- Home
- News
- Politics
- ಬರ್ತ್ಡೇ ದಿನ ಗುಡ್ನ್ಯೂಸ್ ಕೊಡ್ತೀರಾ ಕೇಳಿದ್ರೆ ಅಭಿಮಾನಿಗಳ ಮೇಲೆ ಕೇಸ್ ಹಾಕೋ ಎಚ್ಚರಿಕೆ ಕೊಟ್ಟ ಡಿಕೆಶಿ- ಫ್ಯಾನ್ಸ್ ಶಾಕ್
ಬರ್ತ್ಡೇ ದಿನ ಗುಡ್ನ್ಯೂಸ್ ಕೊಡ್ತೀರಾ ಕೇಳಿದ್ರೆ ಅಭಿಮಾನಿಗಳ ಮೇಲೆ ಕೇಸ್ ಹಾಕೋ ಎಚ್ಚರಿಕೆ ಕೊಟ್ಟ ಡಿಕೆಶಿ- ಫ್ಯಾನ್ಸ್ ಶಾಕ್
ತಮ್ಮ 64ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಮಾನಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಫ್лекಸ್ ಅಥವಾ ಬ್ಯಾನರ್ ಹಾಕಿದರೆ, ಅವರ ವಿರುದ್ಧ ಕಠಿಣ ಕ್ರಮ ಮತ್ತು ಕೇಸ್ ದಾಖಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಸದ್ಯ ನನಸಾಗದ ಕನಸು
ಸದ್ಯ ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಖುರ್ಚಿಗಾಗಿ ನಡೆಯುತ್ತಿರುವ ಪೈಪೋಟಿ ಬೂದಿ ಮುಚ್ಚಿದ ಕೆಂಡದಂತಿದೆ. ಎರಡೂವರೆ ವರ್ಷಗಳ ಅಧಿಕಾರದ ನಂತರ ಸಿಎಂ ಆಗುವ ಕನಸು ಕಂಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕನಸು ಸದ್ಯ ಭಗ್ನವಾದಂತಿದೆ. ಆದರೂ ರಾಜಕೀಯದಲ್ಲಿ ಯಾವಾಗ, ಏನು ಬೇಕಾದರೂ ಆಗಬಹುದು.

64ನೇ ಹುಟ್ಟುಹಬ್ಬ
ಇದರ ನಡುವೆಯೇ ಇದೇ 15ರಂದು ಡಿ.ಕೆ.ಶಿವಕುಮಾರ್ ಅವರು, ತಮ್ಮ 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. May 15, 1962ರಲ್ಲ ಹುಟ್ಟಿರೋ ಡಿಕೆಶಿ ಅವರು ಇದೀಗ 65ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.
ಏನು ಗುಡ್ನ್ಯೂಸ್?
ಈ ಸಂದರ್ಭದಲ್ಲಿ ಪತ್ರಕರ್ತರು ಅವರನ್ನು ಹುಟ್ಟುಹಬ್ಬಕ್ಕೆ ಏನು ಗುಡ್ನ್ಯೂಸ್ ಕೊಡ್ತೀರಾ ಎಂದು ಕೇಳಿದಾಗ ಡಿಕೆ ಶಿವಕುಮಾರ್ ಅವರು ಸ್ವಲ್ಪ ಗರಂ ಆಗಿರುವಂತೆ ಕಂಡರು. ಇದೇ ವೇಳೆ ಅಭಿಮಾನಿಗಳು ಶಾಕ್ ಆಗುವಂಥ ಉತ್ತರ ಕೊಟ್ಟರು.
ಕೇಸ್ ಹಾಕಿಸ್ತೇನೆ
ಒಂದು ವೇಳೆ ನನ್ನ ಹುಟ್ಟುಹಬ್ಬಕ್ಕೆ ಯಾರಾದರೂ ಫ್ಲೆಕ್ಸ್, ಬ್ಯಾನರ್ ಹಾಕಿದ್ರೆ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಕಮಿಷನರ್ಗೆ ಹೇಳಿದ್ದೇನೆ. ಯಾರೂ ಫ್ಲೆಕ್ಸ್, ಬ್ಯಾನರ್ ಹಾಕಿ ಜನರಿಗೆ ತೊಂದರೆ ಕೊಡಬಾರದು. ಅಂಥವರ ವಿರುದ್ಧ ಕೇಸ್ ಹಾಕಲಾಗುವುದು ಎಂದಿದ್ದಾರೆ.
ದುಡ್ಡು ಕೊಟ್ಟು ಹಾಕಿ
ಒಂದು ವೇಳೆ ನಿಮಗೆ ಹಾಕಲೇಬೇಕು ಎಂದಾದರೆ, ಪಾಲಿಕೆಗೆ ದುಡ್ಡು ಕೊಟ್ಟು ಹಾಕಿಬೇಕಿದ್ರೆ. ಆದರೆ ಸುಮ್ಸುಮ್ನೆ ಹಾಕಿದ್ರೆ ನಾನು ಸುಮ್ಮನೇ ಇರುವುದಿಲ್ಲ. strict action ತೆಗೆದುಕೊಳ್ಳಲು ಹೇಳುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಹೈಕೋರ್ಟ್ ಆದೇಶ
ಈ ಮಾತಿನಿಂದ ಶಿವಕುಮಾರ್ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಇದಾಗಲೇ ಹೈಕೋರ್ಟ್ ಹಲವಾರು ಬಾರಿ ಈ ರೀತಿಯ ಫ್ಲೆಕ್ಸ್, ಬ್ಯಾನರ್ಗಳಿಗೆ ತಡೆ ನೀಡಿದೆ. ಹೀಗೆ ಹಾಕಬಾರದು ಎಂದು ಹಲವಾರು ಬಾರಿ ಆದೇಶಿಸಿದರೂ, ಅಭಿಮಾನಿಗಳು ಅದನ್ನು ಮೀರುತ್ತಲೇ ಇದ್ದಾರೆ. ಇದರಿಂದ ಕೆಲವೊಮ್ಮೆ ವಾಹನ ಸವಾರರಿಗೆ ತೊಂದರೆ ಆಗುವುದು ಇದೆ. ಅದಕ್ಕಾಗಿಯೇ ಈ ಕಠಿಣ ನಿಯಮ ಮಾಡಿದ್ದಾರೆ ಉಪ ಮುಖ್ಯಮಂತ್ರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

