MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • News
  • ಬಾತ್​ರೂಮ್​ ಬಿಟ್ಟು ಬೀದಿಗಿಳಿದ ತುಂಡುಡುಗೆ Niveditha Gowda! ಬಿಗ್​ಬಾಸ್​ ಸ್ಪರ್ಧಿಗಳ ಜೊತೆ ಕುಣಿದ ನಟಿ

ಬಾತ್​ರೂಮ್​ ಬಿಟ್ಟು ಬೀದಿಗಿಳಿದ ತುಂಡುಡುಗೆ Niveditha Gowda! ಬಿಗ್​ಬಾಸ್​ ಸ್ಪರ್ಧಿಗಳ ಜೊತೆ ಕುಣಿದ ನಟಿ

ಬಾತ್​ರೂಮ್​ ಬಿಟ್ಟು ಹೊರಕ್ಕೆ ಹೆಚ್ಚು ರೀಲ್ಸ್​ ಮಾಡದಿದ್ದ ನಿವೇದಿತಾ ಗೌಡ ಇದೀಗ ಬಿಗ್​ಬಾಸ್ ಸ್ಪರ್ಧಿಗಳ ಜೊತೆ ತುಂಡುಡುಗೆಯಲ್ಲಿ ಭರ್ಜರಿ ರೀಲ್ಸ್​ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದೆ.

2 Min read
Author : Suchethana D
Published : Jul 26 2025, 09:53 PM IST
Share this Photo Gallery
  • FB
  • TW
  • Linkdin
  • Whatsapp
17
ಬಾತ್​ರೂಮ್ ಬಿಟ್ಟು ಹೊರ ಬಂದ ನಿವೇದಿತಾ ಗೌಡ
Image Credit : Instagram

ಬಾತ್​ರೂಮ್ ಬಿಟ್ಟು ಹೊರ ಬಂದ ನಿವೇದಿತಾ ಗೌಡ

ಬಿಗ್​ಬಾಸ್​ ಖ್ಯಾತಿಯ, ರ್ಯಾಪರ್​ ಚಂದನ್​ ಶೆಟ್ಟಿ ಜೊತೆ ಡಿವೋರ್ಸ್​ ಬಳಿಕ (ಕು)ಖ್ಯಾತಿ ಹೆಚ್ಚಿಸಿಕೊಂಡಿರೋ ನಟಿ ನಿವೇದಿತಾ ಗೌಡ, ಕುತೂಹಲ ಎನ್ನುವಂತೆ ಪದೇ ಪದೇ ಬಾತ್​ರೂಮ್​ನಲ್ಲಿಯೇ ರೀಲ್ಸ್​ ಮಾಡುವುದು ಹೆಚ್ಚುತ್ತಿದೆ. ಐಷಾರಾಮಿ ಬಂಗಲೆ ಇದ್ದರೂ, ಒಂದು ಮಾತು ಹೇಳಿದ್ರೆ ಸಾಕು, ರೀಲ್ಸ್​ಗಾಗಿಯೇ ದೊಡ್ಡ ಜಾಗವನ್ನು ಅರೇಂಜ್​ ಮಾಡಿಸುವ ತಾಕತ್ತು ಇದ್ದರೂ ಬಾತ್​ರೂಮ್​ನಲ್ಲಿಯೇ ನಟಿ ರೀಲ್ಸ್​ ಮಾಡ್ತಿರೋದೇ ಅವರ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆ ಆಗಿ ಹೋಗಿದೆ.

27
ಬಾತ್​ರೂಮ್ ಬಿಟ್ಟು ಹೊರ ಬಂದ ನಿವೇದಿತಾ ಗೌಡ
Image Credit : Instagram

ಬಾತ್​ರೂಮ್ ಬಿಟ್ಟು ಹೊರ ಬಂದ ನಿವೇದಿತಾ ಗೌಡ

ಫಾರಿನ್​ ಟೂರ್​ ಸುತ್ತಿ, ಶ್ರೀಲಂಕಾದ ಜೂಜು ಅಡ್ಡೆಗೂ ಹೋಗಿ, ವಾಪಸ್​ ಮನೆಗೆ ಬಂದಾಗಿದೆ. ದಿನದಿಂದ ದಿನಕ್ಕೆ ಈಕೆಯ ರೀಲ್ಸ್​ ಹೆಚ್ಚುತ್ತಲೇ ಇದೆ. ಸಿನಿಮಾಗಳಲ್ಲಿ ನಟಿಸದಿದ್ದರೂ, ಧಾರಾಳ ದೇಹ ಪ್ರದರ್ಶನ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಡುತ್ತಲೇ ಫೇಮಸ್​ ಆಗ್ತಿರೋ ನಟಿಯರು ಒಂದಿಷ್ಟು ಮಂದಿ ಇದ್ದಾರೆ. ಅಂಗಾಂಗಗಳ ಪ್ರದರ್ಶನ ಹೆಚ್ಚಾದಷ್ಟೂ ಅವರಿಗೆ ಡಿಮಾಂಡ್​ ಜಾಸ್ತಿಯಾಗ್ತಿರೋದು ಈಗಿನ ಟ್ರೆಂಡ್​.

Related Articles

Related image1
ನಿವೇದಿತಾ ಗೌಡ ಬಾತ್​ರೂಂ ಸೀಕ್ರೇಟ್​ ಕೊನೆಗೂ ರಿವೀಲ್​! ಅಬ್ಬಾ... ಇದಾ ವಿಷ್ಯ?
Related image2
Kwatle Kitchen: ತರಕಾರಿ ಮಾರುತ್ತಾ ನಿಮ್ಮನೆಗೆ ಬರಲಿದ್ದಾಳೆ ನಟಿ ನಿವೇದಿತಾ ಗೌಡ- ಡಿಟೇಲ್ಸ್ ಇಲ್ಲಿದೆ ನೋಡಿ
37
ಟ್ರೋಲ್​ ಮಾಡಿಸಿಕೊಳ್ಳೋದೆಂದ್ರೆ ಸಕತ್​ ಖುಷಿ
Image Credit : Instagram

ಟ್ರೋಲ್​ ಮಾಡಿಸಿಕೊಳ್ಳೋದೆಂದ್ರೆ ಸಕತ್​ ಖುಷಿ

ಟ್ರೋಲ್​ ಮಾಡುವುದಕ್ಕಾಗಿಯೇ ಒಂದಿಷ್ಟು ಜನ ಇಂಥ ನಟಿಯರ ವಿಡಿಯೋ ಕಾಯುತ್ತಲೇ ಇರುತ್ತಾರೆ. ಅವರು ಟ್ರೋಲ್​ ಮಾಡಿ ಖುಷಿ ಪಟ್ಟುಕೊಂಡರೆ, ದೇಹ ಪ್ರದರ್ಶನ ಧಾರಾಳವಾಗಿ ಮಾಡುವ ನಟಿಯರೂ ಫುಲ್​ ಖುಷ್​. ಒಟ್ಟಿನಲ್ಲಿ ಪ್ರಚಾರ ಬೇಕು ಅಷ್ಟೇ, ಪಾಸಿಟಿವ್​, ನೆಗೆಟಿವ್​ ಅದೆಲ್ಲಾ ಯಾರಿಗೆ ಬೇಕು ಎನ್ನುವ ಜಾಯಮಾನ ಇವರದ್ದು. ಅವರ ಸಾಲಿಗೆ ನಿವೇದಿತಾ ಸೇರಿ ವರ್ಷಗಳೇ ಕಳೆದು ಹೋಗಿವೆ.

47
ಬಿಗ್​ಬಾಸ್​ ಸ್ಪರ್ಧಿಗಳ ಜೊತೆ ನಿವೇದಿತಾ ರೀಲ್ಸ್​
Image Credit : Instagram

ಬಿಗ್​ಬಾಸ್​ ಸ್ಪರ್ಧಿಗಳ ಜೊತೆ ನಿವೇದಿತಾ ರೀಲ್ಸ್​

ಇಂತಿಪ್ಪ ನಿವೇದಿತಾ ಗೌಡ, ಇದೀಗ ಬಿಗ್​ಬಾಸ್​ ಸ್ಪರ್ಧಿಗಳಾಗಿದ್ದ ರಜತ್, ಧನರಾಜ್ ಹಾಗೂ ನಟಿ ಅಖಿಲಾ ಪ್ರಕಾಶ್ ಜೊತೆ ಭರ್ಜರಿ ರೀಲ್ಸ್​ ಮಾಡಿದ್ದಾರೆ. ಮಾಮೂಲಿನಂತೆ ತುಂಡುಡುಗೆಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ಇವರೆಲ್ಲರೂ ರಜನಿಕಾಂತ್ ಅಭಿನಯದ ಕೂಲಿ ಸಿನಿಮಾದ ಮೋನಿಕಾ ಹಾಡು ಮೊನಿಕಾಕ್ಕೆ ಸ್ಟೆಪ್​ ಹಾಕಿದ್ದಾರೆ. ಕೂಲಿ ಸಿನಿಮಾದಲ್ಲಿ ಮೋನಿಕಾ ಆಗಿ ಸೊಂಟ ಬಳುಕಿಸಿದ್ದಾರೆ ಪೂಜಾ ಹೆಗ್ಡೆ. ಅದೇ ಹಾಡಿಗೆ ನಿವೇದಿತಾ ಗೌಡ ಹಾಗೂ ಸ್ನೇಹಿತರು ಭರ್ಜರಿ ಸ್ಟೆಪ್​ ಹಾಕಿದ್ದು ಅದೀಗ ಭಾರಿ ವೈರಲ್​ ಆಗ್ತಿದೆ.

57
ಕ್ವಾಟ್ಲೆ ಕಿಚನ್​ನಲ್ಲಿ ಸೌಂಡ್​ ಮಾಡ್ತಿರೋ ನಟಿ
Image Credit : Instagram

ಕ್ವಾಟ್ಲೆ ಕಿಚನ್​ನಲ್ಲಿ ಸೌಂಡ್​ ಮಾಡ್ತಿರೋ ನಟಿ

ನಿವೇದಿತಾ ಗೌಡ ಕುರಿತು ಹೇಳುವುದಾದರೆ, ಸದ್ಯ ಕ್ವಾಟ್ಲೆ ಕಿಚನ್​ ಷೋನಲ್ಲಿ ಕಾಣಿಸಿಕೊಳ್ತಿದ್ದಾರೆ. ಅವರಿಗೆ ಕೆಲ ವಾರಗಳ ಹಿಂದೆ ಹಸುವಿನ ಹಾಲು ಕರೆಯುವ ಟಾಸ್ಕ್​ ಕೊಡಲಾಗಿತ್ತು. ಇದನ್ನು ಕೇಳಿ ನಿವೇದಿತಾ ಸುಸ್ತಾಗಿ ಹೋಗಿದ್ದರು. ಇವರಿಗೆ ಈ ಟಾಸ್ಕ್​ ಕೊಟ್ಟಿರೋದಕ್ಕೆ ಇನ್ನಿಲ್ಲದ ತಮಾಷೆಯ ಕಮೆಂಟ್ಸ್​ಗಳು ಬಂದಿದ್ದವು. 

67
ತುಂಡುಡುಗೆಯಿಂದ ಟ್ರೋಲ್​ ಆಗ್ತಿರೋ ನಿವೇದಿತಾ ಗೌಡ
Image Credit : Instagram

ತುಂಡುಡುಗೆಯಿಂದ ಟ್ರೋಲ್​ ಆಗ್ತಿರೋ ನಿವೇದಿತಾ ಗೌಡ

ತುಂಡುಡುಗೆ ತೊಟ್ಟು ದೇಹ ಪ್ರದರ್ಶನ ಮಾಡುತ್ತಾ ರೀಲ್ಸ್ ಮಾಡಿಕೊಂಡಿದ್ದಾಕೆಗೆ ಹಸುವಿನ ಹಾಲು ಕರೆಯುವ ಟಾಸ್ಕ್​ ಕೊಟ್ಟರೆ ಗತಿ ಏನು ಎಂದು ಕೆಲವರು ಪ್ರಶ್ನಿಸಿದರೆ, ಹಸು ಹಾಲು ಕೊಡುತ್ತದೆ ಎನ್ನೋದು ಈಕೆಗೆ ಗೊತ್ತಾ ಎಂದು ಮತ್ತೆ ಕೆಲವರು ಪ್ರಶ್ನಿಸಿದ್ದರು. 

77
ಟ್ರೋಲ್​ ಆಗೋದಿದ್ರಂತೆ ಫೇಮಸ್​ ಆಗ್ತಿರೋ ನಟಿ.
Image Credit : Instagram

ಟ್ರೋಲ್​ ಆಗೋದಿದ್ರಂತೆ ಫೇಮಸ್​ ಆಗ್ತಿರೋ ನಟಿ.

ಎಲ್ಲಿಂದ ಹಾಲು ಕರೆಯುವುದು ಎನ್ನುವುದು ರೀಲ್ಸ್​ ರಾಣಿಗೆ ಗೊತ್ತಿದ್ಯಾ ಎಂದು ಮತ್ತೆ ಕೆಲವರು ಕೇಳುತ್ತಿದ್ದರೆ, ಇನ್ನು ಕೆಲವು ತರ್ಲೆಗಳು ಬೇಡದ ಕಮೆಂಟ್ಸ್​ ಕೂಡ ಮಾಡುತ್ತಿದ್ದಾರೆ. ತಮ್ಮ ಸ್ನೇಹಿತೆ ವಾಣಿ ಎನ್ನುವವರ ಜೊತೆ ರೀಲ್ಸ್​ ಮಾಡಿದ್ರೂ ಟ್ರೋಲ್​ ಆಗುವುದು ಹೆಚ್ಚಾಗುತ್ತಿದೆ. ಒಟ್ಟಿನಲ್ಲಿ ನಿವೇದಿತಾ ಗೌಡ ಅವರನ್ನು ಸ್ಪರ್ಧೆಗೆ ಆಯ್ಕೆ ಮಾಡಿರುವುದಕ್ಕೆ ಸಹಜವಾಗಿ ಇದರ ಟಿಆರ್​ಪಿ ಕೂಡ ಏರುತ್ತಿದೆ ಎನ್ನುವುದು ಈ ಕಮೆಂಟ್ಸ್​ ಮೂಲಕವೇ ತಿಳಿಯುತ್ತಿದೆ! ಇದೀಗ ಕೂಲಿ ಚಿತ್ರಕ್ಕೆ ಮಾಡಿದ ರೀಲ್ಸ್​ ವಿಡಿಯೋ ಈ ಕೆಳಗಿದೆ ನೋಡಿ… 

 
 
 
 
View this post on Instagram
 
 
 
 
 
 
 
 
 
 
 

A post shared by Niveditha Gowda 👑 (@niveditha__gowda)

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ನಿವೇದಿತಾ ಗೌಡ
ರೀಲ್ಸ್
ಸಾಮಾಜಿಕ ಮಾಧ್ಯಮ

Latest Videos
Recommended Stories
Recommended image1
Nayanthara Caravan: ಭಾರೀ ಕಂಡೀಷನ್ಸ್ ಹಾಕ್ತಾರಾ ನಯನತಾರಾ? ಕ್ಯಾರವಾನ್‌ ಒಳಗೆ ಏನೆಲ್ಲಾ ಇರಬೇಕಂತೆ ಗೊತ್ತಾ?
Recommended image2
ಮದುವೆಗೆ ಮೂರೇ ದಿನ ಇರುವಾಗ ಗುಟ್ಟು ರಟ್ಟು ಮಾಡಿದ ರಶ್ಮಿಕಾ-ವಿಜಯ್; ಎಲ್ಲದಕ್ಕೂ ಅದೊಂದೇ ಕಾರಣವೇ?!
Recommended image3
ಕಟಾಂಜನದ ಒಳಗಿರೋ ದರ್ಶನ್ ಸ್ಥಿತಿಗೆ ದೇವರೇ ಗತಿ; ಟಿವಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದ ನಟನಿಗೆ ನ್ಯಾಯಾಧೀಶರ ಕೌಂಟರ್ ಏನು?
Related Stories
Recommended image1
ನಿವೇದಿತಾ ಗೌಡ ಬಾತ್​ರೂಂ ಸೀಕ್ರೇಟ್​ ಕೊನೆಗೂ ರಿವೀಲ್​! ಅಬ್ಬಾ... ಇದಾ ವಿಷ್ಯ?
Recommended image2
Kwatle Kitchen: ತರಕಾರಿ ಮಾರುತ್ತಾ ನಿಮ್ಮನೆಗೆ ಬರಲಿದ್ದಾಳೆ ನಟಿ ನಿವೇದಿತಾ ಗೌಡ- ಡಿಟೇಲ್ಸ್ ಇಲ್ಲಿದೆ ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved