ಮಾಲ್ಡೀವ್ಸ್‌ನಲ್ಲಿ ಬಂಗಾರದ ಹುಡುಗ ನೀರಜ್ ಚೋಪ್ರಾ: ಫೋಟೋ ವೈರಲ್!
ಟೋಕಿಯೊ (Tokyo) ಒಲಿಂಪಿಕ್ಸ್ (Olympics) 2020 ರಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಈ ದಿನಗಳಲ್ಲಿ ಸಾಕಷ್ಟು ಗಮನ ಸೆಳೆದಿದ್ದಾರೆ. ಇತ್ತೀಚೆಗೆ, ಈ ಕ್ರೀಡಾಪಟುಗಳು ರಜಾದಿನಕ್ಕಾಗಿ (vacation) ಮಾಲ್ಡೀವ್ಸ್‌ಗೆ (Maldives) ಹೋಗಿದ್ದಾರೆ. ನೀರಜ್ ಚೋಪ್ರಾ ಇನ್‌ಸ್ಟಾಗ್ರಾಮ್‌ನಲ್ಲಿ ಶುಕ್ರವಾರ ತಮ್ಮ ಅಭಿಮಾನಿಗಳೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಮಾಲ್ಡೀವ್ಸ್‌ನಲ್ಲಿ ರಜೆಯನ್ನು ಆನಂದಿಸಿರುವುದು ಕಾಣಬಹುದು. (ಫೋಟೋ ಮೂಲ- Instagram)

ಪ್ರಸ್ತುತ ನೀರಜ್ ಚೋಪ್ರಾ ತಮ್ಮ ಬಿಗಿಯಾದ ವೇಳಾಪಟ್ಟಿಯಿಂದ ವಿರಾಮ (break) ತೆಗೆದುಕೊಳ್ಳುತ್ತಿದ್ದಾರೆ ಮತ್ತು ಶುಕ್ರವಾರ ಕೆಲವು ಫೋಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ, ನೀರಜ್ ಮಾಲ್ಡೀವ್ಸ್‌ನಲ್ಲಿ (Maldives) ರಜೆಯಲ್ಲಿದ್ದಾರೆ ಮತ್ತು ಬ್ರೇಕ್‌ಫಾಸ್ಟ್ ಆನಂದಿಸುತ್ತಿದ್ದಾರೆ.
(ಫೋಟೋ ಮೂಲ- Instagram)
ಮಾಲ್ಡೀವ್ಸ್ ತಲುಪಿದ ನಂತರ ಬಂಗಾರದ ಹುಡುಗ ನೀರಜ್ ಅವರಿಗೆ ಗ್ರಾಂಡ್ ವೆಲ್ಕಮ್ ಕೂಡ ಮಾಡಲಾಯಿತು. ಈ ಸಮಯದಲ್ಲಿ, ಅವರಿಗೆ ಆತ್ಮೀಯ ಸ್ವಾಗತ (Welcome) ನೀಡಲಾಯಿತು.
(ಫೋಟೋ ಮೂಲ- Instagram)
ಬುಧವಾರ, ನೀರಜ್ ಚೋಪ್ರಾ ತನ್ನ ಫೋಟೋವನ್ನು ಟ್ವಿಟರ್‌ನಲ್ಲಿ (twitter) ಹಂಚಿಕೊಂಡರು ಮತ್ತು vacation mode on ಎಂದು ಫೋಟೋಗೆ ಕ್ಯಾಪ್ಷನ್ ಬರೆದಿದ್ದಾರೆ.
( ಫೋಟೋ ಮೂಲ - Instagram )
ಮಾಲ್ಡೀವ್ಸ್ ಸೆಲೆಬ್ರಿಟಿಗಳು (Celebrities) ಮತ್ತು ಕ್ರಿಕೆಟಿಗರ ಒಂದು ಜನಪ್ರಿಯ ಪ್ರವಾಸಿ ತಾಣವಾಗಿ ಮುಂದುವರಿದಿದೆ. ಕಳೆದ ವರ್ಷದಿಂದ, ಅನೇಕ ಸೆಲೆಬ್ರಿಟಿಗಳು ರಜಾದಿನಕ್ಕಾಗಿ ಮಾಲ್ಡೀವ್ಸ್ ಗೆ ಬಂದಿದ್ದಾರೆ. ಬಾಲಿವುಡ್‌ನ ಹಲವು ಸ್ಟಾರ್ಸ್ ಇಲ್ಲಿ ಹಾಲಿಡೇ ಎಂಜಾಯ್ ಮಾಡಿದ ಫೋಟೋಗಳು ವೈರಲ್ (Viral) ಆಗಿವೆ.
ನೀರಜ್ ಈ ಹಿಂದೆ ಡ್ಯಾನ್ಸ್ ಶೋ (Dance Show), ಕೌನ್ ಬನೇಗಾ ಕರೋಡ್‌ಪತಿ (Kaun Banega Karodpathi) ಮೊದಲಾದ ಅನೇಕ ದೊಡ್ಡ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬ್ರಾಂಡ್ ಮೌಲ್ಯವು ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಧೋನಿಗೆ ಸಮಾನವಾಗಿದೆ.
ನೀರಜ್ ಚೋಪ್ರಾ ಹೊರತುಪಡಿಸಿ, ಈ ವರ್ಷ ಮೊದಲ ಹಂತದ ಐಪಿಎಲ್ (IPL) ಮುಂದೂಡಲ್ಪಟ್ಟ ನಂತರ ಅನೇಕ ವಿದೇಶಿ ಆಟಗಾರರು ಮಾಲ್ಡೀವ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಪಂಜಾಬ್ ಕಿಂಗ್ಸ್ (Panjab Kinds) ಆಟಗಾರ ಕ್ರಿಸ್ ಗೇಲ್ ರಿಂದ ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್ ಮತ್ತು ಇನ್ನೂ ಅನೇಕ ಆಟಗಾರರು ತಮ್ಮ ರಜೆಯನ್ನು ಆನಂದಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.