ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಹೆಣ್ಮಕ್ಕಳು ಫಿದಾ ಡ್ಯಾನ್ಸ್‌+6 ವೇದಿಕೆಯಲ್ಲಿ ಕನಸಿನ ಹುಡುಗಿಯ ಕಲ್ಪನೆ ಹೇಳಿದ ನೀರಜ್

ಚಿನ್ನದ ಹುಡುಗ ನೀರಜ್ ಚೋಪ್ರಾಗೆ(Neeraj Chopra) ಹೆಣ್ಮಕ್ಕಳು ಫಿದಾ ಆಗಿದ್ದಾರೆ. ತುಂಬಾ ಸರಳವಾಗಿರೋ ನೀರಜ್ ಕ್ಯೂಟ್ ಕೂಡಾ ಹೌದು. ಇದೀಗ ನೀರಜ್ ಬಹಳಷ್ಟು ಕಾರ್ಯಕ್ರಮಗಳಲ್ಲಿ, ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ನಟ ಡ್ಯಾನ್ಸ್+6 ನ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಕಾರ್ಯಕ್ರಮದ ವಿಡಿಯೋ ತಣುಕುಗಳು ಎಲ್ಲೆಡೆ ವೈರಲ್ ಆಗಿದೆ.

ಡ್ಯಾನ್ಸ್ ರಿಯಾಲಿಟಿ ಶೋ ಜಡ್ಜ್ ಶಕ್ತಿ ಮೋಹನ್ ಸೇರಿ ಉಳಿದವರೂ ನೀರಜ್‌ನನ್ನು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಕಾರ್ಯಕ್ರಮ ಎಂದಿನಂತೆ ಫನ್ನಿಯಾಗಿತ್ತು. ಡ್ಯಾನ್ಸ್+ 6 ರ ಹೊಸ ಕ್ಲಿಪ್‌ನಲ್ಲಿ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದು, 'ಕ್ಯಾಪ್ಟನ್' ಶಕ್ತಿ ಮೋಹನ್ ಅವರು ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರನ್ನು ವೇದಿಕೆಯಲ್ಲಿ ಪ್ರಪೋಸ್ ಮಾಡಲು ಮತ್ತು ಹೋಸ್ಟ್ ರಾಘವ್ ಜುಯಾಲ್ ಅವರಿಗೆ ಹೇಗೆ ಪ್ರಪೋಸ್ ಮಾಡೋದೆಂದು ಕಲಿಸಲು ಹೇಳುತ್ತಾರೆ. ಪ್ರಪೋಸ್ ಮಾಡುವಾಗ ತನ್ನ ಕೈ ಹಿಡಿಯುವಂತೆ ಶಕ್ತಿ ಕೇಳುತ್ತಾರೆ. ಇತ್ತ ನೀರಜ್ ಕೈಹಿಡಿಯೋದಿರಲಿ ನಿಂತಲ್ಲೇ ನಾಚಿಬಿಡುತ್ತಾರೆ.

ಇಬ್ಬರು ಚಿನ್ನದ ಹುಡುಗರು... ಚೋಪ್ರಾಗೆ ಅಭಿನವ್ ವಿಶೇಷ ಗಿಫ್ಟ್

ಶಕ್ತಿಯ ಜೊತೆಗಿರೋ ಮತ್ತೊಬ್ಬ 'ಕ್ಯಾಪ್ಟನ್' ಸಲ್ಮಾನ್ ಯೂಸುಫ್ ಖಾನ್ ಅವಳ ಕೈಯನ್ನು 'ಜಾವೆಲಿನ್' ಎಂದು ಭಾವಿಸಿ ಅದನ್ನು ಹಿಡಿಯುವಂತೆ ಸಲಹೆ ನೀಡುತ್ತಾರೆ. ಆದರೆ ನೀರಜ್ ಅವರ ಉತ್ತರವು ಎಲ್ಲರನ್ನೂ ನಗಿಸುತ್ತದೆ. ನಂತರ ನಾನು ಅದನ್ನು ನನಗೆ ಎಸೆಯಲು ಮನಸಾಗುತ್ತದೆ ಎಂದಾಗ ಎಲ್ಲರೂ ಬಿದ್ದು ಬಿದ್ದು ನಗುತ್ತಾರೆ.

View post on Instagram

ಇನ್ನೊಂದು ವೀಡಿಯೋದಲ್ಲಿ, ನೀರಜ್‌ಗೆ ಗೂಗಲ್ ಪ್ರಶ್ನೆಯನ್ನು ಕೇಳಲಾಯಿತು: ನೀರಜ್ ಚೋಪ್ರಾ ಜೊತೆ ಕುಂಡಲಿ (ಜಾತಕ) ಅನ್ನು ಹೇಗೆ ಹೊಂದಿಸುವುದು? ಎಂದು ಕೇಳಲಾಗಿತ್ತು. ನೀರಜ್ ಜಾತಕಗಳ ಬಗ್ಗೆ ತನಗೆ ಏನೂ ತಿಳಿದಿಲ್ಲ ಎಂದು ಹೇಳಿದ್ದಾರೆ. ಅದನ್ನು ವಿಚಿತ್ರ ಎಂದು ಹೇಳಿದ್ದಾರೆ.

ನೀರಜ್‌ ಚೋಪ್ರಾ ಹೆಸರಲ್ಲಿ ಮಾರುಕಟ್ಟೆಗೆ ಬಂದ ಜೆರ್ಸಿ, ನೀರಿನ ಬಾಟಲಿ!

'ಕ್ಯಾಪ್ಟನ್' ಪುನಿತ್ ಪಾಠಕ್ ನೀರಜ್ ಅವರು ಮದುವೆಯಾಗೋ ಅವರ ಆದರ್ಶ ಕನಸಿನ ಹುಡುಗಿ ಬಗ್ಗೆ ಕೇಳಿದರು. ರಾಘವ್ ತಮಾಷೆಯಾಗಿ ಅವಳು ಜಾವೆಲಿನಂತೆ ಇರಬೇಕೇ ಎಂದು ಕೇಳಿದಾಗ, ಇಲ್ಲ, ಇಲ್ಲ, ಅಷ್ಟು ಎತ್ತರದ ಮಹಿಳೆಯೊಂದಿಗೆ ನಾನು ಏನು ಮಾಡಲಿ ಎಂದಿದ್ದಾರೆ.

View post on Instagram

ನೀರಜ್ ತನ್ನ ಜೀವನದಲ್ಲಿ ಈಗ ಯಾರೂ ಇಲ್ಲದಿದ್ದರೂ, ತನ್ನ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಿದ ಕ್ರೀಡಾ ಹಿನ್ನೆಲೆಯಿಂದ ಯಾರನ್ನಾದರೂ ಬಯಸುತ್ತಾರೆ ಎಂದು ಹೇಳಿದರು. ಪರಸ್ಪರ ಗೌರವಿಸುವುದು ಕುಟುಂಬವನ್ನೂ ಗೌರವಿಸುವಂತವರಾಗಬೇಕು ಎಂದಿದ್ದಾರೆ.

View post on Instagram