MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Politics
  • ಮಳೆಗಾಲದಲ್ಲೇ ಪ್ರೇಮಿಗಳ ನೈಜ ಬಣ್ಣ ಬಯಲಾಗುತ್ತೆ! ಮಳೆ ಬಂದಾಕ್ಷಣ ಕಾಲ್ ಬಂತೋ, ನಿಮ್ಮ ರಿಲೇಶನ್‌ಶಿಪ್ ಸ್ಟ್ರಾಂಗ್ ಅಂತೆ!

ಮಳೆಗಾಲದಲ್ಲೇ ಪ್ರೇಮಿಗಳ ನೈಜ ಬಣ್ಣ ಬಯಲಾಗುತ್ತೆ! ಮಳೆ ಬಂದಾಕ್ಷಣ ಕಾಲ್ ಬಂತೋ, ನಿಮ್ಮ ರಿಲೇಶನ್‌ಶಿಪ್ ಸ್ಟ್ರಾಂಗ್ ಅಂತೆ!

'ಹ್ಯಾಪನ್' ಡೇಟಿಂಗ್ ಆ್ಯಪ್‌ನ ವರದಿಯ ಪ್ರಕಾರ, ಮಳೆಗಾಲವು ಆಧುನಿಕ ಡೇಟಿಂಗ್ ಜಗತ್ತಿನಲ್ಲಿ ಸಂಬಂಧದ ಗಂಭೀರತೆಯನ್ನು ಅಳೆಯುವ ಸಾಧನವಾಗಿದೆ. ಶೇ. 41 ರಷ್ಟು ಸಿಂಗಲ್ಸ್‌ಗಳು ಮಳೆಯ ಸಮಯ ಒಟ್ಟಿಗೆ ಕಳೆಯುವುದು ಗಂಭೀರ ಸಂಬಂಧದ ಸಂಕೇತವೆಂದು ನಂಬಿದರೆ, ಅನೇಕರು ಕೆಫೆ ಮತ್ತು ಹೋಮ್ ಡೇಟ್‌ ಇಷ್ಟಪಡುತ್ತಾರೆ.

2 Min read
Author : Sathish Kumar KH
Published : Aug 03 2026, 09:27 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Getty

ಮನೆಯ ಕಿಟಕಿಯ ಪಕ್ಕ ಕುಳಿತು ಬಿಸಿ ಬಿಸಿ ಚಾಯ್ ಸವಿಯುತ್ತಾ, ಮಳೆ ಹನಿಗಳ ಇಂಪಾದ ಶಬ್ದ ಕೇಳುವುದು, ಹಿನ್ನೆಲೆಯಲ್ಲಿ ಬಾಲಿವುಡ್‌ನ ಐಕಾನಿಕ್ ಹಾಡುಗಳನ್ನು ಗುನುಗುವುದು ಪ್ರತಿಯೊಬ್ಬರಿಗೂ ಇಷ್ಟ. ಮಳೆ ಮತ್ತು ಪ್ರೀತಿ (Rain and Romance) ಎನ್ನುವುದು ಹಲವು ದಶಕಗಳಿಂದ ಸಿನಿಮಾ ಜಗತ್ತು ನಮಗೆ ಮಾರಾಟ ಮಾಡುತ್ತಾ ಬಂದಿರುವ ಸುಂದರ ಪರಿಕಲ್ಪನೆ. ಆದರೆ, ಇಂದಿನ ಆಧುನಿಕ ಡೇಟಿಂಗ್ ಜಗತ್ತಿನಲ್ಲಿ (Modern Dating) ಮಳೆಗಾಲ ಎನ್ನುವುದು ಬರಿ ಪ್ರೇಮ ಕಥೆ ಹೆಣೆಯಲು ಅಷ್ಟೇ ಅಲ್ಲ, ಪ್ರೇಮಿಗಳ ರಿಲೇಶನ್‌ಶಿಪ್ ಟೆಸ್ಟ್ (Relationship Test) ಮಾಡಲು ಬಳಸಲ್ಪಡುತ್ತಿದೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Image Credit : AI image - Gemini

ಪ್ರಸಿದ್ಧ ಡೇಟಿಂಗ್ ಆ್ಯಪ್ 'ಹ್ಯಾಪನ್' (happn) ಇತ್ತೀಚೆಗೆ ಬಿಡುಗಡೆ ಮಾಡಿರುವ 'ಮಾನ್ಸೂನ್ ಡೇಟಿಂಗ್ ಇಂಡೆಕ್ಸ್ 2026' (Monsoon Dating Index 2026) ವರದಿಯ ಪ್ರಕಾರ, ಪ್ರಸ್ತುತ ಯುವಜನತೆಗೆ ಮಳೆಗಾಲ ಎನ್ನುವುದು ತಮ್ಮ ಸಂಬಂಧದ ಗಂಭೀರತೆಯನ್ನು ತಿಳಿಯುವ ಹೊಸ ಸಾಧನವಾಗಿದೆ. ಭಾರತದ ಸುಮಾರು 2,500 ಕ್ಕೂ ಹೆಚ್ಚು ಸಿಂಗಲ್ಸ್‌ಗಳಿಂದ ಸಂಗ್ರಹಿಸಿದ ಈ ವರದಿಯ ಆಸಕ್ತಿದಾಯಕ ಅಂಕಿ-ಅಂಶಗಳು ಹೀಗಿವೆ ನೋಡಿ.

Related Articles

Related image1
ಪ್ರತಿಭಟನೆ ಅಂತ ದೆಹಲಿಗೆ ಹೋದ ವಿದ್ಯಾರ್ಥಿ ಮದುವೆ ಮಾಡ್ಕೊಂಡು ಮನೆಗೆ ಬಂದ ! ಜಂತರ್‌ಮಂತರ್‌ನಲ್ಲಿ ಅರಳಿದ ಪ್ರೀತಿ
Related image2
ವಿವಾಹೇತರ ಸಂಬಂಧ ಅಪರಾಧವಲ್ಲ: ಆದ್ರೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಾಗ ಪೊಲೀಸರು ಬರುವುದೇಕೆ?
35
Image Credit : Getty

ಮಳೆಗಾಲದ ಡೇಟಿಂಗ್ ಅಂಕಿ-ಅಂಶಗಳು

ಶೇ. 41 ಜನರಿಗೆ ಗಂಭೀರ ಸಂಬಂಧದ ಮುನ್ಸೂಚನೆ: ಶೇ.41 ರಷ್ಟು ಸಿಂಗಲ್ಸ್‌ಗಳು ಸಂಪೂರ್ಣ ಒಂದು ಮಳೆಗಾಲದ ದಿನವನ್ನು ಒಟ್ಟಿಗೆ ಕಳೆಯುವುದು ತಮ್ಮ ಸಂಬಂಧವು ಗಂಭೀರ ಹಂತ ತಲುಪಿದೆ (Serious Relationship) ಎಂಬುದಕ್ಕೆ ಸಾಕ್ಷಿ ಎಂದು ನಂಬುತ್ತಾರೆ.

ಶೇ. 24 ರಷ್ಟು 'ಫಸ್ಟ್ ಕಾಲ್' ಟ್ರೆಂಡ್: ಮಳೆ ಬಂದ ತಕ್ಷಣ ಯಾರಿಗಾದರೂ ಕರೆ ಮಾಡಬೇಕೆನಿಸಿದಾಗ ಮೊದಲ ಆಯ್ಕೆ ನೀವಾಗಿದ್ದರೆ, ನಿಮ್ಮ ಸಂಬಂಧ ಆಳವಾಗಿದೆ (Deeper Connection) ಎಂದರ್ಥ ಎಂದು ಶೇ. 24 ರಷ್ಟು ಜನರು ಹೇಳಿದ್ದಾರೆ.

ಶೇ. 76 ರಷ್ಟು ಮಂದಿಗೆ ಸಂಗಾತಿಯ ಹಂಬಲ: ಮಳೆಗಾಲ ಬಂದ ತಕ್ಷಣ ಶೇ.76 ರಷ್ಟು ಜನರಿಗೆ 'ನನ್ನದೇ ಆದ ಒಬ್ಬ ಸಂಗಾತಿ' (Craving Companionship) ಇರಬೇಕಿತ್ತು ಎಂಬ ಆಸೆ ಮೂಡುತ್ತದೆಯಂತೆ.

ಶೇ. 49 ರಷ್ಟು ಸುದೀರ್ಘ ಡೇಟ್ಸ್: ಮಳೆಯಿಂದಾಗಿ ಜನರು ಅವಸರವಿಲ್ಲದೆ ಸುದೀರ್ಘ ಸಮಯವನ್ನು ಜೋಡಿಗಳು ಒಟ್ಟಿಗೆ ಕಳೆಯುತ್ತಾರೆ (Longer Dates) ಎಂದು ಶೇ. 49 ರಷ್ಟು ಮಂದಿ ಒಪ್ಪಿಕೊಂಡಿದ್ದಾರೆ.

45
Image Credit : Getty

ಟ್ರಾಫಿಕ್‌ನಲ್ಲಿ ಸಿಲುಕಿದರೂ ಪ್ರೀತಿ ಹೆಚ್ಚುತ್ತೆ!

ಮಳೆಯಿಂದಾಗಿ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವುದು ಅಥವಾ ಪ್ಲಾನ್ ಮಾಡದೆಯೇ ಒಟ್ಟಿಗೆ ಸಮಯ ಕಳೆಯುವುದು ನೈಜ ಪ್ರೀತಿಯನ್ನು ಜಾಗೃತಗೊಳಿಸುತ್ತದೆ ಎಂದು ಶೇ. 54 ರಷ್ಟು ಭಾರತೀಯ ಸಿಂಗಲ್ಸ್ ಹೇಳಿದ್ದಾರೆ. ಇನ್ನು ಮಳೆಯಿಂದಾಗಿ ಡೇಟಿಂಗ್ ಪ್ಲಾನ್ ಕ್ಯಾನ್ಸಲ್ ಆದರೂ, ಆ ಸಮಯದಲ್ಲಿ ಸರಿಯಾಗಿ ಸಂವಹನ ನಡೆಸುವುದು (Clear Communication) ದೊಡ್ಡ 'ಗ್ರೀನ್ ಫ್ಲಾಗ್' (Green Flag) ಎಂದು ಶೇ. 34 ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.

55
Image Credit : Getty

ಮಳೆಗಾಲದಲ್ಲಿ ಎಲ್ಲಿ ಡೇಟಿಂಗ್ ಮಾಡಲು ಇಷ್ಟಪಡುತ್ತಾರೆ?

ಮಳೆಗಾಲದಲ್ಲಿ ಗ್ರಾಂಡ್ ಔಟಿಂಗ್ ಅಥವಾ ಕಾಕ್‌ಟೇಲ್ ಪಾರ್ಟಿಗಳಿಗಿಂತ ಸಣ್ಣ-ಪುಟ್ಟ ಕೆಫೆಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ.

ಶೇ. 44 ಮಂದಿ: ಸ್ಥಳೀಯ ಕೆಫೆಗಳು (Neighbourhood Cafes) ಹಾಗೂ ಚಾಯ್ ಅಂಗಡಿಗಳನ್ನು ಇಷ್ಟಪಡುತ್ತಾರೆ.

ಶೇ. 26 ಮಂದಿ: ಮಳೆಯ ಮಧ್ಯೆ ಮನೆಯಲ್ಲೇ ಪ್ರೈವೇಟ್ ಆಗಿ ಸಮಯ ಕಳೆಯಲು (Home Dates) ಬಯಸುತ್ತಾರೆ.

ಶೇ. 13 ಮಂದಿ: ಆಶ್ಚರ್ಯವೆಂದರೆ, ಆಫೀಸ್ ಕೆಲಸದ ನಡುವೆ ಕೋ-ವರ್ಕಿಂಗ್ ಸ್ಪೇಸ್‌ಗಳನ್ನೇ (Co-working spaces) ಡೇಟಿಂಗ್ ಸ್ಪಾಟ್ ಮಾಡಿಕೊಳ್ಳುತ್ತಾರಂತೆ!

ಒಟ್ಟಾರೆಯಾಗಿ, ಮಳೆಗಾಲ ಎನ್ನುವುದು ಜನರ ಜೀವನಶೈಲಿಯನ್ನು ಕೊಂಚ ನಿಧಾನಗೊಳಿಸುತ್ತದೆ (Slow Living). ಕಾಕ್‌ಟೇಲ್‌ಗಳ ಜಾಗದಲ್ಲಿ ಚಾಯ್, ಕ್ಲಬ್‌ಗಳ ಜಾಗದಲ್ಲಿ ಕೆಫೆಗಳು ಬರುತ್ತವೆ. ಮಳೆಯ ವಾತಾವರಣವು ಕೇವಲ ಕ್ಷಣಿಕ ಆಕರ್ಷಣೆಗೆ ಸೀಮಿತವಾಗದೆ, ನಿಜವಾದ ಪ್ರೀತಿ ಮತ್ತು ನಿಷ್ಠೆಯನ್ನು ಅಳೆಯುವ ಹೊಸ ಟ್ರೆಂಡ್ ಹುಟ್ಟುಹಾಕಿದೆ!

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಸಂಬಂಧಗಳು
ಮಾನ್ಸೂನ್
ಮುಂಗಾರು ಮಳೆ
ದಂಪತಿಗಳು
ಪ್ರೀತಿ
Latest Videos
Recommended Stories
Recommended image1
ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಯಾರ ಮೇಲೆ 19 ಹೊಸ ಸಚಿವರ ಪ್ರಮಾಣ; ಮಹಿಳೆಯರಿಲ್ಲದೆ 33ಕ್ಕೆ ಹಿಗ್ಗಿದ ಸಂಪುಟ ಗಾತ್ರ!
Recommended image2
ಕರ್ನಾಟಕ ರಾಜಕಾರಣದಲ್ಲಿ ಹೊಸ ಬಿರುಗಾಳಿ: ನೂತನ ಸಚಿವರ ಪದಗ್ರಹಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು!
Recommended image3
ಮಧು ಬಂಗಾರಪ್ಪಗೆ ಮತ್ತೆ ಸಚಿವ ಸ್ಥಾನ; ಸಹೋದರ ಕುಮಾರ್ ಬಂಗಾರಪ್ಪ ಅಚ್ಚರಿಕೆ ಹೇಳಿಕೆ
Related Stories
Recommended image1
ಪ್ರತಿಭಟನೆ ಅಂತ ದೆಹಲಿಗೆ ಹೋದ ವಿದ್ಯಾರ್ಥಿ ಮದುವೆ ಮಾಡ್ಕೊಂಡು ಮನೆಗೆ ಬಂದ ! ಜಂತರ್‌ಮಂತರ್‌ನಲ್ಲಿ ಅರಳಿದ ಪ್ರೀತಿ
Recommended image2
ವಿವಾಹೇತರ ಸಂಬಂಧ ಅಪರಾಧವಲ್ಲ: ಆದ್ರೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಾಗ ಪೊಲೀಸರು ಬರುವುದೇಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved