- Home
- Entertainment
- News
- ಹೆಸರು ಬದಲಾಯಿಸಿ ಪೇಚಿಗೆ ಸಿಲುಕಿರೋ Lakshmi Nivasa ಚೆಲ್ವಿ: ನಟಿಯ ಪೇಚಾಟ ಅವ್ರ ಬಾಯಲ್ಲೇ ಕೇಳಿ...
ಹೆಸರು ಬದಲಾಯಿಸಿ ಪೇಚಿಗೆ ಸಿಲುಕಿರೋ Lakshmi Nivasa ಚೆಲ್ವಿ: ನಟಿಯ ಪೇಚಾಟ ಅವ್ರ ಬಾಯಲ್ಲೇ ಕೇಳಿ...
ಲಕ್ಷ್ಮೀ ನಿವಾಸದಲ್ಲಿ ಚೆಲ್ವಿ ಪಾತ್ರ ಮಾಡ್ತಿರೋ ಅಶ್ವಿನಿ ಅವರು ತಮ್ಮ ಹೆಸರು ಬದಲಾಯಿಸಿಕೊಂಡಿದ್ದು, ಶೂಟಿಂಗ್ ಸೆಟ್ನಲ್ಲಿ ಆಗ್ತಿರೋ ಅವಾಂತರ ಹೇಳಿದ್ದಾರೆ ಕೇಳಿ...

ಲಕ್ಷ್ಮೀ ನಿವಾಸ ಚೆಲ್ವಿಯ ಹೆಸರಿನ ಸ್ಟೋರಿ...
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ನಲ್ಲಿ ಚೆಲ್ವಿ ಪಾತ್ರದ ಮೂಲಕ ಹಳ್ಳಿ ಹುಡುಗಿಯ ಮುಗ್ಧತೆಯನ್ನು ಪಾತ್ರ ಮಾಡ್ತಿರೋ ನಟಿ ಅಶ್ವಿನಿ ಆರ್. ಮೂರ್ತಿ ಎಲ್ಲರಿಗೂ ಅಚ್ಚುಮೆಚ್ಚು. ಆದರೆ ಇವರ ಹೆಸರಿನಲ್ಲಿ ಇರೋ ಗೊಂದಲ ಮಾತ್ರ ಖುದ್ದು ನಟಿಯನ್ನೇ ಸುಸ್ತು ಮಾಡ್ತಿದೆಯಂತೆ. ಅಶ್ವನಿ ನಕ್ಷತ್ರದಲ್ಲಿ ಹುಟ್ಟಿದ ಕಾರಣಕ್ಕೆ ಅಶ್ವಿನಿ ಎಂದು ಹೆಸರು ಇಡಲಾಗಿದೆ. ಆದರೆ ಹುಟ್ಟು ನಕ್ಷತ್ರದ ಹೆಸರು ಇಡಬಾರದೆಂದು ಯಾರೋ ಹೇಳಿದ್ದರಿಂದ ಹೆಸರು ಬದಲಾಯಿಸಿಕೊಂಡು ಈಗ ಪೇಚಿಗೆ ಸಿಲುಕುತ್ತಿದ್ದಾರೆ ನಟಿ. ಈ ಬಗ್ಗೆ ಅವರೇ ಇಂಟರೆಸ್ಟಿಂಗ್ ವಿಷ್ಯವನ್ನು ತಿಳಿಸಿದ್ದಾರೆ.
ಅದ್ಭುತ ನಟನೆಯಿಂದ ಫ್ಯಾನ್ಸ್ ಹೆಚ್ಚಿಸಿಕೊಂಡ ನಟಿ
ಅಷ್ಟಕ್ಕೂ, ತಮ್ಮ ಅದ್ಭುತ ನಟನೆ ಮತ್ತು ಮುದ್ದಾದ ಪಾತ್ರದ ಮೂಲಕ ಜನಮನ ಗೆಲ್ಲುತ್ತಿರುವ ಜೋಡಿ ಅಂದ್ರೆ ಅದು ವೆಂಕಿ ಮತ್ತು ಚೆಲ್ವಿಯ ಜೋಡಿ. ಅದರಲ್ಲೂ ಹೂ ಮಾರುವ ಹುಡುಗಿ ಮುಗ್ಧೆಯಾಗಿ, ಒಳ್ಳೆತನದ ಮೂಲಕವೇ ವೆಂಕಿಯ ಮನಸ್ಸು ಗೆದ್ದ ಹುಡುಗಿಯಾಗಿ ಮಿಂಚುತ್ತಿದ್ದಾಳೆ ಚೆಲ್ವೆ. ಲಕ್ಷ್ಮೀ ನಿವಾಸದಲ್ಲಿನ ಇವರ ಪಾತ್ರ ನೋಡಿ ಸಿಕ್ಕಾಪಟ್ಟೆ ಜನ ಫ್ಯಾನ್ಸ್ ಆಗಿದ್ದಾರೆ. ಆದರೆ ಇದೀಗ ಅಶ್ವಿನಿ ಹೋಗಿ ಅವರ ಹೆಸರು ಚೆರಿಕಾ ಆಗಿದೆ. ತಮ್ಮ ಹುಟ್ಟು ರಾಶಿ ಮೇಷಕ್ಕೆ ಬರುವ ಹೆಸರು ಚ,ಚಾ,ಚಿಯಲ್ಲಿ ಏನಿಡಬೇಕು ಎಂದು ತುಂಬಾ ಯೋಚಿಸಿ ವರ್ಷಗಳೇ ಕಳೆದೋದ್ವಂತೆ.
ಅಶ್ವಿನಿಯಿಂದ ಚೆರಿಕಾ ಆದ ನಟಿ
ಬಳಿಕ ತುಂಬಾ ಯೋಚಿಸಿದ ನಂತರ ಚೆರಿಕಾ ಎಂದು ಇಟ್ಟುಕೊಂಡಿದ್ದಾರೆ. ಸೀರಿಯಲ್ನಲ್ಲಿ ಆರಂಭದಲ್ಲಿ ಅಶ್ವಿನಿ ಎಂದೇ ಫೇಮಸ್ ಆಗಿರೋ ನಟಿ, ಆ ಬಳಿಕ ಚೆರಿಕಾ ಎಂದು ಬದಲಾಯಿಸಿಕೊಂಡಿದ್ದಾರೆ. ಆದ್ದರಿಂದ ಒಬ್ಬೊಬ್ಬರು ಒಂದೊಂದು ರೀತಿ ಕರೆಯುವುದರಿಂದ ಇವರಿಗೆ ಫುಲ್ ಕನ್ಫ್ಯೂಸ್ ಆಗಿಹೋಗಿದೆಯಂತೆ. ಈ ಬಗ್ಗೆ ಕನ್ನಡತಿ ಇನ್ಸ್ಟ್ರಾಮ್ಗೆ ನೀಡಿರುವ ಸಂದರ್ಶನದಲ್ಲಿ ನಟಿ ರಿವೀಲ್ ಮಾಡಿದ್ದಾರೆ.
ತಮಿಳಿನಲ್ಲಿಯೂ ಫೇಮಸ್
ತಮಿಳಿನಲ್ಲಿಯೂ ಇವರು ನಟಿಸ್ತಿದ್ದಾರೆ. ಅಲ್ಲಿ ಆರಂಭದಿಂದಲೂ ಚೆರಿಕಾ ಎಂದೇ ಫೇಮಸ್ಸು. ಆದರೆ ತಮ್ಮ ಹೆಸರು ಚೆರಿಕಾ ಎನ್ನೋದೇ ಮರೆತು ಹೋಗುವುದರಿಂದ ನಿರ್ದೇಶಕರು ಚೆರಿಕಾ ಚೆರಿಕಾ ಬನ್ನಿ ಎಂದು ಕರೆಯುತ್ತಿದ್ದರೂ ಎಷ್ಟೋ ಬಾರಿ ತಾವು ರಿಸ್ಪಾನ್ಸೇ ಮಾಡದೇ ಪೇಚಿಗೆ ಸಿಲುಕಿರೋದು ಇದೆ ಎಂದಿದ್ದಾರೆ ನಟಿ.
ಹಲವು ಸೀರಿಯಲ್‌ಗಳಲ್ಲಿ ನಟನೆ
ಅಂದಹಾಗೆ ಚೆರಿಕಾ ಅವರಿಗೆ ಲಕ್ಷ್ಮೀ ನಿವಾಸ ಏನು ಮೊದಲ ಸೀರಿಯಲ್ ಅಲ್ಲ, ಈ ಹಿಂದೆ ಹಲವು ಸೀರಿಯಲ್ ಗಳಲ್ಲಿ ಅಶ್ವಿನಿ ಮಿಂಚಿದ್ದಾರೆ. ಲಕ್ಷಣ ಸೀರಿಯಲ್ ನಲ್ಲಿ ನಕ್ಷತ್ರಾ ಅಕ್ಕ ಆಗಿ ಇವರು ನಟಿಸಿದ್ದರು, ಅಷ್ಟೇ ಅಲ್ಲ ಮರಳಿ ಮನಸಾಗಿದೆ, ಬಯಸದೆ ಬಳಿ ಬಂದೆ ಧಾರಾವಾಹಿಯಲ್ಲೂ ನಟಿಸಿದ್ದರು.
ಲಕ್ಷ್ಮೀ ನಿವಾಸದಿಂದ ಖ್ಯಾತಿ
ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದರೂ ಇವರಿಗೆ ಹೆಸರು ತಂದು ಕೊಟ್ಟಿದ್ದು ಸದ್ಯ ಅಭಿನಯಿಸುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa). ವೆಂಕಿ ಮತ್ತು ಚೆಲ್ವಿ ಜೋಡಿಯನ್ನು ನೋಡಲೆಂದೇ ಅಭಿಮಾನಿಗಳು ಕಾಯ್ತಿರ್ತಾರೆ. ಅಷ್ಟೊಂದು ಇಷ್ಟ ಪಡ್ತಾರೆ ವೀಕ್ಷಕರು ಈ ಪಾತ್ರಗಳನ್ನು.
ಬ್ಯೂಟಿ ಸಲೂನ್ ನಡೆಸ್ತಿರೋ ನಟಿ
ನಟಿಯಾಗೋಕೂ ಮುನ್ನ ಚೆರಿಕಾ ಉರ್ಫ್ ಅಶ್ವಿನಿ ಅವರು ಬ್ಯುಸಿನೆಸ್ ವುಮೆನ್ ಹೌದು. ಇವರೊಬ್ಬ ಕಾಸ್ಮಟಾಲಜಿಸ್ಟ್ (Cosmetologist). ಇವರು ತಮ್ಮದೇ ಆದ ಬ್ಯೂಟಿ ಸಲೂನ್ ಕೂಡ ಹೊಂದಿದ್ದಾರೆ. ರಾಜಾಜಿನಗರದಲ್ಲಿ ಗ್ಲಾಮ್ ಹೌಸ್ ಯುನಿಸೆಕ್ಸ್ ಬ್ಯೂಟಿ ಸಲೂನ್ ಮಾಲೀಕರು ಇವರು. ಹೇರ್, ಸ್ಕಿನ್, ನೈಲ್ ಆರ್ಟ್, ಮೇಕಪ್ ಎಲ್ಲವನ್ನೂ ಇಲ್ಲಿ ಮಾಡಿ ಕೊಡ್ತಾರೆ.
ಬ್ಯೂಟಿ ಸಲೂನ್ ನಡೆಸ್ತಿರೋ ನಟಿ
ಇನ್ನು ಇವರ ಬ್ಯೂಟಿ ಸಲೂನ್ (beauty salon) ಕೂಡ ಸಿಕ್ಕಾಪಟ್ಟೆ ಫೇಮಸ್. ಈಗಾಗಲೇ ಇವರ ಸಲೂನ್‌ಗೆ ನಟಿಯರಾದ ವಿಜಯಲಕ್ಷ್ಮೀ, ಸ್ವಾತಿ, ಅಭಿಜ್ಞಾ ಭಟ್, ರುಹಾನಿ ಶೆಟ್ಟಿ, ಪೂಜಾ ದುಗ್ಗಣ್ಣ, ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಕೂಡ ಭೇಟಿ ನೀಡಿ, ಸೇವೆ ಪಡೆದು ಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್
ನಟಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್. 40ಸಾವಿರಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಇವರ ಅಂದಕ್ಕೂ ತುಂಬಾ ಜನ ಅಭಿಮಾನಿಗಳಿದ್ದು, ಇವರು ಹಾಕೋ ಫೋಟೋ ನೋಡಿ ದೃಷ್ಟಿ ತಗಿಸ್ಕೊ ..ಚೆಲುವೆ ..ನೂರಾರು ಕಣ್ಣು ನಿನ್ನಮ್ಯಾಲ್ ಇದೆ ..ನಿನ್ನ ಚೆಲುವು ಎಲ್ರ ಕಣ್ಣ್ ಕುಕ್ಕುತ್ತಾ ಇದೆ ..ಸುಂದ್ರಿರ ಹೊಟ್ಟೆ ಉರಿಸ್ತಾ ಇದೆ ..ರಸಿಕರ ಕೈಲಿ ಪ್ರೇಮ ಕಾವ್ಯ ಬರೆಸಿತಾ ಇದೆ..ನನ್ನ ತರ ಪ್ರೇಮಿಯ ನಿದ್ದೆ ಕೆಡಿಸಿದೆ ಎಂದೆಲ್ಲಾ ಕಾಮೆಂಟ್ ಪೂರ್ತಿ ಕಾಮೆಂಟ್ ಗಳ ಮಹಾಪೂರವೇ ಹರಿದು ಬರ್ತಿದೆ.