ನಾಯಿ ಮರಿ ಗಿಫ್ಟ್ ಕೊಡೋ ವಸ್ತುವಲ್ಲ, ನೀರಜ್‌ಗೆ ಉಡುಗೊರೆ ನೀಡಿದ ಬಿಂದ್ರಾಗೆ ನೆಟ್ಟಿಗರ ಕ್ಲಾಸ್!
- ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ ನಾಯಿ ಮರಿ ಗಿಫ್ಟ್ ನೀಡಿದ್ದ ಬಿಂದ್ರಾ
- ನೀರಜ್ ಚೋಪ್ರಾ, ಅಭಿನವ್ ಬಿಂದ್ರಾ ಭೇಟಿ ವೇಳೆ ನಾಯಿ ಮರಿ ಗಿಫ್ಟ್
- ನಾಯಿ ಮರಿಗಿಂತ ಬೇರೆ ಗಿಫ್ಟ್ ಸಿಕ್ಕಿಲ್ಲವೇ? ಎಂದು ನೆಟ್ಟಿಗರ ಕ್ಲಾಸ್
ನವದೆಹಲಿ(ಸೆ.24): ಟೋಕಿಯೋ ಒಲಿಂಪಿಕ್ಸ್ ಕೂಟದ ಜಾವಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ನೀರಜ್ ಚೋಪ್ರಾಗೆ ಪ್ರಧಾನಿ ಮೋದಿ, ಕೇಂದ್ರ ಕ್ರೀಡಾ ಇಲಾಖೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸನ್ಮಾನ ಮಾಡಿದೆ. ಇತ್ತೀಚೆಗೆ ಒಲಿಂಪಿಕ್ಸ್ ಪದಕ ವಿಜೇತ ಅಭಿನವ್ ಬಿಂದ್ರಾ ಹಾಗೂ ನೀರಜ್ ಚೋಪ್ರಾ ಭೇಟಿಯಾಗಿದ್ದಾರೆ. ಈ ವೇಳೆ ಬಿಂದ್ರಾ, ಚಿನ್ನದ ಹುಡುಗ ನೀರಜ್ ಚೋಪ್ರಾಗೆ ನಾಯಿ ಮರಿ ಉಡುಗೊರೆ ನೀಡಿದ್ದರು. ಆದರೆ ಬಿಂದ್ರಾ ಉಡುಗೊರೆಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.
ಇಬ್ಬರು ಚಿನ್ನದ ಹುಡುಗರು... ಚೋಪ್ರಾಗೆ ಅಭಿನವ್ ವಿಶೇಷ ಗಿಫ್ಟ್!
ಸಾಮಾಜಿಕ ಜಾಲತಾಣದಲ್ಲಿ ಅಭಿನವ್ ಬಿಂದ್ರಾ ಉಡುಗೊರೆಗೆ ಅಸಮಾಧಾನ ವ್ಯಕ್ತವಾಗಿದೆ. ನಾಯಿ ಮರಿ ಅಥವಾ ಯಾವುದೇ ಸಾಕು ಪ್ರಾಣಿ ಉಡುಗೊರೆ ನೀಡುವ ವಸ್ತುವಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಬಿಂದ್ರಾ ವಿದೇಶಿ ತಳಿಯನ್ನು ಉಡುಗೊರೆಯಾಗಿ ನೀಡುವುದಕ್ಕಿಂತ ಭಾರತದ ನಾಯಿ ಮರಿ ಅಥವಾ ನಾಯಿಗಳನ್ನು ದತ್ತು ಪಡೆಯುವುದು ಉತ್ತಮವಾಗಿತ್ತು ಎಂದು ಸಲಹೆ ನೀಡಿದ್ದಾರೆ.
ನಾಯಿ ಮರಿ ಉಡುಗೊರೆ ನೀಡಿದ ಬಳಿಕ ಅಭಿನವ್ ಬಿಂದ್ರಾ ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದರು. ಚಿನ್ನದ ಹುಡುಗ ನೀರಜ್ ಚೋಪ್ರಾ ಭೇಟಿಯಾಗಿರುವುದು ಸಂತಸ ಹಾಗೂ ಹೆಮ್ಮೆ ತಂದಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಲು ಶುಭಹಾರೈಸುವೆ ಎಂದು ಬಿಂದ್ರಾ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದರು.
ಚಿನ್ನದ ಹುಡುಗ ನೀರಜ್ ಚೋಪ್ರಾ ಹೊಸ ಜಾಹೀರಾತು: ವೈರಲ್!
ಇತ್ತ ನೀರಜ್ ಚೋಪ್ರಾ ಕೂಡ ಬಿಂದ್ರಾ ಭೇಟಿ ಕುರಿತು ಹರ್ಷ ವ್ಯಕ್ತಪಡಿಸಿದ್ದರು. ಬಿಂದ್ರಾ ಆತಿಥ್ಯ ಹಾಗೂ ಪ್ರೋತ್ಸಾಹದಾಯಕ ಮಾತುಗಳು ಸ್ಪೂರ್ತಿಯಾಗಿದೆ ಎಂದು ಟ್ವೀಟ್ ಮಾಡಿದ್ದರು.
ನಾಯಿ ಮರಿಯನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯ ನಿಲ್ಲಿಸಿ. ನಾಯಿ ಮರಿ ಪಡೆದ ವ್ಯಕ್ತಿ ಅದನ್ನು ಆರೈಕೆ ಮಾಡಲು ಮತ್ತೊಬ್ಬರನ್ನು ನೇಮಿಸಬೇಕಾಗುತ್ತದೆ. ಸ್ವತಃ ಅವರೆ ಆರೈಕೆ ಮಾಡುವ ಸಮಯ ಹಾಗೂ ಪರಿಸ್ಥಿತಿ ಇರುವುದಿಲ್ಲ. ಹೀಗಾಗಿ ನಾಯಿ ಮರಿಗೆ ಸರಿಯಾದ ಆರೈಕೆ ಸಿಗದಿರುವ ಸಾಧ್ಯತೆ ಹೆಚ್ಚು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ನೀರಜ್ ಚೋಪ್ರಾ ಹೆಸರಲ್ಲಿ ಮಾರುಕಟ್ಟೆಗೆ ಬಂದ ಜೆರ್ಸಿ, ನೀರಿನ ಬಾಟಲಿ!
ನಾಯಿ ಮರಿ ಆಟಿಕೆ ವಸ್ತುಗಳಲ್ಲ. ನಾಯಿ ಮರಿಯನ್ನು ಉಡುಗೊರೆ ನೀಡುವಾಗ ಆ ಕುಟುಂಬದ ಎಲ್ಲರೂ ನಾಯಿ ಮರಿ ಆರೈಕೆಗೆ ಸಿದ್ಧರಾಗಿದ್ದಾರೆ ಅನ್ನೋದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಾಯಿ ಮರಿ ಅನಾಥವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.