'ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ' ಎಂದ ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಆದೇಶಿಸಿದ ಮಧು ಬಂಗಾರಪ್ಪ
ವಿಡಿಯೋ ಕಾನ್ಫರೆನ್ಸ್ ವೇಳೆ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಕ್ರಮ ಕೈಗೊಳ್ಳುವಂತೆ ಸಚಿವ ಮಧು ಬಂಗಾರಪ್ಪ ಆಗ್ರಹ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಶಿಕ್ಷಣ ಸಚಿವರ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು (ನ.20): ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ವಿಡಿಯೋ ಕಾನ್ಫರೆನ್ಸ್ ಸಂವಾದದಲ್ಲಿಯೇ ವಿದ್ಯಾರ್ಥಿಯೊಬ್ಬ ಅಪಹಾಸ್ಯ ಮಾಡಿರುವುದು ವೈರಲ್ ಆಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕನ್ನಡ ಬರಲ್ಲ ಎಂದು ಸಂವಾದದಲ್ಲಿ ವಿದ್ಯಾರ್ಥಿ ಹೇಳಿದ್ದ. ಇದನ್ನು ಕೇಳಿ ಕೆರಳಿ ಕೆಂಡವಾಗಿದ್ದ ಶಿಕ್ಷಣ ಸಚಿವ ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಆಗ್ರಹಿಸಿರುವುದೇ ಈಗ ವಿವಾದಕ್ಕೆ ಕಾರಣವಾಗಿದೆ. ಬುಧವಾರ ಬೆಳ್ಗೆ ವಿಡಿಯೋ ಕಾನ್ಫರೆನ್ಸ್ ವೇಳೆ ವಿದ್ಯಾರ್ಥಿಯೊಬ್ಬ ಸಚಿವರಿಗೆ ಕನ್ನಡ ಬರಲ್ಲ ಎಂದು ಹೇಳಿದ್ದ. 'ಈ ಮಾತಿಗೆ ಯಾರೋ ಅದು ಹೇಳಿದ್ದು , ಏನಂತ ಹೇಳಿದ್ರು..ನಾನೇನು ಉರ್ದು ಮಾತಾಡಿದ್ನಾ.. ಕನ್ನಡದಲ್ಲೇ ಮಾತಾಡಿದ್ದು..' ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಈ ವೇಳೆ ತಕ್ಷಣವೇ ಪಕ್ಕದಲ್ಲಿ ಕುಳಿತಿದ್ದ ಅಧಿಕಾರಿಗಳಿಗೆ ಮಧು ಬಂಗಾರಪ್ಪ ಸೂಚನೆ ನೀಡಿದ್ದಾರೆ ಅದು ಯಾರು ಅಂತ ನೋಡಿ ರೆಕಾರ್ಡ್ ಮಾಡಿ. ಆ ಹುಡುಗನ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಸಚಿವ ಮಧು ಬಂಗಾರಪ್ಪ ಆರ್ಡರ್ ಮಾಡಿದ್ದಾರೆ.
ಕಾಲೇಜುಗಳಿಂದ ವಿಡಿಯೋ ಕಾನ್ಫರೆನ್ಸ್ ನಡೆಯುತ್ತಿತ್ತು. ಈ ವೇಳೆ ಮಂತ್ರಿಗೆ ಮುಖಭಂಗವಾಗಿದೆ. ಸಂವಾದದಲ್ಲಿ ಮಾತನಾಡುವ ವೇಳೆ ವಿದ್ಯಾಮಂತ್ರಿಗೆ ಕನ್ನಡ ಬರಲ್ಲ ಎಂದು ವಿದ್ಯಾರ್ಥಿ ಹೇಳಿದ್ದಾನೆ. ಯಾವ ಕಾಲೇಜು ವಿದ್ಯಾರ್ಥಿ ಎನ್ನುವುದು ಗೊತ್ತಾಗಿಲ್ಲ. ವಿದ್ಯಾರ್ಥಿ ಹೇಳಿದ ತಕ್ಷಣವೇ ಮಧು ಬಂಗಾರಪ್ಪ ಗಲಿಬಿಲಿಯಾಗಿದ್ದು ಮಾತ್ರವಲ್ಲದೆ ದಿಢೀರ್ ಕೋಪಗೊಂಡಿದ್ದಾರೆ.
ಹೇ ಯಾರೋ ಅವನು ಹಾಗೆ ಮಾತನಾಡೋದು..? ಯಾರು ಹಾಗೇ ಅಂದವರು ಡೀಟೇಲ್ಸ್ ತೆಗೆದುಕೊಳ್ಳಿ. ಸೀರಿಯಸ್ ಆಕ್ಷನ್ ತೆಗೆದುಕೊಳ್ಳಬೇಕು ಎಂದು ಸಚಿವ ಮಧು ಬಂಗಾರಪ್ಪ, ಪದವಿ ಪೂರ್ವ ಕಾಲೇಜು ನಿರ್ದೇಶಕಿ ಸಿಂಧೂ ಬಿ ರೂಪೇಶ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್‌ಗೆ ಮಧು ಬಂಗಾರಪ್ಪ ಸೂಚನೆ ನೀಡಿದ್ದಾರೆ.
ಬೆಳಗಿನ ಕಾಫಿ ನಿಮ್ಮ ಜೇಬನ್ನೂ ಬಿಸಿ ಮಾಡೋದು ಗ್ಯಾರಂಟಿ!
ಉಚಿತ ತರಬೇತಿ: ರಾಜ್ಯದಲ್ಲಿ ಉಚಿತವಾಗಿ CET , NEET, JEE ತರಬೇತಿ ನೀಡುತ್ತಿದ್ದೇವೆ. ಈಗ 25 ಸಾವಿರ ವಿದ್ಯಾರ್ಥಿಗಳನ್ನ ಆಯ್ಕೆ ಮಾಡಲಾಗಿದೆ. ಈ ವಿದ್ಯಾರ್ಥಿಗಳನ್ನ ಟೆಸ್ಟ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಸಿಎಂ ಮನವಿ ಮಾಡಿದ್ದೇವೆ ಎಲ್ಲ ವಿದ್ಯಾರ್ಥಿಗಳಿಗೂ ಉಚಿತವಾಗಿ ತರಬೇತಿ ನೀಡಲು ಮುಂದಾಗಿದ್ದೇವೆ. ತಜ್ಞರ ಮೂಲಕವೇ ತರಬೇತಿ ನೀಡಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ 12,500 ಪ್ರಥಮ ಪಿಯುಸಿ ಮಕ್ಕಳು ಹಾಗೂ 12.500 ದ್ವೀತಿಯ ಪಿಯುಸಿ ಮಕ್ಕಳನ್ನ ತರಬೇತಿಗೆ ಆಯ್ಕೆ ಮಾಡಲಾಗಿದೆ. ಮುಂದೆ ಈ ಕಾರ್ಯಕ್ರಮ ವಿಸ್ತರಣೆ ಮಾಡಲಾಗತ್ತದೆ. ಶಿಕ್ಷಕರ ಕೊರತೆಯನ್ನ ಅದಷ್ಟು ಬೇಗ ಕ್ಲಿಯರ್ ಮಾಡುತ್ತೇವೆ. ಸಿಎಂ ಮತ್ತಷ್ಟು ಶಿಕ್ಷಕರ ನೇಮಕಾತಿಗೆ ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಟಾರ್ಟ್‌ಅಪ್ ಕನಸಿದ್ಯಾ? ಹಾಗಿದ್ರೆ OTT ಅಲ್ಲಿ ನೀವು ಮಿಸ್ ಮಾಡದೇ ಈ ಚಿತ್ರಗಳನ್ನ ನೋಡ್ಲೇಬೇಕು