೊಂದು ದೋಷಗಳಿವೆಯಪ್ಪಾ! ಎಂದು ಶೀರ್ಷಿಕೆ ಕೊಟ್ಟಿರುವ ಅವರು, ದೇವರೇ, ಕರ್ನಾಟಕ ರಾಜ್ಯದಲ್ಲಿ, ಆಡಳಿತವನ್ನು ನಡೆಸುತ್ತಿರುವ ಧುರೀಣ ಸಚಿವರಿಂದ, ರಾಜ್ಯದ ಆಡಳಿತ ಭಾಷೆಯಾಗಿರುವ ಕನ್ನಡ ಭಾಷೆಯನ್ನು ಪರಿಪೂರ್ಣ ರೂಪದಲ್ಲಿಯೇ ಉಳಿಸಿಕೊಡಪ್ಪಾ ಎನ್ನುತ್ತಾ ಪತ್ರದಲ್ಲಿ ಅಚ್ಚಾಗಿರುವ ಕೆಲವು ಪದಗಳನ್ನು ನೋಡಿ ಎಂದು ತಪ್ಪುಗಳ ಬಗ್ಗೆ ಬರೆದಿದ್ದಾರೆ.

ವಿರುದ್ದವಾಗಿ - ಸರಿಯಾಗಿ ಬರೆಯಬೇಕಾಗಿರುವ ಕ್ರಮ ವಿರುದ್ಧವಾಗಿ

ಸಾದ್ಯವಾಗದ - ಸರಿಯಾಗಿ ಬರೆಯಬೇಕಾಗಿರುವ ಕ್ರಮ ಸಾಧ್ಯವಾಗದ

ಮುಂದುವರಿಯುತ್ತೇನೆ - ಸರಿಯಾಗಿ ಬರೆಯಬೇಕಾಗಿರುವ ಕ್ರಮ ಮುಂದುವರೆಯುತ್ತೇನೆ... ಹೀಗೆ ಮೂರು ತಪ್ಪುಗಳನ್ನು ನಾಲ್ಕು ಸಾಲುಗಳ ಕನ್ನಡದ ರಾಜೀನಾಮೆ ಪತ್ರದಲ್ಲಿ ಎತ್ತಿ ತೋರಿಸಿದ್ದಾರೆ.

66
ಪತ್ರ ಬರೆಯುವುದು ಹೇಗೆ?
Image Credit : Asianet News

ಪತ್ರ ಬರೆಯುವುದು ಹೇಗೆ?

ಇದರ ಜೊತೆ ಜೊತೆಗೆನೇ ರಾಜೀನಾಮೆ ಪತ್ರವನ್ನು ಹೇಗೆ ಬರೆಯಬೇಕು, ಎಲ್ಲಿ ಯಾವ ಪದ ಸೇರಿಸಬೇಕು, ಕಾಮಾ ಎಲ್ಲಿ ಹೇಗೆ ಬಳಸಬೇಕು ಎನ್ನುವುದನ್ನು ಈ ಪೋಸ್ಟ್​ನೊಂದಿಗೆ ಫೇಸ್​ಬುಕ್​ ಬಳಕೆದಾರರು ಸ್ಪಷ್ಟವಾಗಿ ನಮೂದಿಸಿದ್ದು, ಅದರ ಲಿಂಕ್​ ಇಲ್ಲಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರಾಮಲಿಂಗ ರೆಡ್ಡಿ
ಕರ್ನಾಟಕ ಸರ್ಕಾರ
ರಾಜಕೀಯ ಸುದ್ದಿ
ಡಿ.ಕೆ. ಶಿವಕುಮಾರ್
Latest Videos
Recommended Stories
Recommended image1
ಕೆಟ್ಟ ಲಗ್ನದಲ್ಲಿ ಡಿಕೆಶಿ ಪ್ರಮಾಣವಚನ? ಕಾಂಗ್ರೆಸ್​ ಛಿದ್ರ ಛಿದ್ರ- ಅಧಿಕಾರಿಗಳ ಆತ್ಮಹತ್ಯೆ! ಭಯಾನಕ ಭವಿಷ್ಯವಾಣಿ
Recommended image2
ಕಾಂಗ್ರೆಸ್‌ನಲ್ಲಿ ಅತೃಪ್ತ ಆತ್ಮಗಳು ತುಂಬಿವೆ: ರಾಮಲಿಂಗಾ ರೆಡ್ಡಿ ಬಗ್ಗೆ ಕೆ.ಎಸ್.ಈಶ್ವರಪ್ಪ ವ್ಯಂಗ್ಯ
Recommended image3
Annamalai: ಅಣ್ಣಾಮಲೈ ಹೊಸ ಅಭಿಯಾನಕ್ಕೆ ಭರ್ಜರಿ ಪ್ರತಿಕ್ರಿಯೆ! ಬಿಜೆಪಿ ತೊರೆದ ಗಂಟೆಗಳಲ್ಲೇ 8 ಲಕ್ಷ ಜನ ಸೇರ್ಪಡೆ!
Related Stories
Recommended image1
ಕೆಟ್ಟ ಲಗ್ನದಲ್ಲಿ ಡಿಕೆಶಿ ಪ್ರಮಾಣವಚನ? ಕಾಂಗ್ರೆಸ್​ ಛಿದ್ರ ಛಿದ್ರ- ಅಧಿಕಾರಿಗಳ ಆತ್ಮಹತ್ಯೆ! ಭಯಾನಕ ಭವಿಷ್ಯವಾಣಿ
Recommended image2
2028ರಿಂದ ಡಿಕೆಶಿಗೆ ಡೇಂಜರ್​: ವಿಜಯ್​ ಪಿಎಂ ಆಗೋ ಮೊದಲು ಜೈಲಿಗೆ- ತ್ರಿಷಾ ಸಿಎಂ; ಗುರೂಜಿ ಭವಿಷ್ಯವಾಣಿ ಏನಿದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved