70ನೇ ವಯಸ್ಸಿನಲ್ಲಿ ನಾಲ್ಕನೇ ಬಾರಿಗೆ ವಿವಾಹವಾದ ಬಾಲಿವುಡ್ ನಟ
ಈ ಸುದ್ದಿ ಕೇಳಿ ಫ್ಯಾನ್ಸ್ ಶಾಕ್ ಆದರು. ಆದರೂ ನಟನ ಅಭಿಮಾನಿಗಳು ದಂಪತಿಗೆ ವಿಶ್ ಮಾಡಿದರು.

ಬಾಲಿವುಡ್ ನಟ ಕಬೀರ್ ಬೇಡಿ (Kabir Bedi) 'ಖೂನ್ ಭಾರಿ ಮಾಂಗ್', 'ಮೈ ಹೂ ನಾ' ಮತ್ತು ಜೇಮ್ಸ್ ಬಾಂಡ್ ಚಿತ್ರ 'ಆಕ್ಟೋಪಸ್ಸಿ' ನಂತಹ ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ. ಅಭಿಮಾನಿಗಳು ಅವರ ಖಳನಾಯಕ ಪಾತ್ರಗಳನ್ನ ನೋಡಿ ಹೆಚ್ಚು ಇಷ್ಟಪಡುತ್ತಾರಾದರೂ ವೈಯಕ್ತಿಕ ಜೀವನದಿಂದಾಗಿಯೂ ಹೆಚ್ಚು ಚರ್ಚೆಯಲ್ಲಿದ್ದಾರೆ ಕಬೀರ್.
ಅನೇಕರಿಗೆ ಗೊತ್ತಿರದ ವಿಚಾರವೆಂದರೆ ಕಬೀರ್ ಬೇಡಿ ತಮ್ಮ ದೀರ್ಘಕಾಲದ ಗೆಳತಿ ಪರ್ವೀನ್ ದುಸಾಂಜ್ ಅವರನ್ನು ಜನವರಿ 16, 2016 ರಂದು 70 ನೇ ವಯಸ್ಸಿನಲ್ಲಿ ವಿವಾಹವಾದರು. ಇದು ಅವರ ನಾಲ್ಕನೇ ವಿವಾಹವಾಗಿತ್ತು. ಈ ಸುದ್ದಿ ಕೇಳಿ ಫ್ಯಾನ್ಸ್ ಶಾಕ್ ಆದರು. ಆದರೂ ಕಬೀರ್ ಬೇಡಿ ಅವರ ಅಭಿಮಾನಿಗಳು ದಂಪತಿಗೆ ವಿಶ್ ಮಾಡಿದರು.
ಕಬೀರ್ ಬೇಡಿಯವರ ನಾಲ್ಕನೇ ಪತ್ನಿ ಪರ್ವೀನ್ ಬ್ರಿಟಿಷ್-ಪಂಜಾಬಿ ಮೂಲದವರು. ಪರ್ವೀನ್ ಕಬೀರ್ ಗಿಂತ 29 ವರ್ಷ ಚಿಕ್ಕವರು. ಕಬೀರ್ ಬೇಡಿಯವರ ಮಗಳು ಪೂಜಾ ಬೇಡಿಗಿಂತ ಐದು ವರ್ಷ ಚಿಕ್ಕವರು.
ಪರ್ವೀನ್ ದುಸಾಂಜ್ ಒರ್ವ ನಿರ್ಮಾಪಕಿ, ಸಾಮಾಜಿಕ ಸಂಶೋಧಕಿ ಮತ್ತು ಉದ್ಯಮಿ. 2005 ರಲ್ಲಿ ಲಂಡನ್‌ನಲ್ಲಿ ನಾಟಕವೊಂದರಲ್ಲಿ ಕಬೀರ್ ಅವರನ್ನು ಭೇಟಿಯಾದರು ಪರ್ವೀನ್. ಅವರ ಸ್ನೇಹ ಅಲ್ಪಾವಧಿಯಲ್ಲಿಯೇ ಪ್ರೀತಿಗೆ ತಿರುಗಿತು ಮತ್ತು ಕಬೀರ್ -ಪರ್ವೀನ್ 10 ವರ್ಷಗಳ ಕಾಲ ಲಿವ್-ಇನ್ ರಿಲೇಶನ್ಶಿಪ್‌ನಲ್ಲಿ ಇದ್ದರು.
ನಂತರ ಕಬೀರ್ 2011 ರಲ್ಲಿ ರೋಮ್‌ನಲ್ಲಿ ಪರ್ವೀನ್‌ಗೆ ಪ್ರಪೋಸ್ ಮಾಡಿದರು. ಕೊನೆಗೆ ಕಬೀರ್, ತಮ್ಮ 70 ನೇ ಹುಟ್ಟುಹಬ್ಬದಂದು ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಈ ಕಾರ್ಯಕ್ರಮವು ಮುಂಬೈನ ಅಲಿಬಾಗ್ ಬಳಿಯಿರುವ ಸೋನಿ ತನ್ನಾ ಅವರ ಮನೆಯಲ್ಲಿ ನಡೆಯಿತು.
ಕಬೀರ್ ಅವರ ಪುತ್ರಿ ಪೂಜಾ ಬೇಡಿ ಈ ಮದುವೆಯನ್ನು ವಿರೋಧಿಸಿದರು. ಪರ್ವೀನ್ ಅವರನ್ನು 'ದುಷ್ಟ ಮಲತಾಯಿ' ಎಂದು ಕರೆದ ಅವರ ಟ್ವೀಟ್ ಸಂಬಂಧದಲ್ಲಿನ ಉದ್ವಿಗ್ನತೆಯನ್ನು ಎತ್ತಿ ತೋರಿಸಿತು.
ಪೂಜಾ ಮತ್ತು ಕಬೀರ್ ನಡುವಿನ ಆಸ್ತಿ ವಿವಾದಗಳು ಮತ್ತು ಇತರ ತಪ್ಪುಗ್ರಹಿಕೆಗಳು ಅವರ ಸಂಬಂಧದ ಮೇಲೆ ಪರಿಣಾಮ ಬೀರಿದವು. ಇಷ್ಟೆಲ್ಲಾ ಆದರೂ ಕಬೀರ್ 2025 ರಲ್ಲಿ ಪಾಡ್‌ಕಾಸ್ಟ್‌ನಲ್ಲಿ ತಾನು ಮತ್ತು ಪೂಜಾ ಈಗ ರಾಜಿ ಮಾಡಿಕೊಂಡಿದ್ದೇವೆ ಮತ್ತು ಅವರ ಸಂಬಂಧ ಈಗ ಬಲವಾಗಿದೆ ಎಂದು ಬಹಿರಂಗಪಡಿಸಿದರು.
ಪರ್ವೀನ್ ಮನರಂಜನಾ ಉದ್ಯಮದಲ್ಲೂ ಕೆಲಸ ಮಾಡಿದರು. ಅವರು 'ಸಬ್ಕಾ ಸಾಯಿ' ಮತ್ತು 'ಬ್ಯಾಡ್ ಬಾಯ್ ಬಿಲಿಯನೇರ್'ಗೆ ನಿರ್ಮಾಪಕಿಯಾಗಿ ಕೆಲಸ ಮಾಡಿದ್ದಾರೆ. ಕಬೀರ್ ಪರ್ವೀನ್‌ಳನ್ನು ತನ್ನ ಆತ್ಮ ಸಂಗಾತಿ ಎಂದು ಕರೆದರಲ್ಲದೆ, ವಯಸ್ಸು ತನಗೆ ಎಂದಿಗೂ ಮುಖ್ಯವಲ್ಲ ಎಂದು ಹೇಳಿದರು