- Home
- Money
- News
- Gold Rate: ಏಕಾಏಕಿ ಕುಸಿಯುತ್ತಿರುವ ಬಂಗಾರ; ಈಗ ಖರೀದಿಸಬಹುದೇ? ಇನ್ನೂ ಕಡಿಮೆ ಆಗುತ್ತೆ ಅಂತ ಕಾಯಬೇಕಾ?
Gold Rate: ಏಕಾಏಕಿ ಕುಸಿಯುತ್ತಿರುವ ಬಂಗಾರ; ಈಗ ಖರೀದಿಸಬಹುದೇ? ಇನ್ನೂ ಕಡಿಮೆ ಆಗುತ್ತೆ ಅಂತ ಕಾಯಬೇಕಾ?
Gold And Silver Rate Update: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಲ್ಲಿ ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ ₹1.35 ಲಕ್ಷದಷ್ಟು ಕುಸಿತ ಕಂಡಿದೆ. ಇದು ಶೇಕಡಾ 33 ರಷ್ಟು ಇಳಿಕೆಯಾದರೆ, ಚಿನ್ನದ ಬೆಲೆಯೂ ಶೇಕಡಾ 18 ರಷ್ಟು ಇಳಿಕೆ ಕಂಡಿದೆ.

ಹೀಗೆ ಏಕಾಏಕಿ ಕುಸಿತಕ್ಕೆ ಕಾರಣಗಳು?
ಇತ್ತೀಚಿಗೆ ಬೆಳ್ಳಿ ಮತ್ತು ಚಿನ್ನದ ಬೆಲೆಯು ಸಾರ್ವಕಾಲಿಕ ದಾಖಲೆ ಮಟ್ಟ ತಲುಪಿತ್ತು. ಇದರಿಂದ ಹೂಡಿಕೆದಾರರು ತಮ್ಮ ಲಾಭವನ್ನು ನಗದು ಮಾಡಿಕೊಳ್ಳಬೇಕು ಎಂದು ಮಾರಾಟ ಮಾಡಲು ಆರಂಭಿಸಿದ್ದರು. ಹೀಗಾಗಿ ಬೆಳ್ಳಿ, ಬಂಗಾರ ಬೆಲೆಯು ಕಡಿಮೆ ಆಗಿತ್ತು.
US ಡಾಲರ್ ಬಲವರ್ಧನೆ
ಅಮೆರಿಕದ ಫೆಡರಲ್ ರಿಸರ್ವ್ ಅಧ್ಯಕ್ಷರಾಗಿ ಕೆವಿನ್ ವಾರ್ಶ್ ಅವರ ನಾಮನಿರ್ದೇಶನವಾಗಿದೆ. ಇನ್ನು ಡಾಲರ್ ಮೌಲ್ಯ ಕೂಡ ಏರಿಕೆಯಾಗಿದೆ. ಹೀಗಾಗಿ ಹೂಡಿಕೆದಾರರು ಚಿನ್ನಕ್ಕೆ ಹೂಡಿಕೆ ಮಾಡಿದ್ದನ್ನು ನಗದು ಮಾಡಿಕೊಳ್ಳಲು ನೋಡುತ್ತಿದ್ದಾರೆ.
ಬಜೆಟ್ ನಿರೀಕ್ಷೆ
2026ರ ಕೇಂದ್ರ ಬಜೆಟ್ ಮಂಡನೆಯಲ್ಲಿ, ಏನಾದರೂ ಆಮದು ಸುಂಕದಲ್ಲಿ ಬದಲಾವಣೆಯಾಗಬಹುದು ಎಂಬ ನಿರೀಕ್ಷೆ ಇತ್ತು.
ಮಾರುಕಟ್ಟೆಯ ಸ್ಥಿತಿ
ಶುಕ್ರವಾರ ಮತ್ತು ಭಾನುವಾರದ ವಹಿವಾಟಿನಲ್ಲಿ ಬೆಳ್ಳಿ, ಚಿನ್ನದ ETFs ಕೂಡ ನಷ್ಟ ಅನುಭವಿಸಿವೆ. ಕೆಲವು ಹಂತಗಳಲ್ಲಿ ಇವು 'ಲೋಯರ್ ಸರ್ಕ್ಯೂಟ್' ತಲುಪಿದ್ದವು.
ಈಗ ಚಿನ್ನ ಖರೀದಿಸಬೇಕೇ ಅಥವಾ ಕಾಯಬೇಕೇ?
ಚಿನ್ನ, ಬೆಳ್ಳಿಯ ಬೆಲೆಯಲ್ಲಿನ ಈ ಕುಸಿತದಿಂದಾಗಿ ಹೂಡಿಕೆದಾರರಿಗೆ ಆತಂಕ ಆಗಬಹುದು. ಆದರೆ ಇದು ದೀರ್ಘಕಾಲದ ಹೂಡಿಕೆಗೆ ಒಂದು ಅವಕಾಶವೂ ಆಗಿರಬಹುದು. ಬೆಲೆಗಳು ಇನ್ನೂ ಸ್ವಲ್ಪ ಇಳಿಕೆ ಆಗಬಹುದು. ಹೀಗಾಗಿ ಒಮ್ಮೆಯೇ ದೊಡ್ಡ ಮೊತ್ತದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬೇಡಿ, ಆಗಾಗ ಖರೀದಿ ಮಾಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಚಿನ್ನ, ಬೆಳ್ಳಿಯನ್ನು ಟ್ರೇಡಿಂಗ್‌ಗಾಗಿ ಬಳಸದೆ, ಪೋರ್ಟ್‌ಫೋಲಿಯೊದ ರಕ್ಷಣೆಗಾಗಿ (Hedging) ಬಳಸುವವರಿಗೆ ಇದು ಖರೀದಿಯ ಟೈಮ್ ಆಗಬಹುದು. ಮಾರುಕಟ್ಟೆಯಲ್ಲಿನ ಈ ಏರಿಳಿತವು ಜಾಗತಿಕ ರಾಜಕೀಯ, ಆರ್ಥಿಕ ಬದಲಾವಣೆಗಳಿಂದ ಉಂಟಾಗಿದೆ. ಹೂಡಿಕೆದಾರರು ಕೂಡ ಅವಸರದ ನಿರ್ಧಾರ ತೆಗೆದುಕೊಳ್ಳಬಾರದು.

