ರೆಹಮಾನ್ ಪತ್ನಿಗೆ ತಮಿಳು ಬರೋದಿಲ್ಲ ಎಂದು ಟೀಕಿಸಿದ್ದ ನಟಿ ಕಸ್ತೂರಿ ಶಂಕರ್, ತಿರುಗೇಟು ಕೊಟ್ಟಿದ್ದ ಸಂಗೀತ ಮಾಂತ್ರಿಕ
ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು 29 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದಾರೆ. ಸಾಯಿರಾ ಬಾನು ಅವರ ವಕೀಲರು ಈ ವಿಚ್ಛೇದನದ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ ಮತ್ತು ರೆಹಮಾನ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಹಾಗೂ ಅವರ ಪತ್ನಿ ಸಾಯಿರಾ ಬಾನು ದೂರವಾಗಿದ್ದಾರೆ. 29 ವರ್ಷಗ: ದಾಂಪತ್ಯ ಮುರಿದುಬಿದ್ದಿರುವ ಬಗ್ಗೆ ಸ್ವತಃ ಸಾಯಿರಾ ಬಾನು ತಮ್ಮ ವಕೀಲರ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ. ಇದರ ನಡುವೆ ಎಆರ್ ರೆಹಮಾನ್ ಕೂಡ 29 ವರ್ಷದ ದಾಂಪತ್ಯ ಬ್ರೇಕ್ ಆಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಎಆರ್ ರೆಹಮಾನ್ ವಿಚ್ಛೇನದ ಬೆನ್ನಲ್ಲಿಯೇ, ಗಂಡನಿಂದ ಡಿವೋರ್ಸ್ ಪಡೆದ ರೆಹಮಾನ್ ಟೀಮ್‌ನ ಮೋಹಿನಿ ಡೇ
ತಾಯಿ ಒಪ್ಪಿದ್ದ ಹುಡುಗಿಯನ್ನು ಮರುಮಾತಿಲ್ಲದೆ ಒಪ್ಪಿ 1995ರ ಮಾರ್ಚ್ 12 ರಂದು ಎಆರ್ ರೆಹಮಾನ್ ವಿವಾಹವಾಗಿದ್ದರು. ಇಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ಮೂರು ಮಕ್ಕಳು ಜನಿಸಿವೆ. ಇತ್ತೀಚಿನ ದಿನಗಳಲ್ಲಿ ಎಆರ್ ರೆಹಮಾನ್ ಪತ್ನಿಯ ಜೊತೆ ಕಾಣಿಸಿಕೊಂಡಿರಲಿಲ್ಲ. ಹಾಗಂತ ಅವರಿಗೆ ಪತ್ನಿಯ ಮೇಲೆ ಪ್ರೀತಿ ಇದ್ದಿರಲಿಲ್ಲ ಎಂದು ಅರ್ಥವಲ್ಲ.
'ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ' ಎಂದ ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಆದೇಶಿಸಿದ ಮಧು ಬಂಗಾರಪ್ಪ
ತೆಲುಗು ಸಮುದಾಯದ ಜನರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಕಾರಣಕ್ಕೆ ಸುದ್ದಿಯಲ್ಲಿರುವ ನಟಿ ಕಸ್ತೂರಿ ಶಂಕರ್ ಈ ಹಿಂದೆ ರೆಹಮಾನ್ ಪತ್ನಿಯ ಬಗ್ಗೆ ಟೀಕೆ ಮಾಡಿದ್ದರು. ತಮಿಳುನಾಡಿನಲ್ಲಿ ಇದ್ದು ಇಷ್ಟು ವರ್ಷವಾದರೂ ಅವರಿಗೆ ಸರಿಯಾಗಿ ತಮಿಳು ಮಾತನಾಡಲು ಬರೋದಿಲ್ಲ ಎಂದು ಮಾತನಾಡಿದ್ದರು.
ಈ ವೇಳೆ ಎಆರ್ ರೆಹಮಾನ್ ತಮ್ಮ ಪತ್ನಿಯ ಪರವಾಗಿ ನಿಲ್ಲುವ ಮೂಲಕ ಕಸ್ತೂರಿ ಶಂಕರ್‌ಗೆ ತಿರುಗೇಟು ನೀಡಿದ್ದರು. 2023ರಲ್ಲಿ ಕಸ್ತೂರಿ ಶಂಕರ್, ಸಾಯಿರಾ ಬಾನು ಅವರನ್ನು ಟೀಕೆ ಮಾಡಿದ್ದರು. 'ಏನು ಎಆರ್ ರೆಹಮಾನ್ ಅವರ ಪತ್ನಿಗೆ ತಮಿಳು ಮಾತನಾಡಲು ಬರೋದಿಲ್ಲವೇ? ಆಕೆಯ ಮಾತೃಭಾಷೆ ಯಾವುದು? ಅವರು ಮನೆಯಲ್ಲಿ ಯಾವ ಭಾಷೆ ಮಾತನಾಡುತ್ತಾರೆ? ಎಂದು ಪ್ರಶ್ನೆ ಮಾಡಿದ್ದರು.
ಕಸ್ತೂರಿ ಶಂಕರ್ ಅವರ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಕಾರಣವಾಗಿದ್ದವು. ಸಾಯಿರಾ ಬಾನು ಅವರನ್ನು ಟಾರ್ಗೆಟ್ ಮಾಡಿದ್ದರ ಬಗ್ಗೆ ಕಸ್ತೂರಿ ಶಂಕರ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇನ್ನು ಎಆರ್ ರೆಹಮಾನ್ ಕೂಡ ಆಕೆಯ ಮಾತಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದರು.
ಟ್ವಿಟರ್‌ನಲ್ಲಿ ಕಸ್ತೂರಿ ಶಂಕರ್ ಅವರಿಗೆ ಸೂಚಿಸಿ 'ಕಾದಲುಕು ಮಾರಿಯಾದೈ' ಎಂದು ತಮಿಳಿನಲ್ಲಿ ಅವರು ಬರೆದಿದ್ದರು. ಅದರ ಅರ್ಥ ಪ್ರೀತಿಗೆ ಗೌರವ ಎನ್ನುವುದಾಗಿದೆ. ಈ ಘಟನೆ ನಡೆದು ಒಂದು ವರ್ಷವಾಗುವ ಹೊತ್ತಿಗೆ ಎಆರ್ ರೆಹಮಾನ್ ಹಾಗೂ ಸಾಯಿರಾ ಬಾನು ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ.